Bigg Boss: ರಕ್ಷಕ್ ಅಲ್ವಾ? ಆ ಕಂಟೆಸ್ಟೆಂಟ್ ಹೆಸರು?; ವೇದಿಕೆಯಲ್ಲೇ ಕಿಚ್ಚನ ಗುದ್ದು!

ಬಿಗ್‌ಬಾಸ್ ಕನ್ನಡ ಸೀಸನ್-10 ಕೊನೆಯ ಹಂತ ತಲುಪುತ್ತಿದೆ. ಕಿಚ್ಚನ ಕೊನೆಯ ಪಂಚಾಯ್ತಿ ಭಾರೀ ಕುತೂಹಲ ಕೆರಳಿಸಿದೆ. ಜೊತೆಗೆ ಈ ವಾರ ಯಾರು ಹೊರ ಹೋಗುತ್ತಾರೆ ಎನ್ನುವ ಕುತೂಹಲವೂ ವೀಕ್ಷಕರಲ್ಲಿದೆ. ಇದೆಲ್ಲದರ ನಡುವೆ ಪಂಚಾಯ್ತಿಯಲ್ಲಿ ರಕ್ಷಕ್ ಮೇಲೆ ನಟ ಸುದೀಪ್ ಗರಂ ಆಗಿದ್ದಾರೆ.

ಇತ್ತೀಚೆಗೆ ಈ ಸೀಸನ್‌ನಲ್ಲಿ ಎಲಿಮಿನೇಟ್ ಆಗಿದ್ದ ಮಾಜಿ ಸ್ಪರ್ಧಿಗಳನ್ನು ಮತ್ತೆ ಮನೆಯೊಳಗೆ ಕಳುಹಿಸಲಾಗಿತ್ತು. ಈ ವೇಳೆ ಅವರು ಒಳಗೆ ಹೋಗಿ ಮಾತನಾಡಿದ ಮಾತುಗಳ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸ್ವತಃ ಸುದೀಪ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿ ಸದ್ದು ಮಾಡ್ತಿದೆ.

Bigg Boss kannada 10; Sudeep Schools Rakshak Bullet

ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ತಮ್ಮ ರೋಷಾವೇಶದ ಹೇಳಿಕೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದರು. ಇದೇ ಜನಪ್ರಿಯತೆಯಿಂದ ಈ ಬಾರಿ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು. ಹೊರಗಡೆ ಬಹಳ ಹಾರಾಡುತ್ತಿದ್ದ ರಕ್ಷಕ್ ಮನೆಯೊಳಗೆ ಸೈಲೆಂಟ್ ಆಗಿದ್ದರು. ಹಾಗಾಗಿ 28ನೇ ದಿನಕ್ಕೆ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದರು. ಬಳಿಕ ಯೂಟ್ಯೂಬ್ ಸಂದರ್ಶನಗಳಲ್ಲಿ ಬಿಗ್‌ಬಾಸ್ ಶೋ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ "ನನಗೆ ದೊಡ್ಡ ಡ್ರಾಮಾ ಅನಿಸಿದ್ದು ಏನು ಅಂದ್ರೆ, ಕಳಪೆ ಉತ್ತಮ ಅನ್ನೋದು ಕೊಡುತ್ತೇವೆ. ನನಗೆ ಇಷ್ಟ ಬಂದಂಗೆ ಕೊಟ್ಟಿದ್ದೇನೆ ಅನ್ನೋ ಲೆವೆಲ್‌ನಲ್ಲೇ ಇರುತ್ತಾರೆ. ಸುದೀಪಣ್ಣ ಬಂದ ಕೂಡಲೇ ಹೆಂಗೆ ಆಗ್ಬಿಡ್ತಾರೆ ಅಂದ್ರೆ, ಅವ್ರು ಹೆಂಗೆ ಹೇಳ್ತಾರೆ ಹಂಗೆ ಕೇಳ್ಬೇಕು. ಅವ್ರು ದೇವ್ರು, ನಾವು ಭಕ್ತಾಧಿಗಳು ಅಂತ ಅಂದ್ಕೊಳ್ತಾರೆ." ಎಂದು ಸ್ಪರ್ಧಿಗಳು ನಿರ್ಧಾರ ಬದಲಿಸುವ ಬಗ್ಗೆ ರಕ್ಷಕ್ ಮಾತನಾಡಿದ್ದರು. ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳಿದ್ದರು.

ಇದೀಗ ಸುದೀಪ್ ವಾರಾಂತ್ಯದ ಬಿಗ್‌ಬಾಸ್ ಪಂಚಾಯ್ತಿ ವೇದಿಕೆಯಲ್ಲೇ ರಕ್ಷಕ್ ಮನೆಯೊಳಗೆ ಹೋಗಿ ಮಾತನಾಡಿದ ಮಾತುಗಳಿಗೆ ಗರಂ ಆಗಿದ್ದಾರೆ.

ಈ ಹಿಂದೆ ಒಮ್ಮೆ ಡ್ರೋನ್ ಪ್ರತಾಪ್ "ಎಲಿಮಿನೇಟ್​ ಆದವರ ಬೆಡ್‌ ಶೀಟ್‌ಗಳು ವಿನಯ್​ ಅವರ ಬೆಡ್​ ಸೇರುತ್ತಿವೆ" ಎಂದಿದ್ದರು. ಈ ಹೇಳಿಕೆಯನ್ನು ಇಟ್ಟುಕೊಂಡು ರಕ್ಷಕ್​ ಮತ್ತೆ ಮನೆಯೊಳಗೆ ಹೋದಾಗ ಮಾತನಾಡಿದ್ದರು. ಇದು ಪ್ರತಾಪ್ ಬೇಸರಕ್ಕೆ ಕಾರಣವಾಗಿತ್ತು. ಇನ್ನು ಡ್ರೋನ್​ ಪ್ರತಾಪ್‌ನ ಈಶಾನಿ ಕಾಗೆ ಎಂದು ಕರೆದಿದ್ದರು ಎದು ಭಾರೀ ಸದ್ದು ಮಾಡಿತ್ತು. ವೀಕ್ಷಕರ ಆಕ್ರೋಶಕ್ಕೂ ಕಾರಣವಾಗಿತ್ತು. ಇದೇ ವಿಚಾರದ ಬಗ್ಗೆ ಸುದೀಪ್ ಈಗ ಮಾತನಾಡಿದ್ದಾರೆ.

ಮಾಜಿ ಸ್ಪರ್ಧೀಗಳ ಕುರಿತು "ಯಾವ ಆ್ಯಂಗಲ್​ನಲ್ಲಿ ನೀವು ಸೋತು ಹೊರಗಡೆ ಹೋಗಿ, ಕಲಿತು ಒಳಗೆ ಬಂದ್ರಿ ಅಂತ ನಿಮಗೆ ಅನಿಸುತ್ತೆ ಹೇಳಿ" ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ನಮ್ರತಾ ಗೌಡ ಬಗ್ಗೆ ಸ್ನೇಹಿತ್​ ಮಾತಿಗೂ ಸುದೀಪ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕೊನೆಗೆ "ಇನ್ನೊಂದು ಬ್ಯಾಂಕೆಟ್ ಬರುತ್ತೆ. ರಕ್ಷಕ್ ಅವರದ್ದು. ರಕ್ಷಕ್ ಅಲ್ವಾ? ಆ ಕಂಟೆಸ್ಟೆಂಟ್ ಹೆಸರು? ಚೆನ್ನಾಗಿಟ್ಟಿರಲಿ ದೇವರು ನಿಮ್ಮನ್ನ" ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.

Bigg Boss kannada 10; Sudeep Schools Rakshak Bullet

ಇನ್ನು ಬಿಗ್‌ಬಾಸ್ ಮನೆಯಲ್ಲಿ ಸದ್ಯ 7 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಮುಂದಿನ ವಾರವೇ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಹಾಗಾಗಿ ಈ ವಾರ ಇಬ್ಬರು ಮನೆಯಿಂದ ಹೊರ ಬರುವ ಸಾಧ್ಯತೆಯಿದೆ. ವೀಕೆಂಡ್‌ನಲ್ಲೇ ಇಬ್ಬರು ಹೊರ ಬರ್ತಾರಾ? ಅಥವಾ ಒಬ್ಬರು ಮುಂದಿನ ವಾರದ ನಡುವೆ ದೊಡ್ಮನೆಗೆ ಗುಡ್‌ಬೈ ಹೇಳ್ತಾರಾ? ಕಾದು ನೋಡಬೇಕಿದೆ. ಯಾರು ಈ ಸಲ ಬಿಗ್‌ಬಾಸ್ ಟ್ರೋಫಿಗೆ ಮುತ್ತಿಡುತ್ತಾರೆ ಎನ್ನುವುದು ಬಹಳ ಕುತೂಹಲ ಕೆರಳಿಸಿದೆ. ಬುಧವಾರವಷ್ಟೇ ತನಿಷಾ ಎಲಿಮಿನೇಟ್ ಆಗಿ ಹೊರ ಬಂದಿದ್ದರು.

More from Filmibeat

English summary
Bigg Boss, Bigg Boss Kannada 10, Bigg Boss Kannada Rakshak Bullet, Sudeep schools Rakshak Bullet, Sudeep angry on Rakshak Bullet, bigg boss Sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X