BBK 11: ತ್ರಿವಿಕ್ರಮ್-ಶಿಶಿರ್ : ಫೈನಲ್ ಪ್ರವೇಶಿಸೋದು ಯಾರು..? ಇಂದೇ ನಿರ್ಧರಿಸಿದ್ದು ಹೇಗೆ ಗೊತ್ತಾ..?
ಬಿಗ್ ಬಾಸ್ ಸೀಸನ್ 11ಗೆ ಸ್ಪರ್ಧಿಯಾಗಿ ಶಿಶಿರ್ ಶಾಸ್ತ್ರಿ ಹಾಗೂ ತ್ರಿವಿಕ್ರಮ್ ಎಂಟ್ರಿ ಕೊಟ್ಟಿದ್ದಾರೆ. ಈ ಬಾರಿ ನರಕ ಮತ್ತು ಸ್ವರ್ಗ ಎಂಬ ವಿಶೇಷ ಕಾನ್ಸೆಪ್ಟ್ ಜೊತೆಗೆ ಒಟ್ಟಿಗೆ ಇಬ್ಬರನ್ನು ಕರೆಸಿ, ಜೊತೆಯಾಗಿ ಮನೆಯೊಳಗೆ ಕಳುಹಿಸುತ್ತಿರುವುದು ವಿಶೇಷವಾಗಿದೆ. ವೇದಿಕೆ ಮೇಲೆಯೇ ಒಬ್ಬರಿಗೊಬ್ಬರ ನಡುವೆ ಬಾಂಧವ್ಯ ಗಟ್ಟಿಯಾಗುವುದಕ್ಕೆ ಇದೊಂದು ರೀತಿಯಲ್ಲಿ ಚೆನ್ನಾಗಿದೆ.
ಈ ಮೊದಲೆಲ್ಲಾ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಒಳಗೆ ಹೋದಾಗ ಮಾತ್ರ ಅಲ್ಲಿ ತಮ್ಮ ಪರಿಚಯದವರು ಯಾರೆಂದು ಗೊತ್ತು ಮಾಡಿಕೊಳ್ಳುವ ಅವಕಾಶವಿತ್ತು. ಆದರೆ ವೇದಿಕೆ ಮೇಲೆಯೇ ಸ್ನೇಹಿತರು ಸಿಗುತ್ತಿದ್ದಾರೆ. ಮನೆಯೊಳಗೆ ಹೋಗಿ ಹೊಂದಿಕೊಳ್ಳಲು ಇದು ಸುಲಭ. ಇದೀಗ ತ್ರಿವಿಕ್ರಮ್ ಹಾಗೂ ಶಿಶಿರ್ ಒಟ್ಟಿಗೆ ಹೋಗಿದ್ದಾರೆ. ಖುಷಿ ವಿಚಾರ ಅಂದ್ರೆ ಅವರಿಬ್ಬರು ಎಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಇರ್ತಾರೆ ಎಂಬುದನ್ನು ಮಾನಸ ವೇದಿಕೆ ಮೇಲೆಯೇ ನಿರ್ಧಾರ ಮಾಡಿದ್ದಾರೆ.

ನಟ ಶಿಶಿರ್ ಶಾಸ್ತ್ರಿ ಎಂಟ್ರಿ
'ಕುಲವಧು', 'ಸೊಸೆ ತಂದ ಸೌಭಾಗ್ಯ', 'ಸೇವಂತಿ' ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದಂತ ಶಿಶಿರ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದಾರೆ. ರಿಯಲ್ ಶಿಶಿರ್ ಬೇರೆನೆ ಇದ್ದು, ಈ ಬಿಗ್ ಬಾಸ್ ಮೂಲಕ ಪ್ರೂವ್ ಮಾಡುವುದಕ್ಕೆ ಬರ್ತಾ ಇದ್ದೀನಿ ಅಂತಾನೇ ನಿರ್ಧರಿಸಿ ಬಂದಿದ್ದಾರೆ. ಸಿನಿಮಾ, ಸೀರಿಯಲ್ ಅವಕಾಶಕ್ಕಾಗಿ ಶಿಶಿರ್ ಸಾಕಷ್ಟು ಅಲೆದಾಡಿದ್ದಾರೆ. ಸಿಕ್ಕ ಅವಕಾಶಗಳಲ್ಲಿ ಗೆದ್ದು ತೋರಿಸಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ನರಕಕ್ಕೆ ಹೋಗಿದ್ದಾರೆ.
ತ್ರಿವಿಕ್ರಮ್ ಬಿಗ್ ಬಾಸ್ ಬಂದಿದ್ದೇಕೆ..?
ಸದ್ಯ ತ್ರಿವಿಕ್ರಮ್ ಸ್ವರ್ಗಕ್ಕೆ ಹೋಗಿದ್ದಾರೆ. ಒಂದು ಮಿಡಲ್ ಕ್ಲಾಸ್ ನಿಂದ ಬಂದ ತ್ರಿವಿಕ್ರಮ್, ಗೆಲ್ಲುವುದು ಬಹಳ ಮುಖ್ಯ ಎಂಬ ಗುರಿ ಹೊಂದಿದ್ದಾರೆ. ಆ ಗುರಿ ತಲುಪಲು ಹಲವು ವೇದಿಕೆಗಳನ್ನು ಏರಬೇಕೆಂದುಕೊಂಡು ಬಿಗದ ಬಾಸ್ ಒಪ್ಪಿದ್ದಾರೆ. ತ್ರಿವಿಕ್ರಮ್‌ಗೆ ನಟನಾಗುವ ಯಾವ ಆಸೆಯೂ ಇರಲಿಲ್ಲ. ಕ್ರಿಕೆಟರ್ ಆಗಬೇಕು ಎಂದೇ ಬೆಂಗಳೂರಿಗೆ ಬಂದವರು. ಆರಂಭದಲ್ಲಿ ಜಿಮ್ ಟ್ರೈನರ್ ಆಗಿ ಸೇರಿದ್ದರು. ಆದರೆ ಕೈಗೆ ಸಮಸ್ಯೆ ಆದಾಗ, ಭಾರ ಎತ್ತುವಂತೆ ಇರಲಿಲ್ಲ. ಆಮೇಲೆ ನಟನೆ ಕಡೆಗೆ ಬಂದರು. ಒಳ್ಳೊಳ್ಳೆ ಅವಕಾಶ ಸಿಗುತ್ತಿರುವಾಗಲೇ ಲಾಕ್ಡೌನ್ ಆಯ್ತು. ಆಗ ತ್ರಿವಿಕ್ರಮ್‌ಗೆ ಹೊಡೆತ ಬಿದ್ದಿತ್ತು. ಅಡುಗೆ ಕಲಿತಿದ್ದಾರೆ, ಸ್ಪೋರ್ಟ್ ಪ್ರಾಕ್ಟೀಸ್ ಇದೆ, ಜಿಮ್ ಟ್ರೈನರ್ ಈ ಎಲ್ಲಾ ಟ್ಯಾಲೆಂಟ್ ಇರುವ ತ್ರಿವಿಕ್ರಮ್ ಗೆ ಬಿಗ್ ಬಾಸ್ ಒಳಗೆ ಅಡ್ಜೆಸ್ಟ್ ಆಗಲು ಸುಲಭ ದಾರಿಯಾಗಿದೆ.
ಮಾನಸ ಬೆಂಬಲ ತ್ರಿವಿಕ್ರಮ್‌ಗೆ
ತುಕಾಲಿ ಸಂತೋಷ್ ಹೆಂಡತಿ ಮಾನಸ ಈ ಬಾರಿಯ ಬಿಗ್ ಬಾಸ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಿಶಿರ್ ಹಾಗೂ ತ್ರಿವಿಕ್ರಮ್ ನನ್ನು ನಿಲ್ಲಿಸಿ, ಮಾನಸ ಅವರ ಬಳಿ, ಯಾರು ಎಷ್ಟು ದಿನ ಇರುತ್ತಾರೆಂದು ಕೇಳಿದ್ದಾರೆ. ಆಗ ಮಾನಸ ತ್ರಿವಿಕ್ರಮ್ ಕಡೆಗೆ ವಾಲಿದ್ದಾರೆ. ಶಿಶಿರ್ ಅವರು 12 ವಾರ ಇರಬಹುದು. ಫಿನಾಲೆಗೆ ಹಿಂದಿನ ಥರ ವಾಪಾಸ್ ಬರಬಹುದು ಎಂದು ತೀರ್ಪು ಕೊಟ್ಟಿದ್ದಾರೆ.
ಮಾನಸ ಮುಂದೆ ಹೊಸ ಸ್ಪರ್ಧೆ
ಮಾನಸಗೆ ಯಾರು ಗೆಲ್ಲಬಹುದು ಎಂಬುದು ಸರಿಯಾಗಿ ಜಡ್ಜ್ ಮಾಡುವುದಕ್ಕೆ ಆಗಲಿಲ್ಲ. ಹೀಗಾಗಿ ಸುದೀಪ್ ಅವರು ವೇದಿಕೆ ಮೇಲೆ ಇಬ್ಬರಿಗೂ ಮತ್ತೊಂದು ಸ್ಪರ್ಧೆ ನೀಡಿದರು. ಅದು ಫುಶ್‌ಅಪ್ ಹಾಗೂ ಡ್ಯಾನ್ಸ್ ಮಾಡುವುದು. ಅದನ್ನು ನೋಡಿದ ಮೇಲೂ ಮಾನಸ ಹೇಳಿದ್ದು ಹೀಗೆ, 'ಇಬ್ಬರು ಚೆನ್ನಾಗಿಯೇ ಮಾಡಿದರು. ಡ್ಯಾನ್ಸ್, ಫುಶ್‌ಅಪ್ ಚೆನ್ನಾಗಿ ಮಾಡಿದರು. ಏನು ಹೇಳುವುದು ಗೊತ್ತಾಗ್ತಾ ಇಲ್ಲ. ತ್ರಿವಿಕ್ರಮ್ ಅವರು ಡ್ಯಾನ್ಸ್ ಚೆನ್ನಾಗಿ ಮಾಡಿದರು. ಅವರು ಫೈನಲ್ ತಲುಪುತ್ತಾರೆ ಎಂದಿದ್ದಾರೆ.


Click it and Unblock the Notifications











