BBK 11: ಮಂಜಣ್ಣನ 'ಬುದ್ದಿವಂತಿಕೆ' ಆಟ; ಗೌತಮಿಗೆ ಬೇಸರ, ಮೋಕ್ಷಿತಾ ನಾಮಿನೇಟ್!
ಬಿಗ್ ಬಾಸ್ ಮನೆಯಲ್ಲಿ ಇಂದು ಸಾಕಷ್ಟು ಟಾಸ್ಟ್‌ಗಳನ್ನು ನೀಡಲಾಗಿದೆ. ನಾಮಿನೇಷನ್‌ನಿಂದ ಬಚಾವ್ ಆಗುವುದಕ್ಕೆ ಮನೆಯವರ ಬೆಂಬಲವೂ ಬೇಕಾಗಿದೆ. ಆದರೆ ಈಗ ಕೆಲವರ ನಡುವೆ ಆಟವೇ ಮುಖ್ಯ ಎಂಬುದು ಅರ್ಥವಾಗುತ್ತಿದೆ. ಸ್ನೇಹ ಸಂಬಂಧಕ್ಕಿಂತ, ಬಿಗ್ ಬಾಸ್‌ನಲ್ಲಿ ಗೆಲ್ಲುವುದೇ ಬಹಳ ಮುಖ್ಯವಾಗಿದೆ. ಅದು ತಿಳಿದು ಹಲವರ ಮನಸ್ಸು ಕದಲಿದೆ.
ಬಿಗ್ ಬಾಸ್ ಮನೆಯಲ್ಲಿ ಗೌತಮಿ, ಮೋಕ್ಷಿತಾ, ಮಂಜಣ್ಣ ನಡುವೆ ಒಳ್ಳೆಯ ಬಾಂಧವ್ಯ ಇತ್ತು. ಆದರೆ ಟಾಸ್ಕ್ ವಿಚಾರದಲ್ಲಿ ಮಂಜಣ್ಣ ನಡವಳಿಕೆ ಗೌತಮಿ ಹಾಗೂ ಮೋಕ್ಷಿತಾ ಅವರಿಗೆ ನೋವುಂಟು ಮಾಡಿದೆ. ಆದರೆ ಮತ್ತೆ ಆ ಫ್ರೆಂಡ್‌ಶಿಪ್ ಉಳಿಸಿಕೊಂಡು ಮಾಮೂಲಿಯಾಗಿದ್ದಾರೆ.

ಬುದ್ದಿವಂತರ ಆಟ ಆಡಿದ ಮಂಜಣ್ಣ
ಬಾಲ್ ತಳ್ಳುವ ಆಟದಲ್ಲಿ ಮಂಜಣ್ಣ ತೆಗೆದುಕೊಂಡ ನಿರ್ಧಾರ ಗೌತಮಿ ಹಾಗೂ ಮೋಕ್ಷಿತಾಗೆ ಇಷ್ಟವಾಗಿರಲಿಲ್ಲ. ಒಂದು ಕ್ಲಾರಿಟಿ ಕೊಡಿ ಒಬ್ಬರೇ ಆಟ ಆಡೋಕೆ ಆಗಲ್ಲ. ಇದನ್ನ ಒಬ್ಬ ಗೆಳತಿಯಾಗಿಯೇ ಹೇಳ್ತಾ ಇದ್ದೀನಿ. ಒಂದು ಕ್ಲಾಪ್. ನನ್ನ ಗೆಳೆಯ ಇಷ್ಟೊಂದು ಬುದ್ದಿವಂತ ಅಂತ ಗೊತ್ತಿರಲಿಲ್ಲ. ನಮಗೆ ನನ್ನ ಗೆಳೆಯನ ಈ ಆಟ ಇಷ್ಟ ಆಗಲಿಲ್ಲ ಎಂದು ಗೌತಮಿ ಕೋಪ ಮಾಡಿಕೊಂಡಿದ್ದರು. ಮಂಜಣ್ಣ ಆ ಆಟದ ಬಗ್ಗೆ ಸಮರ್ಥನೆ ನೀಡುವ ಪ್ರಯತ್ನ ಮಾಡಿದರು.
ಗೌತಮಿ ಟೀಂಗೆ ಹನುಮಂತ ಸಪೋರ್ಟ್
ಒಂದು ಟಾಸ್ಕ್‌ನಲ್ಲಿ ಮಂಜಣ್ಣನಿಗೆ ಬಿಗ್ ಬಾಸ್ ಒಂದು ಅವಕಾಶ ನೀಡಿದ್ದರು. ಒಂದು ಟೀಂ ಅನ್ನು ಒಂದು ಟಾಸ್ಕ್‌ನಿಂದ ಹೊರಗಿಡುವ ಅವಕಾಶ. ಆಗ ಮಂಜಣ್ಣ ಫ್ರೆಂಡ್ಶಿಪ್ ಕೂಡ ನೋಡದೆ ಗೌತಮಿ ತಂಡವನ್ನು ಹೊರಗಿಟ್ಟಿದ್ದರು. ಆದರೆ ಕ್ಯಾಪ್ಟನ್ ಹನುಮಂತ ನಿರ್ಧಾರವೇ ಫೈನಲ್ ಆಗಿದ್ದರಿಂದ ಗೌತಮಿ ತಂಡ ಉಳಿದುಕೊಂಡಿತ್ತು, ಚೈತ್ರಾ ಟೀಂ ಹೊರಗೆ ಉಳಿದಿತ್ತು. ಗೌತಮಿ ಹಾಗೂ ಮೋಕ್ಷಿತಾ ಕುಳಿತು ಆಟದಲ್ಲಿ ಮಂಜಣ್ಣ ನಡೆದುಕೊಂಡ ರೀತಿಗೆ ಇಬ್ಬರು ಮಾತಾಡಿಕೊಂಡು ಬೇಸರ ಮಾಡಿಕೊಂಡಿದ್ದಾರೆ. ಇದು ನಾವೂ ನೋಡಿದ ಮಂಜಣ್ಣನ ಎಂಬುದೇ ಅರಗಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ನಮ್ಮ ತಲೆಗೆ ಆ ಯೋಚನೆಯೇ ಬರಲಿಲ್ಲ ಎಂದು ಮಂಜಣ್ಣ ನಡವಳಿಕೆಗೆ ಬೇಸರ ಮಾಡಿಕೊಂಡು ಸುಮ್ಮನಾದರು. ಮೋಕ್ಷಿತಾ ಕಣ್ಣೀರು ಹಾಕಿದರು.
ಗೌತಮಿಗೆ ಮಾತಾಡಲು ಇಷ್ಟವಿಲ್ಲ
ಗೌತಮಿ ಕೂತಿದ್ದ ಜಾಗಕ್ಕೆ ಬಂದ ಮಂಜಣ್ಣ ಸಮಾಧಾನ ಮಾಡುವುದಕ್ಕೆ ನೋಡಿದರು. ಗೌತಮಿ ಮನಸ್ಸಲ್ಲಿ ಆ ಬೇಸರ ಇನ್ನು ಹಾಗೇ ಇತ್ತು. 'ಪ್ರಶ್ನೆ ಏನು ಇಲ್ಲ. ಗೆಳತಿ ಕಡೆಯಿಂದಾನು ಇಲ್ಲ ಗೌತಮಿ ಕಡೆಯಿಂದಾನು ಯಾವ ಪ್ರಶ್ನೆಗಳು ಇಲ್ಲ' ಎಂದು ಗೌತಮಿ ಹೇಳಿ ಸುಮ್ಮನೆ ಕೂತರು. ಅಷ್ಟರಲ್ಲಿ ಅಲ್ಲಿಗೆ ಮೋಕ್ಷಿತಾ ಕೂಡ ಬಂದರು. ಆಗ, 'ಅವರಾಡಿದ ಆಟ ಅವರಿಗೆ ಸಮಾಧಾನವಿದೆಯಂತೆ. ನಾವು ಅದನ್ನು ಪ್ರಶ್ನೆ ಮಾಡುವುದಕ್ಕೆ ಆಗಲ್ಲ. ಸೋ ಹೀಗೆ ಆಟ ಆಡುವುದಾದರೆ ನಾನ್ಯಾವತ್ತು ಸಲಹೆ ಕೊಡಲ್ಲ. ಹಾಗೇ ನಿಮ್ಮ ತಂಡಕ್ಕೆ ನನ್ನನ್ನ ಯಾವತ್ತು ಕರೆದುಕೊಳ್ಳಲೇ ಬೇಡಿ' ಎಂದು ಗೌತಮಿ ಮನವಿ ಮಾಡಿದರು.
ಮಂಜಣ್ಣನಿಂದ ಮೋಕ್ಷಿತಾ ನಾಮಿನೇಷನ್
ಮಂಜಣ್ಣ ಆಡಿದ ಆಟದಿಂದಾಗಿಯೇ ಇಂದು ಗೌತಮಿ ನಾಮಿನೇಷನ್ ಆಗಿದ್ದಾರೆ. ಕಡೆಯಲ್ಲಿ ಬಿಗ್ ಬಾಸ್ ಹನುಮಂತುಗೆ ನಾಮಿನೇಷನ್ ಮಾಡಲು ಹೇಳಿತ್ತು. ಆಗ ಹನುಮಂತು ಮೋಕ್ಷಿತಾ ಅವರನ್ನು ನಾಮಿನೇಷನ್ ಮಾಡಿ, ಯಾವುದೇ ಆಟ ಆಡಿಲ್ಲ ಎಂಬ ಕಾರಣ ನೀಡಿದ್ದಾರೆ. ಮೋಕ್ಷಿತಾ ಇಂದು ಎಲ್ಲಿಯೂ ಕಾಣಿಸದೇ ಇದ್ದಿದ್ದಕ್ಕೆ ಮಂಜಣ್ಣನೇ ಕಾರಣರಾಗಿದ್ದಾರೆ.


Click it and Unblock the Notifications











