"ರಂಗಣ್ಣ ಈಸ್ ಮೈ ಗಾಡ್, ತಪ್ಪಾಯ್ತಣ್ಣ ರಂಗಣ್ಣ "; ಪಬ್ಲಿಕ್ ಟಿವಿ ಎಚ್‌ ಆರ್‌ ರಂಗನಾಥ್‌ಗೆ ಲಾಯರ್ ಜಗದೀಶ್ ಕ್ಷಮೆ

By ಫಿಲ್ಮಿಬೀಟ್ ಡೆಸ್ಕ್

ಬಿಗ್‌ಬಾಸ್ ಮನೆಗೆ ಹೋದ ಮೇಲೆ ಲಾಯರ್ ಜಗದೀಶ್ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ಅವರಿಗ ಕರ್ನಾಟಕದ ಕ್ರಶ್ ಆಗಿಬಿಟ್ಟಿದ್ದಾರೆ. ಆದರೆ, ಇದೇ ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯೊಳಗೆ ಕಾಲಿಡುವುದಕ್ಕೂ ಮುನ್ನ ಗಣ್ಯರ ವಿರುದ್ಧ ಸಮರ ಸಾರಿದ್ದರು. ಅಂತಹವರಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾಗಿರುವ ಎಚ್‌.ಆರ್ ರಂಗನಾಥ್ ಕೂಡ ಒಬ್ಬರಾಗಿದ್ದರು.

ಲಾಯರ್ ಜಗದೀಶ್ ಅವರನ್ನು ಗೋವಾದಲ್ಲಿ ಬಂಧಿಸಲಾಗಿದೆ ಎಂಬ ಸುದ್ದಿಯನ್ನು ಪಬ್ಲಿಕ್ ಟಿವಿಯಲ್ಲಿ ಪ್ರಸಾರ ಮಾಡಲಾಗಿತ್ತು. ಅದನ್ನು ನೋಡಿ ಲಾಯರ್ ಜಗದೀಶ್ ಕೆರಳಿದ್ದರು. ಅಲ್ಲಿಂದ ಲಾಯರ್ ಜಗದೀಶ್ ರಂಪಾಟ ಶುರುವಾಗಿತ್ತು. ಪಬ್ಲಿಕ್ ಟಿವಿ ರಂಗನಾಥ್ ಅವರ ವಿರುದ್ಧ ಯೂಟ್ಯೂಬ್ ಚಾನೆಲ್‌ಗಳಲ್ಲಿ ಸಾಲು ಸಾಲು ವಿಡಿಯೋಗಳನ್ನು ಹರಿಬಿಟ್ಟಿದ್ದರು.

Bigg Boss Kannada 11 contestant Lawyer Jagadish apologized Public TV Ranganath

ಎಚ್‌.ಆರ್.ರಂಗನಾಥ್ ಅವರಿಗೆ ರಹಸ್ಯವನ್ನು ಬಯಲು ಮಾಡುತ್ತೇನೆ ಅಂತ ವಿಡಿಯೋದಲ್ಲಿ ಆಕ್ರೋಶ ಹೊರ ಹಾಕಿದ್ದರು. ಆದರೆ, ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್‌.ಆರ್ ರಂಗನಾಥ್ ಈ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಅಷ್ಟರೊಳಗೆ ಲಾಯರ್ ಜಗದೀಶ್ ಬಿಗ್‌ ಬಾಸ್ ಕನ್ನಡ ಸೀಸನ್ 11ರ ಮನೆಯೊಳಗೆ ಪ್ರವೇಶ ಮಾಡಿದ್ದರು. ಅಲ್ಲಿಗೆ ಇವರಿಬ್ಬರ ಜಟಾಪಟಿ ಅಲ್ಲಿಗೆ ನಿಂತಿತ್ತು. ಆದರೆ, ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಇಮೇಜ್ ಬದಲಾಗಿತ್ತು. ಸಾಲು ಸಾಲು ಸಂದರ್ಶನಗಳನ್ನು ನೀಡಿದ್ದರು. ಈ ವೇಳೆ ಸ್ಪೀಡ್ ಪ್ಲಸ್ ಕರ್ನಾಟಕಕ್ಕೆ ನೀಡಿದ ಸಂದರ್ಶನದಲ್ಲಿ ಕ್ಷಮೆಯಾಚಿಸಿದ್ದಾರೆ.

ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಸ್ಟಾರ್ ಆಗಿದ್ದರು. ಜನರು ಲಾಯರ್ ಜಗದೀಶ್ ಬೆಂಬಲಕ್ಕೆ ನಿಂತಿದ್ದರು. ಅವರನ್ನು ಮನೆಯಿಂದ ಹೊರಗೆ ಕಳುಹಿಸಿದ್ದಕ್ಕೆ ಜನರು ಆಕ್ರೋಶವನ್ನು ಹೊರ ಹಾಕಿದ್ದರು. ಕರ್ನಾಟಕದಾದ್ಯಂತ ವಕೀಲ್ ಸಾಬ್‌ಗೆ ಹೆಚ್ಚು ಬೆಂಬಲ ಸಿಗುತ್ತಿದ್ದಂತೆ ಮತ್ತೆ ಸಂದರ್ಶನದಲ್ಲಿ ಅವರ ವರಸೆ ಬದಲಾಗಿದೆ. ಈ ವೇಳೆ ಸ್ಪೀಡ್ ನ್ಯೂಸ್ ಕರ್ನಾಟಕದಲ್ಲಿ ತಮ್ಮ ಪಬ್ಲಿಕ್ ಟಿವಿ ರಂಗನಾಥ್ ಅವರಿಗೆ ಕ್ಷಮೆಯಾಚಿಸಿದ್ದಾರೆ.

Bigg Boss Kannada 11 contestant Lawyer Jagadish apologized Public TV Ranganath

"ಅವರು ಗುರುಗಳು ನಮಗೆ. ರಂಗಣ್ಣ ಏನು ಮಾಡಿಬಿಡುತ್ತಾರೆ, ಇಷ್ಟು ಅಗಲದಲ್ಲಿ ಕಳ್ಳಾಟ ಆಡುತ್ತಿದ್ದ ಜಗದೀಶ್ ಅನ್ನು ಅರೆಸ್ಟ್ ಮಾಡಿದ್ದಾರೆ ಅಂತ ಹಾಕಿದ್ದರು. ಅದನ್ನು ನೋಡಿ ನನಗೆ ಸ್ವಲ್ಪ ಬೇಜಾರಾಯ್ತು. ಕಡೆ ಪಕ್ಷ ಫುಲ್ ಪ್ಲೇಟ್‌ನಲ್ಲಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು. ಚಿಕ್ಕದಾಗಿ ಬರೆದ್ರಲ್ಲ. ಅದಕ್ಕೆ ಪಬ್ಲಿಕ್ ಟಿವಿಗೆ ಗುಮ್ಮಲೇಬೇಕು ಅಂತ ಡಿಸೈಡ್ ಮಾಡಿದೆ" ಎಂದು ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಹೇಳಿದ್ದಾರೆ.

ರವಿ ಬೆಳಗರೆ ಹಾಯ್ ಬೆಂಗಳೂರು ತರ ಪಬ್ಲಿಕ್ ಟಿವಿ ರಂಗಣ್ಣನನ್ನು ಕಾಯುತ್ತಾರೆ. ಅವರ ನನ್ನ ಸುದ್ದಿ ಮಾಡಿದ ರೀತಿ ಹಿಡಿಸಲಿಲ್ಲ ಎಂದು ಹೇಳಿದ್ದಾರೆ. "ಎರಡು ವರ್ಷ ನಾನು ಅಂಡರ್‌ಗ್ರೌಂಡ್ ಆಗಿದ್ದೆ. ಮಾಜಿ ಸಿಎಂ ಅನ್ನು ರೇಗಿಸಿದ್ದೆ. ಯಾವುದೋ ಕಾರಣಕ್ಕೆ ನನ್ನದೇ ವ್ಯವಸ್ಥೆಯಲ್ಲಿ ಗೋವಾದಲ್ಲಿ ಇದ್ದೆ. ಇವರು ಹೇಳಿ ನನ್ನನ್ನು ಅರೆಸ್ಟ್ ಮಾಡಿಸುತ್ತಾರೆ. ಜಾಮೀನು ತೆಗೆದುಕೊಂಡು ಹೊರಗೆ ಬಂದಿದ್ದೇನೆ. ಆ ವೇಳೆ ಪಬ್ಲಿಕ್ ಟಿವಿ ರಂಗಣ್ಣ ಏನು ಮಾಡಿದ್ದಾರೆ. ಇಷ್ಟು ಅಗಲದಲ್ಲಿ ಕಳ್ಳಾಟ ಆಡುತ್ತಿದ್ದ ಜಗದೀಶ್ ಅಂತ ಹಾಕಿದ್ದರು. ಅದು ಬೇಜಾರಾಯ್ತು." ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

ಹಾಗೇ ಕಿರಿಕ್ ಕೀರ್ತಿ ಸಮ್ಮುಖದಲ್ಲಿ ಎಚ್‌ ಆರ್ ರಂಗನಾಥ್ ಅವರಿಗೆ ಕ್ಷಮೆಯನ್ನು ಹೇಳಿದ್ದಾರೆ. "ಅದೇನೋ ಗೊತ್ತಿಲ್ಲ ನಾನು ಹಾಗೂ ರಂಗಣ್ಣ ಇಬ್ಬರೂ ವಿಲನ್‌ಗಳಾಗಿದ್ದೇವೆ. ಸಾರಿ ರಂಗಣ್ಣ ಕ್ಷಮಿಸಿ ಬಿಡಿ ರಂಗಣ್ಣ. ನೆಗೆಟಿವ್ ಎಲ್ಲಾರಲ್ಲೂ ಇರುತ್ತೆ ಸಾರ್. ಸಮಾಜಕ್ಕೆ ತುಂಬಾನೇ ಕೊಡುಗೆ ಕೊಟ್ಟಿದ್ದಾರೆ. ರಂಗಣ್ಣನನ್ನು ತುಂಬಾನೇ ಗೋಳು ಹೊಯ್ದುಕೊಂಡಿದ್ದೇನೆ. ನಮ್ಮ ಮನೆಗೆ ಪೂಜೆ ಮಾಡೋ ಬರುವ ಐನೋರು ಹಂಗೆಲ್ಲ ಮಾಡಬೇಡ ಅಂತ ನನ್ನ ಹೆಂಡ್ತಿ ಹತ್ರ ಹೇಳಿದ್ರಂತೆ. ರಂಗಣ್ಣ ಈಸ್ ಮೈ ಗಾಡ್. ರಂಗಣ್ಣ ತಪ್ಪಾಯ್ತಣ್ಣ." ಎಂದು ಲಾಯರ್ ಜಗದೀಶ್ ಹೇಳಿದ್ದಾರೆ.

More from Filmibeat

English summary
Bigg Boss Kannada 11 contestant Lawyer Jagadish apologized Public TV Ranganath;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X