BBK 11: ಸುದೀಪ್ ಮುಂದೆ ಹನುಮಂತನ ಗರ್ಲ್ ಫ್ರೆಂಡ್; ಹಲ್ಲು ಮಾತ್ರ ಗೌತಮಿ ಥರ ಸೊಟ್ಟ ಇಲ್ಲ!

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಪಕ್ಕಾ ಮನರಂಜನೆ ನೀಡುತ್ತಿರುವುದು ಕುರಿಗಾಹಿ ಹನುಮಂತ. ಹಾಡುಗಳಿಂದಾನೇ ಮನೆಯವರನ್ನು ರಂಜಿಸಿ ಬಿಡುತ್ತಾರೆ. ಪೆದ್ದ ಅಲ್ಲದೆ ಹೋದರೂ ಮುಗ್ಧ ಎನ್ನುವುದಂತು ಸತ್ಯ. ಹನುಮಂತ ರಿಯಾಲಿಟಿ ಶೋಗೆ ಬಂದಿದ್ದಾನೆ. ಅಲ್ಲಿ ಯಾವ ರೀತಿ ಆಡಬೇಕೋ ಆ ರೀತಿ ಆಡುತ್ತಿದ್ದಾನೆ. ಸ್ಟಾಟರ್ಜಿ ಎಲ್ಲಾ ಮಾಡಲ್ಲ. ಬೈ ಲಕ್ ಹನುಮಂತ ಗೆಲ್ಲುತ್ತಿದ್ದಾರೆ. ಇದು ಮನೆಯವರಿಗೆ ಅಸಮಾಧಾನ ತರಿಸಿದೆ.

ಹನುಮಂತ ನಾಟಕದ ಮುಖವಾಡ ತೊಟ್ಟು, ಇಲ್ಲಿ ರಿಯಲ್ ಆಟ ಆಡುತ್ತಿದ್ದಾನೆ ಎಂದೇ ಎಲ್ಲರ ವಾದ. ಅದಕ್ಕೆ ಹನುಮಂತ ಏನು ಸುಮ್ಮನೆ ಇಲ್ಲ, ತಕ್ಕ ಉತ್ತರ ಕೊಟ್ಟಿದ್ದಾರೆ. ಆತ ಕೊಟ್ಟ ಉತ್ತರಕ್ಕೆ ಮನೆ ಮಂದಿ ತಣ್ಣಗಾಗಿದ್ದಾರೆ. ಇದರ ನಡುವೆ ಬಿಗ್ ಬಾಸ್ ವೇದಿಕೆಯಲ್ಲಿ, ಅದರಲ್ಲೂ ಸುದೀಪ್ ಅವರ ಮುಂದೆ ಹನುಮಂತನ ಹುಡುಗಿ ಪ್ರತ್ಯಕ್ಷವಾಗಿದ್ದಾಳೆ.

Bigg bOss kannada 11 contestant Hanumantha s Girl friend topic in sudeep s weekend show

ಹನುಮಂತನ ಕಷ್ಟ

ಬಿಗ್ ಬಾಸ್ ಮನೆಯಲ್ಲಿ ಹನುಮಂತ ತನ್ನ ಹುಡುಗಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಇದು ಎಲ್ಲರಿಗೂ ಗೊತ್ತಾಗಿದೆ. ಧನರಾಜ್ ಅವರಿಗೆ ಮಾತ್ರ ಹೇಳಿದ್ದರು. ಗೌತಮಿ ಬಲವಂತ ಮಾಡಿ ಕೇಳಿದರೂ ಕೂಡ ಹುಡುಗಿಯ ಹೆಸರನ್ನು ಹೇಳಿರಲಿಲ್ಲ. ಇದೀಗ ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ಹನುಮಂತನ ಹುಡುಗಿ ಬಗ್ಗೆ ಚರ್ಚೆಯಾಗಿದೆ.

ಫೋಟೋ ಕಂಡು ಶಾಕ್

ಹನುಮಂತ ಹುಡುಗಿಯನ್ನು ಮಿಸ್ ಮಾಡಿಕೊಳ್ಳುತ್ತಿರುವ ಬಗ್ಗೆಯೂ ಮಾತನಾಡಿದ್ದಾರೆ. ಈ ವೇಳೆ ಸುರೇಶ್ ಮಾವನಿಗೆ ಅವರ ಹುಡುಗಿಯ ಚಿತ್ರವನ್ನು ಬಿಡಿಸಲು ಹೇಳಿದ್ದಾರೆ. ಆದರೆ ಮೊದಲೇ ಹನುಮಂತ ಬೇಡ ಸರ್, ಇವ ನಮ್ ಹುಡುಗಿ ಚಿತ್ರ ಬಿಡಿಸುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಆದರೆ ಒಂದು ಪ್ರಯತ್ನವೆಂದು ಬಿಡಿಸಲು ಅವಕಾಶ ಕೊಟ್ಟರು. ಸುದೀಪ ಅವರ ಮಾತಿನಂತೆ, ತನ್ನುಡುಗಿ ಹೇಗಿದ್ದಾಳೆಂಬುದನ್ನು ಹೇಳಿದರು ಹನುಮಂತ. ಆದರೆ ಗೋಲ್ಡ್ ಸುರೇಶ್ ಅವರ ಹುಡುಗಿ ಚಿತ್ರವನ್ನು ದೆವ್ವದಂತೆ ಚಿತ್ರಿಸಿದರು. ಇದನ್ನು ಕಂಡು ಹನುಮಂತ ಬೆಚ್ಚಿಬಿದ್ದಿದ್ದರು.

ಸುಂದರವಾಗಿ ಬಿಡಿಸಿದ ಗೌತಮಿ

ಬಳಿಕ ಮತ್ತೊಂದು ಅವಕಾಶ ನೀಡಲಾಗಿತ್ತು. ಗೌತಮಿ ಅವರೇ ಬಿಡಿಸಲಿ ಎಂದು ಹೇಳಿದರು. ತಮ್ಮ ಹುಡುಗಿಯ ಕಣ್ಣು, ಮೂಗು, ಹೈಬ್ರೋ ಹೇಗಿದೆ ಅಂತ ಹೇಳಿದ ಹನುಮಂತ. ಜೊತೆಗೆ ಆ ಬ್ಯೂಟಿಯ ಕೂದಲು ಶೈನಿಯಾಗಿದೆಯಂತೆ. ಇದೆಲ್ಲವನ್ನೂ ಕೇಳಿಸಿಕೊಂಡ ಗೌತಮಿ ಒಂದು ಹಂತಕ್ಕೆ ಚಿತ್ರವನ್ನು ಬಿಡಿಸಿದರು. ಆ ಚಿತ್ರ ಒಂದು ಹಂತಕ್ಕೆ ಚೆನ್ನಾಗಿತ್ತು. ಹನುಮಂತು ಕೂಡ ಆ ಚಿತ್ರವನ್ನು ಚೆನ್ನಾಗಿದೆ ಅಂತ ಒಪ್ಪಿಕೊಂಡರೆ ವಿನಃ, ತನ್ನುಡುಗಿ ಹೇಗಿದ್ದಾರೆ, ಹೆಸರೇನು ಎಂಬುದನ್ನು ಮಾತ್ರ ಹೇಳಲಿಲ್ಲ.

ಹುಡುಗಿಗಾಗಿ ಹನುಮಂತ ಹಾಡು

ಸುದೀಪ್ ಅವರಿಗೆ ಬಿಗ್ ಬಾಸ್ ಮನೆಯ ಸ್ಪರ್ಧಿಗಳ ನಾಡಿ ಮಿಡಿತ ಚೆನ್ನಾಗಿಯೇ ಅರಿವಿರುತ್ತದೆ. ಹೀಗಾಗಿ ಅವರ ಸಮಸ್ಯೆಗಳನ್ನ ಆಲಿಸಿ, ಅಲ್ಲಿಯೇ ಪರಿಹಾರ ಕೊಡುವ ಪ್ರಯತ್ನ ಮಾಡುತ್ತಾರೆ. ಹೀಗಾಗಿ ಹನುಮಂತು ಅವರನ್ನು ಅಬ್ಸರ್ವ್ ಮಾಡಿದ್ದ ಕಿಚ್ಚ, ಇಂದು ಅವರ ಹುಡುಗಿ ಬಗ್ಗೆ ಮಾತಾಡಿ ಮನಸ್ಸನ್ನು ಹಗುರ ಮಾಡಿದ್ದಾರೆ. ಹುಡುಗಿಗಾಗಿ ಒಂದು ಹಾಡನ್ನು ಹಾಡಿ ತಮಗೆ ತಾವೇ ಖುಷಿ ಪಟ್ಟರು. ಮನಸ್ಸಿನಲ್ಲಿಯೇ ತನ್ನುಡುಗಿ ನೆನೆದು ಸಂತಸಗೊಂಡಿದ್ದು ವೇದಿಕೆ ಮೇಲೆ ಕಾಣಿಸುತ್ತಾ ಇತ್ತು.

More from Filmibeat

English summary
BBK 11: Here is the details about Hanumantha Lover on stage Super Sunday with Sudeepa;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X