BBK 11: ಬಿಗ್‌ಬಾಸ್ ಮನೆಗೆ ಮೋಕ್ಷಿತಾ ಪೈ ಹಾಗೂ ಉಗ್ರಂ ಮಂಜು

ಬಿಗ್‌ಬಾಸ್ ಕನ್ನಡ ಸೀಸನ್ 11ರ ಗ್ರ್ಯಾಂಡ್ ಓಪನಿಂಗ್ ಸಾಕಷ್ಟು ಸರ್‌ಪ್ರೈಸ್‌ಗಳಿಗೆ ಸಾಕ್ಷಿ ಆಗಿತ್ತು. ಭಿನ್ನ ವಿಭಿನ್ನ ಸ್ಪರ್ಧಿಗಳನ್ನು ಈ ಬಾರಿ ಮನೆ ಒಳಗೆ ಕಳುಹಿಸಲಾಗಿದೆ. ನಟ ಉಗ್ರಂ ಮಂಜು ಹಾಗೂ ನಟಿ ಮೋಕ್ಷಿತಾ ಪೈ ದೊಡ್ಮನೆಗೆ ಹೋಗುವ ಬಗ್ಗೆ ಗುಸುಗುಸು ಕೇಳಿಬಂದಿತ್ತು. ಅದು ಈಗ ನಿಜವಾಗಿದೆ.

'ಪಾರು' ಧಾರಾವಾಹಿಯ ಟೈಟಲ್ ರೋಲ್‌ನಲ್ಲಿ ಮೋಕ್ಷಿತಾ ನಟಿಸಿ ಕಿರುತೆರೆ ವೀಕ್ಷಕರ ಮನಗೆದ್ದಿದ್ದರು. ಇದೀಗ ಬಿಗ್‌ಬಾಸ್ ಮನೆಯಲ್ಲಿ ತಮ್ಮ ಪ್ರದರ್ಶನದ ಮೂಲಕ ರಂಜಿಸಲು ಹೊರಟಿದ್ದಾರೆ. ಅಡುಗೆ ಮಾಡುವುದು, ಮನೆಯನ್ನು ಸ್ವಚ್ಛಗೊಳಿಸುವ ಬಗ್ಗೆ ಸುದೀಪ್ ಸಾಕಷ್ಟು ಪ್ರಶ್ನೆಗಳನ್ನು ಕೇಳಿದರು. ಮನೆ ಒಳಗೆ ಯಾವುದು ಬರಲ್ಲ ಎನ್ನುವುದಕ್ಕೆ ಆಗಲ್ಲ. ಎಲ್ಲವನ್ನು ಕಲಿಸುತ್ತದೆ ಎಂದು ಹೇಳಿ ಕಳುಹಿಸಿದ್ದಾರೆ.

Bigg Boss kannada 11 actor Ugram Manju and actress Mokshitha Pai entry to house

ಬೆಂಗಳೂರಿನ ಜಯನಗರ ನ್ಯಾಷನಲ್ ಕಾಲೇಜು ವಿದ್ಯಾರ್ಥಿ ಮಂಜುನಾಥ್ ಗೌಡ. ಚಿಕ್ಕಂದಿನಿಂದಲೂ ಸಿನಿಮಾ ನೋಡುವ ಹುಚ್ಚು. ಬಳಿಕ ನಟನಾಗುವ ಕನಸು ಕಂಡಿದ್ದರು. ಕಾಲೇಜು ದಿನಗಳಲ್ಲೇ ರಂಗಭೂಮಿ ನಂಟು ಬೆಳೆಸಿಕೊಂಡಿದ್ದರು. ನಾಟಕಗಳಲ್ಲಿ ನಟಿಸಲು ಆರಂಭಿಸಿದ್ದರು. ಹೀಗೆ ಶುರುವಾದ ನಟನೆ ಗೀಳು ಮುಂದೆ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವಂತೆ ಮಾಡಿತ್ತು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಎ. ಹರ್ಷ ಗರಡಿಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಸಿನಿಮಾ ಸೆಟ್‌ಗಳ ನಿರ್ಮಾಣದಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಅನುಭವವೂ ಇದೆ. ತರುಣ್ ಸುಧೀರ್ ಹೀರೊ ಆಗಿ ನಟಿಸಿದ 'ವಿದ್ಯಾರ್ಥಿ' ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದರು. ಬಳಿಕ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರೂ 'ಉಗ್ರಂ' ಚಿತ್ರದ ಪಾತ್ರ ದೊಡ್ಡ ಬ್ರೇಕ್ ಕೊಟ್ಟಿತ್ತು. ಸದ್ಯ ಸುದೀಪ್ ನಟನೆಯ 'ಮ್ಯಾಕ್ಸ್' ಚಿತ್ರದಲ್ಲಿ ದಾಸ ಎನ್ನುವ ಪಾತ್ರದಲ್ಲಿ ಮಂಜು ನಟಿಸಿದ್ದಾರೆ.

ಉಗ್ರಂ ಮಂಜು ಅವರ ಎರಡು ವೀಕ್ನೆಸ್‌ ಬಗ್ಗೆಯೂ ಸುದೀಪ್ ಮಾತನಾಡಿದರು. ಅದನ್ನು ಬಿಟ್ಟು ಹೇಗೆ ಇರುತ್ತೀರೋ ಗೊತ್ತಿಲ್ಲ ಎಂದರು. ಮಂಜು ಬಹಳ ಒಳ್ಳೆಯ ವ್ಯಕ್ತಿ ಇನ್ನು ಯಾಕೆ ಮದುವೆ ಮಾಡಿಸಿಲ್ಲ ಎಂದು ಪೋಷಕರನ್ನು ಕೇಳಿದರು. ಹೇಳುವುದಕ್ಕೆ ಆಗೊಲ್ಲ ಬಿಗ್‌ಬಾಸ್ ಮನೆಯೊಳಗೆ ಆದರೂ ಆಗಬಹುದು ಎಂದು ಸುದೀಪ್ ಕಿಚಾಯಿಸಿದ್ದಾರೆ.

More from Filmibeat

English summary
BBK 11: Ugram Manju, Mokshitha Pai profile and biography;
Read more about: bigg boss tv kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X