Bigg Boss: ವೃದ್ಧಾಶ್ರಮಕ್ಕೆ ಸಹಾಯ ಹಸ್ತ ಚಾಚಿದ ಪೋಷಕರು; ನೆಟ್ಟಿಗರು ಸಿಟ್ಟಾಗಿದ್ಯಾಕೆ?!

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 10ನಲ್ಲಿ ಇನ್ನು ಉಳಿದಿರುವುದು ಏಳು ಸ್ಪರ್ಧಿಗಳು ಮಾತ್ರ. ಫಿನಾಲೆಗೆ ಐದು ಜನ ಇರಲಿದ್ದಾರೆ. ಈಗಾಗಲೇ ಸಂಗೀತಾಗೆ ಟಿಕೆಟ್ ಸಿಕ್ಕು ಆಗಿದೆ. ಆ ಟಿಕೆಟ್ ನ್ಯಾಯವಾಗಿ ನೋಡುವುದಾದರೇ ಪ್ರತಾಪ್‌ಗೆ ಸೇರಬೇಕಾಗಿತ್ತು. ಆದರೆ, ಅದು ಬೇರೆನೆ ರೀತಿನೇ ಟ್ವಿಸ್ಟ್ ಸಿಕ್ಕಿತ್ತು. ವೀಕೆಂಡ್‌ನಲ್ಲಿ ನೇರವಾಗಿ ಹೇಳದೆ ಹೋದರೂ ಕಿಚ್ಚ ಸುದೀಪ್ ಆ ವಿಚಾರವನ್ನು ಪ್ರಸ್ತಾಪ ಕೂಡ ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೆ ಪ್ರತಾಪ್ ಕೂಡ ಫಿನಾಲೆಗೆ ತಲುಪಲಿದ್ದಾರೆ ಎಂಬುದು ಪಕ್ಕಾ ಆಗಿದೆ. ಇನ್ನುಳಿದ ಮೂವರು ಸ್ಪರ್ಧಿಗಳಲ್ಲಿ ವಿನಯ್, ಕಾರ್ತಿಕ್ ಸ್ಟ್ರಾಂಗ್ ಇದ್ದಾರೆ. ಅವರೂ ಫಿನಾಲೆಗೆ ಹೋಗಬಹುದು. ಇನ್ನೊಬ್ಬರಿಗೆ ಅವಕಾಶ ಇದೆ ಎಂದಾಗ, ನಮ್ರತಾ ಅಥವಾ ವರ್ತೂರು ಸಂತೋಷ್ ಹೆಸರು ಆಯ್ಕೆ ಮಾಡಿಕೊಳ್ಳಬೇಕೆಂದಾಗ ಮೊದಲು ವರ್ತೂರು ಸಂತೋಷ್ ಅವರದ್ದೇ ಬರಲಿದೆ. ಹೀಗಾಗಿ ನಮ್ರತಾ ಮತ್ತು ತುಕಾಲಿ ಹೊರಗೆ ಬರುವ ಎಲ್ಲಾ ಸಾಧ್ಯತೆಗಳು ಇದೆ. ಆದರೆ ದಿಢೀರನೆ ವೋಟ್‌ಗಾಗಿ ನಮ್ರತಾ ಫ್ಯಾಮಿಲಿ ಜನಸೇವೆಗೆ ನಿಂತರಾ ಎಂಬ ಟೀಕೆಗಳು ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದೆ.

Bigg Boss Kannada 10 Namratha parents helped the orphanage netizens say its for Voting

ಆಶ್ರಮಕ್ಕೆ ಒಂದು ಹೊತ್ತಿನ ಊಟ

ಜನಸ್ನೇಹಿ ಆಶ್ರಮದಲ್ಲಿ ವೃದ್ದರು, ಅನಾಥರು ಇದ್ದಾರೆ. ಈ ಆಶ್ರಮಕ್ಕೆ ಇದೀಗ ನಮ್ರತಾ ಗೌಡ ಅವರ ಅಪ್ಪ-ಅಮ್ಮ ಭೇಟಿ ನೀಡಿದ್ದಾರೆ. ಆಶ್ರಮಕ್ಕೆ ಒಂದು ಹೊತ್ತಿನ ಊಟಕ್ಕೆ ಬೇಕಾದ ಸಹಾಯವನ್ನು ಮಾಡಿ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ.

ನಮ್ರತಾ ಪೋಸ್ಟರ್ ಹಿಡಿದು ಪ್ರಚಾರ

ಆಶ್ರಮಕ್ಕೆ ಭೇಟಿ ಕೊಟ್ಟ ನಮ್ರತಾ ಅಪ್ಪ-ಅಮ್ಮ, ಅಲ್ಲಿರುವ ದೇವರಿಗೆ ಪೂಜೆ ಮಾಡಿದ್ದಾರೆ. ಬಳಿಕ ಆಶ್ರಮದಲ್ಲಿರುವ ಎಲ್ಲಾ ಹಿರಿಯರನ್ನು ಮಾತನಾಡಿಸಿ, ಅವರಿಂದ ಆಶೀರ್ವಾದ ಪಡೆದಿದ್ದಾರೆ. ಆಶ್ರಮದಲ್ಲಿ ದೊಡ್ಡ ಬ್ಯಾನರ್ ಒಂದನ್ನು ಹಿಡಿದುಕೊಂಡು ನಮ್ರತಾಗೆ ಸಪೋರ್ಟ್ ಮಾಡಿದ್ದಾರೆ. ನಮ್ರತಾ ಅಭಿಮಾನಿ ಬಳಗದಿಂದ ಅನ್ನ ದಾಸೋಹ ಎಂಬ ಬ್ಯಾನರ್ ಹಾಕಿದ್ದಾರೆ‌.

ವೋಟ್‌ಗಾಗಿ ಸಹಾಯ ಮಾಡ್ತಿದ್ದಾರೆಂದು ಕಮೆಂಟ್

ಈ ವಿಡಿಯೋ ನೋಡಿದ ನೆಟ್ಟಿಗರು ಇದೆಲ್ಲಾ ವೋಟ್ ಗಿಮಿಕ್ ಎಂದೇ ನಿರ್ಧರಿಸಿದ್ದಾರೆ. ಜನಸ್ನೇಹಿ ಯೋಗೀಶ್ ಎಂಬುವವರ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ ನಾನಾ ತರದ ಕಮೆಂಟ್‌ಗಳು ಬಂದಿವೆ. "ವೋಟ್ ಬೇಕು ಅಂತ ಈಗ ಆಶ್ರಮಗಳು ನೆನಪು ಆಗುತ್ತಿದ್ದಾವಾ? ಇವೆಲ್ಲ ಬರೀ ವೋಟಿಗೋಸ್ಕರ. ಇದ್ದಾಗ ಯಾರೂ ಬರಲಿಲ್ಲ. ಈಗ ವಿನ್ ಆಗಲಿ ಅಮನತ ಬರ್ತಾ ಇದಾರೆ, ಇದೆಲ್ಲದನ್ನು ಮೊದಲು ಕೂಡ ಮಾಬಹುದಿತ್ತಲ್ವಾ" ಎಂದೆಲ್ಲಾ ಕಮೆಂಟ್ಸ್ ಬರುತ್ತಿವೆ.

Bigg Boss Kannada 10 Namratha parents helped the orphanage netizens say its for Voting

ನಾಮಿನೇಟ್ ಮಾಡಿದ್ರು ಕಣ್ಣೀರು

ನಮ್ರತಾ ಫಿನಾಲೆಗೆ ಇನ್ನೇನು ಹತ್ತಿರತ್ತಿರ ಇದ್ದಾರೆ. ಕಡೆ ಕಡೆಯಲ್ಲಿ ತಮ್ಮದೇ ಆದ ಅದ್ಭುತ ಆಟವನ್ನು ತೋರಿಸುತ್ತಿದ್ದಾರೆ. ಈಗ ಹೊರಗೆ ಹೋಗುವುದಕ್ಕೆ ನಮ್ರತಾಗೆ ಇಷ್ಟವಿಲ್ಲ. ಹೀಗಾಗಿ ಯಾರಾದರೂ ನಾಮಿನೇಷನ್‌ಗೆ ಹೆಸರು ತೆಗೆದುಕೊಂಡರು ಕಣ್ಣೀರು ಹಾಕುತ್ತಾರೆ. ಆಟ ಸರಿಯಾಗಿ ಆಡಿಲ್ಲ ಅಂದಾಗಲೂ ಮಾನಸಿಕವಾಗಿ ಕುಸಿದು ಬಿಡುತ್ತಾರೆ. ಈ ವಾರ ಮನೆಗೆ ಬಂದ ಸ್ನೇಹಿತ್ ಹೊರಗಿನ ವಿಚಾರ ತಿಳಿಸಿದ್ದಕ್ಕೂ ತುಂಬಾ ಕಣ್ಣೀರು ಹಾಕಿದ್ದರು. "ಫ್ರೆಂಡ್ಸ್‌.. ಫ್ರೆಂಡ್ಸ್.. ಅಂತಾರೆ. ಆದರೆ ಯಾರು ಗೆಲ್ಲಬೇಕು ಎಂದರೆ ವಿನಯ್ ಅಂತಾರೆ. ಯಾಕೆ ನಾನು ಗೆಲ್ಲಬಾರದಾ?" ಎಂದೇ ಪ್ರಶ್ನಿಸಿದ್ದರು.

More from Filmibeat

English summary
BBK 10 Namratha Gowda parents helped the orphanage. Netizens comment it's Voting gimmick
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X