BBK10: ಬಿಗ್‌ಬಾಸ್ ಮನೆಯಿಂದ ಮೊದಲ ವಾರವೇ ಸ್ನೇಕ್ ಶ್ಯಾಮ್ ಔಟ್?
ಬಿಗ್‌ಬಾಸ್ ಕನ್ನಡ ಸೀಸನ್ 10ರ ಮೊದಲ ಎಲಿಮಿನೇಷನ್ ಯಾರು ಎನ್ನುವ ಚರ್ಚೆ ನಡೀತಿದೆ. ಒಂದೇ ವಾರಕ್ಕೆ ದೊಡ್ಮನೆ ಆಟವನ್ನು ಮುಗಿಸಿ ಬರುವವರ ಯಾರು ಎನ್ನುವ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ. ಸ್ನೇಕ್ ಶ್ಯಾಮ್ ಮೊದಲ ವಾರವೇ ಮನೆಯಿಂದ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.
ಈ ವಾರ ಎಲಿಮಿನೇಷನ್‌ಗೆ 8 ಜನ ನಾಮಿನೇಟ್ ಆಗಿದ್ದರು. ತನಿಷಾ ಕುಪ್ಪಂಡ, ಮೈಕೆಲ್, ನೀತು ವನಜಾಕ್ಷಿ, ಸಿರಿ, ಸಂತೋಷ್ ಹಳ್ಳಿಕೆರೆ, ಕಾರ್ತಿಕ್, ಡ್ರೋನ್ ಪ್ರತಾಪ್, ಸ್ನೇಕ್ ಶ್ಯಾಮ್ ಈ ಲಿಸ್ಟ್‌ನಲ್ಲಿದ್ದರು. ಈ 8 ಜನರಲ್ಲಿ ಇದೀಗ ಸ್ನೇಕ್ ಶ್ಯಾಮ್ ಹೊರಬಿದ್ದಿರುವ ಬಗ್ಗೆ ಮಾತುಗಳು ಕೇಳಿಬರ್ತಿದೆ.

8 ಜನ ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದರು. ಅದರಲ್ಲಿ ಮೂವರು ಸೇಫ್ ಆಗಿರುವುದನ್ನು ಸುದೀಪ್ ಖಚಿತಪಡಿಸಿದ್ದಾರೆ. ಮೊದಲಿಗೆ ವರ್ತೂರು ಸಂತೋಷ್ ನಂತರ ತನಿಷಾ ಕುಪ್ಪಂಡ ಸೇಫ್ ಆಗಿರುವುದನ್ನು ಸುದೀಪ್ ಘೋಷಿಸಿದರು. ಕೊನೆಗೆ ಕಾರ್ತಿಕ್ ಮಹೇಶ್ ಕೂಡ 2ನೇ ವಾರಕ್ಕೆ ಕಾಲಿಡುತ್ತಿರುವುದು ಪಕ್ಕಾ ಆಯಿತು. ಇನ್ನು ನಾಮಿನೇಟ್ ಆಗಿರುವವರಲ್ಲಿ ನೀತು, ಮೈಕೆಲ್, ಡ್ರೋನ್ ಪ್ರತಾಪ್, ಶ್ಯಾಮ್, ಸಿರಿ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಈ ವಾರ ಮನೆಯಿಂದ ಹೊರ ಬರುತ್ತಾರೆ? ಎನ್ನುವ ಚರ್ಚೆ ನಡೀತಿದೆ. ಭಾನುವಾರ ಈ ಪ್ರಶ್ನೆಗೆ ಉತ್ತರ ಸಿಗಲಿದೆ.
ಸ್ನೇಕ್ ಶ್ಯಾಮ್ ಮೊದಲ ವಾರವೇ ಮನೆಯಿಂದ ಹೊರ ಬರುತ್ತಾರಾ? ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮನೆಯೊಳಗೆ ಇರುವ ಸ್ಪರ್ಧಿಗಳಲ್ಲಿ ಇವರೇ ಎಲ್ಲರಿಗಿಂತ ಹಿರಿಯರು. ಮೈಸೂರು ಮೂಲದ ಶ್ಯಾಮ್, ಸ್ನೇಕ್ ಶ್ಯಾಮ್ ಎಂದೇ ರಾಜ್ಯದಲ್ಲಿ ಜನಪ್ರಿಯರಾಗಿದ್ದಾರೆ. ಸಾವಿರಾರು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಒಂದರ್ಥದಲ್ಲಿ ಮೈಸೂರು ಭಾಗದಲ್ಲಿ ಸ್ನೇಕ್ ಶ್ಯಾಮ್ ಸೆಲೆಬ್ರೆಟಿ ಆಗಿಬಿಟ್ಟಿದ್ದಾರೆ.
ಬಿಗ್‌ಬಾಸ್ ಮನೆಯೊಳಗೆ ಹಾವುಗಳ ಬಗ್ಗೆ ಮಹತ್ವದ ಮಾಹಿತಿಯನ್ನು ಶ್ಯಾಮ್ ಬಿಚ್ಚಿಟ್ಟಿದ್ದರು. ಸ್ಪರ್ಧಿಗಳೆಲ್ಲ ಪೂಲ್ ಬಳಿ ಕೂತು ಹರಟೆ ಹೊಡೆಯುತ್ತಿದ್ದಾಗ ಸ್ನೇಕ್ ಶ್ಯಾಮ್ ಹಾವುಗಳ ಬಗ್ಗೆ ರೋಚಕ ಸಂಗತಿಗಳನ್ನು ತೆರೆದಿಟ್ಟಿದ್ದರು. ಕೆಲ ಸಂಗತಿಗಳನ್ನು ಕೇಳಿ ಉಳಿದ ಸ್ಪರ್ಧಿಗಳು ಬೆರಗಾಗಿದ್ದರು. ಹಾವುಗಳು ಮೊಟ್ಟೆ ಇಡುವುದು, ಕಾವು ಕೊಟ್ಟು ಮರಿ ಮಾಡುವುದು, ಮರಿಗಳನ್ನು ಹಾಕುವ ಹಾವುಗಳು, ಗಂಡು ಹಾವು ಇಲ್ಲದೇ ಸೆಲ್ಫ್ ರಿಪ್ರೊಡಕ್ಷನ್ ಮಾಡಿಕೊಳ್ಳುವ ವಿಚಿತ್ರ ಪ್ರಭೇದದ ಹಾವು ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಶ್ಯಾಮ್ ಮಾತನಾಡಿದ್ದರು.


Click it and Unblock the Notifications











