Bigg boss 10: ಭಾಗ್ಯಶ್ರೀಯನ್ನು ಸೋಲಿಸಿ, ಕ್ಯಾಪ್ಟನ್ ಆದ ಮೈಕಲ್, ಕೆಟ್ಟ ಆಟವಾಡಿ ಕಣ್ಣಿರು ಹಾಕಿದ ಸಂಗೀತಾ!

ಈ ವಾರ ಬಿಗ್ ಬಾಸ್ ಮನೆಯಲ್ಲಿ ನಡೆದ ಗಂಧದ ಗುಡಿ ಹಾಗೂ ವಜ್ರಕಾಯ ತಂಡಗಳ ಕಾದಾಟದಲ್ಲಿ ಕೊನೆಗೆ ಮೈಕೆಲ್ ಅಜಯ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ. ಮನೆಯ ಕ್ಯಾಪ್ಟನ್ ಪಟ್ಟಕ್ಕಾಗಿ ಭಾಗ್ಯಶ್ರೀ ಮತ್ತು ಮೈಕಲ್ ಸ್ಪರ್ಧೆಯಲ್ಲಿದ್ದರು, ಇಬ್ಬರಲ್ಲಿ ಮೈಕೆಲ್ ಜಯ ಸಾಧಿಸಿದ್ದಾರೆ. ಇಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವುದು ಏನೆಂದರೇ ಕಳಪೆ ಆಟವಾಡಿದ ಸಂಗೀತಾ ಕಣ್ಣೀರು.

ಎಸ್... ಈ ವಾರವೆಲ್ಲ ಡ್ರೋನ್ ಪ್ರತಾಪ್ ನೇತೃತ್ವದ 'ಗಂಧದ ಗುಡಿ' ಹಾಗೂ ವಜ್ರಕಾಯ ತಂಡಗಳು ಸೆಣೆಸಾಡಿದ್ದವು. ಆದರೆ, ಡ್ರೋನ್ ಪ್ರತಾಪ್ ತಂಡ ಉತ್ತಮ ಪ್ರದರ್ಶನ ನೀಡಿದ್ದ ಕಾರಣ ತಂಡದವರೇ ಕ್ಯಾಪ್ಟೆನ್ಸಿ ಟಾಸ್ಕ್​ಗೆ ಸ್ಪರ್ಧೆಗೆ ಇಳಿಯಬೇಕಾಯಿತು, ಹೀಗಾಗಿ ಭಾಗ್ಯಶ್ರೀ ಮತ್ತು ಮೈಕಲ್ ಅಂತಿಮವಾಗಿ ಸ್ಪರ್ಧೆಯಲ್ಲಿ ಉಳಿದರು. ಸಾಮಾನ್ಯವಾಗಿ ಸಕತ್ ಸ್ಟ್ರಾಂಗ್ ಆಗಿರುವ ಮೈಕಲ್ ಗೆಲ್ಲುತ್ತಾರೆ ಎಂದು ಜನ ಗೆಸ್ ಮಾಡಿದ್ದರು. ಆದರೆ, ಬಿಗ್ ಬಾಸಗ ಇಲ್ಲಿ ಒಂದು ಟ್ವಿಸ್ಟ್ ಇಟ್ಟಿದ್ದರು.

Bigg boss kannada 10 updates: Michael Ajay becomes new captain

ಭಾಗ್ಯಶ್ರೀ, ಮೈಕಲ್ ಪರ ಟಾಸ್ಕ್‌ಗೆ ನಿಂತ ಸದಸ್ಯರು!

ಕ್ಯಾಪ್ಟನ್ ಆಯ್ಕೆಗಾಗಿ ಗಂಧದ ಗುಡಿ ತಂಡದ ಮೈಕಲ್ ಹಾಗೂ ಭಾಗ್ಯಶ್ರೀ ಮಧ್ಯೆ ನೇರ ಸ್ಪರ್ಧೆ ನಡೆಯಲಿಲ್ಲ. ಬದಲಾಗಿ ಮೈಕಲ್ ಪರವಾಗಿ ಮೂವರು, ಭಾಗ್ಯಶ್ರೀ ಪರವಾಗಿ ಮೂವರು ಸ್ಪರ್ಧೆಗೆ ಇಳಿಯಬೇಕು ಎಂದು ಬಿಗ್ ಬಾಸ್ ಆದೇಶಿಸಿತ್ತು. ಇದೇ ಕಾರಣಕ್ಕೆ ಮೈಕಲ್ ಪರವಾಗಿ ಸ್ನೇಹಿತ್ ಗೌಡ, ಕಾರ್ತಿಕ್ ಮಹೇಶ್, ತನಿಷಾ ಕುಪ್ಪಂಡ ಕಣಕ್ಕಿಳಿದರೇ, ಭಾಗ್ಯಶ್ರೀ ಪರ ಸಂಗೀತಾ ಶೃಂಗೇರಿ, ನಮ್ರತಾ ಗೌಡ, ವಿನಯ್ ಗೌಡ ಆಟ ಆಡಲು ಬಂದರು.

ಇನ್ನು, ಇವರೆನೂ ಸುಮ್ಮನೆ ಕ್ಯಾಪ್ಟನ್‌ಗಾಗಿ ಟ ಆಡಲು ಒಪ್ಪಿರಲಿಲ್ಲ. ವಿನಯ್ ಗೌಡ, ನಮ್ರತಾ ಗೌಡ ತಾವು ನಿಮಗಾಗಿ ಆಟವಾಡಿದರೇ ನಮಗೆ ಸಿಗುವುದು ಏನು ಎಂದು ಪ್ರಶ್ನಿಸಿದ್ದರು. ಬಳಿಕ ಡೈರೆಕ್ಟ್ ನಾಮಿನೇಷನ್ ಮಾಡುವುದಿಲ್ಲ ಎಂದು ಮಾತು ತೆಗೆದುಕೊಂಡ ಬಳಿಕವೇ ಕಣಕ್ಕೆ ಇಳಿಯಲು ಒಪ್ಪಿದ್ದರು. ಆದರೂ ಸಂಗೀತಾ ಕಾರಣದಿಂದ ಭಾಗ್ಯಶ್ರೀ ಕ್ಯಾಪ್ಟನ್ ಆಗುವ ಕನಸು ನನಸಾಗಲಿಲ್ಲ.

Bigg boss kannada 10 updates: Michael Ajay becomes new captain

ಕಳಪೆ ಆಟವಾಡಿ ತನಗೇ ಶೇಮ್ ಶೇಮ್ ಎಂದುಕೊಂಡ ಸಂಗೀತಾ ಶಂಗೇರಿ!

ಹೆಲ್ಮಟ್​ಗೆ ದಾರವೊಂದನ್ನು ಕಟ್ಟಿ ಅದರ ತುದಿಗೆ ಬಾಲ್ ಕಟ್ಟಲಾಗಿತ್ತು. ತಲೆಯನ್ನು ಆಡಿಸುವ ಮೂಲಕ ಬಾಲ್‌ನಿಂದ ಕಂಬಿಗಳ ಮೇಲೆ ಸಾಲಾಗಿ ನಿಲ್ಲಿಸಿದ್ದ ಸಣ್ಣ ಕಟ್ಟಿಗೆಯ ತುಂಡುಗಳನ್ನು ಬೀಳಿಸಬೇಕಿತ್ತು. ಇದೇ ಟಾಸ್ಕ್. ಭಾಗ್ಯಶ್ರೀ ಪರ ಆಡಲು ಸಂಗೀತಾ ಶೃಂಗೇರಿ, ವಿನಯ್ ಗೌಡ, ನಮ್ರತಾ ಗೌಡ ರೆಡಿ ಇದ್ದರು. ಆದರೆ, ಮೊದಲ ಸುತ್ತಿನಲ್ಲಿ ಆಟವಾಡಲು ಹೋದ ಸಂಗೀತಾ ಮೊದಲ ಹಂತವನ್ನೇ ಮುಗಿಸಲಿಲ್ಲ.

ಹೌದು, ಮೊದಲ ಸುತ್ತಿನಲ್ಲಿ ಸಂಗೀತಾ, ಸ್ನೇಹಿತ್ ಇಬ್ಬರು ಕಣಕ್ಕಿಳಿದಿದ್ದರು, ಸ್ನೇಹಿತ್ ಸುಲಭವಾಗಿ ಮೊದಲ ಹಂತವನ್ನು ಮುಗಿಸಿದ್ದರು, ತನಿಷಾ ಕುಡ ಎರಡನೇ ಹಂತವನ್ನು ಇಸಿಯಾಗಿಯೇ ಆಡಿದ್ದರು. ಆದರೆ, ಸಂಗೀತಾ ಮಾತ್ರ ಮೊದಲ ಹಂತ ಮುಗಿಸಲೇ ಇಲ್ಲ. ಪದೇ ಪದೇ ಬ್ಯಾಲೆನ್ಸ್ ಕಳೆದುಕೊಂಡು ಬೀಳುತ್ತಿದ್ದರು. ಹೀಗಾಗಿ ವಿನಯ್ ನಂತಹ ಸ್ಟ್ರಾಂಗ್ ಪ್ಲೇಯರ್ ತನ್ನ ಪರವಾಗಿದ್ದರೂ ಭ್ಯಾಗ್ಯಶ್ರೀ ಕ್ಯಾಪ್ಟನ್ ಆಗಲೇ ಇಲ್ಲ.

ಟಾಸ್ಕ್ ಮುಗಿಸದ ಸಂಗೀತಾ ಗೊಳೋ ಎಂದು ಆಳಲು ಶುರು ಮಾಡಿದರು. ತಂಡದ ಸದಸ್ಯರು ಸಮಾಧಾನ ಮಾಡಲು ಹರಸಾಹಸ ಪಟ್ಟರು. ಇದಲ್ಲದೇ ತನಗೆ ತಾನೇ ಶೇಮ್ ಶೇಮ್ ಎಂದು ಹೇಳಿಕೊಂಡಿದ್ದಾರೆ. ಭಾಗ್ಯಶ್ರೀ, ವಿನಯ್ ಗೌಡ ಬಳಿ ಕ್ಷಮೆ ಕೇಳಿದ್ದಾರೆ.

More from Filmibeat

English summary
Bigg boss kannada 10: Michael Ajay new captain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X