Bigg boss: ನಮೃತಾ ಪೋಷಕರ ಬಳಿಕ ಶಾಲಾ ಮಕ್ಕಳಿಗೆ ವಿನಯ್ ಫ್ಯಾನ್ಸ್ ಸಹಾಯ; ಇದೂ ಗಿಮ್ಮಿಕ್ಕಾ?
ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಫಿನಾಲೆಯ ವೇದಿಕೆಯಲ್ಲಿ ಒಬ್ಬರು ಟ್ರೋಫಿ ತಗೊಂಡು, ಐವತ್ತು ಲಕ್ಷ ಹಣ ಪಡೆದು, ನೂರು ದಿನಗಳ ಆಟಕ್ಕೆ ನಿಟ್ಟುಸಿರು ಬಿಡುತ್ತಾರೆ. ಆದರೆ, ಈ ನೂರು ದಿನಗಳ ಆಟದಲ್ಲಿ ಲೆಕ್ಕ ಹಾಕಿದರು ಈ ಸೀಸನ್‌ನಲ್ಲಿ ವಿನ್ ಆಗಬಹುದಾದ ಸದಸ್ಯನನ್ನು ಅಂದಾಜು ಮಾಡುವುದು ಸಹ ಕಷ್ಟಕರವಾಗಿದೆ.
ಈ ಬಾರಿಯ ಫಿನಾಲೆಯಲ್ಲಿ ನಿಲ್ಲಬಹುದಾದಂತಹ ಮೂವರನ್ನು ಅಂದಾಜಿಸುವುದು ಸುಲಭ. ಪ್ರತಾಪ್, ಸಂಗೀತಾ, ವಿನಯ್ ಫಿನಾಲೆಗೆ ಹೋಗುತ್ತಾರೆ ಎಂಬುದು ದೃಢವಾದ ನಂಬಿಕೆ. ನೋಡುಗರ ಅಭಿಪ್ರಾಯವೂ ಅದೇ ಆಗಿದೆ. ಆದರೆ, ಈ ಮೂವರಲ್ಲಿ ಸುದೀಪ್ ಅಕ್ಕ ಪಕ್ಕ ನಿಲ್ಲುವವರು ಯಾರೆಂದು ಊಹೆ ಮಾಡುವುದಕ್ಕೂ ಆಗುತ್ತಿಲ್ಲ. ಇದರ ನಡುವೆ ನಮ್ಮವರೇ ಗೆಲ್ಲಲಿ ಎಂದು ಎಲ್ಲಾ ಸ್ಪರ್ಧಿಗಳ ಅಭಿಮಾನಿಗಳು, ಮನೆಯವರು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಜೊತೆಗೆ ಸಮಾಜ ಸೇವೆಗೂ ಮುಂದಾಗಿದ್ದಾರೆ.

ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ
ಇತ್ತಿಚೆಗಷ್ಟೇ ನಮ್ರತಾ ಗೌಡ ಅವರ ಕುಟುಂಬಸ್ಥರು ಅನಾಥಶ್ರಮಕ್ಕೆ ಭೇಟಿ ನೀಡಿ, ಅಲ್ಲಿರುವವರಿಗೆ ಒಂದು ಹೊತ್ತಿನ ಊಟದ ಸಹಾಯ ಮಾಡಿದ್ದರು. ಇದೀಗ ವಿನಯ್ ಅಭಿಮಾನಿಗಳು ಸಮಾಜ ಸೇವೆಗೆ ನಿಂತಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದ್ದಾರೆ.
ವಿನಯ್‌ಗೆ ಡಿ ಬಾಸ್ ಫ್ಯಾನ್ಸ್ ಬೆಂಬಲ
ಒಂದು ಶಾಲೆಗೆ ಭೇಟಿ ನೀಡಿದ ವಿನಯ್ ಅಭಿಮಾನಿಗಳು ಮಕ್ಕಳನ್ನೆಲ್ಲಾ ಒಂದುಗೂಡಿಸಿ, ಪುಸ್ತಕಗಳನ್ನು ಹಂಚಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಗಳು, ಮನೆಯವರು ಹಂಚಿಕೊಂಡಿದ್ದಾರೆ. ಇದಕ್ಕೆ ದರ್ಶನ್ ಅಭಿಮಾನಿಗಳು ಕೂಡ ಬೆಂಬಲ ನೀಡಿದ್ದಾರೆ. ಡಿ ಬಾಸ್.. ಡಿ ಬಾಸ್ ಅಂತ ಕಮೆಂಟ್ ಹಾಕುತ್ತಿದ್ದಾರೆ. ಈ ಮೂಲಕ ಬಿಗ್ ಬಾಸ್ ನಲ್ಲಿರುವ ವಿನಯ್ ಅವರಿಗೆ ದರ್ಶನ್ ಅಭಿಮಾನಿಗಳ ಸಪೋರ್ಟ್ ಸಿಕ್ಕಿರೋದು ಕನ್ಫರ್ಮ್ ಆಗಿದೆ.
ನೆಗೆಟಿವ್-ಪಾಸಿಟಿವ್ ಕಮೆಂಟ್‌ಗಳ ಅಬ್ಬರ
ಬಿಗ್ ಬಾಸ್ ಮನೆಯಲ್ಲಿ ಈಗ ಫಿನಾಲೆಗೆ ಅಂತ ಉಳಿದಿರುವುದು ಸಂಗೀತಾ, ಪ್ರತಾಪ್, ಕಾರ್ತಿಕ್, ವಿನಯ್, ತುಕಾಲಿ, ವರ್ತೂರು, ನಮ್ರತಾ. ಇವರಲ್ಲಿ ಐದು ಜನ ಮಾತ್ರ ಫಿನಾಲೆ ತಲುಪಲಿದ್ದಾರೆ. ಅವರವರ ಅಭಿಮಾನಿಗಳು ಅವರವರ ಪರವಾಗಿಯೇ ವೋಟ್ ಹಾಕುತ್ತಾರೆ. ಪ್ರಚಾರ ಮಾಡುತ್ತಾರೆ. ಅದರಂತೆ ಈಗ ವಿನಯ್ ಅವರ ವಿಡಿಯೋಗೂ ನೆಗೆಟಿವ್ ಕಮೆಂಟ್ ಹಾಗೂ ಪಾಸಿಟಿವ್ ಕಮೆಂಟ್‌ಗಳು ಬರುತ್ತಿವೆ. ವೋಟಿಗಾಗಿ ಈ ರೀತಿಯೆಲ್ಲಾ ಮಾಡುತ್ತಿದ್ದೀರಾ ಎಂದೆಲ್ಲಾ ಹೇಳುತ್ತಿದ್ದಾರೆ.
ವಿನಯ್ ಗೆಲುವಿಗಾಗಿ ಅಭಿಮಾನಿಗಳ ಹಾರೈಕೆ
ಈಗಾಗಲೇ ವಿನಯ್ ಗೆಲುವಿಗಾಗಿ ಪ್ರಚಾರ ಶುರುವಾಗಿದೆ. ವಿನಯ್ ಯಾಕೆ ಗೆಲ್ಲಬೇಕು ಎಂಬುದನ್ನು ಫ್ಯಾಮಿಲಿ ಹಾಗೂ ಫ್ರೆಂಡ್ಸ್ ತಿಳಿಸುತ್ತಿದ್ದಾರೆ. ವಿನಯ್ ಯಾವ ರೀತಿ ಮನೆಯಲ್ಲಿ ಇದ್ದಾರೆ, ಬಿಗ್ ಬಾಸ್ ಹೊರತುಪಡಿಸಿದರೆ ಯಾವ ರೀತಿ ಇರಲಿದ್ದಾರೆ ಎಂಬೆಲ್ಲಾ ಮಾಹಿತಿಯನ್ನು ತಿಳಿಸುವುದರ ಜೊತೆಗೆ, ಈ ಬಾರಿಯ ಬಿಗ್ ಬಾಸ್ ಗೆಲ್ಲುವುದಕ್ಕೆ ಎಷ್ಟು ಅರ್ಹರು ಎಂಬುದನ್ನು ತಿಳಿಸಿದ್ದಾರೆ. ಈ ಮೂಲಕ ವಿನಯ್ ಗೆಲ್ಲಬೇಕು ಎಂದೇ ಶುಭ ಹಾರೈಸುತ್ತಿದ್ದಾರೆ. ಅಭಿಮಾನಿಗಳ ಆಸೆಯೂ ವಿನಯ್ ಗೆಲುವೇ ಆಗಿದೆ. ಆದರೆ ಈ ಬಾರಿ ಯಾರು ಗೆಲ್ಲುತ್ತಾರೆ ಎಂಬುದೇ ಭಯಾನಕ ಕುತೂಹಲವಾಗಿ ಉಳಿದಿದೆ.


Click it and Unblock the Notifications











