BBK 11: ಟಾಸ್ಕ್ ವೇಳೆ ಗಾಯಗೊಂಡ ಸ್ಪರ್ಧಿ? ಆಸ್ಪತ್ರೆಗೆ ದಾಖಲು?
ಕಲರ್ಸ್ ಕನ್ನಡ ಬಿಗ್‌ಬಾಸ್ ಸೀಸನ್ 11 ಶುರುವಾಗಿ 5 ದಿನಗಳಾಗಿದೆ. ಈಗಾಗಲೇ ಕೆಲವರು ಅಸಲಿ ಆಟ ಆಡಲು ಆರಂಭಿಸಿದ್ದಾರೆ. ಟಾಸ್ಕ್‌ಗಳು ಕೂಡ ಕೊಡಲಾಗುತ್ತಿದೆ. ಇದೀಗ ಟಾಸ್ಕ್ ವೇಳೆ ತ್ರಿವಿಕ್ರಮ್ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಗ್‌ಬಾಸ್ ಮನೆಯಲ್ಲಿ ಕೊಡುವ ಕೆಲ ಫಿಸಿಕಲ್ ಟಾಸ್ಕ್‌ಗಳನ್ನು ಮಾಡುವಾಗ ಅವಘಡಗಳು ಸಂಭವಿಸುತ್ತವೆ. ಕೆಲವೊಮ್ಮೆ ಗಾಯಗೊಂಡು ಸ್ಪರ್ಧಿಗಳು ಆಸ್ಪತ್ರೆ ಸೇರಿರುವ ಉದಾಹರಣೆ ಕೂಡ ಇದೆ. ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಕೂಡ ಡ್ರೋನ್ ಪ್ರತಾಪ್ ಹಾಗೂ ಸಂಗೀತಾ ಕಣ್ಣಿಗೆ ಕೊಂಚ ಹಾನಿಯಾಗಿ ಚಿಕಿತ್ಸೆ ಪಡೆಯುವಂತಾಗಿತ್ತು. ಬಳಿಕ ಮತ್ತೆ ದೊಡ್ಮನೆ ಒಳಗೆ ಇಬ್ಬರೂ ಎಂಟ್ರಿ ಕೊಟ್ಟಿದ್ದರು.

ಈ ಬಾರಿಯ ಬಿಗ್‌ಬಾಸ್ ಶೋನಲ್ಲಿ 5ನೇ ದಿನ ಒಂದು ಟಾಸ್ಕ್ ಕೊಡಲಾಗಿತ್ತು. ಬ್ಯಾಸ್ಕೆಟ್ ಬಾಲ್ ಚೆಂಡುಗಳು ಸಂಗ್ರಹಿಸಿ ಸ್ಪರ್ಧಿಗಳು ತಮ್ಮ ಗೋಲ್‌ನಲ್ಲಿ ಇರಬೇಕಿತ್ತು. ಎದುರಾಳಿ ತಂಡದವರು ಅದನ್ನು ತಡೆಯಬೇಕಿತ್ತು. ಈ ವೇಳೆ ಚೆಂಡಿಗಾಗಿ ಸ್ಪರ್ಧಿಗಳ ನಡುವೆ ಭಾರೀ ಜಟಾಪಟಿಯೇ ನಡೆದಿದೆ. ಈ ವೇಳೆ ಬಹಳ ಅಗ್ರೆಸ್ಸಿವ್ ಆಗಿ ಆಡುತ್ತಿದ್ದ ತ್ರಿವಿಕ್ರಮ್ ಗಾಯಗೊಂಡಿದ್ದಾರೆ ಎನ್ನಲಾಗ್ತಿದೆ.
ಗಾಯಗೊಂಡ ತ್ರಿವಿಕ್ರಮ್ ಅವರನ್ನು ಅಲ್ಲಿಂದ ಕನ್ಪೆಷನ್ ರೂಮ್‌ಗೆ ಕರೆತರುವಂತೆ ಹೇಳಲಾಗಿತ್ತು. ಬಳಿಕ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡು ಮತ್ತೆ ವಾಪಸ್ ಆಗಿದ್ದಾರೆ ಎನ್ನಲಾಗ್ತಿದೆ. ಈ ಟಾಸ್ಕ್‌ನ ಪ್ರೋಮೊವೊಂದು ವೈರಲ್ ಆಗುತ್ತಿದೆ. ಅದರಲ್ಲಿ ಚೆಂಡು ಕಬಳಿಸುವ ವೇಳೆ ಶಿಶಿರ್ ಕೂಡ ಕೆಳಗೆ ಬಿದ್ದಿರುವುದನ್ನು ನೋಡಬಹುದು. ಗೋಲ್ಡ್ ಸುರೇಶ್ ಸಹ ಟಾಸ್ಕ್ ವೇಳೆ ಗಾಯಗೊಂಡಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನುಳಿದಂತೆ ಬಿಗ್‌ಬಾಸ್ ಮನೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಲಾಯರ್ ಜಗದೀಶ್ ಆರ್ಭಟ ಜೋರಾಗಿದ್ದು ಬೇರೆ ಸ್ಪರ್ಧಿಗಳು ಸೈಲೆಂಟ್ ಆಗುವಂತೆ ಮಾಡುತ್ತಿದ್ದಾರೆ. ಚೈತ್ರಾ ಕುಂದಾಪುರ ಅವರಿಗಿಂತಲೂ ಜಗದೀಶ್ ಮಾತು, ಅರಚಾಟ, ಚೀರಾಟ ಜೋರಾಗಿದೆ. ಎಲ್ಲರಿಗೂ ಸವಾಲ್ ಹಾಕುತ್ತಾ ತಮ್ಮ ಆಟ ಆಡಲು ಆರಂಭಿಸಿದ್ದಾರೆ.
ಸ್ಪರ್ಧಿಗಳ ಕಿರುಚಾಟದ ನಡುವೆ ಕೆಲವರು ಅಳುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತಿದೆ. ಇತ್ತೀಚೆಗೆ ನೀಡಿದ ಟಾಸ್ಕ್ ವೇಳೆ ಜಗದೀಶ್ ಕಿರುಚಾಡಿದ್ದರು. ಬಳಿಕ ಧನರಾಜ್ ಕನ್ಪೆಷನ್ ರೂಮ್‌ಗೆ ಬಂದು ಅತ್ತಿದ್ದರು. ಇತ್ತೀಚೆಗೆ ಗೋಲ್ಡ್ ಸುರೇಶ್ ಮಾತಿಗೆ ಐಶ್ವರ್ಯ ಸಿಂಧೊಗಿ ಕೂಡ ಭಾವುಕರಾಗಿರುವುದನ್ನು ನೋಡಬಹುದು. ಧರ್ಮ ಕೀರ್ತಿರಾಜ್ ಮೇಲೆ ಅನುಷಾ ಹಾಗೂ ಐಶ್ವರ್ಯಾಗೆ ಲೈಟ್ ಆಗಿ ಲವ್ವಾದಂತೆ ಕಾಣುತ್ತಿದೆ.


Click it and Unblock the Notifications











