BBK 11: ತ್ರಿವಿಕ್ರಂ ಬಂದ್ರು ಖುಷಿ ಪಡಂಗಿಲ್ಲ; ಕಣ್ಣೀರು ಹಾಕಿ ಬೇಡಿದ್ದಕ್ಕೆ ಚೈತ್ರಾಗೆ ದೇವಿ ವರ!

By ಎಸ್ ಸುಮಂತ್

ಈ ವಾರ ನೋ ಎಲಿಮಿನೇಷನ್ ಅನ್ನೋ ಮಾತು ಇತ್ತು. ಆದರೂ ತ್ರಿವಿಕ್ರಂ ಎಲಿಮಿನೇಟ್ ಆಯ್ತು. ಸುದೀಪ್ ಅವರು ಎಲಿಮಿನೇಟ್ ಮಾಡಿದ ರೀತಿ ನೋಡಿನೆ ವೀಕ್ಷಕರು ಫಿಕ್ಸ್ ಆಗಿದ್ರು. ಖಂಡಿತ ತ್ರಿವಿಕ್ರಂ ಹೊರಗೆ ಹೋಗಿರಲ್ಲ ಅಂತ. ಫ್ಯಾನ್ಸ್ ಕೂಡ ತ್ರಿವಿಕ್ರಂ ಕಮ್ ಬ್ಯಾಕ್ ಆಗಲಿ ಅಂತಾನೇ ಬಯಸಿದ್ದರು. ಇದೀಗ ತ್ರಿವಿಕ್ರಂ ಮನೆಗೆ ವಾಪಾಸ್ ಬಂದಿದ್ದಾರೆ.

ಇತ್ತೀಚೆಗೆ ತ್ರಿವಿಕ್ರಂ ಬರೀ ಭವ್ಯಾಗೋಸ್ಕರ ಆಟ ಆಡ್ತಾ ಇದ್ರು. ಭವ್ಯಾರನ್ನ ಕಾಳಜಿ ಮಾಡುವುದಕ್ಕೆ ಸಮಯ ತೆಗೆದುಕೊಳ್ತಾ ಇದ್ರು. ಇದೇ ಕಾರಣಕ್ಕೆ ತ್ರಿವಿಕ್ರಂನ ಎಚ್ಚೆತ್ತುಕೊಳ್ಳುವಂತೆ ಮಾಡಲು ಬಿಗ್ ಬಾಸ್ ಎಲಿಮಿನೇಷನ್ ಅನ್ನೋ ಭಯ ಹುಟ್ಟಿಸಿದೆ. ಇವೆನ್ ಮನೆ ಮಂದಿಗೂ ಶಾಕ್ ಆಗಿದೆ. ಅಂಡ್ ಕೆಲವರು ತ್ರಿವಿಕ್ರಂ ವಾಪಸ್ ಬರಬಹುದು ಅಂತಾನೇ ಅಭಿಪ್ರಾಯ ಪಟ್ಟಿದ್ದರು.

Bigg bOss kannada 11 chaithra kundapura cried and pray for God

ನೋವಾದರೂ ನಗುವ ಚೈತ್ರಾ

ಬಿಗ್ ಬಾಸ್ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಅವರವರೇ ಮಾಡಿಕೊಳ್ಳಬೇಕು ಅನ್ನೋದು ಗೊತ್ತಿರೋ ವಿಚಾರ. ಇಂದಿನ ಪ್ರೋಮೋದಲ್ಲಿ ಚೈತ್ರಾ, ರಜತ್ ಸೇರಿ ಅಡುಗೆ ಮನೆ ಸ್ವಚ್ಛ ಮಾಡ್ತಾ ಇದ್ರು. ಈ ವೇಳೆ ರಜತ್ ರೇಗಿಸಿದ್ದಾರೆ. ನಾನು ಕ್ಲೀನ್ ಮಾಡ್ಕೊಂಡು ಬಂದ್ರೆ ಚೈತ್ರಾ ಮತ್ತೆ ಗಲೀಜು ಮಾಡ್ಕೊಂಡು ಬರ್ತಾರೆ ಅಂತ. ಅದು ತಮಾಷೆಗಾಗಿಯೇ ಆದ್ರೂ ರಜತ್ ಮಾತು ಚೈತ್ರಾ ಮನಸ್ಸಿನ ಮೇಲೆ ಪರಿಣಾಮ ಬೀರುತ್ತಿದೆ. ಅತಿಯಾದಾಗ ಅಮೃತವೂ ವಿಷದಂತೆ ಅಲ್ವಾ..?

ದೇವರ ಮುಂದೆ ಕಣ್ಣೀರು

ಚೈತ್ರಾಗೆ ರಜತ್ ಆಡಿದ ಮಾತು, ಮನೆಯಲ್ಲಿ ಕೊಡುವ ಕಳಪೆ ಎಷ್ಟು ನೋವಾಗಿದೆ ಅನ್ನೋದನ್ನ ದೇವರ ಮುಂದೆ ಕೂತು ಬೇಡಿಕೊಳ್ಳುತ್ತಿದ್ದಾರೆ. 'ಸುಮ್ಮ ಸುಮ್ಮನೆ ಹೇಳುತ್ತಾರೆ. ಆರೋಪಗಳನ್ನ ಮಾಡುತ್ತಾರೆ. ಆ ಎಲ್ಲದರಿಂದ ಮುಕ್ತವಾಗಬೇಕು. ಸಾಬೀತು ಪಡಿಸದೆ ಹೋದರೆ ಎಲ್ಲರು ಮಾಡಿದ ಆರೋಪಗಳನ್ನ ತಲೆ ಮೇಲೆ ತೆಗೆದು ಕುಳಿತುಕೊಳ್ಳಬೇಕಾಗುತ್ತದೆ. ಸರಿ ಇಲ್ವಾ ನಾನು. ನಾಟಕ ಮಾಡ್ತಾ ಇದ್ದೀನಾ ನಾನು' ಎಂದು ಕಣ್ಣೀರು ಹಾಕಿದ್ದಾರೆ.

ಚೈತ್ರಾ ಬೇಡಿದ್ದಕ್ಕೆ ವರ

ಚೈತ್ರಾ ಮೂಲತಃ ಕುಂದಾಪುರದವರು. ಆ ಭಾಗದಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚು. ಬಿಗ್ ಬಾಸ್ ಮನೆಯಲ್ಲಿಯೇ ಒಮ್ಮೆ ಚೈತ್ರಾ ತನಗೆ ತಾನೇ ಪೂಜೆ ಮಾಡಿಕೊಂಡು ಸುದ್ದಿಯಾಗಿದ್ದರು. ಇದೀಗ ಇಂದು ದೇವರ ಬಳಿ ಕೂತು ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಇವರೆಲ್ಲ ಇಷ್ಟೊಂದು ಆರೋಪ ಮಾಡಿದ್ದಾರಲ್ಲ. ಸಮಯವೇ ಉತ್ತರ ಕೊಡುತ್ತೆ ಎಂದ ಕೂಡಲೇ ತಾಯಿ ಹೂ ಕೊಟ್ಟಿದ್ದಾಳೆ. ಈ ಪ್ರೋಮೋ ಇಂದು ಸಿಕ್ಕಾಪಟ್ಟೆ ಹೈಲೇಟ್ ಆಗಿದೆ. ಅಂದ್ರೆ ಚೈತ್ರಾ ಎಲ್ಲಾ ಆರೋಪಗಳಿಂದ ಮುಕ್ತರಾಗುತ್ತಾರಾ ನೋಡಬೇಕಿದೆ.

ತ್ರಿವಿಕ್ರಂ ಮನೆಗೆ ಎಂಟ್ರಿ

ಇನ್ನು ಎಲ್ಲರೂ ನಿರೀಕ್ಷೆ ಮಾಡುತ್ತಿದ್ದ ಸ್ಪರ್ಧಿ ತ್ರಿವಿಕ್ರಂ ಕಡೆಗೂ ಮನೆಗೆ ಎಂಟ್ರಿಯಾಗಿದ್ದಾರೆ. ಆದರೆ ಯಾರೂ ಖುಷಿ ಪಡುವಂತೆ ಇಲ್ಲ. ಅದರಲ್ಲೂ ಭವ್ಯಾಗೆ ತ್ರಿವಿಕ್ರಂನ ನೋಡಿ ಆಗಿರೋ ಖುಷಿ ಅಷ್ಟಿಷ್ಟಲ್ಲ. ಆದರೂ ತೋರಿಸಿಕೊಳ್ಳುವಂತಿಲ್ಲ. ಬಿಕಾಸ್ ಬಿಗ್ ಬಾಸ್ ಮನೆ ಮಂದಿಗೆ ಅಂತದ್ದೊಂದು ಟಾಸ್ಕ್ ಕೊಟ್ಟಿದೆ. ಮನೆಗೆ ಬಂದವರು ಏನೇ ಡಿಸ್ಟರ್ಬ್ ಮಾಡಿದರೂ ಆ ಕಡೆ ಗಮನ ಹೋಗುವಂತಿಲ್ಲ ಎಂದು ಹೀಗಾಗಿ ತ್ರಿವಿಕ್ರಂ ಬಂದರೂ ಎಲ್ಲರೂ ತಮ್ಮ ಪಾಡಿಗೆ ತಾವೂ ಕೆಲಸ ಮಾಡಿಕೊಂಡು ಕೂತಿದ್ದಾರೆ.

More from Filmibeat

English summary
BBK 11: Here is the details about Trivikram returns home.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X