ಆನೆ, ಸಿಂಹಿಣಿ ಎಲ್ಲಾ ಕಾಡು ಸೇರ್ಕೊಂಡ್ರು, ಆ ಅಜ್ಜಿಯ ಪಾಲಿಗೆ ಡ್ರೋನ್ ಪ್ರತಾಪ್ ದೇವರಾದರು...!
ಡ್ರೋನ್ ಪ್ರತಾಪ್ ಭೂತಕಾಲ ಏನೇ ಇರಲಿ, ಆದರೆ ವರ್ತಮಾನದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಸಾರ್ವತ್ರಿಕ ವಲಯದಲ್ಲಿಇದ್ದ ಅಭಿಪ್ರಾಯಗಳು ಬದಲಾಗಿವೆ. ಇವತ್ತು ಡ್ರೋನ್ ಪ್ರತಾಪ್ ಅನೇಕರ ಕಣ್ಣಿಗೆ ಸಾಧಕನಂತೆ, ಇನ್ನೂ ಕೆಲವರ ಕಣ್ಣಿಗೆ ಬುದ್ದಿವಂತನಂತೆ, ಮತಷ್ಟು ಜನರ ಕಣ್ಣಿಗೆ ಮುಗ್ದನಂತೆ ಕಾಣ್ತಿದ್ದಾರೆ. ಒಂದರ್ಥದಲ್ಲಿ ಗಂಗೆಯಲ್ಲಿ ಮುಳುಗಿ ಎದ್ದರೆ ಮಾಡಿದ ಎಲ್ಲ ಪಾಪ ಪರಿಹಾರ ಆಗುತ್ತೆ ಎಂಬ ಮಾತಿನಂತೆ, ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದ ನಂತರ ಡ್ರೋನ್ ಪ್ರತಾಪ್ ಬದುಕು ಬದಲಾಗಿದೆ.
ಇಂಥಾ ಡ್ರೋನ್ ಪ್ರತಾಪ್ ಮತ್ತೊಮ್ಮೆ ನುಡಿದಂತೆ ನಡೆದಿದ್ದಾರೆ. ಎಲ್ಲರ ಹೃದಯವನ್ನೂ ಗೆದ್ದಿದ್ದಾರೆ.ಹೌದು, ಕಳೆದ ಜೂನ್ 11ರಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿ ಡ್ರೋನ್ ಪ್ರತಾಪ್, ಆರ್ಥಿಕವಾಗಿ ಹಿಂದುಳಿದ, ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಕಣ್ಣಿನ ಆಪರೇಶನ್ ಮಾಡಿಸುವೆ ಎಂದು ಹೇಳಿದ್ದರು. ಈಗ ಅವರು ಆ ಮಾತನ್ನು ಉಳಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳಿದ್ದರೂ ಕೂಡ ಗುಡಿಸಿಲಿನಲ್ಲಿ ಇದ್ದುಕೊಂಡು ವಾಸ ಮಾಡುತ್ತಿದ್ದ ಬಡ ಅಜ್ಜಿಯ ಕಣ್ಣಿನ ಆಪರೇಶನ್ ಮಾಡಿಸಿದ್ದಾರೆ. ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನೂ.. ಕಣ್ಣಿನ ಶಸ್ತ್ರ ಚಿಕಿತ್ಸೆಯ ನಂತರ ಆ ಅಜ್ಜಿಯು ಪ್ರತಾಪ್ ಅವರನ್ನು ಹರಿಸಿದ್ದು, ನನಗೆ ಈಗ ಸರಿಯಾಗಿ ಕಣ್ಣು ಕಾಣುತ್ತಿದೆ ಎಂದು ಹೇಳಿದ್ದಾರೆ. ಇಷ್ಟು ದಿನ ನನಗೆ ಒಬ್ಬ ಮೊಮ್ಮಗ ಇದ್ದ, ಈಗ ಇನ್ನೊಬ್ಬ ಮೊಮ್ಮಗನಾಗಿ ನೀನು ಇದ್ದೀಯಾ. ನನಗೆ ನಿಜವಾಗಿಯೂ ಖುಷಿಯಾಗಿದೆ, ನಿನಗೆ ದೇವರು ಆಯುಷ್ಯ, ಆರೋಗ್ಯ ಕೊಟ್ಟು ಒಳ್ಳೆಯದನ್ನು ಮಾಡಲಿ" ಎಂದು ಹರಸಿ ಹಾರೈಸಿದ್ದಾರೆ.
ಡ್ರೋನ್ ಪ್ರತಾಪ್ ಅವರ ಈ ಮಹತ್ಕಾರ್ಯವನ್ನೂ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೆಚ್ಚಿಕೊಂಡಿದ್ದಾರೆ. ಕಾರ್ತಿಕ್ ಮಹೇಶ್ ಟ್ರೋಫಿ ಗೆದ್ದಿರ ಬಹುದು ಆದರೆ ಡೋನ್ ಪ್ರತಾಪ್ ಕೋಟಿ ಜನರ ಮನಸನ್ನು ಗೆಲ್ಲುತ್ತಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ಧಾರೆ. ಬಿಗ್ ಬಾಸ್ ವೇದಿಕೆಯಲ್ಲಿ ನಿಮ್ಮಂತ ವ್ಯಕ್ತಿತ್ವಕ್ಕೆ ಗೆಲವು ಸಿಗಬೇಕಿತ್ತು ಎಂದು ಒಬ್ಬರು ಹೇಳಿದರೆ, ನಿಜವಾದ ಮಾನವೀಯ ಸೆಲೆಬ್ರಿಟಿ ಆಗಿ ಬೆಳಿತಾರೋದು ಈ ಪ್ರತಾಪ್ ಮಾತ್ರ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಆನೆ, ಸಿಂಹಿಣಿ ಎಲ್ಲಾ ಕಾಡು ಸೇರ್ಕೊಂಡ್ರು, ಪ್ರತಾಪ್ ಮಾತ್ರ ಅಜ್ಜಿಯ ಪಾಲಿಗೆ ದೇವರಾದರು ಎಂದು ಕೂಡ ಮತ್ತೊಬ್ಬರು ಹೇಳಿದ್ಧಾರೆ.

ಅಂದ್ಹಾಗೇ ಡ್ರೋನ್ ಪ್ರತಾಪ್ ಸಹಾಯದ ಹಸ್ತ ಚಾಚಿದ್ದು ಇದು ಮೊದಲೇನಲ್ಲ. ಈ ಹಿಂದೆ ಮಗ-ಸೊಸೆ ಇಲ್ಲದೆ ಇಬ್ಬರು ಮೊಮ್ಮಕ್ಕಳನ್ನು ಸಾಕುತ್ತಿದ್ದ ಅಜ್ಜಿಗೆ ಕೂಡ ಡ್ರೋನ್ ಪ್ರತಾಪ್ ಅವರು ಒಂದಷ್ಟು ತರಕಾರಿ- ಅಕ್ಕಿ-ಧಾನ್ಯಗಳನ್ನು ನೀಡಿದ್ದರು. ಒಂದಷ್ಟು ಹಣ ಕೂಡ ನೀಡಿದ್ದರು. ಆ ನಂತರ ಓದಬೇಕೆಂದು ಆಸೆ ಇಟ್ಟುಕೊಂಡಿದ್ದ ಹುಡುಗಿಗೂ ಕೂಡ ಡ್ರೋನ್ ಪ್ರತಾಪ್ ಅವರು ಸಹಾಯ ಮಾಡಿದ್ದರು.
ಉಳಿದಂತೆ 'ಬಿಗ್ ಬಾಸ್' ಮನೆಯಿಂದ ಹೊರಗಡೆ ಬಂದಮೇಲೆ ಅವರು 'ಗಿಚ್ಚಿ ಗಿಲಿಗಿಲಿ' ಶೋನ ಕೆಲ ಎಪಿಸೋಡ್‌ಗಳಲ್ಲಿ ಭಾಗವಹಿಸಿದ್ದರು. ಆದರೆ ಆ ನಂತರ ಮುಂದುವರೆಯಲಿಲ್ಲ. ಕಾರಣ ಅವರಿಗೆ ಗೊತ್ತು.


Click it and Unblock the Notifications











