BBK 10: ಬಿಗ್‌ಬಾಸ್ ಸ್ಪರ್ಧಿ ತನಿಷಾ ಹಲಸಿನ ಹಣ್ಣಂತೆ ಕಠಿಣ..ಅದಕ್ಕೆ ಇನ್ನೂ ಸಿಂಗಲ್ ಅಂತೆ
ಬಿಗ್ ಬಾಸ್ ಮನೆಯಲ್ಲಿ ಜಗಳಗಳು, ಮನಸ್ತಾಪಗಳು ಬರುವುದು ಸಹಜ. ದಿನ ಕಳೆದಂತೆ ಅದು ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಮನೆಯಲ್ಲಿ 17 ಜನ ಸದಸ್ಯರು ಎಂದರೆ ಸುಮ್ನೆನಾ. ಒಬ್ಬೊಬ್ಬರ ಮನಸ್ಥಿತಿ ಒಂದೊಂದು ರೀತಿಯಲ್ಲಿಯೇ ಇರುತ್ತದೆ. ಅದು ಒಬ್ಬರಿಗೆ ಇಷ್ಟವಾದರೆ ಇನ್ನೊಬ್ಬರಿಗೆ ಬೇಸರವನ್ನು ತರಿಸುತ್ತದೆ.
ಈ ಬಾರಿಯ ಬಿಗ್ ಬಾಸ್‌ಗೆ ತನಿಷಾ ಕೂಡ ಸ್ಪರ್ಧಿಯಾಗಿ ಬಂದಿದ್ದಾರೆ. ತನಿಷಾ ಸಂದರ್ಶನಗಳನ್ನೆಲ್ಲಾ ನೋಡಿದಾಗಲೂ ಅವರ ವಾಯ್ಸ್ ಪ್ರಭಾವಿಯಂತೆ ಫೀಲ್ ಆಗುತ್ತಾರೆ. ಆದರೆ, ಬಿಗ್ ಬಾಸ್ ಮನೆಯಲ್ಲೂ ತನಿಷಾ ಎಲ್ಲರಿಗೂ ಡಾಮಿನೇಟ್ ರೀತಿಯೇ ಫೀಲ್ ಆಗುತ್ತಿದ್ದಾರೆ. ವಿಶೇಷ ಏನಂದರೆ, ತನಿಷಾ ಸಿಂಗಲ್ ಆಗಿರುವುದಕ್ಕೆ ಕಾರಣ ಹಲಸಿನ ಹಣ್ಣಂತೆ.

ತನಿಷಾ ವರ್ತನೆಗೆ ನೊಂದ ಹೆಣ್ಣು ಮಕ್ಕಳು
ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮನೆ ಜವಾಬ್ದಾರಿ ವಹಿಸಿಕೊಳ್ಳುವುದು ಬಹಳ ಮುಖ್ಯ. ಈ ಬಾರಿ ಅಡುಗೆ ಚೆನ್ನಾಗಿ ಬರುವವರು ಯಾರು ಇಲ್ಲ. ಅದರಲ್ಲಿ ತನಿಷಾ ಜವಾಬ್ದಾರಿ ವಹಿಸಿಕೊಂಡು ಆಗಿದೆ. ಆದರೆ ಡಾಮಿನೇಷನ್ ಅನ್ನೋದು ಎದ್ದು ಕಾಣುತ್ತಿದೆ. ಬಾಯ್ಸ್‌ಗೆ ಮಾತ್ರ ಅಲ್ಲ ಗರ್ಲ್ಸ್ ಗೂ ಇದು ಎದ್ದು ಕಾಣಿಸುತ್ತಾ ಇದೆ. ನಮ್ರತಾ, ಈಶಾನಿ, ಸಿರಿ, ಭಾಗ್ಯ ಎಲ್ಲರೂ ಕೂಡ ತನಿಷಾ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ. ಅದರಲ್ಲೂ ಈಶಾನಿ ನಾನು ಮತ್ತೆ ಮಾತನಾಡಿಸಲ್ಲ ಎಂದಿದ್ದಾರೆ. ಭಾಗ್ಯ ತುಪ್ಪ ತಿನ್ನುವ ವಿಚಾರದಲ್ಲಿ ಬೇಸರ ಮಾಡಿಕೊಂಡಿದ್ದಾರೆ. ನಮ್ರತಾಗೆ ಕೂಡ ತುಪ್ಪದ ವಿಚಾರದಲ್ಲಿ ಬೇಸರ ಮಾಡಿದ್ದಾರೆ.
ಸಂತೋಷ್‌ಗೆ ಕಾಲೆಳೆದ ತನಿಷಾ
ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ಕೊಡುತ್ತಾ ಇರುವುದು ಸಂತೋಷ್ ಅಲಿಯಾಸ್ ತುಕಾಲಿ ಸಂತೋಷ್. ಮನೆಯಲ್ಲಿರುವ ಎಲ್ಲರನ್ನು ನಗಿಸುವ ಪ್ರಯತ್ನ ಮಾಡುತ್ತಾರೆ. ಇದೀಗ ತನಿಷಾ ಮತ್ತು ಸಂತೋಷ್ ನಡುವೆ ಒಂದು ರೊಮ್ಯಾಂಟಿಕ್ ಸೀನ್ ನಡೆದಿದೆ. ತನಿಷಾ, ಸಂತೋಷ್‌ರನ್ನ ಚಿನ್ನಾ ಚಿನ್ನಾ ಅಂತ ಪ್ರೀತಿಯಿಂದ ಕರೆದಿದ್ದಾರೆ.
ಹೆಂಡತಿಗೆ ಸಮರ್ಥನೆ ನೀಡಿದ ಸಂತೋಷ್
ಬಿಗ್ ಬಾಸ್‌ಗೆ ಹೋಗುವಾಗಲೇ ಮಾನಸ ವಾರ್ನಿಂಗ್ ಕೊಟ್ಟು ಕಳುಹಿಸಿದ್ದರು. ಅಲ್ಲಿ ಹುಡುಗಿಯರ ಜೊತೆಗೆ ಹೆಚ್ಚು ಸಮಯ ಕಳೆಯಬೇಡ ಅಂತ. ಇಲ್ಲಿ ತನಿಷಾ ಬೇರೆ ಚಿನ್ನ.. ಚಿನ್ನ ಅಂತಿದ್ದರೆ ಆ ಕಡೆ ಕ್ಯಾಮೆರಾಗೆ ಸಂತು ಸಮರ್ಥನೆ ನೀಡಿದ್ದಾರೆ. "ಹೇಳಿಲ್ವಾ ನಿಂಗೆ ಒಬ್ಬಳು ತಂಗಿ ಸಿಗುತ್ತಾಳೆ ಅಂತ. ನೋಡು ಅದು ತನಿಷಾನೇ. ಅಕ್ಕ ಪಕ್ಕದ ಮನೆಯವರು ಕೇಳಿದರೆ ಅದು ತಮಾಷೆ ಅಂತ ಹೇಳಿ ಬಿಡು" ಎಂದಿದ್ದಾರೆ.

ತನಿಷಾ ಸಿಂಗಲ್ ಆಗಿರುವುದಕ್ಕೆ ಕಾರಣವೇನು..?
ಈ ಮಧ್ಯೆ ಸಂತೋಷ್ ಹಾಗೂ ತನಿಷಾ ನಡುವೆ ಒಂದು ತಮಾಷೆಯ ಮಾತುಕತೆ ಮುಂದುವರೆದಿತ್ತು. ಅದರಲ್ಲಿ ತೆಂಗಿನಕಾಯಿ ಮತ್ತು ಸೀಬೆಕಾಯಿಯನ್ನು ಸಂತು ಉದಾಹರಣೆಯಾಗಿ ಕೊಟ್ಟರು. ಆದರೆ ತನಿಷಾ ತಾನು ಹಲಸಿನಹಣ್ಣಿನ ರೀತಿ ಅಂತ ಹೇಳಿದರು. ಆಗ ಸಂತು "ಓ ನಿಮ್ಮನ್ನು ಟಚ್ ಮಾಡಬೇಕು ಅಂದರೆ ಸಿಪ್ಪೆ ಸುಲಿದು, ಅಂಟು ತೆಗೆದು, ಬೀಜ ತೆಗೆದು, ಆಮೇಲೆ ಹಣ್ಣನ್ನು ಬಿಡಿಸಬೇಕು ಅಂತ ಹೇಳು. ಹಾಗಾದರೆ, ಇಷ್ಟು ಕಷ್ಟದ ಹಣ್ಣು ನನಗೆ ಬೇಡಮ್ಮ" ಎಂದಿದ್ದಾರೆ. ಆಗ ತನಿಷಾ, "ಮತ್ತೆ ನಾನು ಅಷ್ಟು ಸುಲಭವಾಗಿ ಸಿಗುತ್ತೀನಾ. ನಾನು ಹಲಸಿನ ಹಣ್ಣಿನಷ್ಟೇ ಕಷ್ಟ ಅಂತಾನೇ ಇನ್ನು ಸಿಂಗಲ್" ಎಂದಿದ್ದಾರೆ.


Click it and Unblock the Notifications











