BBK10 Winner: ಎಲ್ಲರ ಊಹೆ ಸುಳ್ಳಾಗಿಸಿ ಬಿಗ್‌ಬಾಸ್ ಟ್ರೋಫಿ ಎತ್ತಿ ಹಿಡಿದ ಕಾರ್ತಿಕ್ ಮಹೇಶ್

ಕಾರ್ತಿಕ್ ಮಹೇಶ್ ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿಜೇತರಾಗಿದ್ದಾರೆ. ಟ್ರೋಫಿ ಎತ್ತಿ ಹಿಡಿದು ಸಂಭ್ರಮಿಸಿದ್ದಾರೆ. ಡ್ರೋನ್ ಪ್ರತಾಪ್ ರನ್ನರ್ ಅಪ್‌ ಆಗಿದ್ದು ಸಂಗೀತಾ ಶೃಂಗೇರಿ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಕಾರ್ತಿಕ್ ಗೆದ್ದೇ ಗೆಲ್ಲುವೆ ಎಂದುಕೊಂಡಿದ್ದೆ ಎಂದು ಹೇಳಿದ್ದಾರೆ. ಪ್ರತಾಪ್ ನಾನು ಇಲ್ಲಿಯವರೆಗೂ ಬರ್ತೀನಿ ಎಂದುಕೊಂಡಿರಲಿಲ್ಲ ಎಂದಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಲವರ್‌ ಬಾಯ್ ಆಗಿ ಗಮನ ಸೆಳೆದವರು ಕಾರ್ತಿಕ್ ಮಹೇಶ್. ಅಸಮರ್ಥರ ಗುಂಪಿನಲ್ಲಿದ್ದ ಮಹೇಶ್ ನೋಡ ನೋಡುತ್ತಲೇ ಗೆಲ್ಲುವ ನೆಚ್ಚಿನ ಸ್ಪರ್ಧಿ ಎನಿಸಿಕೊಳ್ಳುತ್ತಾ ಸಾಗಿದ್ದರು. ಮೊದಲಿಗೆ ಸಂಗೀತಾಗೆ ಬಹಳ ಹತ್ತಿರವಾಗಿದ್ದ ಕಾರ್ತಿಕ್ ಬಳಿಕ ನಮ್ರತಾ ಕಡೆ ವಾಲಿದ್ದರು.

Bigg Boss Kannada 10 Winner: Karthik lifts trophy , Drone Pratap Takes Runner-Up Position

ಕಾರ್ತಿಕ್ ಕೊನೆ ಕೊನೆಗೆ ತನಿಷಾ ಜೊತೆ ಬಹಳ ಆಪ್ತವಾಗಿ ಕಾಣಿಸಿಕೊಂಡರು. ಈ ಮೂವರಿಗೆ ಕಾರ್ತಿಕ್ ಎಷ್ಟು ಹತ್ತಿರವಾಗಿದ್ದರೋ ಅಷ್ಟೇ ಬೇಗ ದೂರ ಆಗಿದ್ದರು. ಒಮ್ಮೆ ನಾಯಕನನ್ನು ಆಯ್ದುಕೊಳ್ಳುವ ವಿಚಾರದಲ್ಲಿ ಕಾರ್ತಿಕ್ ಹಾಗೂ ಸಂಗೀತಾ ನಡುವೆ ಭಿನ್ನಾಭಿಪ್ರಾಯ ತಲೆದೋರಿತ್ತು. ಆಗ ಸಂಗೀತಾ 'ನೀನು ಫೇಕ್‌' ಎಂದು ಹೇಳಿದ್ದು ಕಾರ್ತಿಕ್‌ ಬೇಸರಕ್ಕೆ ಕಾರಣವಾಗಿತ್ತು. ಬಳಿಕ ನಮ್ರತಾ ಜೊತೆ ಹೆಚ್ಚು ಸಲುಗೆಯಿಂದ ಇರಲು ಆರಂಭಿಸಿದರು.

ಸಂಗೀತಾ ಇಲ್ಲದ ಸಮಯದಲ್ಲಿ ಕಾರ್ತಿಕ್ ಹಾಗೂ ನಮ್ರತಾ ಬಿಗ್‌ಬಾಸ್ ಮನೆ ಬಾಲ್ಕನಿಯಲ್ಲಿ ಕೂತು ಡೇಟ್ ಹೋಗುವ ಬಗ್ಗೆ ಮಾತನಾಡಿದ್ದರು. ಆ ಸಮಯದಲ್ಲಿ ಸಂಗೀತಾ ಗತಿಯೇನು? ಎಂದು ಮನೆಮಂದಿ ಹಾಗೂ ವೀಕ್ಷಕರು ಮಾತನಾಡಿಕೊಂಡಿದ್ದು ಸುಳ್ಳಲ್ಲ. ಬಳಿಕ ಸಂಗೀತಾರಿಂದ ಕಾರ್ತಿಕ್ ಬಹಳ ದೂರವೇ ಆಗಿಬಿಟ್ಟರು. ಕೆಲವೊಮ್ಮೆ ಸಂಗೀತಾ ಯಾರ ಜೊತೆಗೂ ಸೇರದೇ ತಮ್ಮದೇ ಒಂದು ಪ್ರಪಂಚ ಸೃಷ್ಟಿಸಿಕೊಂಡಿದ್ದು ಇದೆ.

ಫಿಸಿಕಲ್ ಟಾಸ್ಕ್‌ಗಳಲ್ಲಿ ಕಾರ್ತಿಕ್ ಹಿಂದೆ ಬಿದ್ದರೂ ಮನರಂಜನೆ ನೀಡುವಲ್ಲಿ ಗಮನ ಸೆಳೆದರು. ಅಂದಹಾಗೆ ಬಿಗ್‌ಬಾಸ್‌ ಸೀಸನ್ 10ಕ್ಕೆ ಕೊನೆ ಕ್ಷಣದಲ್ಲಿ ಆಯ್ಕೆ ಆಗಿದ್ದವರು ಕಾರ್ತಿಕ್. ಇತ್ತೀಚೆಗೆ ಈ ಮಾತನನ್ನು ಸುದೀಪ್ ನೆನಪಿಸಿದ್ದರು. "ಈ ಸೀಸನ್‌ನಲ್ಲಿ ಎಲ್ಲಾ ಸ್ಪರ್ಧಿಗಳ ಆಯ್ಕೆ ಮುಗಿದಿತ್ತು. ಹಾಗಿರುವಾಗ ಕೊನೆಯದಾಗಿ ಒಪ್ಪಿಕೊಂಡು ಕಾರ್ತಿಕ್ ಬಂದಿದ್ದರು. ಬೆಳಗ್ಗೆ ಒಪ್ಪಿದ್ದರು. ಈಗ ಫೈನಲಿಸ್ಟ್ ಆಗಿ ಕೂತಿದ್ದೀರಾ. ನಿಮ್ಮ ತಲೆಯಲ್ಲಿ ಏನು ಓಡುತ್ತಿದೆ?" ಎಂದು ಸುದೀಪ್ ಕೇಳಿದ್ದರು.

ಅಂದು ಕೊನೆ ಕ್ಷಣದಲ್ಲಿ ಕಾರ್ತಿಕ್ ವಿಟಿ ಮಾಡಲಾಗಿತ್ತು. ಆಗಲೂ ನಾನು 100 ದಿನ ಮನೆಯಲ್ಲಿ ಇರ್ತೀನಿ, ಗೆದ್ದು ಬರ್ತೀನಿ ಎಂದು ಆತ್ಮವಿಶ್ವಾಸದಿಂದಲೇ ಹೇಳಿದ್ದರು. ಹೇಳಿದಂತೆಯೇ ಫಿನಾಲೆ ವೇದಿಕೆ ಏರಿದ್ದರು.

ಮೈಸೂರು ಮೂಲದ ಕಾರ್ತಿಕ್ ಚಿಕ್ಕಂದಿನಿಂದಲೂ ನಟನಾಗುವ ಕನಸು ಕಂಡಿದ್ದರು. ಬೆಂಗಳೂರಿಗೆ ಬಂದು ಧಾರಾವಾಹಿಗಳಿಗೆ ಆಡಿಶನ್‌ ಕೊಡುತ್ತಿದ್ದರು. 'ಖುಷಿ' ಎನ್ನುವ ಧಾರಾವಾಹಿಯಲ್ಲಿ ನಟಿಸುವ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಅಂದಹಾಗೆ ಈ ಧಾರಾವಾಹಿಯಲ್ಲಿ ಕಾರ್ತಿಕ್‌ಗೆ ದಿವ್ಯಾ ಉರುಡುಗ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 'ಅಕ್ಕ', 'ಮಹಾಕಾಳಿ', 'ಶನಿ', 'ಪುಟ್ಟಕ್ಕನ ಮಕ್ಕಳು', 'ಅಂತರಪಟ' ಸೇರಿದಂತೆ ಒಂದಷ್ಟು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.

Bigg Boss Kannada 10 Winner: Karthik lifts trophy , Drone Pratap Takes Runner-Up Position

ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ಸಿನಿಮಾಗಳಲ್ಲಿ ಕೂಡ ಕಾರ್ತಿಕ್ ಮಿಂಚಿದ್ದಾರೆ. ಪವನ್ ಒಡೆಯರ್ ನಿರ್ಮಾಣದ 'ಡೊಳ್ಳು' ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

More from Filmibeat

English summary
Who is karthik Mahesh? Meet the Bigg Boss kannada 10 winner
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X