BBK10:ಎಷ್ಟೇ ಪ್ರಯತ್ನ ಪಟ್ರೂ ಸಂಗೀತಾ-ಕಾರ್ತಿಕ್ ಸರಿ ಹೋಗ್ತಿಲ್ಲ; ಇಬ್ಬರ ನಡುವೆ ಯಾಕೀ ಬಿರುಕು?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಾನೂ ಬಿಟ್ಟರು ಬಿಡದ ರೀತಿ ಒಂದೊಳ್ಳೆ ಬಾಂಧವ್ಯ ಇದ್ದದ್ದು ಸಂಗೀತಾ ಹಾಗೂ ಕಾರ್ತಿಕ್ ನಡುವೆ. ಅಸಮರ್ಥರಾಗಿ ಬಂದು, ಎಲ್ಲಾ ಸಮಯದಲ್ಲೂ ಜೊತೆಯಾಗಿಯೇ ನಿಂತರು. ಅಸಮರ್ಥರಾಗಿ ಮನೆಯೊಳಗೆ ಎಂಟ್ರಿ ಕೊಟ್ಟರು ಕೂಡ ಇಂದು ಸ್ಟ್ರಾಂಗ್ ಸ್ಪರ್ಧಿಯಾಗಿ ನಿಂತಿದ್ದಾರೆ.

ಸಂಗೀತಾ ಆರಂಭದಿಂದಾನೂ ತಾನೂ ಫ್ರೆಂಡ್ ಅಂತ ಸ್ವೀಕರಿಸಿದವರು ಕಷ್ಟ ಕಾಲದಲ್ಲಿ ಜೊತೆಯಾಗಿಯೇ ಇರಬೇಕು ಎಂದು ಬಯಸಿದವರು. ಈ ಒಂದು ಗುಣ ಕಾರ್ತಿಕ್‌ಗೆ ಬಹಳಷ್ಟು ಬಾರಿ ಕಿರಿಕಿರಿ ಮಾಡಿದೆ. ಆದರೂ ಮತ್ತೆ ಮತ್ತೆ ಒಂದಾಗಿದ್ದಾರೆ. ಈ ಬಾರಿ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರಿರಬಹುದು. ಹೀಗಾಗಿ ಆ ಫ್ರೆಂಡ್‌ಶಿಪ್ ಅದೇಕೊ ಮತ್ತೆ ಜಾಯಿಂಟ್ ಆಗುತ್ತಿಲ್ಲ.

 Bigg Boss Kannada 10 What is the reason for rift between Karthik and Sangeetha?

ರಾತ್ರಿಯಿಡಿ ಸರಿ ತಪ್ಪುಗಳ ವಿಶ್ಲೇಷಣೆ

ಕಾರ್ತಿಕ್, ಸಂಗೀತಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆಗಾಗ ಗೊತ್ತಾಗುತ್ತಿದೆ. ರಾತ್ರಿ ಕೂಡ ಅದರ ಬಗ್ಗೆಯೇ ಸಂಗೀತಾರನ್ನು ಸಮಾಧಾನ ಮಾಡುವತ್ತ ಕಾರ್ತಿಕ್ ಗಮನ ಹರಿಸಿದ್ದರು. ನಡೆದ ವಿಚಾರಗಳನ್ನೆಲ್ಲಾ‌ಮಾಫಿ ಮಾಡುವಂತೆ ಕೇಳಿಕೊಳ್ಳುತ್ತಿದ್ದರು. ಸಂಗೀತಾ ವಿಚಾರವಾಗಿ ತಾನೂ ಹೇಳಿದ ಒಂದೊಂದು ಮಾತನ್ನು ಮರೆಯುವಂತೆ ಮನವಿ ಮಾಡಿದ್ದರು. ಕಳೆದ ಹೊಸ ವರ್ಷದ ದಿನವೂ ಸ್ನೇಹವನ್ನು ಮುಂದುವರೆಸುವ ಪ್ರಯತ್ನ ನಡೆದಿತ್ತು. ಯಾವುದೋ ಒಂದು ಮಾತಿಗೆ ಸಂಗೀತಾಗೆ ನೋವು ಕೊಡಲಾಗಿತ್ತು. ಎಲ್ಲರ ಮುಂದೆ ಕ್ಷಮೆ ಕೇಳಿದರೇನೆ ಆ ತಪ್ಪಿಗೆ ಕ್ಷಮೆ ಎಂದಿದ್ದರು ಸಂಗೀತಾ. ಅದಕ್ಕೂ ಒಪ್ಪಿದ್ದ ಕಾರ್ತಿಕ್ ಎಲ್ಲರ ಮುಂದೆ ಕ್ಷಮೆ ಕೇಳಿದ್ದರು. ಆಗ ಸಂಗೀತಾ, ಒಂದು ಹಗ್ ಕೊಟ್ಟು ಸುಮ್ಮನೆ ಆಗಿದ್ದರು.

ಫ್ರೆಂಡ್‌ಶಿಪ್ ಮುಂದುವರೆಸುವ ಆಸೆ ಇಲ್ವಾ..?

ನಿನ್ನೆ ರಾತ್ರಿ ಕಾರ್ತಿಕ್ ಕ್ಷಮೆ ಕೇಳುವ ಮಾತುಗಳನ್ನು ಆಡಿದ್ದರು. ಆದರೆ ಸಂಗೀತಾ ಅದ್ಯಾಕೋ ಮತ್ತೆ ಆ ಫ್ರೆಂಡ್ಶಿಪ್ ಉಳಿಸಿಕೊಳ್ಳುವ ಇಂಗಿತವನ್ನು ತೋರಲೇ ಇಲ್ಲ. "ನಾನು ಈಗೋ ಬಿಡಲ್ಲ ಅಂತೆಲ್ಲಾ ಹೇಳಿದ್ರಿ ಅಲ್ವಾ? ಆಗ ನನ್ನವರು ಎಂಬ ಭಾವನೆ ಇತ್ತು. ಅದಕ್ಕಾಗಿ ಆ ರೀತಿ ನಡೆದುಕೊಳ್ಳುತ್ತಿದ್ದೆ. ಆದರೆ ಈಗ ಆ ಭಾವನೆ ಇಲ್ಲದೆ ಇರುವ ಕಾರಣ ನೀವೂಗಳು ಹೇಳುವುದು ನನಗೆ ನಾಟುವುದಿಲ್ಲ" ಎಂಬಂತೆಯೇ ತಿಳಿಸಿದ್ದಾರೆ.

 Bigg Boss Kannada 10 What is the reason for rift between Karthik and Sangeetha?

ಮತ್ತೆ ಸಂಗೀತಾ ಮೇಲೆ ಆರೋಪ

ಬಿಗ್ ಬಾಸ್ ಒಂದು ಚಟುವಟಿಕೆಯನ್ನು ನೀಡಿತ್ತು. ಎಮೋಷನ್ಸ್ ಕಾರ್ಡ್ ಬಗ್ಗೆ ಮಾತನಾಡುವುದು. "ಒಂದು ಸಲ ನಮ್ಮ ಜೊತೆಗೆ ಇರುತ್ತಾರೆ. ನಾವೇನು ಮಾತೇ ಆಡಿರುವುದಿಲ್ಲ. ಫ್ಲಿಫ್ ಎಂಬ ಮಾತು ಉಪಯೋಗಿಸಿ, ನಮ್ಮ ತಂಡದಿಂದ ಹೊರಗೆ ಹೋಗುತ್ತಾರೆ. ನನ್ನ ಮೇಲೆ ಎಲ್ಲವನ್ನು ಹೇಳುತ್ತಾರೆ" ಎಂದು ಮತ್ತೆ ಸಂಗೀತಾ ವಿರುದ್ಧ ಎಮೋಷನ್ಸ್ ಕಾರ್ಡ್ ಪ್ಲೇ ಮಾಡಿದ್ದಾರೆ.

ಸಂಗೀತಾ ಮನಸ್ಸು ಕಲ್ಲಾಗಿದೆಯಾ..?

"ನಿಮ್ಮಿಂದ ನಂಗೆ ಮಾತನಾಡುವುದಕ್ಕೆ ಇಷ್ಟವಿಲ್ಲ ಅಂತ ಹೇಳಿದ್ದೇನೆ ವಿನಃ, ನಿಮ್ಮಿಂದ ಅಂತ ನಾನು ಹೇಳುತ್ತಿಲ್ಲ" ಎಂದು ಸಂಗೀತಾ ಕೂಡ ವಾದ ಮಾಡಿದ್ದಾರೆ. ಈ ಎಮೋಷನ್ಸ್ ಕಾರ್ಡ್‌ನಲ್ಲೂ ಇಬ್ಬರ ನಡುವೆ ವಾದ-ವಿವಾದ ನಡೆದಿದೆ. ಇಬ್ಬರ ನಡುವೆ ಮತ್ತೆ ಹಳೇ ಬಾಂಧವ್ಯ ಚಿಗುರೊಡೆಯದೆ ಇರುವುದಕ್ಕೆ ಈ ರೀತಿಯ ಆರೋಪ-ಪ್ರತ್ಯಾರೋಪ ನಡೆಯುತ್ತಿರುವುದು ಮತ್ತಷ್ಟು ಮನ:ಸ್ತಾಪಕ್ಕೆ ಕಾರಣವಾಗುತ್ತಿದೆ.

More from Filmibeat

English summary
BBK 10 What is the reason for the rift between Karthik and Sangeetha?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X