ಸೀಸನ್ 10 ಮುಗಿಸಿ ಬರುತ್ತಿದ್ದಂತೆ ವಿನಯ್ ಸೆಲೆಬ್ರೆಷನ್: ಆನೆ ಜೊತೆಗೆ ನಿರಂಜನ್ ಸಂಭ್ರಮ
ಬಿಗ್ ಬಾಸ್ ಸೀಸನ್ 10ರಲ್ಲಿ ಆನೆಯಂತೆ ಸದ್ದು ಮಾಡಿದ್ದು ವಿನಯ್ ಗೌಡ. ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಂತ ಅವಿನಾಶ್, ನಾನೇ ಮಾವುತ ಎಂದಿದ್ದರು. ಆದರೆ, ಎರಡೇ ದಿನಕ್ಕೆ ಮಾವುತನ ಶಕ್ತಿ ಜೀರೋ ಆಗಿತ್ತು. ವಿನಯ್ ಎದುರು ಸ್ಪರ್ಧೆ ಮಾಡುವಲ್ಲಿ ಸೋತಿದ್ದರು. ಕಡೆಗೂ ಈ ಎಲ್ಲಾ ಸ್ಪರ್ಧೆಯನ್ನು ಮುಗಿಸಿ, ಮೂರನೇ ರನ್ನರ್ ಅಪ್ ಆಗಿ ಹೊರಬಂದಿರೋ ವಿನಯ್ ಸೆಲೆಬ್ರೆಷನ್ ಮೂಡಲ್ಲಿದ್ದಾರೆ.
ಬಿಗ್ ಬಾಸ್‌ನಿಂದ ಬಂದವರಿಗೆ ಸ್ನೇಹಿತರು, ಕುಟುಂಬಸ್ಥರು ಸೇರಿ ಸ್ವಾಗತ ಕೋರುತ್ತಿದ್ದಾರೆ. ಕೇಕ್ ಕಟ್ ಮಾಡಿ ಸೆಲೆಬ್ರೆಟ್ ಮಾಡುತ್ತಿದ್ದಾರೆ. ವಿನಯ್ ಗೌಡ ಮನೆಯಲ್ಲಂತೂ ಸೋತ ಬೇಸರದ ನಡುವೆ, ವಿನಯ್ ಆಡಿದ ರೀತಿಯನ್ನು ನೆನೆದು ಸಂಭ್ರಮ ಪಡುತ್ತಿದ್ದಾರೆ.

ಫ್ಯಾಮಿಲಿ ಜೊತೆಗೆ ಸೆಲೆಬ್ರೆಷನ್
ಬಿಗ್ ಬಾಸ್‌ನಿಂದ ಹೊರಗೆ ಬಂದ ಮೇಲೆ ವಿನಯ್ ಗೌಡ ಕುಟುಂಬಸ್ಥರಿಗೆ ಸಮಯ ಮೀಸಲಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೂರಕ್ಕೂ ಹೆಚ್ಚು ದಿನಗಳ ಕಾಲ ಇದ್ದ ಕಾರಣಕ್ಕೆ ಕುಟುಂಬಸ್ಥರ ಸಂಪರ್ಕವೇ ಇರಲಿಲ್ಲ. ಆದರೆ, ಯಾವಾಗಲೂ ಮಗ ಹಾಗೂ ಹೆಂಡತಿಯನ್ನು ನೆನೆದು ಥ್ಯಾಂಕ್ಸ್ ಹೇಳುತ್ತಿದ್ದರು. ಈಗ ಸಿಕ್ಕ ಸಮಯವನ್ನೆಲ್ಲಾ ಫ್ಯಾಮಿಲಿ ಜೊತೆಗೆ ಕಳೆಯುತ್ತಿದ್ದಾರೆ.
ಸೀಸನ್ 10ರ ಆನೆಯಾಗಿ ದಾಖಲೆ
ಫ್ಯಾಮಿಲಿ ಮತ್ತು ಫ್ರೆಂಡ್ಸ್ ವಿನಯ್ ಮನೆಯಲ್ಲಿ ಸೇರಿದ್ದಾರೆ. ಕೇಕ್ ಕಟ್ ಮಾಡಿಸಿ ಎಂಜಾಯ್ ಮಾಡಿದ್ದಾರೆ. ಈ ವೇಳೆ ಆನೆ, ಆನೆ ಅಂತ ಪ್ರೋತ್ಸಾಹ ನೀಡಿದ್ದಾರೆ. ಜೊತೆಗೆ ನಿರಂಜನ್ ಕಮೆಂಟ್ ಹಾಕಿದ್ದು, ಬಿಗ್ ಬಾಸ್ ಸೀಸನ್ 10 ಅಂತ ಬಂದಾಗ ವಿನಯ್ ನೆನಪಾಗುತ್ತಾರೆ. ವಿನಯ್ ಹೆಸರೇ ಚಾಲ್ತಿಯಲ್ಲಿ ಇರುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಈ ಬಾರಿಯ ಸೀಸನ್‌ನಲ್ಲಿ ವಿನಯ್ ಅದೇ ಥರನೇ ನಡೆದುಕೊಂಡಿದ್ದಾರೆ. ಒಂದು ಟೀಂ ಕಟ್ಟುವುದಿರಲಿ, ತಮ್ಮವರನ್ನು ಸಪೋರ್ಟ್ ಮಾಡಿಕೊಳ್ಳುವುದಿರಲಿ. ಅದರ ಜೊತೆಗೆ ಜೋರು ಧ್ವನಿ, ಖಡಕ್ ನಡವಳಿಕೆಯೇ ಅವರನ್ನು ಆನೆಯಂತೆ ಬಿಂಬಿತವಾಗುವಂತೆ ಮಾಡಿತ್ತು.
ಕಮೆಂಟ್ ಬಾಕ್ಸ್‌ನಲ್ಲಿ ಫ್ಯಾನ್ಸ್ ಅಬ್ಬರ
ವಿನಯ್ ಆಟದ ವೈಖರಿ ಕಂಡು ಈ ಬಾರಿಯ ಬಿಗ್ ಬಾಸ್ ಗೆಲ್ಲುತ್ತಾರೆ ಎಂದುಕೊಂಡವರೇ ಹೆಚ್ಚು. ಆದರೆ, ಅದೆಲ್ಲವೂ ಉಲ್ಟಾ ಆಗಿದೆ. ಈ ಬೆಳವಣಿಗೆ ಅದೆಷ್ಟೋ ಮನಸ್ಸುಗಳಿಗೆ ನೋವುಂಟು ಮಾಡಿದೆ. ಇದೀಗ ವಿನಯ್ ಗೌಡ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಫೋಟೋ, ವಿಡಿಯೋ ಹಾಕಿದರೂ, ಅಲ್ಲಿ ಬಂದು ಕಮೆಂಟ್ ಮೂಲಕ ಸಪೋರ್ಟ್ ಮಾಡುತ್ತಿದ್ದಾರೆ. "ಇದೇ ಟೈಮ್‌ಗೆ ನಿಮ್ಮನ್ನು ನೋಡುತ್ತಿದ್ದೆವು. ಆದರೆ, ಈಗ ಮಿಸ್ ಮಾಡಿಕೊಳ್ಳುತ್ತಾ ಇದ್ದೀವಿ. ನೀವೂ ನಿಜವಾದ ಆನೆ. ನಿಮ್ಮ ನಿಯತ್ತಿನ ಸಂಬಂಧಗಳು ಇಷ್ಟವಾಗುತ್ತವೆ" ಅಂತೆಲ್ಲಾ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ.
ವಿನಯ್ ಗೆಲುವಿಗಾಗಿ ಶ್ರಮಪಟ್ಟಿದ್ದ ಫ್ಯಾನ್ಸ್
ಹೊರಗೆ ಬಂದಿದ್ದು ಸ್ವತಃ ವಿನಯ್‌ಗೆ ನಂಬುವುದಕ್ಕೆ ಆಗುತ್ತಿಲ್ಲ. ಇನ್ನು ಹೊತ್ತು ಮೆರೆಸಿದ ಅಭಿಮಾನಿಗಳು ಹೇಗೆ ತಾನೇ ಅರಗಿಸಿಕೊಳ್ಳುವುದಕ್ಕೆ ಸಾಧ್ಯ ಹೇಳಿ. ಗೆಲ್ಲಬೇಕು ಎಂದು ಸಾಕಷ್ಟು ಪ್ರಚಾರ ಮಾಡಿದರು. ಆದರೆ, ನಿರೀಕ್ಷೆಗಿಂತ ಮೊದಲೇ ಬಂದಿದ್ದು ಬೇಸರವನ್ನೇನೋ ತರಿಸಿದೆ. ಇದರ ಜೊತೆಗೆ ವಿನಯ್‌ಗೆ ಇನ್ನಷ್ಟು ಹುಮ್ಮಸ್ಸು ತುಂಬುವ ಕೆಲಸ ಮಾಡುತ್ತಿದ್ದಾರೆ. ನಾವೂ ನಿಮ್ಮ ಜೊತೆಗೆ ಇದ್ದೇವೆ ಎಂದು ಹೇಳುತ್ತಿದ್ದಾರೆ.


Click it and Unblock the Notifications











