BBK11: ಬಿಗ್‌ಬಾಸ್ ಮನೆಗೆ ಲಾಯರ್ ಜಗದೀಶ್; ಇಲ್ಲಿ ಅದೆಲ್ಲಾ ನಡೆಯಲ್ಲ ಎಂದ ಕಿಚ್ಚ!
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಹೊಸ ಸಿನಿಮಾ ಆರಂಭವಾಗಿದೆ. ಗ್ರ್ಯಾಂಡ್ ಓಪನಿಂಗ್‌ಗೂ ಮುನ್ನ ಮನೆಯೊಳಗೆ ಹೋಗುವ ಕೆಲ ಅಭ್ಯರ್ಥಿಗಳ ಹೆಸರು ರಿವೀಲ್ ಆಗಿತ್ತು. ಕಿರುತೆರೆ ನಟಿ ಗೌತಮಿ ಜಾಧವ್ ಬಳಿಕ ಲಾಯರ್ ಜಗದೀಶ್ ಹೆಸರನ್ನು ಕಲರ್ಸ್ ಕನ್ನಡ ಅನೌನ್ಸ್ ಮಾಡಿತ್ತು.
ಸಾಮಾನ್ಯವಾಗಿ ಗ್ರ್ಯಾಂಡ್ ಓಪನಿಂಗ್ ವೇದಿಕೆಯಲ್ಲೇ ಬಿಗ್‌ಬಾಸ್ ಮನೆ ಒಳಗೆ ಹೋಗುವವರು ಯಾರು ಎನ್ನುವುದು ಗೊತ್ತಾಗುತ್ತಿದೆ. ಈ ಬಾರಿ ಕೊಂಡ ಚೇಂಜ್ ಎನ್ನುವಂತೆ ಕಲರ್ಸ್ ಕನ್ನಡ ವಾಹಿಯ 'ರಾಜಾ ರಾಣಿ' ಶೋ ವೇದಿಕೆಯಲ್ಲೇ ಬಿಗ್‌ಬಾಸ್ ಕನ್ನಡ ಸೀಸನ್ 11ರ ಕೆಲ ಸ್ಪರ್ಧಿಗಳ ಹೆಸರು ಹೇಳಿತ್ತು. 7ನೇ ಸ್ಪರ್ಧಿಯಾಗಿ ವಕೀಲ ಜಗದೀಶ್ ಮನೆ ಪ್ರವೇಶಿಸಿದ್ದಾರೆ.

ಇತ್ತೀಚೆಗೆ ವಿವಾದಾತ್ಮಕ ಆರೋಪಗಳಿಂದ ವಕೀಲ ಜಗದೀಶ್ ಭಾರೀ ಸುದ್ದಿ ಆಗುತ್ತಿದ್ದಾರೆ. ಮಾಧ್ಯಮಗಳ ಮುಂದೆ ತಮ್ಮ ಹೇಳಿಕೆಗಳಿಂದ ಗಮನ ಸೆಳೆಯುತ್ತಾ ಬರುತ್ತಿದ್ದಾರೆ. ಇತ್ತೀಚೆಗೆ ನಟ ದರ್ಶನ್ ಬಿಡುಗಡೆಗೆ ಆಗ್ರಹಿಸಿ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿ ಸುದ್ದಿ ಮಾಡಿದ್ದರು. ಶಾಸಕರಾದ ಮುನಿರತ್ನ ವಿರುದ್ಧವೂ ಸಾಕಷ್ಟು ಆರೋಪಗಳನ್ನು ಮಾಡಿದ್ದರು.
ಈ ಬಾರಿ ಸ್ವರ್ಗ ಹಾಗೂ ನರಕ ಎನ್ನುವ ಕಾನ್ಸೆಪ್ಟ್‌ನಲ್ಲಿ ಬಿಗ್‌ಬಾಸ್ ಶೋ ಆರಂಭವಾಗುತ್ತಿದೆ. ಮೊದಲಿಗೆ ಕೆಲವರನ್ನು ನರಕ(ಬೇರೆ ಗುಂಪಾಗಿ ಮಾಡಿ) ಬಳಿಕ ಅವರನ್ನು ಒಟ್ಟಿಗೆ ಸೇರಿಸುವ ಪ್ರಯತ್ನ ನಡೆಯುತ್ತಿರುವಂತೆ ಕಾಣುತ್ತಿದೆ. ಲಾಯರ್ ಜಗದೀಶ್ ಬಿಗ್‌ಬಾಸ್ ಮನೆಗೆ 2ನೇ ಸ್ಪರ್ಧಿಯಾಗಿ ಹೋಗುತ್ತಿದ್ದಾರೆ. ಇವರು ಸ್ವರ್ಗಕ್ಕೆ ಹೋಗಬೇಕಾ? ಅಥವಾ ನರಕಕ್ಕೆ ಹೋಗಬೇಕಾ? ನೀವೇ ವೋಟ್ ಮಾಡಿ ಹೇಳಿ ಎಂದು ವೀಕ್ಷಕರಿಗೆ ಹೇಳಿದ್ದಾರೆ.
ವಕೀಲರಾದ ಜಗದೀಶ್ ಕಾನೂನು ವಿಚಾರಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಮಾಡಿ ಮಾತನಾಡುತ್ತಿದ್ದರು. ಈ ಮೂಲಕ ರಾಜ್ಯದ ಜನರಿಗೆ ಪರಿಚಿತರಾಗಿದ್ದರು. ಈ ಹಿಂದೆ ಜಾರಕಿಹೊಳಿ ಸಿಡಿ ಪ್ರಕರಣದ ವೇಳೆ ಸಂತ್ರಸ್ತ ಯುವತಿ ಪರ ಮಾತನಾಡಿದ್ದರು. ಇನ್ನು ಭ್ರಷ್ಟಾಚಾರದ ವಿರುದ್ಧ ದನಿ ಎತ್ತುವ ಮೂಲಕ ಗಮನ ಸೆಳೆದಿದ್ದರು. ಈ ಹಿಂದೆ ಕೆಲ ಬಾರಿ ವಕೀಲರಾದ ಜಗದೀಶ್ ಪೊಲೀಸರಿಂದ ಬಂಧನವಾಗಿದ್ದು ಇದೆ.
ಎರಡು ವರ್ಷಗಳ ಹಿಂದೆ ವಕೀಲ ಜಗದೀಶ್ ವಿರುದ್ಧ ಜಾತಿ ನಿಂದನೆ ಆರೋಪದಡಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು. ಬಳಿಕ ಅವರು ಗೋವಾದಲ್ಲಿ ಇರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆಗಸ್ಟ್ 30ರಂದು ಕೊಡಿಗೇಹಳ್ಳಿ ಪೊಲೀಸರು ಅಲ್ಲಿಗೆ ತೆರಳಿ ವಶಕ್ಕೆ ಪಡೆದಿದ್ದರು. ಬಳಿಕ ಬಿಡುಗಡೆ ಆಗಿದ್ದರು.
ಕೊಡಿಗೇಹಳ್ಳಿಯಲ್ಲಿ ಲಾಯರ್ ಜಗದೀಶ್ ನೆಲೆಸಿದ್ದಾರೆ. ಶ್ರೀಮಂತ ಒಕ್ಕಲಿಗ ಕುಟುಂಬದವರು. ಚಿಕ್ಕ ವಯಸ್ಸಿನಲ್ಲೇ ಪೊಲೀಸರು ತಮ್ಮ ಮೇಲೆ ಸುಳ್ಳು ಕೇಸ್ ದಾಖಲಿಸಿ ರೌಡಿ ಶೀಟರ್ ಮಾಡಿಬಿಟ್ಟಿದ್ದರು. ಮುಂದೆ ತಾವೇ ಎಲ್‌ಎಲ್‌ಬಿ ಓದಿ ತಮ್ಮ ಕೇಸ್ ವಾದಿಸಿಕೊಂಡಿದ್ದಾರೆ ಹೇಳಿಕೊಂಡಿದ್ದಾರೆ. ಇನ್ನು ಪುನೀತ್ ಕೆರೆಹಳ್ಳಿ ಜೊತೆ ಏಕವಚನದಲ್ಲಿ ಬೈದಾಡಿಕೊಂಡು ಇಬ್ಬರೂ ಸುದ್ದಿ ಆಗಿದ್ದರು.
ರೋಷಾವೇಶದ ಮಾತುಗಳು, ಸದಾ ಸಿಡುಕುವ ವ್ಯಕ್ತಿತ್ವದ ಲಾಯರ್ ಜಗದೀಶ್ ಬಿಗ್‌ಬಾಸ್ ಮನೆಗೆ ಅಚ್ಚರಿಯ ಎಂಟ್ರಿ ಎಂದು ಕೆಲವರು ಹೇಳುತ್ತಿದ್ದಾರೆ. ಪ್ರಶಾಂತ್ ಸಂಬರಗಿ ರೀತಿಯಲ್ಲೇ ಬಿಗ್‌ಬಾಸ್ ಮನೆಯಲ್ಲಿ ಜಗದೀಶ್ ಆರ್ಭಟಿಸುತ್ತಾರೆ ಎಂದು ಈಗಾಗಲೇ ಕೆಲವರು ಅಂದಾಜಿಸುತ್ತಿದ್ದಾರೆ.


Click it and Unblock the Notifications











