BBK10: ಎರಡನೇ ವಾರ ಬಿಗ್‌ಬಾಸ್ ಮನೆಯಿಂದ ಯಾರಿಗೆ ಸಿಗುತ್ತೆ ಗೇಟ್‌ಪಾಸ್ ?

ನೋಡ್ತಾ ನೋಡ್ತಾ ಮತ್ತೊಂದು ವಾರ ಕಳೆದೇ ಹೋಯ್ತು. ಬಿಗ್‌ಬಾಸ್ ಕನ್ನಡ ಸೀಸನ್ 10ರ ಎರಡನೇ ವಾರಾಂತ್ಯ ಬಂದಿದೆ. ಕಳೆದ ವಾರದ ಸ್ನೇಕ್ ಶ್ಯಾಮ್ ದೊಡ್ಮನೆಯಿಂದ ಹೊರ ಬಂದಿದ್ದರು. ಈ ವಾರ ಯಾರು ಬಿಗ್‌ಬಾಸ್ ಆಟ ಮುಗಿಸಿ ವಾಪಸ್ ಬರ್ತಾರೆ ಎನ್ನುವ ಕುತೂಹಲ ಮೂಡಿದೆ.

'ವಾರದ ಕತೆ ಕಿಚ್ಚನ ಜೊತೆ' ನೋಡೋಲೆ ವೀಕ್ಷಕರು ತುದಿಗಾಗಲ್ಲಿ ನಿಂತಿದ್ದಾರೆ. ಈ ವಾರ ಮನೆಯಲ್ಲಿ ಏನೆಲ್ಲಾ ಆಯ್ತು? ಯಾರಿಗೆ ಕಿಚ್ಚನ ಚಪ್ಪಾಳೆ ಸಿಗುತ್ತೆ? ಯಾರಿಗೆ ಮಾತಿನ ಏಟು ಸಿಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ. ಅದಕ್ಕಿಂತ ಮುಖ್ಯವಾಗಿ ನಾಮಿನೇಟ್ ಆಗಿರುವ 6 ಜನರಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ? ಎನ್ನುವ ಲೆಕ್ಕಾಚಾರವೂ ಶುರುವಾಗಿದೆ. ಎರಡು ವಾರಗಳ ಹಾವು ಏಣಿ ಆಟ, 6 ಜನರಿಗೆ ಎಲಿಮೇಷನ್ ಟೆನ್ಷನ್ ಎಂದು ಹೊಸ ಪ್ರೋಮೊ ರಿಲೀಸ್ ಆಗಿದೆ.

BBK10-Who will be eliminated-this-week

ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳ ಹನಿಮೂನ್ ಪೀರಿಯಡ್ ಮುಗಿದಿದೆ. ಯಾರ ಬಲ ಏನು? ಯಾರ ವೀಕ್ನೆಸ್ ಏನು? ಅನ್ನೋದು ಗೊತ್ತಾಗಿದೆ. ಈಗ ಅಸಲಿ ಆಟ ಶುರುವಾಗಿದೆ. ಮನೆಯೊಳಗೆ ಉಳಿದುಕೊಳ್ಳುವುದಕ್ಕೆ ಯಾರು ಯಾರ್ಯಾರ ಕಾಲು ಎಳೆಯುತ್ತಾರೆ? ಅನ್ನೋದನ್ನು ನೋಡಬೇಕಿದೆ. ಅಕ್ಟೋಬರ್ 8ರಂದು 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿದ್ದರು. ಈಗ 16 ಜನ ಇದ್ದು ಶೀಘ್ರದಲ್ಲೇ ಈ ಸಂಖ್ಯೆ 15ಕ್ಕೆ ಇಳಿಯಲಿದೆ.

ವಿನಯ್ ಗೌಡ, ಕಾರ್ತಿಕ್ ಅಗ್ರೆಸಿವ್ ಆಗಿ ಆಟ ಆಡುತ್ತಿದ್ದಾರೆ. ನಿಧಾನವಾಗಿ ಡ್ರೋನ್ ಪ್ರತಾಪ್ ಹಾಗೂ ರಕ್ಷಕ್ ಕೂಡ ಅಖಾಡಕ್ಕೆ ಇಳಿದಿದ್ದಾರೆ. ಪ್ರತಾಪ್ ಎಲ್ಲರಿಗೂ ಟಫ್ ಕಾಂಪಿಟೇಷನ್ ಕೊಡುವ ಸುಳಿವು ಸಿಕ್ಕಿದೆ. ವೀಕ್ಷಕರ ಒಲವು ಕೂಡ ಪ್ರತಾಪ್ ಕಡೆ ವಾಲುತ್ತಿದೆ. ಆದರೆ ಬಹುತೇಕರು ಕಾರ್ತಿಕ್, ಸಂಗೀತಾ ಇಬ್ಬರು ಫೈನಲ್‌ಗೆ ಹೋಗುವುದು ಖಚಿತ ಎನ್ನುತ್ತಿದ್ದಾರೆ. ಮೊದಲ ವಾರ ಶಾಸಕರಾದ ಪ್ರದೀಪ್ ಈಶ್ವರ್ ಹಾಗೂ ಪ್ರಥಮ್ ಮನೆಯೊಳಗೆ ಹೋಗಿ ವೀಕ್ಷಕರನ್ನು ರಂಜಿಸಿದ್ದರು. ಈ ವಾರ 'ಬೃಂದಾವನ' ಧಾರಾವಾಹಿ ತಂಡ ಬಿಗ್‌ಬಾಸ್ ಮನೆ ಪ್ರವೇಶಿಸಿದ್ದು ಹೈಲೆಟ್ ಆಗಿತ್ತು.

ವೀಕೆಂಡ್‌ನಲ್ಲಿ ಸ್ಪರ್ಧಿಗಳಿಗೆ ಎಲಿಮಿನೇಷನ್ ಟೆನ್ಷನ್ ಶುರುವಾಗಿದೆ. ತುಕಾಲಿ ಸಂತು, ಗೌರೀಶ್ ಅಕ್ಕಿ, ಭಾಗ್ಯಶ್ರೀ, ಸಂಗೀತಾ, ತನಿಷಾ, ಕಾರ್ತಿಕ್ ನಾಮಿನೇಟ್ ಆಗಿದ್ದಾರೆ. ಈ 6 ಜನರಲ್ಲಿ ವೀಕ್ಷಕರು ಯಾರನ್ನು ಮನೆಯಲ್ಲಿ ಉಳಿಸಿಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ವೀಕ್ಷಕರು ವೋಟ್ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಯನ್ನು ಮನೆಯೊಳಗೆ ಉಳಿಯುವಂತೆ ಮಾಡಬಹುದು.

ಸ್ಪರ್ಧಿಗಳನ್ನು ಎರಡು ತಂಡವಾಗಿ ವಿಭಾಗಿಸಿ ಈ ವಾರ ಟಾಸ್ಕ್‌ಗಳನ್ನು ಕೊಡಲಾಯಿತು. ಇನ್ನು ಮನೆಯಲ್ಲಿ ಲವ್ ಸ್ಟೋರಿಗಳು ಕೂಡ ಆರಂಭವಾಗಿರುವ ಬಗ್ಗೆ ವೀಕ್ಷಕರನ್ನು ಚರ್ಚೆ ನಡೀತಿದೆ. ಕಾರ್ತಿಕ್ ಹಾಗೂ ಸಂಗೀತಾ ಅವರದ್ದು ಸ್ನೇಹಾನಾ? ಪ್ರೀತಿನಾ? ಎಂದು ಟ್ರೋಲ್ ಮಾಡಲಾಗುತ್ತಿದೆ.

ಮೊದಲ ವಾರ ತಮಾಷೆ ಮಾಡೋಕೆ ಹೋಗಿ ಅಮಾಸೆ ಮಾಡಿಕೊಂಡಿದ್ದ ಸಂತು ಈ ವಾರ ಪರವಾಗಿಲ್ಲ ಎನಿಸಿಕೊಂಡಿದ್ದಾರೆ. ಮಿಮಿಕ್ರಿ ಮಾಡಿ ತಮ್ಮ ಪ್ರತಿಭೆ ಪ್ರದರ್ಶನ ಮಾಡಿದ್ದು ಆಯಿತು. ಸೋಮವಾರ ಬೆಳಗೆದ್ದ ಕೂಡಲೇ ಓಪನ್ ನಾಮಿನೇಷನ್ ಮೂಲಕವೇ ವಾರ ಆರಂಭವಾಗಿತ್ತು. ಆ ವೇಳೆಗೆ ಸ್ಪರ್ಧಿಗಳ ನಡುವೆ ಕಿರಿಕ್ ಶುರುವಾಗಿತ್ತು. ಅಲ್ಲಿಂದ ಮುಂದೆ ಅದು ಮತ್ತಷ್ಟು ಹೆಚ್ಚಾಗುತ್ತಾ ಹೋಗಿತ್ತು. ಭಾಗ್ಯ ಶ್ರೀ ಅಥವಾ ಗೌರೀಶ್ ಅಕ್ಕಿ ಈ ವಾರ ಮನೆಯಿಂದ ಹೊರ ಬರಬಹುದು ಎನ್ನುವುದು ಲೆಕ್ಕಾಚಾರ. ಜೀ ಸಿನಿಮಾದಲ್ಲಿ ಬಿಗ್‌ಬಾಸ್ ಕನ್ನಡ ಸೀಸನ್ 10 ಶೋ 24 ಗಂಟೆಗಳ ಕಾಲ ಉಚಿತವಾಗಿ ನೋಡಬಹುದು.

More from Filmibeat

English summary
BBK10: Who will be eliminated this week
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X