BBK 11: ಬಾಲ್ಯದ ನೆನಪು ತರಿಸಿ, ಸ್ಪರ್ಧಿಗಳು ಕಣ್ಣಾರಾಕುವಂತೆ ಮಾಡಿದ ಬಿಗ್ ಬಾಸ್!

By ಎಸ್ ಸುಮಂತ್

ಎಲ್ಲರಿಗೂ ಬಾಲ್ಯದ ನೆನಪುಗಳು ಇರುತ್ತವೆ. ಅದೆಷ್ಟೇ ವಯಸ್ಸಾದರೂ ಆ ನೆನಪುಗಳು ಸುಂದರವಾಗಿಯೇ ಇರುತ್ತವೆ. ಮಕ್ಕಳಾಗಿದ್ದಾಗ ಪೋಷಕರು ತೆಗೆಸಿದ್ದಂತಹ ಫೋಟೋಗಳೇ ಇಂದಿಗೂ ಮನಸ್ಸಲ್ಲೊಂದು ಸಣ್ಣ ನಗು ಮೂಡಿಸುವುದು, ಹೀಗೆಲ್ಲ ಇದ್ವಾ ಎನಿಸುವುದು. ಹಾಗೇ ತಂದೆ ತಾಯಂದಿರು ನಾವೂ ಬಾಲ್ಯದಲ್ಲಿ ಹೇಗಿದ್ವಿ ಎಂಬುದನ್ನು ಹೇಳಿರುತ್ತಾರೆ. ಅದೆಲ್ಲವು ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕಣ್ಣ ಮುಂದೆ ಬರುತ್ತವೆ.

ಇಂದು ಬಿಗ್ ಬಾಸ್ ಮನೆಯಲ್ಲೂ ಮಕ್ಕಳ ದಿನಾಚರಣೆಯ ಅಂಗವಾಗಿ ಸ್ಪರ್ಧಿಗಳಿಗೂ ಬಾಲ್ಯದ ನೆನಪನ್ನು ಮರುಕಳುಹಿಸಿದೆ. ಎಲ್ಲರ ಬಾಲ್ಯದ ಫೋಟೋಗಳನ್ನು ಹಾಕಿ, ಖುಷಿ ತಂದಿದೆ. ಇದರ ಜೊತೆಗೆ ಮಗಳ ಡ್ರೆಸ್ ತೋರಿಸಿ, ಸುರೇಶ್ ಕಣ್ಣಲ್ಲಿ ನೀರು ತರಿಸಿದೆ. ತಿಂಗಳು ಗಟ್ಟಲೇ ಮಗಳನ್ನು ಬಿಟ್ಟಿರುವ ಸುರೇಶ್ ಗೆ ದುಃಖ ತಡೆಯಲಾಗಿಲ್ಲ.

bigg boss kannada 11 children s day special contestants Childhood memories

ತ್ರಿವಿಕ್ರಮ್ ಬಾಲ್ಯದ ನೆನಪು!

ಬಾಲ್ಯದಲ್ಲಿ ಯಾರ ಜೊತೆಗೂ ಅಷ್ಟೊಂದು ಸೇರ್ತಾ ಇರಲಿಲ್ಲ. ಆದರೆ ಒಮ್ಮೆ ಅಟ್ಟದ ಮೇಲಿಂದ ಬಿದ್ದು ಕೈ ಮುರಿದುಕೊಂಡು ಹೋಗಿ ಬಿಟ್ಟಿತ್ತು. ಆಸ್ಪತ್ರೆಯಲ್ಲಿ ಕೈ ಹೋಗಿ ಬಿಟ್ಟಿದೆ ಎಂದರು. ಆದರೆ ನಮ್ಮ ಅಪ್ಪ ಡಾಕ್ಟರ್ ಬಳಿ ಬೇಡಿಕೊಂಡು ನಂಗೆ ಕೈ ಬರುವಂತೆ ಮಾಡಿದರು. ಒಂದು ಆಪರೇಷನ್ ಮಾಡಿದ್ರು. ಕೈ ವರ್ಕ್ ಆಗ್ತಾ ಇರಲಿಲ್ಲ. ಆಪರೇಷನ್ ಮಾಡಿ ಒಂದು ನೀಡಲ್ ಒಳಗೆ ಬಿಟ್ಟಿದ್ದರು. ಮತ್ತೊಂದು ಆಪರೇಷನ್ ಮಾಡಬೇಕಾಯ್ತು. ಈಗಲೂ ಮೂರು ಬೆರಳು ವರ್ಕ್ ಆಗಲ್ಲ. ಪ್ರತಿದಿನ ನಮ್ಮ ಅಪ್ಪ ಅಮ್ಮನ ಆ ದಿನ ಕಷ್ಟ ಕಣ್ಣ ಮುಂದೆ ಬರುತ್ತೆ.

ಗೌತಮಿ ಬಾಲ್ಯದಲ್ಲಿ ಹೇಗಿದ್ರು

ಶನಿವಾರದಂದು ನಾಮ ಹಾಕ್ತಾ ಇದ್ವಿ. ಅದರ ಫೋಟೋ ಇದು. ಅಪ್ಪ ಅಮ್ಮ ವರ್ಕ್ ಹೋಗ್ತಾ ಇದ್ದ ಕಾರಣ ನನ್ನ ಮತ್ತು ತಮ್ಮನನ್ನ ಬೇಬಿ ಸಿಟ್ಟಿಂಗ್ ಕಳ್ಸಿದ್ರು. ನಮ್ಗೆ ಫಟಾಫಟ್ ತಿನ್ಬೇಕು ಅನ್ನಿಸಿತ್ತು. ಆಂಟಿ ಒಂದೂವರೆ ರೂಪಾಯಿ ಕೊಟ್ಟು ಕೊತ್ತಂಬರಿ ಸೊಪ್ಪು ತರುವುದಕ್ಕೆ ಹೇಳಿದ್ರು. ಅದರಲ್ಲಿ ಒಂದು ರೂಪಾತಿಗೆ ತಂದು ಫಟಾಫಟ್ ತಿಂದ್ವಿದ್ದೆ. ಆಂಟಿ ಆಚೆ ನಿಲ್ಸಿದ್ದಕ್ಕೆ ಅಂ್ಉ ಸುಳ್ಳು ಹೇಳಬಾರದು ಅನ್ನೋದನ್ನ ಕಲಿತೆ.

ಧರ್ಮ, ಶಿಶಿರ್ ಹೆಣ್ಣು‌ಮಗು ವೇಷ

'ಅಪ್ಪ ಅಮ್ಮನಿಗೆ ಹೆಣ್ಣು ಮಗು ಬೇಕು ಎಂಬ ಆಸೆ ಇದ್ದಿದ್ದಕ್ಕೆ ಹೆಣ್ಣು ಮಗು ಗೆಟಪ್ ಹಾಕಿದ್ರು' ಎಂಬುದನ್ನು ಶಿಶಿರ್ ಹೇಳಿದ್ರು. ಧರ್ಮ ಅವರಿಗೂ ಹೆಣ್ಣು ಮಗುವಿನ ವೇಷ ಹಾಕಿದ್ರು. ಆ ಫೋಟೋವನ್ನು ಬಿಗ್ ಬಾಸ್ ತೋರಿಸಿ ಎಲ್ಲರಿಗೂ ಗೆಸ್ ಮಾಡಲು ಹೇಳಿತ್ತು. ಕೂಡು ಕುಟುಂಬದಲ್ಲಿ ನಿಂತಿದ್ದ ಮಂಜು ಫೋಟೋ ತೋರಿಸಿದ ಬಿಗ್ ಬಾಸ್, ತಾಯಿಯ ಮೌಲ್ಯವನ್ನು ನೆನೆಯಲು ಅವಕಾಶ ಕೊಟ್ಟರು.

bigg boss kannada 11 children s day special contestants Childhood memories

ಹನುಮಂತ ಬಾಲ್ಯ ಹೇಗಿತ್ತು?

ನಮ್ಮ ಅಪ್ಪ ಮಾತ್ರ ಸರಿಯಾಗಿ ಹೊಡೆದವ್ನೆ. ನಮ್ಮ ಅಪ್ಪನಿಗೆ ಶಾಲೆ ಕಲಿಬೇಕು ಅನ್ನೋ ಆಸೆ ಇತ್ತು. ಆದರೆ ನಾನು ಕಲಿಲಿಲ್ಲ. ಆಮೇಲೆ ಕುರಿ ಕಾಯುವುದಕ್ಕೆ ಹೋದೆ. ಆಮೇಲೆ ಹಾಡು ಹಾಡಿಕೊಂಡು ಹೀಗೆ ಇದ್ದೀನಿ ಎಂದು ಹಂಚಿಕೊಂಡಿದ್ದಾರೆ.

ಮಗಳ ಬಟ್ಟೆ ಕಂಡು ಕಣ್ಣೀರಿಟ್ಟ ಸುರೇಶ್

ಸುರೇಶ್ ಅವರು ಬಿಗ್ ಬಾಸ್ ಶೋ ಬರುವುದಕ್ಕೂ ಮುನ್ನ ಮಗಳಿಗೆ ಒಂದು ಡ್ರೆಸ್ ಕೊಡಿಸಿ ಬಂದಿದ್ದರು. ಆ ಡ್ರೆಸ್ ಕಂಡು ಮಗಳ ನೆನಪು ಮಾಡಿಕೊಂಡು ಕಣ್ಣೀರು ಇಟ್ಟರು. ಇನ್ನು ಮೋಕ್ಷಿತಾ ಅವರ ಬಾಲ್ಯದ ಫೋಟೋ ತೋರಿಸಿದಾಗ, ಚಿಕ್ಕ ವಯಸ್ಸಿನಲ್ಲಿ ಮಾರ್ಕ್ಸ್ ಕಾರ್ಡ್ ತೋರಿಸಿ ಕಣ್ಣು ಊದಿಕೊಳ್ಳುವಷ್ಟು ಹೊಡೆತ ತಿಂದದ್ದನ್ನು ನೆನಪಿಸಿಕೊಂಡರು.

More from Filmibeat

English summary
BBK 11: Occasion of children's day bigg boss recalls Childhood memories of Bigg Boss contestants;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X