BBK 11: ಸೀಬೆ ಹಣ್ಣಿನ ಕಾರಣಕ್ಕೆ ಚೈತ್ರಾ- ಯುಮುನಾ ನಡುವೆ ಕಿರಿಕ್; ಫೈಯರ್ ಬ್ರ್ಯಾಂಡ್ ತಿರುಗೇಟು
ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಹೊಸ ಸೀಸನ್ ಕನ್ನಡದಲ್ಲಿ ಮತ್ತೆ ಆರಂಭವಾಗಿದೆ. ಗ್ರ್ಯಾಂಡ್ ಓಪನಿಂಗ್ ವೇದಿಕೆಯಿಂದ 17 ಜನ ಸ್ಪರ್ಧಿಗಳು ದೊಡ್ಮನೆ ಒಳಗೆ ಹೋಗಿದ್ದಾರೆ. ವೀಕ್ಷಕರ ನಿರೀಕ್ಷೆ ಮೀರಿ ಕೆಲವರು ಈ ಬಾರಿ ಬಿಗ್‌ಬಾಸ್ ಮನೆಯ ಆಟಕ್ಕೆ ಆಯ್ಕೆ ಆಗಿದ್ದಾರೆ. ದೊಡ್ಮನೆಯಲ್ಲಿ ಒಂದು ರಾತ್ರಿ, ಒಂದು ಹಗಲು ಕಳೆದಿದ್ದಾರೆ.
ಮೊದಲ ದಿನವೇ ಕೆಲ ಸ್ಪರ್ಧಿಗಳ ನಡುವೆ ವಾಕ್ಸಮರ ನಡೆಯಿತು. ಮುಖ್ಯವಾಗಿ ಚೈತ್ರಾ ಕುಂದಾಪುರ ಹಾಗೂ ಯಮುನಾ ಶ್ರೀನಿಧಿ ನಡುವೆ ಮಾತಿನ ಚಕಮಕಿ ನಡೆಯಿತು. ಬಿಗ್‌ಬಾಸ್ ರೂಲ್ಸ್ ಬ್ರೇಕ್ ಮಾಡಬಾರದು ಎಂದು ಯಮುನಾ, ನನ್ನ ತಪ್ಪಿಗೆ ನಾನೇ ಶಿಕ್ಷೆ ಅನುಭವಿಸುತ್ತೀನಿ ಎಂದು ಚೈತ್ರಾ ವಾದಿಸಲು ಆರಂಭಿಸಿದರು.

ಬಿಗ್‌ಬಾಸ್ ನೀಡಿದ ವಸ್ತುಗಳನ್ನು ಬಳಸಬೇಕಾ? ಬೇಡವೇ? ಎನ್ನುವ ವಿಚಾರಕ್ಕೆ ಇಬ್ಬರ ನಡುವೆ ಕಿರಿಕ್ ಶುರುವಾಯಿತು. ನರಕವಾಸಿಗಳು ಮನೆಯ ಕೆಲಸಗಳನ್ನು ಮಾಡಬೇಕಿದೆ. ಅದರಂತೆ ಸೀಬೆ ಹಣ್ಣನ್ನು ತೊಳೆದುಕೊಡುವಂತೆ ಹೇಳಿದರೆ ಚೈತ್ರಾ ತೊಳೆದು ತಾವೇ ತಿಂದು ಬಳಿಕ ಅದನ್ನು ನರಕದೊಳಗೆ ಎಸೆದುಬಿಟ್ಟರು. ಇದರಿಂದ ಯಮುನಾ ಜೊತೆ ಕಿರಿಕ್ ನಡೆಯಿತು.
ಬಿಗ್‌ಬಾಸ್ ಕನ್ನಡ 11ರ ಮೊದಲ ನಾಮಿನೇಷನ್ ಪ್ರಕ್ರಿಯೆ ಕೂಡ ನಡೆಯಿತು. ಸ್ವರ್ಗ ನಿವಾಸಿಗಳು ನರಕದ ನಿವಾಸಿಗಳನ್ನು ನಾಮಿನೇಟ್ ಮಾಡುವ ಅವಕಾಶ ಇತ್ತು. ಬಹುತೇಕರು ಚೈತ್ರಾ ಕುಂದಾಪುರ ಹೆಸರನ್ನು ತೆಗೆದುಕೊಂಡರು. ಅದಕ್ಕೆ ಕಾರಣಗಳನ್ನು ಕೊಟ್ಟರು. ಅವರ ಆರೋಪಗಳಿಗೆ ಚೈತ್ರಾ ಸ್ಪಷ್ಟನೆಯನ್ನು ನೀಡಿದರು. ಅಲ್ಲೂ ಚೈತ್ರಾ ನಾನು ಮಾಡಿದ್ದೇ ಸರಿ ಎಂದು ವಾದಿಸಿದರು.
ಇನ್ನು ನಾಮಿನೇಷನ್ ಮುಗಿದ ಬಳಿಕ ಈ ವಾರ ಬಿಗ್‌ಬಾಸ್ ಮನೆಯಿಂದ ಹೊರ ಹೋಗಲು ಚೈತ್ರಾ ಕುಂದಾಪುರ ನೇರವಾಗಿ ನಾಮಿನೇಟ್ ಆಗಿರುವುದನ್ನು ಬಿಗ್‌ಬಾಸ್ ಘೋಷಿಸಿದರು. ನಾಮಿನೇಷನ್ ಬಳಿಕ ನಾನು ಯಾರೊಟ್ಟಿಗೂ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಹೇಳಿ ನಾಮಿನೇಟ್ ಮಾಡಿದ್ದು ಬೇಸರವಾಯಿತು ಎಂದು ಅನುಷಾ ಕಣ್ಣೀರು ಹಾಕಿದ್ದಾರೆ.
ಬಿಗ್‌ಬಾಸ್ ಮನೆಯನ್ನು ಸ್ವರ್ಗ ಹಾಗೂ ನರಕ ಎಂದು ವಿಭಾಗಿಸಿ ಸ್ಪರ್ಧಿಗಳನ್ನು ಕಳುಹಿಸಲಾಗಿದೆ. ಅನುಷಾ, ಗೋಲ್ಡ್ ಸುರೇಶ್, ರಂಜಿತ್ ಸೇರಿ 7 ಮಂದಿ ನರಕವಾಸಿಗಳಾಗಿದ್ದಾರೆ. ಭವ್ಯಾ, ಜಗದೀಶ್, ಹಂಸಾ, ಗೌತಮಿ ಸೇರಿ 10 ಜನ ಸ್ವರ್ಗ ನಿವಾಸಿಗಳಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಮೊದಲ ರಾತ್ರಿ ಹಳೆದು ಸ್ಪರ್ಧಿಗಳು ಬೆಳಗ್ಗೆ 9 ಗಂಟೆ ವೇಳೆಗೆ ಒಬ್ಬೊಬ್ಬರಾಗಿ ಎದ್ದರು.
ಕುಡಿಯಲು ಬಿಸಿ ನೀರು ಬೇಕು ಎಂದು ಮೊದಲ ದಿನವೇ ಚರ್ಚೆ ಶುರುವಾಯಿತು. ಓವನ್ ಅಲ್ಲಿ ನೀರು ಬಿಸಿ ಮಾಡಿ ಕೆಲವರು ಕುಡಿದರು. ನರಕವಾಸಿಗಳಿಗೆ ಬಿಸಿನೀರು ಕೊಡಬೇಕಾ? ಬೇಡವಾ? ಎನ್ನುವ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಭಾರೀ ಚರ್ಚೆಯೇ ನಡೆಯಿತು. ಕೊಡುವುದು ಸರೀನಾ? ತಪ್ಪಾ? ಎನ್ನುವ ವಿಚಾರದಲ್ಲಿ ಸ್ವರ್ಗವಾಸಿಗಳು ಭಾರೀ ಗೊಂದಲಕ್ಕೆ ಸಿಲುಕಿದರು.


Click it and Unblock the Notifications