BBK 11: ಮಾಸ್ ಎಂಟ್ರಿ.. ಮ್ಯಾಕ್ಸಿಮಮ್ ಸೆಲೆಬ್ರೇಷನ್; ಐಶು ಸ್ವಾಗತಕ್ಕೆ ಕಿಚ್ಚನ ಸ್ಪೂರ್ತಿ

By ಎಸ್ ಸುಮಂತ್

ಈ ವಾರ ಬಿಗ್ ಬಾಸ್ ಮನೆಯಲ್ಲಿ ಈ ವಾರದ ಜರ್ನಿ ಮುಗಿಸಿದ್ದು ಐಶ್ವರ್ಯಾ ಸಿಂಧೋಗಿ. ಇನ್ನು ಕೆಲವೇ ವಾರದಲ್ಲಿ ಬಿಗ್ ಬಾಸ್‌ಗೆ ಎಲ್ಲರೂ ವಿದಾಯ ಹೇಳಲಿದ್ದಾರೆ. ಐಶ್ವರ್ಯಾ ಸಿಂಧೋಗಿ ಮನೆಯಲ್ಲಿ ಮುದ್ದು ಮುದ್ದಾಗಿ ಓಡಾಡಿಕೊಂಡು ಇದ್ದರು. ಮೋಕ್ಷಿತಾ ಜೊತೆ ಸೇರಿ ಅಲ್ಲೊಂದು ಇಲ್ಲೊಂದು ಗಾಸಿಪ್ ಮಾಡಿಕೊಂಡು ಇದ್ದ ಐಶು ಈಗ ಹೊರಗೆ ಬಂದಿದ್ದಾರೆ. ಈಗಾಗಲೇ ಎಲ್ಲಾ ಕಡೆ ಇಂಟರ್ ವ್ಯೂ ಕೂಡ ಕೊಡ್ತಾ ಇದಾರೆ. ಇದರ ನಡುವೆ ಸೆಲೆಬ್ರೇಷನ್ ಕೂಡ ಜೋರಾಗಿದೆ.

ಬಿಗ್ ಬಾಸ್ ಮನೆಗೆ ಐಶ್ವರ್ಯಾ ಬಂದಾಗಿನಿಂದ ಮನೆ ಮಗಳಾಗಿದ್ದರು. ಸ್ವತಃ ಬಿಗ್ ಬಾಸ್ ಹೇಳಿದ್ರು ನಾನು ನಿಮ್ಮ ಜೊತೆಗಿದ್ದೀನಿ ಅಂತ. ಬಿಗ್ ಬಾಸ್ ಆರಂಭದಲ್ಲಿ ಎಲ್ಲರೂ ಆ ಪ್ರೀತಿಯನ್ನು ತೋರಿದ್ದರು. ಆದರೆ ದಿನಕಳೆದಂತೆ ಹಕವರು ಬದಲಾದರೂ ಕೂಡ. ಮನಡಯಿಂದ ಬಂದಿದ್ದ ಊಟ ಕೊಟ್ಟಿದ್ದ ಮಂಜಣ್ಣ ಕೂಡ ಬದಲಾದರು.

Bigg boss kannada 11 Aishwarya sindoghi receives a grand welcome from her family

ಅದ್ದೂರಿಯಾಗಿ ಐಶೂಗೆ ಸ್ವಾಗತ

ಐಶ್ವರ್ಯಾ 90 ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿದ್ದು ಬಂದಿದ್ದಾರೆ. ಎಲ್ಲರೂ ತುಂಬಾನೇ ಮಿಸ್ ಮಾಡಿಕೊಂಡಿದ್ರು. ಮನೆಗೆ ಬರುತ್ತಿದ್ದಂತೆ ಅದ್ದೂರಿ ಸ್ವಾಗತ ಕೋರಿದ್ದಾರೆ. ಮನೆಯೆಲ್ಲ ಅಲಂಕಾರ ಮಾಡಿ, ವೆಲ್ ಕಂ ಹೋಂ ಡಾಟರ್ ಆಫ್ ಕರ್ನಾಟಕ ಎಂದು ಬರೆದು ಸ್ನೇಹಿತರು, ಕುಟುಂಬಸ್ಥರು ಗ್ರ್ಯಾಂಡ್ ಸ್ವಾಗತಿಸಿದ್ದಾರೆ. ಈ ವಿಡಿಯೋವನ್ನು ಐಶ್ಚರ್ಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಿಂಬು ಕಂಡು ಐಶೂ ಖುಷಿ

ಐಶ್ವರ್ಯಾ ಮುದ್ದು ಶ್ವಾನ ಸಾಕಿದ್ದಾರೆ. ಆ ಮನೆ ನನ್ನದೇ ಆದರೂ ಅದರ ನಿಜವಾದ ಮಾಲೀಕ ಸಿಂಬು ಅಂತ ಸಾಕಷ್ಟು ಸಲ ಹೇಳಿದ್ದರು. ಹನುಮಂತ, ಧನರಾಜ್ ಜೊತೆಗೆ ಕೂತಾಗಲೂ ಸಿಂಬು ಬಗ್ಗೆ ಮಾತನಾಡಿದ್ದರು. ಇದೀಗ ಮನೆಗೆ ಬಂದೊಡನೆ ಸಿಂಬು ನೋಡಿ ಖುಷಿ ಪಟ್ಟಿದ್ದಾರೆ. ಸಿಂಬುನ ತಬ್ಬಿ ಮುದ್ದಾಡಿದ್ದಾರೆ. ಇಷ್ಟು ದಿನ ಐಶ್ವರ್ಯಾರನ್ನ ಕಾಣದೆ ಸಿಂಬು ಕೂಡ ಚಿಂತೆ ಮಾಡುತ್ತಿತ್ತು.

ಮ್ಯಾಕ್ಸಿಮಮ್ ಸೆಲೆಬ್ರೇಷನ್

ಇನ್ನೂ ವರ್ಷದ ಕೊನೆ ಅಂದ್ರೆ ಡಿಸೆಂಬರ್ 25ಕ್ಕೆ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಒಂದು ಡೈಲಾಗ್ ಸಿಕ್ಕಾಪಟ್ಟೆ ಫೇಮಸ್ ಮ್ಯಾಕ್ಸಿಮಮ್ ಮಾಸ್ ಅನ್ನೋದು. ಇದೀಗ ಸೆಲೆಬ್ರೇಷನ್ ಮೂಡಿನಲ್ಲಿರುವ ಐಶ್ವರ್ಯಾ ಕೂಡ ಅದನ್ನೇ ಕ್ಯಾಪ್ಶನ್ ಹಾಕಿದ್ದಾರೆ. 'ಮಾಸ್ ಎಂಟ್ರಿ ಮ್ಯಾಕ್ಸಿಮಮ್ ಸೆಲೆಬ್ರೇಷನ್' ಎಂಬ ಕ್ಯಾಪ್ಶನ್ ಹಾಕಿದ್ದಾರೆ. ಐಶ್ವರ್ಯಾ ಸಿಂಧೋಗಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಾರವೇ ಎಲಿಮಿನೇಟ್ ಆಗಿರೋದಕ್ಕೆ ಬೇಸರ ಮಾಡಿಕೊಂಡಿದ್ದು, ಸಮಾಧಾನ ಮಾಡುತ್ತಿದ್ದಾರೆ. ಆದರೆ ಐಶ್ವರ್ಯಾ ಸದ್ಯಕ್ಕೆ ಖುಷಿಯಾಗಿದ್ದಾರೆ.

ಪತ್ರದ ಮೂಲಕ ಎಲಿಮಿನೇಷನ್

ಇನ್ನು ಬಿಗ್ ಬಾಸ್ ಇದೇ ಮೊದಲ ಬಾರಿಗೆ ಮನೆಯಿಂದ ಹೊರ ಬಂದ ಸ್ಪರ್ಧಿಗೆ ಭಾವನಾತ್ಮಕ ಪತ್ರದ ಮೂಲಕ ಎಲಿಮಿನೇಟ್ ಮಾಡಿದ್ದಾರೆ. ಐಶ್ವರ್ಯಾಗೆ 'ಪ್ರೀತಿಯ ಐಶ್ವರ್ಯಾ 13 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿ ಜೀವಿಸಿರುವುದು ಸಂತೋಷದ ವಿಷಯ. ತುಸು ಬೇಸರವಿದ್ದರೂ ನಗು, ದುಃಖ, ಕೋಪ, ತುಂಟಾಟ ಹೀಗೆ ಎಲ್ಲಾ ಭಾವನೆಗೂ ಸಾಕ್ಷಿಯಾದ ಮನೆಯಿಂದ ನಿಮ್ಮನ್ನು ಕಳುಹಿಸಿಕೊಡಬೇಕಾಗಿದೆ' ಎಂದು ಪತ್ರದ ಮೂಲಕ ತಿಳಿಸಿದ್ದಾರೆ. ಬಿಗ್ ಬಾಸ್ ಮಗಳೆಂಬ ಪ್ರೀತಿ ಕೊಟ್ಟಿದ್ದಕ್ಕೆ ಐಶುಗೆ ತುಂಬಾನೇ ಖುಷಿಯಾಗಿದೆ. ಜೋರಾಗಿ ಕಣ್ಣೀರು ಹಾಕಿದ್ದಾರೆ.

More from Filmibeat

English summary
Aishwarya sindoghi's family gave her a grand welcome in Banglore, as she went to her home first time after eliminate;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X