BBK10: ಬಿಗ್ ಬಾಸ್ ಮನೆಯಲ್ಲಿ ತನಿಷಾ ಕಣ್ಣೀರು.. ಅಷ್ಟು ನೋವುಂಟು ಮಾಡಿತ್ತಾ ಸ್ನೇಹಿತ್ ಮಾತು?

By Shruthi Harishgowda

ದೊಡ್ಮನೆಯಲ್ಲಿ ಎಲ್ಲರೂ ಕೂಡ ತಮ್ಮ ಇಷ್ಟದಂತೆ ಆಟ ಆಡುತ್ತಿದ್ದಾರೆ. ತಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಈಗ ಎಲ್ಲಾ ಟಾಸ್ಕ್‌ಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇನ್ನೂ ವಿನಯ್ ಹಾಗೂ ಸಂಗೀತ ಟೀಮ್ ನಡುವೆ ದೊಡ್ಡ ಯುದ್ಧವೇ ಏರ್ಪಡುತ್ತದೆ. ಆದರೆ ಕೆಲವು ಬಾರಿ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿಕೊಂಡು ಆಟವಾಡುತ್ತಾ ಇರುತ್ತಾರೆ.

ಕೆಲವೊಮ್ಮೆ ವಾಗ್ವಾದ, ಜಗಳ ತಾರಕಕ್ಕೇರುತ್ತದೆ. ‌ಈಗ ಅದೇ ವಾತಾವರಣ ಬಿಗ್ ಬಾಸ್ ಮನೆಯೊಳಗೆ ಸೃಷ್ಟಿಯಾಗಿದೆ. ತನಿಷಾ, ಸ್ನೇಹಿತ್ ಆಡಿದ ಮಾತುಗಳಿಗೆ ತುಂಬಾ ನೊಂದುಕೊಂಡು ಕಣ್ಣೀರು ಹಾಕಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಪ್ರತಿ ದಿನವೂ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ‌ಅದರಲ್ಲಿ ಟಾಸ್ಕ್ ವಿನ್ ಮಾಡಬೇಕು ಎಂದುಕೊಂಡ ಸ್ನೇಹಿತ್ ಎದುರಾಳಿ ತಂಡದ ಮೇಲೆ ಮುಗಿಬಿದ್ದಿದ್ದರು. ಕಾರ್ತಿಕ್ ಹಾಗೂ ಸಂಗೀತಾ ಮೇಲೆ ಒಮ್ಮೆಗೆ ಮನಸ್ಸಿನಲ್ಲಿದ್ದ ಮಾತುಗಳನ್ನು ಹೊರ ಹಾಕಿದರು. ಕಾರ್ತಿಕ್‌ನನ್ನು ನೀನು ನನ್ನ ಕಾಲಿಗೆ ಸಮಾನ ಎಂದೆಲ್ಲಾ ಹೇಳಿದ್ದರು.

BBK10-tanisha-fire-on-snehith-and-cried

ಸಂಗೀತಾಗೂ ಕೂಡ ಮನಸ್ಸಿನಲ್ಲಿದ್ದ ಮಾತುಗಳನ್ನು ನಮ್ರತಾ ಹಾಗೂ ಸ್ನೇಹಿತ್ ಹೇಳಿದ್ದರು. ‌ಇದಾದ ಮೇಲೆ ತನಿಷಾ ಸರದಿ ಬಂದಿದೆ. ಇನ್ನು ಮೊದಲೇ ತನಿಷಾ ಮೇಲೆ ಕೋಪಗೊಂಡಿದ್ದ ಸ್ನೇಹಿತ್ ಬಹಳ ಹರ್ಟ್ ಆಗುವಂತೆ ಮಾತನಾಡಿದ್ದಾರೆ.

ಮೊದಲೇ ವಿನಯ್ ಅಂಡ್ ಟೀಂ, ಹೇಗಾದರೂ ಮಾಡಿ ಚೆನ್ನಾಗಿ ಸಂಗೀತಾ ಟೀಮ್‌ನ ಕೆಣಕಬೇಕು ಎಂದದು ಮಾತನಾಡಿಕೊಂಡಿದ್ದರು. ಅವರನ್ನ ಸೋಲಿಸಲೇಬೇಕು ಎಂದುಕೊಂಡ ನಮ್ರತಾ ಹಾಗೂ ಸ್ನೇಹಿತ್ ಬಹಳಷ್ಟು ರೋಷಾವೇಶದಿಂದ ಮಾತನಾಡಿದ್ದಾರೆ. ತನಿಷಾ ಟಾಸ್ಕ್‌ನಲ್ಲಿ ಸೋತು ಹೋಗಬಾರದು ಎಂದು ಅಲ್ಲಿ ಸುಮ್ಮನಿದ್ದರು. ಸ್ನೇಹಿತ್ ಇದನ್ನೇ ಬಂಡವಾಳ ಮಾಡಿಕೊಂಡು ತನಿಷಾ ವೈಯಕ್ತಿಕ ಜೀವನದ ಬಗ್ಗೆಯೂ ಮಾತನಾಡಿದ್ದಾರೆ. ತನಿಷಾ ಮನಸ್ಸಿಗೆ ಸಾಕಷ್ಟು ನೋವಾಗಿದೆ. ನಂತರ ಸ್ನೇಹಿತ್ ಸರದಿ ಬಂದಾಗ ತನಿಷ ಮನಸ್ಸಿನಲ್ಲಿದ್ದ ನೋವನ್ನೆಲ್ಲ ಹೊರಹಾಕಿ ಕಣ್ಣೀರಾಗಿದ್ದಾರೆ. ಈ ವೇಳೆ ಸ್ನೇಹಿತ್ ಸುಮ್ಮನಾಗಿದ್ದಾರೆ.

ಸ್ನೇಹಿತ್ ಮಾತಿಗೆ ಕಣ್ಣೀರು ಹಾಕಿದ ತನಿಷಾ

ಈ ಮೊದಲೇ ಸ್ನೇಹಿತ್ ಹಾಗೂ ತನಿಷಾಗೆ ಸ್ವಲ್ಪ ಕ್ಲ್ಯಾಶ್ ಆಗಿತ್ತು. ಅದನ್ನು ಟಾಸ್ಕ್ ಮೂಲಕ ತೀರಿಸಿಕೊಳ್ಳಬೇಕು ಎಂದು ತನಿಷಾರನ್ನು ಕೆಣಕಿದ್ದಾರೆ. ಆದರೆ ತನಿಷಾ ಆಗ ಟಾಸ್ಕ್‌ನಲ್ಲಿ ಗೆಲ್ಲಲೇಬೇಕು ಎಂದುಕೊಂಡು ಏನನ್ನು ಮಾತನಾಡಿಲ್ಲ. ಸ್ನೇಹಿತ್ ಹೇಳಿದ ಎಲ್ಲಾ ಮಾತುಗಳನ್ನು ಸೈಲೆಂಟಾಗಿ ಕೇಳಿಸಿಕೊಂಡಿದ್ದಾರೆ. ನಂತರ ಮಧ್ಯರಾತ್ರಿಯಲ್ಲಿ ಕಣ್ಣೀರು ಹಾಕಿ ತಮ್ಮ ನೋವನ್ನು ಹೊರಹಾಕಿದ್ದಾರೆ.

ಗೆಲ್ಲೋಕೆ ಬೇಕಾದರೂ ಅನ್ನಬಹುದಾ?

ಸ್ನೇಹಿತ್‌ ಮುಂದೆ ಬಂದ ತನಿಷಾ ಕಣ್ಣೀರು ಹಾಕಿದ್ದಾರೆ. ನಿಮಗೆ ನನ್ನ ಫ್ಯಾಮಿಲಿಯ ಬಗ್ಗೆ ಎಷ್ಟು ಗೊತ್ತು? ನನ್ನ ಬಗ್ಗೆ ಎಷ್ಟು ಗೊತ್ತು? ನಾನು ಬಿಗ್ ಬಾಸ್ ಮನೆಗೆ ಬಂದಾಗಿನಿಂದ ನೀವು ನನ್ನನ್ನ ನೋಡುತ್ತಾ ಇದ್ದೀರಾ. ಇನ್ನೊಬ್ಬರ ಬಗ್ಗೆ ಮಾತನಾಡಲು ಮನಸ್ಸಾದರೂ ಹೇಗೆ ಬರುತ್ತದೆ? ಎಂದು ತನಿಷಾ ಕಣ್ಣೀರು ಹಾಕಿ ಸ್ನೇಹಿತ್‌ಗೆ ಕ್ಲಾಸ್ ತಗೆದುಕೊಂಡಿದ್ದಾರೆ. ತನಿಷಾ ಇಷ್ಟೆಲ್ಲ ಮಾತನಾಡುತ್ತಿದ್ದರೂ ಕೂಡ ಸ್ನೇಹಿತ್ ತಲೆ ಬಗ್ಗಿಸಿ ನಿಂತುಕೊಂಡಿದ್ದಾರೆ. ಸಂಗೀತಾ, ತನಿಷಾರನ್ನು ಎಷ್ಟೇ ಸಮಾಧಾನ ಮಾಡುತ್ತಿದ್ದರು ಕೂಡ ತನಿಷಾ ಸಮಾಧಾನಮಾಡಿಕೊಳ್ಳುತ್ತಿಲ್ಲ.

ವೈಯಕ್ತಿಕ ವಿಷಯ ಟಾರ್ಗೆಟ್

ಟಾಸ್ಕ್‌ಗೋಸ್ಕರ ಏನು ಬೇಕಾದರೂ ಮಾತನಾಡಬಹುದಾ? ಎಂದು ತನಿಷಾ, ಸ್ನೇಹಿತ್‌ಗೆ ಪ್ರಶ್ನೆ ಮಾಡಿದ್ದಾರೆ. ನಿಮ್ಮ ಮಾತಿನಿಂದ ನನಗೆ ತುಂಬಾ ನೋವಾಗಿದ್ದು ಮಧ್ಯರಾತ್ರಿಯಲ್ಲಿ ನಾನು ಒಬ್ಬಳೇ ಕುಳಿತು ಅತ್ತಿದ್ದೇನೆ ಎಂದು ಹೇಳಿದ್ದಾರೆ. ನನ್ನ ಬಗ್ಗೆ ಏನು ಗೊತ್ತಿದೆ ಎಂದು ಮಾತನಾಡುದ್ರಿ. ಇದಕ್ಕೂ ಮುಂಚೆ ನನ್ನನ್ನ ನೀವು ನೋಡಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ನಾನು ಹೇಗೆ ಬೆಳೆದು ಬಂದಿದ್ದೇನೆ ಯಾವ ಫ್ಯಾಮಿಲಿಯಲ್ಲಿ ಬೆಳೆದು ಬಂದಿದ್ದೇನೆ ಎಂಬುದು ಏನಾದರೂ ನಿಮಗೆ ಗೊತ್ತಾ? ಎಂದು ಕೇಳಿದ್ದಾರೆ.

ಸ್ನೇಹಿತ್‌ಗೆ ವಾರ್ನಿಂಗ್ ಕೊಟ್ಟ ತನಿಷಾ

ಇನ್ನೊಬ್ಬರ ಫ್ಯಾಮಿಲಿಯ ಬಗ್ಗೆ ಮಾತನಾಡಲು ನೀವು ಯಾರು ನಿಮಗೆ ಹಕ್ಕು ಕೊಟ್ಟಿದ್ದು ಯಾರು? ಇಲ್ಲಿ ತಂಡ ಮಾಡಿರುವುದು ಟಾಸ್ಕ್ ಗೆಲ್ಲುವುದಕ್ಕೆ. ಅದು ಬಿಟ್ಟು ವೈಯಕ್ತಿಕವಾಗಿ ಮಾತನಾಡಲು ಅಲ್ಲ ಎಂದು ಖಡಕ್ಕಾಗಿಯೇ ಸ್ನೇಹಿತ್‌ಗೆ ವಾರ್ನಿಂಗ್ ಕೊಟ್ಟಿದ್ದಾರೆ. ನನ್ನ ಬಗ್ಗೆ ಆಗಲಿ ವೈಯಕ್ತಿಕ ವಿಷಯದ ಬಗ್ಗೆಯಾಗಲಿ ಮಾತನಾಡಿದರೆ ನನ್ನಷ್ಟು ಕೆಟ್ಟವಳು ಯಾರು ಇರೋದಿಲ್ಲ ಎಂದು ಕೂಡ ಹೇಳಿದ್ದಾರೆ.

More from Filmibeat

English summary
BBK10: Thanisha Bursts into tears
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X