ಬಿಗ್ ಬಾಸ್ ಮನೆಯಲ್ಲಿದ್ದರೂ ಈ ನಟಿಯರ ಯೂಟ್ಯೂಬ್ ಚಾನೆಲ್‌ಗಳು ಆಕ್ಟಿವ್; ಅದು ಹೇಗೆ ಸಾಧ್ಯ?
ಇಂದು ಕಿರುತೆರೆ ನಟಿಯರು ಯಾವ ಸಿನಿಮಾ ನಟಿಯರಿಗೂ ಕಮ್ಮಿ ಇಲ್ಲದಂತೆ ಮನೆ ಮಾತಾಗುತ್ತಿರುವುದು ಸಾಮಾನ್ಯವಾಗಿದೆ. ತಮ್ಮ ಧಾರಾವಾಹಿಯ ಪಾತ್ರ, ನಟನೆ, ಹಾಕುವ ಉಡುಗೆ ತೊಡುಗೆ, ಹಾವ ಭಾವ ಇವೆಲ್ಲದರ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆಲ್ಲುತ್ತಿದ್ದಾರೆ ಇಂದಿನ ಕಲಾವಿದರು. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿರುವ ಕನ್ನಡ ಕಿರುತೆರೆ ಈ ಟಾಪ್ ನಟಿಯರು ಯೂಟ್ಯೂಬ್ ನಲ್ಲಿ ಅಂತೂ ಬಹಳ ಆಕ್ಟಿವ್ ಇದ್ದಾರೆ.
ನಟಿ ಗೌತಮಿ ಜಾಧವ್
ಸತ್ಯ ಧಾರಾವಾಹಿ ಮೂಲಕ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ಗೌತಮಿ ಜಾಧವ್ ಇದೀಗ ಕರುನಾಡ ಕಿರುತೆರೆ ಪ್ರೇಕ್ಷಕರ ಮನೆ ಮಾತಾಗಿದ್ದಾರೆ. ಸದ್ಯಕ್ಕಂತೂ ಬಿಗ್ ಬಾಸ್ ಸೀಸನ್ 11ರಲ್ಲಿರುವ ಈಕೆ ತನ್ನ ಸೌಮ್ಯ ಸ್ವಭಾವದಿಂದ ಮತ್ತಷ್ಟು ಅಭಿಮಾನಿಗಳನ್ನು ಬಳಸುತ್ತಿದ್ದಾರೆ. ಈಕೆ ಗೌತಮಿ ಜಾಧವ್ ಎಂಬ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, ಅದರಲ್ಲಿ ತಮ್ಮ ದೈನಂದಿನ ಚಟುವಟಿಕೆಗಳು, ಸೀರಿಯಲ್ ಸೆಟ್‌ನಲ್ಲಿ ಮಾಡುವ ರೀಲ್ಸ್, ಗಂಡನೊಂದಿಗೆ ಫೋಟೋಶೂಟ್ ಹೀಗೆ ನಾನಾ ರೀತಿಯ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡಲಾಗುತ್ತಿದೆ.

ಬಿಗ್ ಬಾಸ್ ಮನೆಗೆ ಹೋಗುವ ಮೊದಲಷ್ಟೇ ಯೂಟ್ಯೂಬ್ ಚಾನೆಲ್ ಆರಂಭಿಸಿದರೂ ಸಹ ಬರಿ 22 ವಿಡಿಯೋಗಳಿಗೆ ಈಕೆಗೆ 8,000ಕ್ಕೂ ಹೆಚ್ಚಿನ ಯೂಟ್ಯೂಬ್ ಸಬ್ಸ್ಕ್ರೈಬರ್ಸ್ ಇದ್ದಾರೆ.
ನಟಿ ಭವ್ಯಾ ಗೌಡ
'ಗೀತಾ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟಿ ಭವ್ಯಾ ಗೌಡ ಬಹುದೊಡ್ಡ ಫ್ಯಾನ್ ಫಾಲೋಯಿಂಗ್ ಅನ್ನು ಹೊಂದಿದ್ದಾರೆ. ಬಿಗ್ ಬಾಸ್ ಸೀಸನ್ 11ರಲ್ಲಿ ಬಹಳ ಉನ್ನತ ಮಟ್ಟದಲ್ಲಿ ಆಡುತ್ತಿರುವ ನಟಿ ಭವ್ಯಾ ಗೌಡ ಕೂಡ ತಮ್ಮದೇ ಆದ ಯುಟ್ಯೂಬ್ ಚಾನೆಲ್ ಒಂದನ್ನು ಹೊಂದಿದ್ದಾರೆ. ಸುಮಾರು ಒಂದು ವರ್ಷದ ಹಿಂದೆ ಆರಂಭಗೊಂಡ ಭವ್ಯ ಗೌಡ ಯುಟ್ಯೂಬ್ ಚಾನೆಲ್‌ನಲ್ಲಿ ಈವರೆಗೂ 90 ಕ್ಕಿಂತ ಹೆಚ್ಚು ಯೂಟ್ಯೂಬ್ ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಈಕೆಗೆ 73,000ಕ್ಕೂ ಹೆಚ್ಚು ಚಂದಾದಾರು ಇದ್ದು, ಬಿಗ್ ಬಾಸ್ ಮನೆಗೆ ತೆರಳಿದಾಗಿನಿಂದಲೂ ಭವ್ಯ ಗೌಡ ಅವರ ಯೂಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂ ಫಾಲೊವರ್ಸ್ ಹೆಚ್ಚಾಗಿರುವುದನ್ನು ನೋಡಬಹುದು. ಬಿಗ್ ಬಾಸ್ ಮನೆಗೆ ಹೋಗುವ ಮುನ್ನ ಯಾವ ರೀತಿಯ ತಯಾರಿಯನ್ನು ಮಾಡಿದ್ದಾರೆ ಶಾಪಿಂಗ್, ಸ್ಕಿನ್ ಕೇರ್ ಇತ್ಯಾದಿ ತಯಾರಿಗಳ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿ ಮೋಕ್ಷಿತಾ ಪೈ
'ಪಾರು' ಧಾರಾವಾಹಿ ಮೂಲಕ ಸರಿಸುಮಾರು 5 ವರ್ಷದ ವರೆಗೆ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿರುವ ನಟಿ ಮೋಕ್ಷಿತಾ ಪೈ, ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಎಂದರೆ ತಪ್ಪಾಗಲ್ಲ. ಈಕೆಗೂ ತನ್ನದೇ ಆದ ಯೂಟ್ಯೂಬ್ ಚಾನೆಲ್ ಇದ್ದು ಇದರಲ್ಲಿ, ಬಾಲಿ, ಮನಾಲಿ ಹೀಗೆ ನಾನಾ ಸ್ಥಳಗಳ ಟ್ರಾವೆಲ್ ವ್ಲಾಗ್ ಸೇರಿದಂತೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ ಮೋಕ್ಷಿತಾ ಪೈ. 'ಪಾರು' ಧಾರಾವಾಹಿಯಲ್ಲಿ ಇವರ ತಮ್ಮ ಗಣೇಶನ ಪಾತ್ರದಲ್ಲಿ ಕಾಣಿಸಿಕೊಂಡ ನಟನೊಂದಿಗೆ ನಿಜ ಜೀವನದಲ್ಲೂ ಅಕ್ಕ ತಮ್ಮನ ಸುಂದರ ಬಾಂಧವ್ಯವನ್ನು ಹೊಂದಿರುವ ನಟಿ ಮೋಕ್ಷಿತಾ. ಆಗಾಗ ನಟ ಗಣಿ ಅವರೊಂದಿಗೆ ಬೇರೆ ಬೇರೆ ಸ್ಥಳಕ್ಕೆ ಭೇಟಿ ನೀಡುತ್ತಿರುತ್ತಾರೆ. ಸುಮಾರು ಎಂಟು ತಿಂಗಳ ಹಿಂದಷ್ಟೇ ಆರಂಭಗೊಂಡಿರುವ ಯುಟ್ಯೂಬ್ ಚಾನೆಲ್‌ಗೆ ಈಗಾಗಲೇ ಒಂದು ಲಕ್ಷಕ್ಕೂ ಅಧಿಕ ಚಂದದಾರರು ಇದ್ದಾರೆ. ಈಕೆ ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿದ್ದರೂ ಸಹ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಾಗ ಅವರ ಬಿಗ್ ಬಾಸ್ ತಯಾರಿಯಿಂದ ಹಿಡಿದು ಬೇರೆ ಬೇರೆ ರೀತಿಯ ವಿಡಿಯೋಗಳನ್ನು ಅವರ ಮ್ಯಾನೇಜ್ಮೆಂಟ್ ಟೀಮ್ ಪೋಸ್ಟ್ ಮಾಡುತ್ತಿರುತ್ತಾರೆ.
ನಟಿ ಐಶ್ವರ್ಯ ಶಿಂಧೋಗಿ
'ಶಾಂಭವಿ' ಹಾಗೂ 'ಮಂಗಳ ಗೌರಿ' ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರಿಗೆ ಪರಿಚಯವಾದ ನಟಿ ಐಶ್ವರ್ಯ ಶಿಂಧೋಗಿ 2015ರಲ್ಲಿ ತೆರೆಕಂಡ 'ಜಾಕ್ಸನ್' ಚಿತ್ರದ ಮೂಲಕ ನಟನ ಕ್ಷೇತ್ರಕ್ಕೆ ಕಾಲಿಟ್ಟವರು. ಅದಾದ ಮೇಲೆ 'ಭುಜಂಗ', 'ರಣತಂತ್ರ', 'ಮಮ್ಮಿ ಸೇವ್ ಮಿ' ಮುಂತಾದ ಸಿನಿಮಾಗಳಲ್ಲಿ ನಟಿಸಿರುವ ಈಕೆ ನಂತರ ಕಿರುತೆರೆಯಲ್ಲಿ ಖ್ಯಾತಿಯನ್ನು ಪಡೆದುಕೊಂಡರು. ಐಶ್ವರ್ಯ ಕೂಡ ತನ್ನದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು ಸದ್ಯಕ್ಕೆ 45 ಸಾವಿರಕ್ಕೂ ಅಧಿಕ ಸಬ್‌ಸ್ಕ್ರೈಬರ್ಸ್ ಅನ್ನು ಪಡೆದಿದ್ದಾರೆ. ಬಿಗ್ ಬಾಸ್ ಸೀಸನ್ ಹನ್ನೊಂದಕ್ಕೆ ಕಾಲಿಟ್ಟ ಕೆಲವೇ ವಾರಗಳಲ್ಲಿ 'ಕರುನಾಡ ಮನೆ ಮಗಳು ಐಶ್ವರ್ಯ' ಎಂದು ಬಿಗ್ ಬಾಸ್ ವೀಕ್ಷಕರ ಪ್ರೀತಿಯ ಬಿರುದನ್ನು ಪಡೆದವರು ಈ ನಟಿ. ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ಮಾಡಿರುವ ಶಾಪಿಂಗ್‌ನಿಂದ ಹಿಡಿದು ಸೂಟ್ಕೇಸ್ ಪ್ಯಾಕಿಂಗ್‌ವರೆಗೂ ಆದ ಎಲ್ಲಾ ತಯಾರಿಗಳ ಬಗ್ಗೆ ವಿಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಿರುತ್ತಾರೆ. ಐಶ್ವರ್ಯ ಶಿಂಧೋಗಿಯವರ ಯೂಟ್ಯೂಬ್ ಟೀಮ್.


Click it and Unblock the Notifications











