Bigg Boss Kannada 11: ಭವ್ಯಾ ಗೌಡ ಹಾಗೂ ಯಮುನಾ ಶ್ರೀನಿಧಿ ಮನೆಗೆ ಎಂಟ್ರಿ
ಬಿಗ್‌ಬಾಸ್ ಕನ್ನಡ ಸೀಸನ್ 11 ಅದ್ಧೂರಿಯಾಗಿ ಆರಂಭವಾಗಿದೆ. ಗ್ರ್ಯಾಂಡ್ ಓಪನಿಂಗ್ ರಂಗೇರಿದ್ದು ಮತ್ತೆ ಬಿಗ್‌ಬಾಸ್ ಫೀವರ್ ಶುರುವಾಗುತ್ತಿದೆ. ಸ್ವರ್ಗ - ನರಕ ಎನ್ನುವ ಕಾನ್ಸೆಪ್ಟ್‌ನಲ್ಲಿ ಈ ಬಾರಿ ಶೋ ಆರಂಭವಾಗುತ್ತಿದೆ. ಆರಂಭದಲ್ಲೇ ಕೆಲವರನ್ನು ಸ್ವರ್ಗ- ನರಕ ಎಂದು ವಿಭಾಗಿಸಿ ಮನೆಗೆ ಕಳುಹಿಸಲಾಗ್ತಿದೆ.
ಒಂದು ದಿನ ಮೊದಲೇ 4 ಜನ ಸ್ಪರ್ಧಿಗಳ ಹೆಸರನ್ನು ಕಲರ್ಸ್ ಕನ್ನಡ ರಿವೀಲ್ ಮಾಡಿತ್ತು. ಮತ್ತೆ ಕೆಲವು ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಕೇಳಿಬರ್ತಿತ್ತು. ಅದರಲ್ಲಿ ಕಿರುತೆರೆ ನಟಿ ಭವ್ಯಾ ಗೌಡ ಹೆಸರು ಇತ್ತು. ಆಕೆ ಮೊದಲ ಸ್ಪರ್ಧಿಯಾಗಿ ದೊಡ್ಮನೆಗೆ ಹೋಗುತ್ತಿದ್ದಾರೆ. ಜೊತೆಗೆ ಮೊತ್ತೊಬ್ಬ ನಟಿ ಯಮುನಾ ಶ್ರೀನಿಧಿ 2ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

'ಗೀತಾ' ಧಾರಾವಾಹಿಯಲ್ಲಿ ನಟಿಸಿ ಭವ್ಯಾ ಗೌಡ ಗಮನ ಸೆಳೆದಿದ್ದರು. ಮೂಲತಃ ಮಾಡೆಲ್ ಆಗಿದ್ದ ಭವ್ಯಾ ಕೆಲ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಈ ಹಿಂದೆ ಮಿಸ್ ಇಂಗ್ಲೆಂಡ್ ಅರ್ತ್ ಸ್ಪರ್ಧೆಯ ಫೈನಲ್ ಹಂತಕ್ಕೆ ಏರಿದ್ದರು. 'ಮಿಸ್ ಇಂಡಿಯಾ ಪರ್ಸಾನಲಿಟಿ' ಕೂಡ ಆಗಿ ಮೋಡಿ ಮಾಡಿದ್ದರು.
ಗಗನ ಸಖಿ ಆಗುವ ಕನಸು ಕಂಡಿದ್ದರು ಭವ್ಯಾ ಗೌಡ. ಆದರೆ ತಾಯಿಗೆ ಮಗಳು ನಟಿಯಾಗಬೇಕು ಎನ್ನುವ ಆಸೆಯಿತ್ತು. ಹಾಗಾಗಿ ಧಾರಾವಾಹಿಯಲ್ಲಿ ನಟಿಸಲು ಆಡಿಷನ್ ಕೊಟ್ಟು ಆಯ್ಕೆ ಆಗಿದ್ದರು. ಬೆಂಗಳೂರಿನಲ್ಲಿ ಹುಟ್ಟಿಬೆಳೆದ ಭವ್ಯಾ ಗೌಡ ಬಿಕಾಂ ಪದವಿ ಪಡೆದಿದ್ದಾರೆ. ಗಗನ ಸಖಿ ಆಗುವುದಕ್ಕು ಪ್ರಯತ್ನ ಪಟ್ಟಿದ್ದರು. ಅಷ್ಟರಲ್ಲೇ ಧಾರಾವಾಹಿ ಅವಕಾಶ ಸಿಕ್ಕಿತ್ತು.
ಒಂದ್ಕಾಲದಲ್ಲಿ ಟಿಕ್‌ಟಾಕ್ ಮಾಡಿ ಭವ್ಯಾ ಗೌಡ ಫೇಮಸ್ ಆಗಿದ್ದರು. ಅದರಿಂದಲೇ 'ಗೀತಾ' ಧಾರಾವಾಹಿ ಅವಕಾಶ ಸಿಕ್ಕಿತು ಎಂದು ಕೆಲವರು ಟ್ರೋಲ್ ಮಾಡಿದ್ದರು. ಆದರೆ ಟಿಕ್‌ಟಾಕ್‌ಗೂ ಆಕೆ ಧಾರಾವಾಹಿಗೆ ಆಯ್ಕೆ ಆಗಿದ್ದಕ್ಕೂ ಸಂಬಂಧವೇ ಇಲ್ಲವಂತೆ. ಆಡಿಷನ್ ಕೊಟ್ಟು ಪ್ರತಿಭೆ ಪ್ರದರ್ಶಿಸಿ ಗೆದ್ದವರು.
ಎರಡ್ಮೂರು ವರ್ಷ ಧಾರಾವಾಹಿಯಲ್ಲಿ ನಟಿಸಿ ಬಳಿಕ ಚಿತ್ರರಂಗಕ್ಕೆ ಬರುವ ಆಲೋಚನೆ ಮಾಡಿದ್ದರು. 'ಡಿಯರ್ ಕಣ್ಮಣಿ' ಎನ್ನುವ ಚಿತ್ರದಲ್ಲೂ ಭವ್ಯಾ ಗೌಡ ನಟಿಸಿದ್ದಾರೆ. ಇನ್ನು ಹಿರಿಯ ನಟಿ ಯಮುನಾ ಗೌಡ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟ ದರ್ಶನ್ ಅಭಿಮಾನಿ ಕೂಡ ಹೌದು.
ಭರತನಾಟ್ಯ ಕಲಿತಿರುವ ಯಮುನಾ ಶ್ರೀನಿಧಿ 'ಅಮೃತಧಾರೆ' ಹಾಗೂ 'ಮನಸಾರೆ' ಸೇರಿದಂತೆ ಒಂದಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ತಾರಕ್' ಚಿತ್ರದಲ್ಲಿ ದರ್ಶನ್ ಜೊತೆ ಮಿಂಚಿದ್ದರು. ಮನೆಗೆ 2ನೇ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಬಂದ ಇವರಿಬ್ಬರನ್ನು ಒಟ್ಟೊಟ್ಟಿಗೆ ಕಿಚ್ಚ ದೊಡ್ಮನೆ ಒಳಗೆ ಕಳುಹಿಸಿದ್ದಾರೆ.
ಸ್ವರ್ಗ- ನರಕ ಕಾನ್ಸೆಪ್ಟ್ ಇದೆ. ಕೆಲವರನ್ನು ನರಕಕ್ಕೆ ಕಳುಹಿಸಬೇಕಾ? ನರಕಕ್ಕೇ ಕಳುಹಿಸಬೇಕಾ? ಎಂದು ವೀಕ್ಷಕರಿಗೆ ವೋಟ್ ಮಾಡಿ ಹೇಳುವಂತೆ ಹೇಳಿದ್ದಾರೆ. ಆದರೆ ಭವ್ಯಾ ಹಾಗೂ ಯಮುನಾ ಇಬ್ಬರನ್ನೂ ಸ್ವರ್ಗಕ್ಕೆ ಕಳುಹಿಸಿಕೊಡಲಾಗಿದೆ. ಅಂದಹಾಗೆ ಯಮುನಾ ಅವರು ನರಕಕ್ಕೆ ಹೋಗುವ ಆಸೆ ಪಟ್ಟಿದ್ದರು.


Click it and Unblock the Notifications











