BBK10: ಸ್ವಾಭಿಮಾನದ ಆಟ ಶುರು ಮಾಡಿದ್ರಾ ತನಿಷಾ ? ವಿನಯ್ ಬಳಿ ರಿಕ್ವೆಸ್ಟ್ ಮಾಡಲೇ ಇಲ್ಲ!
ಬಿಗ್ ಬಾಸ್ ಮನೆಯಲ್ಲಿ ಈಗ ಕಿತ್ತಾಡಿದವರು, ಮತ್ತೆ ಒಂದಾಗಲೇಬೇಕಾಗುತ್ತದೆ. ಯಾಕಂದ್ರೆ ದಿನಬೆಳಗಾದರೆ ಅವರ ಜೊತೆಗೆ ಇರಬೇಕು. ಹೊಸದಾಗಿ ಯಾರೂ ಸಿಗುವುದಿಲ್ಲ. ಹೀಗಾಗಿ ಏನೇ ಮಾಡಿದರು ಮತ್ತೆ ಬದಲಾಗಬೇಕಾದ ಅನಿವಾರ್ಯತೆ ಇದೆ. ಆದರೆ, ತನಿಷಾ ಸ್ವಲ್ಪ ಸ್ವಾಭಿಮಾನದ ಆಟ ಆಡುತ್ತಿದ್ದಾರಾ? ಅಥವಾ ವಿನಯ್ ಬಗ್ಗೆ ಅರಿತಿದ್ದ ತನಿಷಾ ಸೈಲೆಂಟ್ ಆಗಿ ಬಿಟ್ರಾ ಎಂಬ ಅನುಮಾನಗಳು ಶುರುವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ಟಿಕೆಟ್ ಫಿನಾಲೆ ಬಿಸಿ ಜೋರಾಗಿದೆ. ಫಿನಾಲೆಗೆ ಹೋಗಬೇಕು ಎಂದರೆ ಅವರವರೇ ಅಂಕಗಳನ್ನು ಪಡೆಯಬೇಕಿದೆ. ಈ ಅಂಕಗಳ ಆಧಾರದ ಮೇಲೆ ಒಬ್ಬರು ಈ ವಾರ ಮನೆಗೆ ಹೋಗುವುದರಿಂದ ಪಾರಾಗುತ್ತಾರೆ. ಅಂಕ ಪಡೆಯಲು ಟಾಸ್ಕ್ ಗೆಲ್ಲಬೇಕು. ಟಾಸ್ಕ್ ಆಡಲು ವಿನಯ್ ಅನುಮತಿ ಬೇಕಿತ್ತು. ಆದರೆ ತನಿಶಾ, ವಿನಯ್ ಬಳಿ ಮನವಿಯನ್ನೇ ಮಾಡಲಿಲ್ಲ.

ವಿನಯ್‌ಗೆ ವಿಶೇಷ ಅಧಿಕಾರ
ಟಿಕೆಟ್ ಟು ಫಿನಾಲೆಯಲ್ಲಿ ಮನೆ ಸದಸ್ಯರು ಟಾಸ್ಕ್ ಆಡಬೇಕು. ಈ ಟಾಸ್ಕ್ ಆಡುವಾಗ ಗೆದ್ದವರಿಗೆ ವಿಶೇಷ ಅಧಿಕಾರವನ್ನು ನೀಡುತ್ತಿತ್ತು. ಈ ಬಾರಿ ವಿನಯ್ ಅವರಿಗೆ ವಿಶೇಷ ಅಧಿಕಾರ ನೀಡಿದ್ದರು ಬಿಗ್ ಬಾಸ್. ಯಾರು ಕೂಡ ಟಾಸ್ಕ್‌ನಿಂದ ವಿನಯ್‌ರನ್ನು ಹೊರಗೆ ಇಡುವಂತೆ ಇಲ್ಲ ಎಂಬ ಘೋಷಣೆ ಮಾಡಿತ್ತು. ಅದರಂತೆ ವಿನಯ್ ಸಹಸ್ಪರ್ಧಿಗಳನ್ನು ಆಯ್ಕೆ ಮಾಡುವ ಅಧಿಕಾರ ನೀಡಿತ್ತು.
ವಿನಯ್ ಬಳಿ ಎಲ್ಲರ ಮನವಿ
ವಿನಯ್ ತಮ್ಮ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲು ಬಿಗ್ ಬಾಸ್ ಸೂಚನೆ ನೀಡಿತ್ತು. ಅದರಂತೆ ಮನೆಯ ಮಂದಿ ವಿನಯ್ ಬಳಿ ಮನವಿ ಮಾಡಿಕೊಳ್ಳಲು ಶುರು ಮಾಡಿದರು. ಮೊದಲು ತುಕಾಲಿ, ಆಮೇಲೆ ವರ್ತೂರು ಸಂತೋಷ್ ಮನವಿ ಮಾಡಿದರು. ಕಾರ್ತಿಕ್ ಸಮಯ ಬಂದಾಗ, "ಸ್ವಾಭಿಮಾನ ಎಲ್ಲಾ ಬಿಟ್ಟು ಬಿಡಬೇಕು" ಎಂದು ವಿನಯ್ ಬಳಿ ಮನವಿ ಮಾಡಿದ್ದಾರೆ. ಬಳಿಕ ನಮ್ರತಾ, ಸಂಗೀತಾ ಕೂಡ ಫಾರ್ಮಲ್ ಆಗಿ ಹೋಗಿ ಮಾತನಾಡಿದ್ದಾರೆ.
ಮನವಿ ಮಾಡದ ತನಿಷಾ
ತನಿಷಾಗೂ ವಿನಯ್‌ಗೂ ಆಗಾಗ ಜಗಳಗಳು, ಮನ:ಸ್ತಾಪ ಬರುತ್ತಲೆ ಇದೆ. ಈಗ ಟಾಸ್ಕ್‌ನಲ್ಲಿ ಆಯ್ಕೆ ಮಾಡಿಕೊಳ್ಳಲು ವಿನಯ್ ಬಳಿ ಮನೆಯ ಮಂದಿಯೆಲ್ಲಾ ಮನವಿ ಮಾಡಿದ್ದಾರೆ. ಆದರೆ, ತನಿಷಾ ಮಾತ್ರ ಮನವಿ ಮಾಡಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಮನವಿ ಮಾಡಿಕೊಳ್ಳುವ ಸಮಯ ಬಂದಾಕ್ಷಣಾ ಅಡುಗೆ ಮನೆಗೆ ಹೋಗಿ ನಿಂತಿದ್ದರು. ತನಿಷಾಗೂ ಗೊತ್ತಿತ್ತು, ವಿನಯ್ ತನ್ನನ್ನು ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂದು. ಹೀಗಾಗಿಯೇ ಮನವಿಯನ್ನು ಮಾಡಿಕೊಳ್ಳುವುದಕ್ಕೆ ಹೋಗಲಿಲ್ಲ. ಅದರಂತೆ ವಿನಯ್ ಕೂಡ, ಕಡೆಯಲ್ಲಿ ತನಿಷಾರನ್ನು ನಾನು ಆಯ್ಕೆ ಮಾಡಲ್ಲ ಎಂದೇ ಹೇಳಿದರು.

ವಿನಯ್ ಗೆಲುವಿಗೆ ಹಾರ್ಟ್ ನೀಡಿದ ತನಿಷಾ
ಟಾಸ್ಕ್ ಆಡದೆ ಕುಳಿತವರು ಟಾಸ್ಕ್ ಆಡುತ್ತಿರುವ ಸ್ಪರ್ಧಿಗಳಲ್ಲಿ ಯಾರೂ ಗೆಲ್ಲುತ್ತಾರೆ ಎಂಬುದನ್ನು ಬರೆದಿಡಬೇಕು. ಕಡೆಯಲ್ಲಿ ಅವರ ಊಹೆ ನಿಜವಾದರೆ ಎಲ್ಲರಿಗೂ ಖುಷಿ. ಗೋಪುರ ಕಟ್ಟುವ ಸ್ಪರ್ಧೆಯಲ್ಲಿ ಕಾರ್ತಿಕ್, ತುಕಾಲಿ, ಪ್ರತಾಪ್ ಹಾಗೂ ತನಿಷಾ ಎಲ್ಲರೂ ಊಹೆ ಮಾಡಿದ್ದಿದ್ದು ಒಬ್ಬರನ್ನೇ ಅದುವೆ ವಿನಯ್. ಎಲ್ಲರೂ ನಾರ್ಮಲ್ ಆಗಿ ವಿನಯ್ ಎಂದು ಬರೆದಿದ್ದರು. ಆದರೆ, ತನಿಷಾ ಸ್ವಲ್ಪ ಸ್ಪೆಷಲ್ ಆಗಿ ಬರೆದಿದ್ದರು. ಅದುವೇ ಹಾರ್ಟ್ ನೀಡಿದ್ದರು. ಈ ಹಾರ್ಟ್ ನಿಂದಾಗಿ ವಿನಯ್ ಹಾರ್ಟ್ ಗೆಲ್ಲುತ್ತಾರಾ ನೋಡಬೇಕಿದೆ.


Click it and Unblock the Notifications











