BBK 10: ಬಿಗ್ ಬಾಸ್ ಮನೆಯಲ್ಲಿ ತನಿಷಾ ವಿರುದ್ಧ ಬುಸುಗುಟ್ಟಿದ 'ನಾಗಿಣಿ' ನಮ್ರತಾ ಗೌಡ

ಬಿಗ್ ಬಾಸ್ ಕನ್ನಡ ಸೀಸನ್ 10 ರಿಯಾಲಿಟಿ ಶೋ ಕಳೆದ ವಾರದಿಂದ ಸ್ವಲ್ಪ ವಿಶೇಷ ಎನಿಸಿದೆ. ಟಿಆರ್‌ಪಿಯಲ್ಲೂ ದಾಖಲೆ ಮಾಡುತ್ತಿರುವ ಬಿಗ್ ಬಾಸ್‌ನಲ್ಲಿ ಈ ವಾರ ಜಗಳಗಳದ್ದೆ ದೊಡ್ಡ ಪಾಲು. ಒಂದು ಜೋಡಿ ಜಗಳ ನಿಲ್ಲಿಸಿದರೇ ಮತ್ತೊಂದು ಜೋಡಿ ಜಗಳ ಆರಂಭಿಸುತ್ತಾರೆ. ಸದ್ಯಕ್ಕೆ ತನಿಷಾ ಕುಪ್ಪಂಡ ಮತ್ತು ನಾಗಿಣಿ ನಟಿ ನಮ್ರತಾ ಗೌಡ ಬಿಗ್ ಬಾಸ್ ಮನೆಯಲ್ಲಿ ರಣರಂಗ ಸೃಷ್ಟಿಸಿದ್ದಾರೆ.

ಹ್ಯಾಪಿ ಬಿಗ್‌ಬಾಸ್ ಅನ್ನೋ ಟ್ಯಾಗ್ ಲೈನ್ ಇಟ್ಟುಕೊಂಡು ಈ ಬಾರಿ ರಿಯಾಲಿಟಿ ಶೋ ಆರಂಭ ಆಗಿದೆ. ಆದರೆ, ಮನೆಯಲ್ಲಿ ಮಾತ್ರ ಜಗಳ ನಿಲ್ಲುತ್ತಿಲ್ಲ. ಈಗಾಗಲೇ ಲವ್ ಬರ್ಡ್ಸ್ ಎನಿಸಿಕೊಂಡಿದ್ದ ಕಾರ್ತಿಕ್ ಮತ್ತು ಸಂಗೀತಾ ಮಧ್ಯೆ ನಮ್ರತಾ ವಿಷಯ ಬಂದಿತ್ತು. ವಿರೋಧಿಗಳಾಗಿದ್ದ ವಿನಯ್- ಕಾರ್ತಿಕ್ ಫ್ರೆಂಡ್ಸ್ ಕೂಡ ಆಗಿದ್ದರು. ಕ್ಯಾಪ್ಟೆನ್ಸಿ ವಿಷಯ ಬಂದಾಗಿನಿಂದ ತನಿಷಾ ಕುಪ್ಪಂಡ ಮತ್ತು ನಮ್ರತಾ ಗೌಡ ನಡುವೆ ಮನಸ್ತಾಪ ಶುರುವಾಗಿದೆ.

bigg-boss-kannada-10

ತನಿಷಾ ಮತ್ತು ನಮ್ರತಾ ನಡುವೆ ಡಾಮಿನೇಟ್ ವಿವಾದ

ಶನಿವಾರ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೊಸ ಬಾಂಬ್ ಸ್ಪೋಟಿಸಿದೆ. ಅದು ನಾಗಿಣಿ ನಟಿ ನಮ್ರತಾ ಗೌಡ ಅವರೇ ಸಿಡಿದ ಮದ್ದುಗುಂಡಾಗಿದ್ದಾರೆ. ನಟಿ ತನಿಷಾ ಕುಪ್ಪಂಡ ಅವರ ಮೇಲೆ ಬುಸುಗುಡುತ್ತಿರುವ ಅವರು, ಇನ್ನೇನು ಕಚ್ಚುವುದೊಂದೆ ಬಾಕಿಯಿದೆ.

ತನಿಷಾ ಮೇಲೆ ಕಿರುಚಾಡುತ್ತಾ ನಿನ್ನೆ ಸುಮ್ಮನಾಗಿದ್ದಿನಿ ಇವನ್ನು ಸುಮ್ಮನೆ ಇರಲ್ಲ ಎಂದು ದೊಡ್ಡ ರಂಪವನ್ನೇ ಮಾಡಿದ್ದಾರೆ. ಆದರೆ, ತನಿಷಾ ಇದಕ್ಕೆ ತಣ್ಣಗೆ ಪ್ರತಿಕ್ರಿಯಿಸಿ ಆಶ್ಚರ್ಯ ಮೂಡುವಂತೆ ಮಾಡಿದ್ದಾರೆ. 'ನೀವ್ಯಾರು ಎಲ್ಲರ ಪರ ಮಾತಾಡೋಕೆ...? ನಿಮಗೆ ವಾಯ್ಸ್ ಇದೆ ಅಂತ ಕಿರುಚಾಡೋಕೆ ಬರಬೇಡಿ. ನೀವಲ್ಲ ಬಿಗ್ ಬಾಸ್. ಅಲ್ಲಿರೋದು ಬಿಗ್‌ ಬಾಸ್' ಎಂದು ಕಿರುಚಾಡಿದ್ದಾರೆ.

ತನಿಷಾ ಅವರನ್ನು ಮಾತನಾಡೋಕು ಬಿಡದೇ, 'ಶಟ್‌ಆಪ್, ಬಾಯೇ ಮುಚ್ಚಲ್ಲವಲ್ಲ ಗುರು ಅವಳು, ವಾಯ್ಸ್ ಕಡಿಮೆ ಇರಬೇಕು ಇನ್ಮುಂದೆ ನನ್ ಹತ್ರ ಮತಾಡುವಾಗ, ನಾನು ನೆನ್ನೆ ತಡ್ಕೊಂಡು ಸುಮ್ಮನಿದ್ದಿನಿ. ಇವತ್ತು ನಾಟ್ ಓಕೆ. ಅವ್ಳು ಯಾವಳು ಎಲ್ಲರನ್ನು ಅಷ್ಟೊಂದು ಡಾಮಿನೇಟ್ ಮಾಡೋಕೆ' ಎಂದು ತನಿಷಾ ವಿರುದ್ಧ ಕೂಗಾಡಿದ್ದಾರೆ.

bigg-boss-kannada-10

ತಣ್ಣಗೆ ಪ್ರತಿಕ್ರಿಯಿಸಿದ ತನಿಷಾ ಕುಪ್ಪಂಡ

ನಮ್ರತಾ ಗೌಡ ಇಷ್ಟು ಬುಸುಗುಡುತ್ತಿದ್ದರೂ ಕೂಡ ತನಿಷಾ ತಣ್ಣಗೆ ಪ್ರತಿಕ್ರಿಯಿಸಿದ್ದಾರೆ. ಒಂದೆರಡು ಬಾರಿ ಮಾತನಾಡಲು ಪ್ರಯತ್ನಿಸಿದರೂ ನಮ್ರತಾ ಅದಕ್ಕೆ ಅವಕಾಶ ನೀಡಿಲ್ಲ. ಬಳಿಕ ನಂದೇನು ತಪ್ಪಿಲ್ಲ ಎಂದು ಕೂಲ್ ಆಗಿ ಇದ್ದಾರೆ. ಇನ್ನು, ನಮ್ರತಾ ರೌದ್ರಾವತಾರಕ್ಕೆ ಮನೆ ಮಂದಿ ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಇನ್ನು, ಈ ಪ್ರೋಮೋಗೆ ನೂರಾರು ಕಾಮೆಂಟ್‌ಗಳು ಬಂದಿದ್ದು, ಎಲ್ಲರೂ ತನಿಷಾ ಅವರನ್ನೇ ಸಪೋರ್ಟ್ ಮಾಡುತ್ತಿದ್ದಾರೆ. ಇದರಲ್ಲಿ ಮತ್ತೆ ಗಮನಿಸಬೇಕಾದ ವಿಷಯವೆಂದರೆ ಇಲ್ಲೂ ಕೂಡ ಪ್ರತಾಪ್ ಪರವಾಗಿ ಕಾಮೆಂಟ್‌ಗಳು ಬರುತ್ತಿರೋದು. ಪ್ರತಾಪ್ ನೀನು ಬೆಸ್ಟ್, ಪ್ರತಾಪ್‌ಗೆ ನಮ್ಮ ಬೆಂಬಲ ಎಂಬ ಕಾಮೆಂಟ್‌ಗಳು ಕಡಿಮೆಯಾಗುತ್ತಿಲ್ಲ.

ಕಿಚ್ಚನ ಪಂಚಾಯಿತಿಯಲ್ಲಿ ಯಾರಿಗೆ ಕ್ಲಾಸ್?

ಇನ್ನು, ಶನಿವಾರ ಮತ್ತು ಭಾನುವಾರ ಕಿಚ್ಚ ಸುದೀಪ್ ಪಂಚಾಯಿತಿ ನಡೆಸಲಿದ್ದು, ಈ ಬಾರಿಯಂತೂ ಅವರಿಗೆ ಸಾಕಷ್ಟು ವಿಷಯಗಳು ಮಾತನಾಡೋಕೆ ಇವೆ. ಒಂದು ವಾರದಲ್ಲಿ ನಡೆದ ಪ್ರಮುಖ ಘಟನೆಗಳ ಬಗ್ಗೆ ಸಂಪೂರ್ಣ ಚರ್ಚೆಯಾಗುತ್ತೆ. ಯಾರಿಗೆ ಕ್ಲಾಸ್...? ಯಾರಿಗೆ ಭೇಷ್ ಅನ್ನುತ್ತಾರೆ ಎನ್ನುವುದನ್ನು ಕಾದು ನೋಡಬೇಕು.

More from Filmibeat

English summary
BBK 10: Namratha gowda and Tanisha Kuppunda fight.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X