Bigg Boss Kannada 10: ಬಿಗ್ ಬಾಸ್ ಮನೆಗೆ ಬಂದ ಲಕ್ಷಣ ಧಾರಾವಾಹಿ ನಟಿ ಭಾಗ್ಯಶ್ರೀ
ಬಿಗ್ ಬಾಸ್ ಆರಂಭಕ್ಕೂ ಮುನ್ನ ಲಕ್ಷಣ ಧಾರಾವಾಹಿ ಮುಗಿದಿದೆ. ಧಾರಾವಾಹಿಯ ಪ್ರಮುಖ ನಟಿ ಸುಕೃತಾ ನಾಗ್ ಬಿಗ್ ಬಾಸ್‌ಗೆ ಬರುವ ಕಾರಣಕ್ಕೆ ಧಾರಾವಾಹಿ ಅಂತ್ಯವಾಗುತ್ತಿದೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗಿದ್ದು, ಅದೇ ಸೀರಿಯಲ್‌ನ ನಟಿ, ನಕ್ಷತ್ರಾ ಅವರ ತಾಯಿಯ ಪಾತ್ರ ಮಾಡುತ್ತಿದ್ದ ನಟಿ ಭಾಗ್ಯಶ್ರೀ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡಿರುವ ಅನುಭವವಿರುವ ನಟಿ ಭಾಗ್ಯಶ್ರೀ, ಪ್ರತಿ ಮನೆಗಳಲ್ಲಿಯೂ ಪರಿಚಿತರು. ವೀಕ್ಷಕರು ಕೂಡ ತಮ್ಮ ಆಯ್ಕೆಯಲ್ಲಿ ಉತ್ತಮ ಪರ್ಸಂಟೆಜ್ ನೀಡುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ. ಹೀಗಾಗಿ ಅವರು ಫುಲ್ ಖುಷಿಯಲ್ಲಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ.

ಉದಯ ಟಿವಿಯಲ್ಲಿ ಬರುತ್ತಿದ್ದ 'ಬದುಕು' ಸೇರಿದಂತೆ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ನಟಿ ಭಾಗ್ಯಶ್ರೀಗೆ ವೀಕ್ಷಕ ಮಹಾಪ್ರಭು ಶೇಕಡಾ 81 ರಷ್ಟು ಮತವಗಳನ್ನು ನೀಡಿದ್ದಾರೆ. ಇತ್ತೀಚೆಗೆ ಅವರು ಲಕ್ಷಣ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಅದು ಮುಗಿದ ತಕ್ಷಣ ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ.
ಬಿಗ್ ಬಾಸ್ ಮನೆಗೆ ಪ್ರವೇಶಿಸಲು ಕಾರಣ ಕೇಳಿದ ಕಿಚ್ಚ ಸುದೀಪ್‌ಗೆ, " ನಾನು ಜೀವನ್ಲಲಿ ತುಂಬಾ ಚಾಲೆಂಜ್‌ಗಳನ್ನು ಸ್ವೀಕರಿಸಿದ್ದೇನೆ. ಇದು ಕೂಡ ದೊಡ್ಡ ಚಾಲೆಂಜಿಂಗ್ ಆಗಿರುತ್ತದೆ. ಇದನ್ನು ನಾನು ಸ್ವೀಕರಿಸಬೇಕು. ಹಾಗಾಗಿ ಬಿಗ್ ಬಾಸ್ ಆಯೋಜಕರಿಂದ ಕರೆ ಬಂದಾಗ ನೋ ಎನ್ನಲಿಲ್ಲ. ವೀಕ್ಷಕರಿಗೆ ನಾನು ಇಷ್ಟ ಆಗುತ್ತೇನೆ ಎಂಬ ಭರವಸೆ ನನಗಿದೆ. ನಾನು ಯಾವಾಗಲೂ ಖುಷಿಯಾಗಿ ಇರುತ್ತೇನೆ. ಅದನ್ನೇ ನಾನು ಎಲ್ಲರಿಗೂ ಕಲಿಸುತ್ತೇನೆ" ಎಂದಿದ್ದಾರೆ.
ಇನ್ನು, ಮನೆಯ ಒಳಗೆ ಹೋದ ಅವರಿಗೆ ಬದುಕು ಧಾರಾವಾಹಿ ಸೇರಿ ಹಲವು ಸೀರಿಯಲ್‌ಗಳಲ್ಲಿ ಸಹೋದ್ಯೋಗಿ ಆಗಿದ್ದ ನಟಿ ಸಿರಿ ಸಿಕ್ಕಿದ್ದು ಸಕತ್ ಖುಷಿಯಲ್ಲಿದ್ದಾರೆ. ಇಬ್ಬರು ಒಬ್ಬರನ್ನೋಬ್ಬರು ಅಪ್ಪಿಕೊಂಡು ಖುಷಿ ಹಂಚಿಕೊಂಡಿದ್ದಾರೆ.


Click it and Unblock the Notifications











