BBK 11: ಮೋಕ್ಷಿತಾ ಪರ ನಿಂತ ರಜತ್ ಪತ್ನಿ; ಅಷ್ಟಕ್ಕೂ ಅಕ್ಷಿತಾ ಹೇಳಿದ್ದೇನು?
ಈ ಬಾರಿಯ ಬಿಗ್ ಬಾಸ್‌ನಲ್ಲಿ ರಜತ್ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಂದ್ರು ಕೂಡ ಸಿಕ್ಕಾಪಟ್ಟೆ ರಗಡ್ ಆಗಿನೇ ಆಟ ಆಡ್ತಾ ಇದ್ದಾರೆ. ಈ ಸೀಸನ್‌ನ ಸ್ಪೆಷಲ್ ಏನು ಅಂದ್ರೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದಂತ ಹನುಮಂತ ಹಾಗೂ ರಜತ್ ಫೈನಲ್ ತನಕ ಬರ್ತಿದ್ದಾರೆ.
ಈಗಾಗಲೇ ಕೆಲವೊಂದು ಟ್ರೋಲ್ ಪೇಜ್‌ಗಳು ಫೈನಲಿಸ್ಟ್ ಇವರೇ ಇರಬಹುದು ಎಂಬ ಹೆಸರುಗಳನ್ನ ಸೂಚಿಸುತ್ತಿದ್ದಾರೆ. ಅದರಲ್ಲಿ ರಜತ್, ಹನುಮಂತ ಕೂಡ ಇದ್ದಾರೆ.

ಮನೆಯೊಳಗೆ ರಜತ್ ಫುಲ್ ಸದ್ದು ಮಾಡ್ತಿದ್ರೆ ಹೊರಗೆ ಅವರ ಪತ್ನಿ ಅಕ್ಷಿತಾ ಕೂಡ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ರಜತ್ ಹಾಗೂ ಅಕ್ಷಿತಾ ಇಬ್ಬರು ಕೂಡ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಇದೀಗ ಮೋಕ್ಷಿತಾ ಬಗ್ಗೆ ಮಾತನಾಡಿ, ಅವರ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದಿದ್ದಾರೆ.
ಮೋಕ್ಷಿತಾ ಮೇಲೆ ಮಗುವಿನ ಕಿಡ್ನ್ಯಾಪ್ ಕೇಸ್
ಬಹಳ ಹಿಂದೆಯೇ ಮೋಕ್ಷಿತಾ ಮೇಲೆ ಕೇಸು
ಇತ್ತೀಚೆಗಷ್ಟೇ ಮೋಕ್ಷಿತಾ ಮೇಲೆ ಕೇಸೊಂದು ಇದ್ದದ್ದು ಪ್ರಚಾರವಾಗಿತ್ತು. ಶಿಕ್ಷಣ ಮುಗಿಸಿ, ಟ್ಯೂಷನ್ ಮಾಡುತ್ತಿದ್ದರು. ಆದರೆ ಆಮೇಲೆ ಹಣಕ್ಕಾಗಿ ಮಗುವನ್ನೇ ಕಿಡ್ನ್ಯಾಪ್ ಮಾಡಿದ್ದ ಆರೋಪ ಅವರ ಮೇಲಿತ್ತು. ಹಾಗೇ ಆ ಹಳೆಯ ವಿಡಿಯೋ ವೈರಲ್ ಆಗಿತ್ತು. ಮೋಕ್ಷಿತಾ ಮುಗ್ಧತೆಯ ಹಿಂದೊಂದು ಇಂಥ ಕರಾಳ ಮುಖ ಇತ್ತ ಎಂಬಂಥ ಚರ್ಚೆಗಳು ಶುರುವಾಗಿತ್ತು.
ಮೋಕ್ಷಿತಾ ಪರ ಮಾತಾಡಿದ ಅಕ್ಷಿತಾ
ಈ ವಿಚಾರವಾಗಿ ರಜತ್ ಪತ್ನಿ ಅಕ್ಷತಾ ಮಾತನಾಡಿದ್ದಾರೆ. ಪಬ್ಲಿಕ್ ನೆಲ್ಸ್ಟ್ ಚಾನೆಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿ, "ಮೋಕ್ಷಿತಾ ಬಗ್ಗೆ ಸುಮ್ಮನೆ ಆರೋಪ ಮಾಡ್ತಾ ಇದಾರೆ. ಅಲ್ಲ ಅದು ಸತ್ಯ ಅಂತ ಹೇಗೆ ನಂಬೋದು. ಯಾರಿಗೆ ಗೊತ್ತು ಅದರ ಹಿಂದಿನ ಸತ್ಯ. ಈಗ ಎಷ್ಟು ಜನ ಆ ಸುದ್ದಿ ನೋಡಿರುತ್ತಾರೆ. ಪಾಪ ಆ ಹುಡುಗಿ ಹೊರಗೆ ಬಂದ ಮೇಲೆ ಆ ಸುದ್ದಿ ನೋಡಿದರೆ ಅವಳ ಮನಸ್ಥಿತಿ ಏನಾಗುತ್ತದೆ. ಮಾಡುವುದಕ್ಕೆ ಆದರೆ ಒಳ್ಳೆಯದ್ದನ್ನೇ ಮಾಡಬೇಕು. ಇಲ್ಲವಾದರೆ ಸುಮ್ಮನೆ ಇರಬೇಕು" ಎಂದಿದ್ದಾರೆ.
ಎಲ್ಲರಿಗೂ ಇಷ್ಟವಾಯ್ತು ಅಕ್ಷಿತಾ ನಡೆ
ಈ ರೀತಿಯ ಮಾತು ಅಷ್ಟು ಸುಲಭವಾಗಿ ಎಲ್ಲರ ಬಾಯಿಂದ ಬರುವುದಿಲ್ಲ. ಆದರೆ ಮೋಕ್ಷಿತಾ ಬಗ್ಗೆ ಇಷ್ಟು ಒಳ್ಳೆಯ ಮಾತುಗಳನ್ನ ಆಡಿದ್ದಕ್ಕೆ ಮೋಕ್ಷಿತಾ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ. ಟ್ರೋಲ್ ಪೇಜ್‌ಗಳು ಕೂಡ ಅಕ್ಷಿತಾ ಅವರ ಮಾತುಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಗಂಡನಿಗೆ ಬೆಂಬಲ
ಅಕ್ಷಿತಾ ಹಾಗೂ ರಜತ್‌ಗೆ ಇಬ್ಬರು ಮಕ್ಕಳು. ಸಖತ್ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಮಿಂಚುತ್ತಿದ್ದಾರೆ. ಇನ್ನು ಈ ಇಬ್ಬರು ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದು, ರಾಜಾ-ರಾಣಿ ಶೋನಲ್ಲೂ ಭಾಗಿಯಾಗಿದ್ದರು. ಹಾಗೇ ಅಕ್ಷಿತಾ ಅವರು 'ಪ್ಯಾಟೇ ಹುಡ್ಗಿರ್ ಹಳ್ಳಿ ಲೈಫ್' ಸೀಸನ್- 3 ಹಾಗೂ 'ಸೂಪರ್ ಜೋಡಿ'ಯಲ್ಲೂ ಗೆದ್ದು ಬಂದಿದ್ದಾರೆ. ಸದ್ಯ ರಜತ್ ಬಿಗ್ ಬಾಸ್ ಮನೆಯಲ್ಲಿ ರಫ್ ಅಂಡ್ ಟಫ್ ಆಗಿ ಆಟ ಆಡ್ತಾ ಇದ್ದು, ಅವರೇ ವಿನ್ ಆಗ್ಲಿ ಅಂತ ಸಪೋರ್ಟ್ ಮಾಡ್ತಾ ಇದಾರೆ.


Click it and Unblock the Notifications











