Bigg Boss Kannada 10: ಬಿಗ್‌ ಬಾಸ್ ಮನೆಯೊಳಗೆ ಹೋಗುವ ಮುನ್ನವೇ ಕಣ್ಣೀರು ಹಾಕಿದ ಗಾಯಕಿ ಈಶಾನಿ

ಬಿಗ್ ಬಾಸ್ ಮನೆಗೆ ಮೂರನೇ ಸ್ವರ್ಧಿಯಾಗಿ ಗಾಯಕಿ ಈಶಾನಿ ಕಾಲಿಟ್ಟಿದ್ದಾರೆ. ಮೈಸೂರು ಮೂಲದ ಇವರು ಬೆಳೆದಿದ್ದು, ವಿದ್ಯಾಭ್ಯಾಸ ಮಾಡಿದ್ದು ಮಾತ್ರ ರಾಜಧಾನಿ ಬೆಂಗಳೂರು, ದುಬೈ, ಲಾಸ್ ಏಂಜಲೀಸ್‌ನಲ್ಲಿ. ಸದ್ಯ ಬಿಗ್‌ ಬಾಸ್‌ ಸೀಸನ್ ಹತ್ತರಲ್ಲಿ ಮೂರನೇ ಸ್ವರ್ಧಿಯಾಗಿ ಅತೀ ಉತ್ಸಾಹದಿಂದ ತೆರಳಿದ್ದಾರೆ.

ವಿಶೇಷವೆಂದರೆ ಕಿಚ್ಚ ಸುದೀಪ್ ವೇದಿಕೆಗೂ ಕರೆಯುವ ಮುನ್ನವೇ ಬಿಗ್ ಬಾಸ್ ಕಲರ್ ಫುಲ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದ ಇವರು, ತಮ್ಮ ಚಿಕ್ಕ ವಿಡಿಯೋದಲ್ಲಿಯೂ ಬಿಗ್‌ ಬಾಸ್ ಮತ್ತು ಸುದೀಪ್ ಮೇಲಿರುವ ಅಭಿಮಾನ ವ್ಯಕ್ತಪಡಿಸಿದ್ದರು. ಬಿಗ್ ಬಾಸ್‌ನಲ್ಲಿ ಭಾಗಿಯಾಗಲೇಬೇಕು ಎಂಬ ತಮ್ಮ ಗಟ್ಟಿ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.

Bigg Boss Kannada 10: Third contestant rapper Eshani enters bigg boss house

83 ಪರ್ಸೆಂಟ್​ ಓಟ್​ ಪಡೆದ ರ್ಯಾಪ್ ಗಾಯಕಿ ಈಶಾನಿ

ಇನ್ನು, ಬಿಗ್ ಬಾಸ್‌ಗೆ ಹೋಗುವವರು ವೇದಿಕೆಯಿಂದ ಸೀದಾ ಮನೆಯೊಳಗೆ ಹೋಗುವಂತಿಲ್ಲ. ಅವರು ವೀಕ್ಷಕರ ವೋಟ್‌ಗಳನ್ನು ಪಡೆಯಬೇಕಿದೆ. ಇದರ ಆಧಾರದ ಮೇಲೆಯೇ ಅವರನ್ನು ಬಿಗ್ ಬಾಸ್ ಮನೆಗೆ ಕಳಿಸಬೇಕೋ ಇಲ್ಲ ವಾಪಸ್ ಮನೆಗೆ ಕಳಿಸಬೇಕು ಎಂದು ನಿರ್ಧರಿಸುತ್ತಾರೆ. ಈಶಾನಿ ಅವರನ್ನು ಜನ ಮೆಚ್ಚಿಕೊಂಡಿದ್ದು, ಭರ್ಜರಿ 83 ಪರ್ಸೆಂಟ್​ ಓಟ್​ ನೀಡಿ ಮನೆಗೆ ಕಳುಹಿಸಿದ್ದಾರೆ.

ಮಂಜು ಪಾವಗಡ ಮತ್ತು ಇಶಾನಿ

ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ಜೊತೆ ಈಶಾನಿ ವೇದಿಕರ ಮೇಲೆ ಹೆಚ್ಚು ತಮಾಷೆ ಮಾಡಿ ಕಾಲೆಳೆದಿದ್ದಾರೆ. ತಾವು ರ್ಯಾಪರ್ ಎಂದು ಹೇಳಿಕೊಂಡಿದ್ದು, ಅದರಲ್ಲೇ ಮದುವೆ ಪ್ರಸ್ತಾಪ ಕೂಡ ಮಾಡಿದ್ದಾರೆ. ಈಶಾನಿ ತಂದೆ ತಾಯಿಯ ಜೊತೆಗೆ ಫೋಟೋಗೂ ಫೋಸ್ ನೀಡಿದ್ದಾರೆ. ಇದು ಪ್ರೇಕ್ಷಕರಿಗೆ ಹೆಚ್ಚು ಮಜಾ ನೀಡಿದೆ.

ಬಳಿಕ ಮನೆಯೊಳಗೆ ಹೊರಟ ಅವರು ವೇದಿಕೆ ಮೇಲೆಯೆ ಕಣ್ಣೀರು ಹಾಕಿದ್ದಾರೆ. ತಂದೆ ತಾಯಿಗೆ ಬೆಚ್ಚಗಿನ ಅಪ್ಪುಗೆ ನೀಡಿ, ಸಿಹಿ ಮುತ್ತು ನೀಡಿ ಕಣ್ಣಿರು ಹಾಕುತ್ತಲೇ ಮನೆಗೆ ಪ್ರವೇಶಿಸಿದ್ದಾರೆ. ಮನೆಗೆ ಹೋದ ಕೂಡಲೇ ಸ್ನೇಹಿತ್ ಗೌಡ ಮತ್ತು ನಮ್ರತಾ ಗೌಡ ಕಾಫಿಯೊಮದಿಗೆ ಸ್ವಾಗತ ನೀಡಿದ್ದಾರೆ.

ವಿದೇಶದಲ್ಲಿ ಹುಟ್ಟಿ ಬೆಳೆದ ಅವರು ಮನೆಯೊಳಗೆ ಹೇಗೆ ಹೊಂದಿಕೊಳ್ಳುತ್ತಾರೋ ಎಂಬ ಪ್ರಶ್ನೆಯಲ್ಲಿಯೇ ಅವರು ಸ್ನೇಹಿತ್ ಗೌಡ ಮತ್ತು ನಮ್ರತಾ ಗೌಡ ಅವರ ಜೊತೆಗೆ ಚೆನ್ನಾಗಿ ಮಾತನಾಡಿದ್ದಾರೆ. ಜೊತೆಗೆ ತಾವು ತಂಬಾ ಬೇಗ ಜನರನ್ನು ಹಚ್ಚಿಕೊಳ್ಳುವುದಾಗಿ ತಿಳಿಸಿದ್ದಾರೆ. ಇನ್ನು, ಮನೆಯಲ್ಲಿ ಸ್ನೇಹಿತ್ ಗೌಡ ಈಶಾನಿಗಾಗಿ ಮುಂಗಾರು ಮಳೆ ಸಿನಿಮಾದ ಹಾಡು ಹಾಡಿ ಇಶಾನಿ ಅವರ ಜೋಕಾಲಿ ತೂಗಿದ್ದಾರೆ.

More from Filmibeat

English summary
Bigg Boss Kannada 10: Third contestant rapper Eshani enters bigg boss house.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X