ಕರಾವಳಿಯ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಮದ್ವೆ ಯಾವಾಗ ? ಇಲ್ಲಿದೆ ಉತ್ತರ..!
ಹಿಂದೂತ್ವವನ್ನು ಕಣ ಕಣದಲ್ಲಿ ತುಂಬಿಕೊಂಡು, ಕರಾವಳಿಯ ಫೈರ್ ಬ್ರ್ಯಾಂಡ್ ಎಂದೇ ಕರುನಾಡಿನೆಲ್ಲೆಡೆ ಹೆಸರುವಾಸಿಯಾದವರು ಚೈತ್ರಾ ಕುಂದಾಪುರ. ಮಂಗಳೂರಿನ ವಿಶ್ವವಿದ್ಯಾಲಯದಲ್ಲಿ ಪದವಿಯನ್ನು ಪಡೆದು ಆ ನಂತರ ನಿರೂಪಕಿಯಾಗಿ ಕೆಲಸವನ್ನು ಮಾಡಿದ ಚೈತ್ರಾ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮತಿಯ ಸದಸ್ಯೆ ಕೂಡ ಆಗಿದ್ದವರು. ಇನ್ನೂ ಪ್ರೇಮ ಪಾಶ ಎಂದ ಕೃತಿಯ ಲೇಖಕಿ ಕೂಡ ಹೌದು ಚೈತ್ರಾ ಕುಂದಾಪುರ.
ಇಂಥಾ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರ ಮದುವೆಯ ಕುರಿತು ಚರ್ಚೆಯಾಗಿತ್ತು. ಚೈತ್ರಾ ಅವರ ತಾಯಿ ಕೂಡ ಮದುವೆ ಮಾತುಗಳನ್ನಾಡಿದ್ದರು. ಚೈತ್ರಾ ಬಿಗ್ ಬಾಸ್‌ಗೆ ಹೋಗುವುದು ನಮಗೆ ಗೊತ್ತಿರಲಿಲ್ಲ, ಈ ವಿಚಾರ ಕೊನೆ ಕ್ಷಣದಲ್ಲಿ ನಮಗೆ ಗೊತ್ತಾಯ್ತು. ಹೀಗಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಮದುವೆ ಮಾಡಬೇಕು ಎಂದು ಹೇಳಿದ್ದರು.

ಚೈತ್ರಾ ಕುಂದಾಪುರ ಕೂಡ ಮದುವೆ ನಿಶ್ಚಯ ಮಾಡಿಕೊಂಡು ಬಂದಿದ್ದೀನಿ ನನ್ನ ಕ್ಯಾರೆಕ್ಟರ್ ವಿಷಯಕ್ಕೆ ಯಾವನಾದರೂ ಬಂದರೆ ಎಂದು ಬಿಗ್ ಬಾಸ್ ಮನೆಯಲ್ಲಿದ್ದಾಗ ಅವಾಜ್ ಹಾಕಿದ್ದರು. ಈಗ ಚೈತ್ರಾ ಮನೆಯಾಚೆ ಬಂದಿದ್ದಾರೆ. ಬಿಗ್ ಬಾಸ್‌ನ ತಮ್ಮ ಅನುಭವವನ್ನು ಮಾಧ್ಯಮದವರ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಹಲವಾರು ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇದೇ ಸಮಯದಲ್ಲಿ ತಮ್ಮ ಮದುವೆಯ ಬಗ್ಗೆ ಮದುವೆಯಾಗುವ ಹುಡುಗನ ಬಗ್ಗೆ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ.
ನನ್ನ ಮದುವೆ ಯಾವಾಗಲೋ ನಡೆಯಬೇಕಿತ್ತು. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂದಿರುವ ಚೈತ್ರಾ ಕುಂದಾಪುರ, ಮದುವೆ ಯಾವಾಗ ಎಂದು ನಮ್ಮ ಮನೆಯವರು ನಿರ್ಧಾರ ಮಾಡುತ್ತಾರೆ. ಈ ವಿಚಾರದಲ್ಲಿ ಮನೆಯವರ ನಡುವೆ ಮಾತುಕಥೆಗಳು ಇನ್ನು ನಡೆಯಬೇಕಿದೆ ಎಂದು ಹೇಳಿದ್ದಾರೆ. ನಾವೆಲ್ಲರೂ ಒಂದೊಳ್ಳೆ ಮುಹೂರ್ತಕ್ಕೆ ಕಾಯುತ್ತಿದ್ದೇವೆ, ನಮ್ಮ ಸಂಪ್ರದಾಯಗಳಲ್ಲಿ ಏನೆಲ್ಲ ನಡೆಯಬೇಕೋ ಮೊದಲು ಅದೆಲ್ಲವೂ ನಡೆಯಲಿ ಆ ನಂತರ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಆದರೆ ಮದುವೆ ವಿಚಾರ ಕೇಳುತ್ತಿದ್ದಂತೆಯೇ ನಾಚಿ ನೀರಾದ ಚೈತ್ರಾ ಎಲ್ಲಿಯೂ ಅಪ್ಪಿ ತಪ್ಪಿಯೂ ತಮ್ಮ ಹುಡುಗನ ಹೆಸರನ್ನು ಹೇಳಿಲ್ಲ.
ಇನ್ನು ಬಿಗ್ ಬಾಸ್ ಮನೆಯಲ್ಲಿದ್ದಾಗ ಇವರ ಮೇಕಪ್ ಮತ್ತು ಲಿಪ್‌ಸ್ಟಿಕ್ ಕುರಿತು ಕೂಡ ಚರ್ಚೆಯಾಗಿತ್ತು. ಬಿಗ್ ಬಾಸ್ ಮನೆಗೆ ಚೈತ್ರಾ ಬಹಳ ಮುಖ್ಯ ಸರ್. ಯಾವಾಗ ಹೇಗಿರಬೇಕು, ಕ್ಯಾಮರಾ ಎಲ್ಲಿದೆ, ಅಲ್ಲಿ ಹೇಗಿರಬೇಕು ಎಂಬುದೆಲ್ಲ ಗೊತ್ತು. ಬಿಗ್ ಬಾಸ್ ಅನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರೋದು ಚೈತ್ತಾ ಮಾತ್ರ. ಆದ್ರೆ ಶನಿವಾರ ಮಾತ್ರ ಲಿಪ್ ಸ್ಟಿಕ್ ಹಾಕಿ ಬರೋಲ್ಲ ಎಂದು ರಜತ್ ತಮ್ಮ ಬೇಸರ ಹೊರ ಹಾಕಿದ್ದರು. ಈ ಕುರಿತು ಕೂಡ ಮಾತನಾಡಿರುವ ಚೈತ್ರಾ ಮನೆಯಲ್ಲಿದ್ದ ಇತರರು ಲಿಪ್‌ಸ್ಟಿಕ್ ಕೈಯಲ್ಲೇ ಹಿಡಿದುಕೊಂಡು ಓಡಾಡುತ್ತಿದ್ದರು. ಆದ್ರೆ ನಾನು ಹಾಗಲ್ಲ. ನಾನು ಪದೇ ಪದೇ ಕನ್ನಡಿ ನೋಡ್ಕೊಂಡು ಮೇಕಪ್ ಮಾಡೋಳಲ್ಲ ಎಂದಿದ್ದಾರೆ. ಅಲ್ಲಿದ್ದ ಕೆಲವರು ಲಿಪ್‌ಸ್ಟಿಕ್‌ನ ಜೇಬಲ್ಲಿಯೇ ಇಟ್ಕೊಂಡು ತಿರುಗುತ್ತಿದ್ದರು ಎಂದಿರುವ ಚೈತ್ರಾ ಬೇರೆಯವರಂತೆ ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಸಂದರ್ಶನಗಳಲ್ಲಿ ತಮ್ಮ ಬಿಗ್ ಬಾಸ್ ಅನುಭವವನ್ನು ಕೂಡ ಹಂಚಿಕೊಂಡಿರುವ ಚೈತ್ರಾ ಬಿಗ್‌ಬಾಸ್ ನನಗೆ ಒಳ್ಳೆಯ ಹಾಗೂ ವಿಭಿನ್ನ ಅನುಭವ ನೀಡಿದೆ. ಅಲ್ಲಿ ನಾನು ಅನಿರೀಕ್ಷಿತವಾಗಿ ನರಕಕ್ಕೆ ಹೋದೆ. ಆಗಲೇ ನನ್ನ ಬಿಗ್‌ಬಾಸ್ ಪ್ರಯಾಣ ಶುರುವಾಗಿ ಅಲ್ಲಿ ಎಲ್ಲವನ್ನೂ ಎದುರಿಸಿದೆ ಎಂದಿದ್ದಾರೆ. ನನಗೆ ಬಿಗ್‌ಬಾಸ್ ಮನೇಲಿ ಅನ್ನದ ಬೆಲೆ, ಒಗ್ಗಟ್ಟಿನ ಬೆಲೆ ನಿಜವಾಗಿ ತಿಳಿಯಿತು. ಅಲ್ಲದೆ ನಾನು ಬದುಕಿನಲ್ಲಿ ಉಳಿಯುವುದು ಹೇಗೆ ಎಂಬ ಪಾಠವನ್ನೂ ಕಲಿತೆ. ಮುಖ್ಯವಾಗಿ ಜೀವನದಲ್ಲಿ ಏರುಪೇರಾದಾಗ ನಿಭಾಯಿಸುವುದು ಹೇಗೆ ಎಂಬುದನ್ನೂ ಚೆನ್ನಾಗಿ ಕಲಿತಿದ್ದೇನೆ ಎಂದು ಚೈತ್ರಾ ಹೇಳಿದ್ದಾರೆ.


Click it and Unblock the Notifications











