ಬಿಗ್ ಬಾಸ್ ಸ್ಪರ್ಧಿ ಅನುಷಾ ರೈ ನಟಿಸಿದ ಮೊದಲ ಸಿನಿಮಾ ಯಾವುದು ಗೊತ್ತೇ?
ಕನ್ನಡ ಬಿಗ್ ಬಾಸ್ 11 ಅತೀ ಹೆಚ್ಚು TRP ರೇಟಿಂಗ್ ನೊಂದಿಗೆ ಹೆಸರು ಪಡೆದ ರಿಯಾಲಿಟಿ ಶೋಗಳಲ್ಲಿ ಒಂದು. ಹಲವಾರು ಕನ್ನಡದ ನಟ ನಟಿಯರು ಈ ಶೋನಲ್ಲಿ ಭಾಗವಹಿಸಿದ್ದರು. 'ರೈಡರ್' ಸಿನಿಮಾ ಖ್ಯಾತಿಯ ಅನುಷಾ ರೈ ಕೂಡ ಅವರಲ್ಲಿ ಒಬ್ಬರು.
ಹೌದು, ಮೋಹಕ ಸೌಂದರ್ಯದ, ಸುಂದರ ನಗುವಿನ, ಮೃದು ಸ್ವಭಾವದ ಅನುಷಾ ಬಿಗ್ ಬಾಸ್ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಕಿಚ್ಚ ಸುದೀಪ್ ನಿರೂಣೆಯ ಬಿಗ್‌ಬಾಸ್‌ನಲ್ಲಿ ಅನುಷಾ ರೈ 5ನೇ ಸ್ಪರ್ಧಿಯಾಗಿ ಮನೆಯನ್ನು ಪ್ರವೇಶ ಮಾಡಿದ್ದರು. ರಿಯಾಲಿಟಿ ಶೋನಿಂದ ಸ್ವಲ್ಪ ಬೇಗ ಹೊರಗೆ ಬಂದವರಾದರೂ ಇವರ ಕ್ರೇಜ್ ಏನು ಕಮ್ಮಿಯಿಲ್ಲ.

ಅಲ್ಲದೆ ತಮ್ಮ ಹಲವು ವರ್ಷದ ಗೆಳೆಯ ಹಾಗೂ ಸಹ ನಟನಾದ ಧರ್ಮ ಅವರೊಂದಿಗೆ ಬಿಗ್ ಬಾಸ್ ಮನೆಯಲ್ಲೂ ಸ್ನೇಹದಿಂದ ಕಾಣಿಸಿಕೊಂಡಿದ್ದ ಅನುಷಾ ರೈ ಕಿರುತೆರೆ ವೀಕ್ಷಕರ ಮನೆ ಮಾತಾಗಿದ್ದರು. ಕೆಲವು ಅಭಿಮಾನಿಗಳಂತೂ ಇವರಿಗೆ ಪ್ರೇಮಿಗಳ ಪಟ್ಟ ಕಟ್ಟಿದ್ದರು. ಆದರೆ, ಬಿಗ್ ಬಾಸ್ ಮನೆಯಲ್ಲಿ ಆಗಲಿ, ಮನೆಯಿಂದ ಹೊರಗಡೆಯಾಗಲಿ ತಮ್ಮ ಪ್ರೀತಿಯ ಬಗ್ಗೆ ಎಲ್ಲೂ ಹೇಳಿಕೊಂಡಿಲ್ಲ.
ಅದೇನೇ ಇರಲಿ, 26 ವರ್ಷದ ಅನುಷಾ ರೈ ಕನ್ನಡ ಚಿತ್ರರಂಗದ ನಟಿಯಾಗಿ ಗುರುತಿಸಿಕೊಂಡವರು. ಹನುಮಂತ್ ರಾಜ್ ಮತ್ತು ಭಾಗ್ಯಾ ದಂಪತಿಯ ಮಗಳಾಗಿ1998ರ ಮೇ 4ರಂದು ತುಮಕೂರಿನಲ್ಲಿ ಜನಿಸಿದ ಅನುಷಾ ರೈ ಶಾಲಾ ಶಿಕ್ಷಣವನ್ನು ತುಮಕೂರಿನಲ್ಲಿ ಪೂರ್ಣಗೊಳಿಸಿದರು.
ಬೆಂಗಳೂರಿನ ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಸಿದ ನಟಿ ಕಾಲೇಜಿನಲ್ಲಿರುವಾಗಲೇ ಇವರು ಜನಪ್ರಿಯರಾಗಿದ್ದರು. ಕಾಲೇಜು ದಿನಗಳಲ್ಲೇ ರ್‍ಯಾಂಪ್ ವಾಕ್‌ನಲ್ಲಿ ಭಾಗವಹಿಸುತ್ತಿದ್ದ ನಟಿ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
ಇಂಜಿನಿಯರಿಂಗ್ ಓದಿದ ಅನುಷಾ ವೃತ್ತಿಜೀವನವನ್ನು ಕಟ್ಟಿಕೊಂಡಿದ್ದು ನಟನೆಯಲ್ಲಿ. 2017ರಲ್ಲಿ ತೆರೆಕಂಡ 'ಮಹಾನುಭಾವರು' ಸಿನಿಮಾದ ಮೂಲಕ ನಟಿ ಕನ್ನಡ ಚಿತ್ರರಂಗವನ್ನು ಪ್ರವೇಶ ಮಾಡಿದರು. ನಂತರ 'ದಮಯಂತಿ','ಬಿಎಂಡಬ್ಲ್ಯೂ', 'ಗೋಸಿ ಗ್ಯಾಂಗ್', 'ರೈಡರ್', 'ಖಡಕ್', 'ಪೆಂಟಗನ್', 'ಧೈರ್ಯಂ ಸರ್ವತ್ರ ಸಾಧನಂ', 'ಅಬ್ಬಬ್ಬಾ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾದಲ್ಲಿ ಮಾತ್ರವಲ್ಲದೆ 'ಅಣ್ಣಯ್ಯ', 'ಸರಯೂ', 'ರಾಜಕುಮಾರಿ' ಮುಂತಾದ ಧಾರಾವಾಹಿಗಳಲ್ಲಿಯೂ ಅನುಷಾ ರೈ ಕಾಣಿಸಿಕೊಂಡಿದ್ದಾರೆ. ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಇವರು ಪ್ರಾಣಿಗಳ ಆರೈಕೆಯಲ್ಲಿಯೂ ಎತ್ತಿದ ಕೈ. ಯಾಕೆಂದರೆ ನಟಿ ಅನುಷಾ ಅವರಿಗೆ ಪ್ರಾಣಿಗಳೆಂದರೆ ಅಚ್ಚು ಮೆಚ್ಚು. ಒಟ್ಟಿನಲ್ಲಿ ತಮ್ಮನ್ನು ಸದಾ ಕ್ರಿಯಾಶೀಲರಾಗಿ ಇಟ್ಟುಕೊಳ್ಳುವಲ್ಲಿ ಅನುಷಾ ರೈ ಸದಾ ಮುಂದೆ ಇರುತ್ತಾರೆ.


Click it and Unblock the Notifications











