ದೊಡ್ಮನೆಯಲ್ಲಿ ಶುರುವಾಯ್ತಾ ಕಾರ್ತಿಕ್ - ನಮ್ರತಾ ಲವ್ ಸ್ಟೋರಿ..? ಮನೆಯಲ್ಲಿ ಆಗ್ತಾ ಇರೋದೇನು..? ವೈರಲ್ ಆಗ್ತಿರೋದೇನು..?
ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ಈಗ ಹೊಸ ಜೋಡಿಯೊಂದು ಸಿಕ್ಕಾಪಟ್ಟೆ ಗಮನ ಸೆಳೆಯುತ್ತಿದೆ. ಬಿಗ್ ಬಾಸ್ ಎಂದ ಮೇಲೆ ಅಲ್ಲಿ ಟೆಂಪರರಿ ಜೋಡಿಗಳು ಹುಟ್ಟಿಕೊಳ್ಳುವುದು ಕಾಮನ್. ಈ ಬಾರಿಯೂ ಮನೆಯೊಳಗೆ ಜೋಡಿಗಳು ಇದ್ದರು, ಇದಾರೆ. ಇಶಾನಿ-ಮೈಕಲ್, ಸಂಗೀತಾ - ಕಾರ್ತಿಕ್, ತನಿಷಾ - ವರ್ತೂರು ಸಂತೋಷ್, ಸ್ನೇಹಿತ್ - ನಮ್ರತಾ. ಆದರೆ ಈಗ ಕಾರ್ತಿಕ್ ಮತ್ತು ಸಂಗೀತಾ ನಡುವೆ ಆ ಬಾಂಧವ್ಯ ಉಳಿದಿಲ್ಲ. ಹಾಗಂತ ಕಾರ್ತಿಕ್ ಒಂಟಿಯಲ್ಲ.
ನಮ್ರತಾ ಮೊದಲ ಸ್ಪರ್ಧಿ. ಹಾಗೇ ಸ್ನೇಹಿತ್ ಎರಡನೇ ಸ್ಪರ್ಧಿಯಾಗಿದ್ದರು. ಸ್ನೇಹಿತ್ ನಡವಳಿಕೆ ಆರಂಭದಲ್ಲಿ ಕಿರಿಕಿರಿ ಉಂಟು ಮಾಡಿದ್ದರು ಸಹ, ದಿನಕಳೆದಂತೆ ಅಡ್ಜೆಸ್ಟ್ ಆಗಿ ಬಿಟ್ಟಿದ್ದರು. ಇದರ ಜೊತೆಗೆ ದಿನಕಳೆದಂತೆ ಸ್ನೇಹಿತ್‌ಗೆ ನಮ್ರತಾ ಮೇಲೆ ಪ್ರೀತಿಯೂ ಹುಟ್ಟಿತ್ತು. ಅದನ್ನ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಸ್ನೇಹಿತ್ ಮೇಲೆ ಆ ಭಾವನೆಯ ಬರುವುದಿಲ್ಲ ಎಂದಿದ್ದ ನಮ್ರತಾ, ಇದೀಗ ಕಾರ್ತಿಕ್ ಮೇಲೆ ಆ ಭಾವನೆ ಬೆಳೆಸಿಕೊಂಡರಾ ಅಂತ. ವಿಡಿಯೋಗಳು ಆ ಅನುಮಾನ ಮೂಡಿಸಿವೆ.

ಫ್ಲರ್ಟ್ ಮಾಡಬೇಡ ಎಂದು ಎಚ್ಚರಿಸಿರುವ ನಮ್ರತಾ
ಲೈಕ್ ಆಗಿದ್ದೀಯಾ ಕಾರ್ತಿಕ್ ಎಂದಿದ್ದ ನಮ್ರತಾ
ನಮ್ರತಾಗಾಗಿ ಸ್ನೇಹಿತ್ ಹಾಗೂ ಕಾರ್ತಿಕ್ ಕಿತ್ತಾಡುತ್ತಾ ಇದ್ದರು. ಅದು ಜಸ್ಟ್ ತಮಾಷೆಗಾಗಿ. ಫ್ಲರ್ಟ್ ಮಾಡುತ್ತಾ ಇದ್ದರು ಅಷ್ಟೇ. ಅದು ನಮ್ರತಾಗೂ ಗೊತ್ತಿತ್ತು. ಆದರೆ ದಿನಕಳೆದಂತೆ ನಮ್ರತಾ ಫ್ಲರ್ಟ್ ವಿಚಾರದಲ್ಲಿ ಸೀರಿಯಸ್ ಆದಂತೆ ಕಾಣುತ್ತಿದ್ದರೆ. ನಮ್ರತಾ, ವಿನಯ್ ತಂಡದಲ್ಲಿಯೇ ಇದ್ದರು ಎಲ್ಲಾ ಸಮಯದಲ್ಲೂ ಕಂಫರ್ಟಬಲ್ ಆಗಿ ಇರುವುದಕ್ಕೆ ಆಗಲ್ಲ. ಸ್ನೇಹಿತ್ ಇದ್ದಾಗ ಆರಾಮಾಗಿದ್ದ ನಮ್ರತಾ, ಬಳಿಕ ಡಿಸ್ಟರ್ಬ್ ಆಗಿದ್ದರು. ಈಗ ಕಾರ್ತಿಕ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೆಗೆ ನನ್ನ ಜೊತೆಗೆ ಫ್ಲರ್ಟ್ ಮಾಡಬೇಡಿ ಎಂದು ಹೇಳಿದ್ದರು. ಅಷ್ಟೇ ಯಾಕೆ ನಮ್ಮ ಅಮ್ಮನ ಬಳಿ ಬಂದು ಹೆಣ್ಣು ಕೇಳುತ್ತೀರಾ ಎಂದೂ ಕೇಳಿದ್ದರು.
ಎಲ್ಲಾ ಕಡೆಯಲ್ಲೂ ಕೈಹಿಡಿದೆ ಓಡಾಡುವ ನಮ್ರತಾ-ಕಾರ್ತಿಕ್ ಜೋಡಿ
ಈಗ ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಕೈ ಕೈ ಹಿಡಿದು ಓಡಾಡುತ್ತಿದ್ದಾರೆ. ಟಾಸ್ಕ್ ಆಡುವಾಗ ಒಟ್ಟಾಗಿ ಕುಳಿತಿದ್ದಾಗಲೂ ಒಬ್ಬರಿಗೊಬ್ಬರು ಕೈ ಹಿಡಿದುಕೊಳ್ಳುತ್ತಾರೆ. ನಡೆದುಕೊಂಡು ಓಡಾಡುವಾಗ ಆಗಲೀ ಒಬ್ಬರಿಗೊಬ್ಬರನ್ನು ಬಿಟ್ಟುಕೊಡದಷ್ಟು ಕ್ಲೋಸ್ ಆಗಿದ್ದಾರೆ. ಎಲ್ಲೆ ನೋಡಿದರೂ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ತಿಕ್ ಹಾಗೂ ಸಂಗೀತಾ ಅವರದ್ದೇ ಒಂದು ತಂಡವಾಗಿ ಬದಲಾಗಿ ಬಿಟ್ಟಿದೆ.
ಡಿಸ್ಟರ್ಬ್ ಆಗುತ್ತೆ ಎಂದು ಹೊರಟ ಪ್ರತಾಪ್
ಪ್ರತಾಪ್ ಮುಂದೆಯೇ ತಮಾಷೆ ಮಾಡಿದ ಕಾರ್ತಿಕ್
ಮನೆಯಲ್ಲಿ ಕ್ಯಾಪ್ಟನ್ ಆಗಲೇಬೇಕೆಂದು ಪ್ರತಾಪ್ ಇಟ್ಟುಕೊಂಡಿದ್ದ ಆಸೆ ನುಚ್ಚು ನೂರಾಗಿದೆ. ಸಂಗೀತಾ ಬಿಗ್ ಬಾಸ್ ಮನೆಯ ಕಡೆಯ ಕ್ಯಾಪ್ಟನ್ ಆಗಿದ್ದಾರೆ. ಇದರ ಬೇಸರದಿಂದ ಕುಳಿತಿದ್ದ ಪ್ರತಾಪ್‌ರನ್ನು ನಮ್ರತಾ ಸಮಾಧಾನ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಕಾರ್ತಿಕ್, ನಮ್ರತಾ ಅವರ ತಲೆ ಸವರಿ ರೇಗಿಸಿದರು. ಇದನ್ನು ಕಂಡ ಪ್ರತಾಪ್, ನಾನು ಹೋಗ್ತೀನಿ, ನೀವೂ ಅದೇನ್ ಮಾಡಿಕೊಳ್ಳಿರಿ ಎಂದು ಎದ್ದು ಹೋದರು. ಆಗ ಕಾರ್ತಿಕ್, ಬಾರಪ್ಪ ನಾನು ವರ್ಕೌಟ್ ಹೋಗ್ತೀನಿ ಅಂದಾಗ, ಪ್ರತಾಪ, ಇಲ್ಲೆ ವರ್ಕೌಟ್ ಮಾಡಿಕೊಳ್ಳಿ ಎಂದು ಎದ್ದು ಹೊರಟೆ ಬಿಟ್ಟರು.

ಬಿಗ್ ಬಾಸ್ ಮುಗಿಯುವ ಹೊತ್ತಿಗೆ ನಮ್ರತಾಗೆ ಲವ್ ಆಯ್ತಾ..?
ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಸ್ನೇಹಿತ್ ಸಾಕಷ್ಟು ಸಲ ತಮ್ಮ ರಿಯಲ್ ಫೀಲಿಂಗ್ಸ್ ಬಗ್ಗೆ ಹೇಳಿಕೊಂಡಿದ್ದಾರೆ. ಆದರೂ ಅಲ್ಲಿ ಯಾವುದೇ ವರ್ಕೌಟ್ ಆಗಿರಲಿಲ್ಲ. ಆದರೆ ನಮ್ರತಾ ಅವರು ಕಾರ್ತಿಕ್ ಜೊತೆಗಿರಯವ ಬಾಂಧವ್ಯ ಕಂಡು ನೆಟ್ಟಿಗರು ಕೂಡ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನಮ್ರತಾಗೆ ಕಡೆ ಗಳಿಗೆಯಲ್ಲಿ ಲವ್ ಆಗಿರಬಹುದು ಎಂಬ ಪ್ರಶ್ನೆಗಳು ಹರಿದಾಡುತ್ತಿವೆ.


Click it and Unblock the Notifications











