BBK10: "ನಿಮ್ಮ ಲೈಫ್‌ನಲ್ಲಿ ಶನಿಯಾಗಿಯೇ ಇರುತ್ತೀನಿ" ಎಂದ ಸಂಗೀತ; ಕಾರ್ತಿಕ್ ಗರಂ
ಬಿಗ್ ಬಾಸ್ ಮನೆಯಲ್ಲಿ ಫಿನಾಲೆ ವಾರ ನಡೆಯುತ್ತಿದೆ. ಇನ್ನು ಉಳಿದಿರುವುದು ಮೂರು ಮತ್ತೊಂದು ದಿನವಷ್ಟೇ. ಒಂಭತ್ತು ಸೀಸನ್‌ಗಳು ನಡೆದಿವೆ. ಅಷ್ಟು ಸೀಸನ್‌ನಲ್ಲೂ ಕಡೆ ವಾರ ತುಂಬಾ ಅಂದರೆ ತುಂಬಾ ಭಾವುಕತೆಗೆ ಒಳಗಾಗುತ್ತಿದ್ದರು. ಬಿಗ್ ಬಾಸ್ ಇಷ್ಟೊತ್ತಿಗಾಗಲೇ ಅದೆಷ್ಟೊ ಗಿಫ್ಟ್ ಗಳನ್ನು ನೀಡುತ್ತಿತ್ತು, ಬಯಸಿದ್ದನ್ನು ಕೊಡುತ್ತಿತ್ತು. ಆದರೆ ಈ ಸೀಸನ್‌ನಲ್ಲಿ ಆ ಭಾವುಕತೆ ಕಾಣಿಸುತ್ತಲೇ ಇಲ್ಲ.
ಈ ಮನೆಗೆ ವಾಪಾಸ್ ಬರುವುದಕ್ಕೆ ಸಾಧ್ಯವೇ ಇಲ್ಲ ಎಂಬ ವೇಳೆ ಚಾರವೂ ಯಾರ ತಲೆಗೂ ಹೋದಂತೆ ಕಾಣಿಸುತ್ತಿಲ್ಲ. ಪದೇ ಪದೆ ಎಲ್ಲರೂ ಹೇಳುವಂತೆ ಗೆಲ್ಲುವುದಕ್ಕಾಗಿ ಬಂದಿದ್ದೀನಿ, ಟ್ರೋಫಿ ತೆಗೆದುಕೊಂಡೇ ಹೋಗುತ್ತೀನಿ ಎಂಬ ಮಾತುಗಳು ಬರುತ್ತಿವೆ. ಈ ಸೀಸನ್‌ನಲ್ಲಿರುವ ಸದಸ್ಯರು ಬಿಗ್ ಬಾಸ್‌ನೊಳಗೆ ಜೀವಿಸುತ್ತಲಿಲ್ಲ. ಆಟವಾಡುವುದಕ್ಕೆ ಬಂದಿರುವುದು ಸ್ಪಷ್ಟವಾಗಿದೆ.

ಇಷ್ಟವಿಲ್ಲದವರ ಫೋಟೋಗೆ ಬಾಕ್ಸಿಂಗ್
ಬಿಗ್ ಬಾಸ್ ನಿನ್ನೆಯಿಂದ ಮನೆ ಮಂದಿಗೆ ಒಂದು ಟಾಸ್ಕ್ ಕೊಟ್ಟಿದೆ. ಇನ್ನುಳಿದಿರುವುದು ವಾರಗಳಲ್ಲ, ದಿನಗಳು. ಆದರೂ ಬಿಗ್ ಬಾಸ್ ಮನೆಯೊಳಗೆ ಇರುವ ಅಷ್ಟು ಮಂದಿಗೆ ಕೆಲವೊಬ್ಬರ ಮೇಲೆ ಮನ:ಸ್ತಾಪ, ಬೇಸರವಿದೆ. ಮನೆಯಿಂದ ಹೊರಗೆ ಹೋಗುವುದರೊಳಗೆ ಆ ಕೋಪ, ಬೇಸರವನ್ನು ಕಳೆದುಕೊಂಡು ಬಿಡಲಿ ಎಂದೇ ಬಿಗ್ ಬಾಸ್ ಬಾಕ್ಸಿಂಗ್ ಟಾಸ್ಕ್ ನೀಡಿದೆ. ಅದರಲ್ಲಿ ಯಾರಿಗೆ, ಯಾರ ಮೇಲೆ ಕೋಪವಿದೆಯೋ ಅವರಿಗೆ ಬಾಕ್ಸಿಂಗ್ ಮಾಡಬಹುದು. ಅದು ಕಾರಣವನ್ನು ತಿಳಿಸಿ.
ಕಾರ್ತಿಕ್ ಮೇಲಿನ ಕೋಪ ಹೊರಗೆ ಬಂತು
ಬಿಗ್ ಬಾಸ್ ಆರಂಭದಿಂದ ಕಳೆದ ಮೂರ್ನಾಲ್ಕು ವಾರದ ತನಕ ಸಂಗೀತಾ, ಕಾರ್ತಿಕ್ ಆಗಾಗ ಸರಿ ಆಗುತ್ತಾನೆ ಇದ್ದರು. ಆದರೆ ಅದ್ಯಾಕೋ ಇತ್ತೀಚೆಗೆ ಸಂಗೀತಾಗೆ ಮತ್ತೆ ಫ್ರೆಂಡ್‌ಶಿಪ್ ಮುಂದುವರೆಸುವ ಮನಸ್ಸಾಗಲಿಲ್ಲ. ಆದರೆ, ಕಾರ್ತಿಕ್ ಆಡಿದ ಒಂದೊಂದು ಮಾತುಗಳು, ಕೊಟ್ಟ ಬಿರುದುಗಳು ಸಂಗೀತಾ ಮನಸ್ಸಲ್ಲಿ ಗಟ್ಟಿಯಾಗಿ ನೆಲೆಯೂರಿದ್ದವು. ಸರಿಯಾದ ಸಮಯ ಕಾಯುತ್ತಿದ್ದ ಸಂಗೀತಾ, ಇವತ್ತು ಕಾರ್ತಿಕ್ ಫೋಟೋಗೆ ಬಾಕ್ಸಿಂಗ್ ಮಾಡುವಾಗ, ಯಾವತ್ತು ತೋರದ ಕೋಪವನ್ನು ತೋರಿದ್ದಾರೆ. ಅವಕಾಶ ಸಿಕ್ಕಿದ್ದರೆ ಜೋರಾಗಿ ಕಿರುಚಿ ಬಿಡುತ್ತಿದ್ದರೇನೊ, ಅಷ್ಟು ಕೋಪ ಕಾಣಿಸುತ್ತಾ ಇತ್ತು.

ಕಾರ್ತಿಕ್ ಹೇಳಿದ ಶನಿ ಮಾತಿಗೆ ಗರಂ
ಕಾರ್ತಿಕ್, ಸಂಗೀತಾಗೆ ಶನಿ ಎಂದಿದ್ದ ಮಾತು ಕಿಚ್ಚನ ಪಂಚಾಯ್ತಿಯಲ್ಲಿ ಗೊತ್ತಾದ ಮೇಲೆ ಬಹಳ ನೋವು ಮಾಡಿಕೊಂಡಿದ್ದರು. ಈಗ ಅದೆಲ್ಲವನ್ನು ಹೊರ ಹಾಕಿದ್ದಾರೆ. 'ನಾವೆಲ್ಲಾ ಯೂಸ್ ಮಾಡಿಕೊಂಡ್ವಿ ಅಂತೀರಲ್ಲಾ ಎಷ್ಟು ಜನ ನಿಮ್ಮನ್ನು ಯೂಸ್ ಮಾಡಿಕೊಳ್ಳುವುದಕ್ಕೆ ಸಾಧ್ಯ ಕಾರ್ತಿಕ್. ನೀವೂ ಎಷ್ಟು ಚೆನ್ನಾಗಿ ಎಲ್ಲರನ್ನು ಯೂಸ್ ಮಾಡಿಕೊಂಡ್ರಿ ಎಂಬುದು ಎಲ್ಲರಿಗೂ ಗೊತ್ತು. ಇದು ತನಿಷಾ ಗುದ್ದು, ಇದು ನಮ್ರತಾ, ಇದು ನನ್ನದು. ನಿಮ್ಮ ಲೈಫ್ ನಲ್ಲಿ ನಾನು ಶನಿಯಾಗಿದ್ದೆ, ಶನಿಯಾಗಿಯೇ ಇರುತ್ತೀನಿ, ಶನಿಯಾಗಿಯೇ ಇರಬೇಕು' ಎಂದಿದ್ದಾರೆ.
ಸಂಗೀತಾರನ್ನು ಮೇಡಂ ಎಂದ ಕಾರ್ತಿಕ್
ಮುಂದಿನ ಸರದಿ ಕಾರ್ತಿಕ್‌ಗೆ ಕೂಡ ಬಂದಿದೆ. ಆಗ ಸಂಗೀತಾ ಫೋಟೋ ಹಾಕಿ ಬಾಕ್ಸಿಂಗ್ ಮಾಡಿದ್ದಾರೆ. 'ಮೇಡಂ ಇಲ್ಲಿಗೆ ನಾನು ಫ್ರೆಂಡ್ಶಿಪ್ ಮಾಡುವುದಕ್ಕೆ ಬಂದಿಲ್ಲ. ಟ್ರೋಫಿ ಗೆದ್ದು ತೆಗೆದುಕೊಂಡು ಹೋಗುವುದಕ್ಕೆ ಬಂದಿರುವುದು' ಅಂತ ಹೇಳಿ ಸಂಗೀತಾ ಫೋಟೋಗೆ ಅಷ್ಟೇ ಆಕ್ರೋಶದಿಂದ ಗುದ್ದಿದ್ದಾರೆ.


Click it and Unblock the Notifications











