ಬಿಗ್ ಬಾಸ್ ಮನೆಯಲ್ಲಿ ಮೊದಲಿನಿಂದ ಕಿತ್ತಾಡುತ್ತಿರುವ ಸಂಗೀತಾ ಮತ್ತು ವಿನಯ್ ಗೌಡ ಮತ್ತೆ ಸ್ನೇಹಿತರು...?

ಬಿಗ್ ಬಾಸ್ ಇನ್ನೇನು ಸೆಮಿ ಫೈನಲ್ ಹಂತಕ್ಕೆ ಬಂದ ಹಾಗಿದೆ. ಈಗಾಗಲೇ ಮನೆಯಲ್ಲಿ 77 ದಿನಗಳು ಕಳೆದಿವೆ. ಹಲವು ಮೊದಲುಗಳಿಗೆ ಬಿಗ್ ಬಾಸ್ ಮನೆ ಸಾಕ್ಷಿಯಾಗಿದೆ. ವರ್ತೂರ್ ಸಂತೋಷ್ ಹುಲಿ ಉಗುರಿನ ಪೆಂಡೆಂಟ್, ತನಿಷಾ ಕುಪ್ಪಂಡ ಪ್ರಕರಣಗಳು, ವಿನಯ್ - ಸಂಗೀತಾ ಜನಗಳ ಹೆಚ್ಚು ಹೈಲೆಟ್ ಆಗಿವೆ.

ಇದರ ಬೆನ್ನಲ್ಲೇ ಇಬ್ಬರು ವೈಲ್ಡ್‌ ಕಾರ್ಡ್ ಮೂಲಕ ಮನೆಗೆ ಬಂದಿದ್ದರು. ಈ ವಾರ ನಟ ಕಿಚ್ಚ ಸುದೀಪ್ ಕಿಚ್ಚನ ಪಂಚಾಯಿತಿ ನಡೆಯದ ಕಾರಣ ಮನೆಗೆ ವಿಶೇಷ ಅತಿಥಿಗಳು ಬಂದಿದ್ದಾರೆ. ಅದರಲ್ಲಿ ಶನಿವಾರ ನಟಿ ಶ್ರುತಿ ಬಂದಿದ್ದರು. ಭಾನುವಾರ ಬಿಗ್ ಬಾಸ್ ಮನೆಗೆ ಶೈನ್ ಶೆಟ್ಟಿ ಹಾಗೂ ಶುಭಪುಂಜಾ ಬಂದು ಸ್ವರ್ಧಿಗಳಿಗೆ ಹಲವು ಆಟವಾಡಿಸಿದ್ದಾರೆ.

Bigg Boss Kannada 10 Weekend episode: Vinay Gowda And Sangeeta become friends again

ಮನದ ಭಾವನೆ ಹೊರಹಾಕಿದ ಸಂಗೀತಾ- ವಿನಯ್!

ಬಿಗ್ ಬಾಸ್ ಮನೆಗೆ ಬಂದಿರುವ ಶೈನ್ ಶೆಟ್ಟಿ ಹಾಗೂ ನಟಿ ಶುಭ ಪುಂಜಾ ಮನೆಯ ಸದಸ್ಯರಿಗೆ ಹಲವು ಟಾಸ್ಕ್‌ಗಳನ್ನು ಆಡಿಸಿದ್ದಾರೆ. ಅದರಲ್ಲಿ ಸದಾ ಜಗಳದಲ್ಲೇ ಇರುವ ವಿನಯ್ ಗೌಡ ಮತ್ತು ಸಂಗೀತಾ ಶೃಂಗೇರಿ ಅವರಿಗೆ ಒಂದು ವಿಶೇಷ ಟಾಸ್ಕ್ ನೀಡಿದ್ದಾರೆ. ಅದರಲ್ಲಿ ಸಂಗೀತಾರನ್ನು ವಿನಯ್, ವಿನಯ್ ಅವರನ್ನು ಸಂಗೀತಾ ಹೊಗಳುವಂತೆ ಹೇಳಿದ್ದಾರೆ.

ಟಾಸ್ಕ್‌ಗಾಗಿ ವಿನಯ್ ಮತ್ತು ಸಂಗೀತಾ ಮೈಕ್ ಮುಂದೆ ನಿಂತು ಒಬ್ಬರ ಬಗ್ಗೆ ಮತ್ತೊಬ್ಬರು ಹೊಗಳಲು ಶುರು ಮಾಡುತ್ತಾರೆ. ಆಗ ವಿನಯ್ ಸಂಗೀತಾಗೆ ಇರುವ ತಾಳ್ಮೆ ಈ ಮನೆಯಲ್ಲಿ ಇರುವ ಮತ್ತೊಬ್ಬರಿಗೆ ಇಲ್ಲ ಎನ್ನುತ್ತಾರೆ. ಆಗ ಮೈಕ್​ನಿಂದ ನೀರನ್ನು ಚಿಮುಕಿಸಲಾಗುತ್ತದೆ. ಇದು ಮನೆಯವರಿಗೆಲ್ಲಾ ಸಕತ್ ಮಜಾ ನೀಡಿದೆ.

ಇದಾದ ನಂತರ ಸಂಗೀತಾ, ವಿನಯ್ ಅವರನ್ನು ಹೊಗಳುವ ಸರದಿ. ಆಗ ವಿನಯ್ ​ನಟನೆಯನ್ನು ಯಾರೂ ಬೀಟ್​ ಮಾಡೋಕೇ ಆಗೋದಿಲ್ಲ ಎನ್ನುತ್ತಾರೆ. ಇದಕ್ಕೆ ವಿನಯ್ ಸಂಗೀತಾ ಒಬ್ಬರೇ ನನ್ನ ಆ್ಯಕ್ಟಿಂಗ್ ಬೀಟ್​ ಮಾಡಿರೋದು ಎನ್ನುತ್ತಾರೆ ಇದಕ್ಕೆ ಮನೆಯ ಇತರೆ ಸದಸ್ಯರು ಜೋರಾಗಿ ನಗುತ್ತಾರೆ. ಅದರಲ್ಲೂ ಕಾರ್ತಿಕ್ ಮಹೇಶ್ ಬಿದ್ದು ಬಿದ್ದು ನಗುತ್ತಾರೆ.

Bigg Boss Kannada 10 Weekend episode: Vinay Gowda And Sangeeta become friends again

ಸಂಗೀತಾ- ವಿನಯ್ ಲವ್‌ನಲ್ಲಿ ಬೀಳ್ತಾರೆ ಎಂದ ಶೈನ್ ಶೆಟ್ಟಿ!

ಇದಾದ ಮೇಲೆ ಗೇಮ್ ಸ್ವಲ್ಪ ಎಮೋಷನಲ್ ಆಗುತ್ತದೆ. ಸಂಗೀತಾ ಬಗ್ಗೆ ಉತ್ತಮ ಮಾತನಾಡಿದ ವಿನಯ್, ಸಂಗೀತಾ ಇಸ್​ ನಾಟ್​ ಅ ನೆಗಟಿವ್ ಪರ್ಸ್​​ನ್​ ಎನ್ನುತ್ತಾರೆ. ಅದಕ್ಕೆ ವಿನಯ್ ಕೂಡ ಸ್ವೀಟೆಸ್ಟ್​ ಪರ್ಸನ್​ ಅಂತಾ ಸಂಗೀತಾ ಹೊಗಳಿದ್ದಾರೆ. ಇದನ್ನು ಕೇಳಿ ಮನೆ ಮಂದಿ ಎಲ್ಲಾ ಸ್ಮೈಲ್ ನೀಡಿದ್ದಾರೆ. ಆಗ ಬಿಗ್ ಬಾಸ್ ಶೋನ ವಿನ್ನರ್ ಆಗಿದ್ದ ಶೈನ್ ಶೆಟ್ಟಿ, ನಿಮ್ಮಿಬ್ಬರನ್ನು ನೋಡ್ತಾ ಇದ್ರೆ ಈ ಟಾಸ್ಕ್​ ಮುಗಿಯುವಾಗ ನಿಮ್ಮಿಬ್ಬರಿಗೆ ಲವ್​ ಆಗೋತರ ಇದೆ ಎಂದು ಚಟಾಕಿ ಹಾರಿಸಿದ್ದಾರೆ.

ಇಬ್ಬರು ಗೇಮ್ ಮುಗಿಸಿ ಒಬ್ಬರನ್ನೋಬ್ಬರು ತಬ್ಬಿಕೊಂಡಿದ್ದಾರೆ. ಇದಕ್ಕೆ ಕಾರ್ತಿಕ್ ಕೂಡ ಖುಷಿ ಪಟ್ಟಿದ್ದಾರೆ. ಇನ್ನೂ ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೋಮೋಗೆ ಬಿಗ್ ಬಾಸ್ ಪ್ರೇಕ್ಷಕರು ಕಾಮೆಂಟ್‌ಗಳ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ. "ಎಂತಹ ಕ್ಷಣ... ಜಸ್ಟ್ ಲುಕ್ಕಿಂಗ್ ಲೈಕ್ ಎ ವಾವ್" ಎಂದಿದ್ದಾರೆ. ಜೊತೆಗೆ ಹಲವು ಮಂದಿ ವಿನಯ್ ವಿನ್ನರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Bigg Boss Kannada 10 Weekend episode update.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X