BBK 11: ಹೆದರುವ ಧನರಾಜ್ ಅಲ್ಲ, ಹೆಣ್ಣು ಮಕ್ಕಳಿಗೆ ಸವಾಲು ಹಾಕಿ ಬಾತ್ ರೂಮ್ ಬಳಿ ಕಣ್ಣೀರು ಹಾಕಿದ್ದೇಕೆ?
ಬಿಗ್ ಬಾಸ್ ಮನೆಯಲ್ಲಿ ಹನುಮಂತ ಎರಡು ಬಾರಿ ಕ್ಯಾಪ್ಟನ್ ಆಗಿದ್ದಾರೆ. ಈ ವಾರ ಅವರ ಕ್ಯಾಪ್ಟನ್ಸಿ ಆಟ ಮುಗಿಯುತ್ತದೆ. ಮನೆಗೆ ಹೊಸ ಕ್ಯಾಪ್ಟನ್ ಆಯ್ಕೆ ಆಗಬೇಕಿದೆ. ಬಿಗ್ ಬಾಸ್ ಕೂಡ ಕ್ಯಾಪ್ಟನ್ ಮಾಡುವಾಗ ಒಂದಷ್ಟು ಟಾಸ್ಕ್‌ಗಳನ್ನು ಕೊಟ್ಟು ಬಳಿಕ ಅದರಲ್ಲಿ ಗೆದ್ದವರು ಕ್ಯಾಪ್ಟನ್ ಆಗುತ್ತಾರೆ. ಇಂದಿನಿಂದ ಕ್ಯಾಪ್ಟನ್ಸಿ ಆಟ ಶುರುವಾಗಿದೆ. ಯಾರು ಕ್ಯಾಪ್ಟನ್ ಆಗಲಿದ್ದಾರೆ ಎಂಬ ಕುತೂಹಲವಿದೆ.
ಎಲ್ಲರೂ ಎಷ್ಟೇ ಬಾರಿ ಕ್ಯಾಪ್ಟನ್ ಆದರೂ ಖುಷಿ ಪಡುತ್ತಾರೆ. ಯಾಕಂದ್ರೆ ಕ್ಯಾಪ್ಟನ್ ಆದಾಗ ಸೌಲಭ್ಯಗಳು, ಅಧಿಕಾರ ಹೆಚ್ಚಾಗಿರುತ್ತದೆ. ಆದರೆ ಹನುಮಂತಗೆ ಮತ್ತೆ ಕ್ಯಾಪ್ಟನ್ ಆಗುವ ಬಯಕೆ ಇಲ್ಲ. ನಿನ್ನೆ ಧನರಾಜ್, ತ್ರಿವಿಕ್ರಮ್ ಬಳಿ ಕೂತು ಕ್ಯಾಪ್ಟನ್ಸಿ ಸಾಕಾಗಿದೆ ಎನ್ನುತ್ತಿದ್ದರು.

ಬಿಗ್ ಬಾಸ್ ಕೊಟ್ರು ಹೊಸ ಟಾಸ್ಕ್
ಬಿಗ್ ಬಾಸ್ ಯಾವಾಗ ಯಾವ ರೀತಿ ಟಾಸ್ಕ್ ನೀಡುತ್ತಾರೆ ಎಂಬುದೇ ಊಹೆ ಮಾಡುವುದಕ್ಕೆ ಆಗಲ್ಲ. ಕ್ಯಾಪ್ಟನ್ ಆಗುವುದಕ್ಕೆ ಎಲ್ಲರೂ ಆಸೆಯಿಂದ ಇರುತ್ತಾರೆ. ಆದರೆ ಈ ಬಿಗ್ ಬಾಸ್ ಒಂದಷ್ಟು ಸ್ಪರ್ಧಿಗಳನ್ನ ಕ್ಯಾಪ್ಟನ್ಸಿ ಆಟದಿಂದ ಹೊರಗಿಡುವ ಟಾಸ್ಕ್ ನೀಡಿದ್ದಾರೆ. ಎಲ್ಲರೂ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳು ಎನಿಸುವಂತವರಿಗೆ ಮನೆಯಲ್ಲಿ ಕಾಣಿಸದಂತ ಕಾರಣ ಕೊಟ್ಟು ಕ್ಯಾಪ್ಟನ್ಸಿ ಓಟದಿಂದ ದೂರ ಇಟ್ಟಿದ್ದಾರೆ.
ಧನರಾಜ್‌ಗೆ ಅನುಷಾ ಹೇಳಿದ್ದೇನು..?
ಇನ್ನು ಧನರಾಜ್ ವೇದಿಕೆ ಮೇಲೆ ಬಂದು ಮೊದಲು ಅನುಷಾ ಅವರ ಫೋಟೋ ಹಾಕಿದ್ದಾರೆ. ಅನುಷಾ ಅವರಿಗೆ ಕ್ಯಾಪ್ಟನ್ ಆಗುವುದಕ್ಕೆ ಅಷ್ಟು ಅರ್ಹತೆ ಇಲ್ಲ ಎನಿಸುತ್ತದೆ ಎಂದಿದ್ದಾರೆ. ಆ ಮಾತು ಅನುಷಾ ಅವರನ್ನು ಕೆಣಕಿದ್ದು, ನಿಮಗಿಂತ ಜಾಸ್ತಿ ಅರ್ಹತೆ ನನಗಿದೆ ಎಂದು ತಿರುಗೇಟು ನೀಡಿದ್ದಾರೆ. ಇದೇ ವೇಳೆ ಗೌತಮಿ ಕೂಡ ಧನರಾಜ್‌ಗೆ ಬುದ್ದಿ ಹೇಳಿದ್ದಾರೆ. ತಪ್ಪನ್ನ ಒಪ್ಪಿಕೊಳ್ಳುವ ಮನಸ್ಥಿತಿ ನಿಮಗೆ ಇಲ್ಲ ಎಂದಿದ್ದಾರೆ. ಹೆಣ್ಣು ಮಕ್ಕಳು ಧನರಾಜ್ ಮೇಲೆ ಕೆಂಡಕಾರಿದ್ದಾರೆ.
ಮೋಕ್ಷಿತಾರನ್ನ ಕೆಣಕಿದ ಧನರಾಜ್
ಕ್ಯಾಪ್ಟನ್ಸಿ ಓಟದಿಂದ ಇಬ್ಬರನ್ನು ಹೊರಗಿಡಬೇಕು. ಧನರಾಜ್ ಆಯ್ಕೆ ಅನುಷಾ ರೈ ಹಾಗೂ ಮೋಕ್ಷಿತಾ ಆಗಿತ್ತು. ಮೋಕ್ಷಿತಾ ಅವರು ಒಂದು ನಿರ್ಧಾರ ತೆಗೆದುಕೊಳ್ಳುವಾಗ ಎಡವುತ್ತಾರೆ ಎಂಬ ಕಾರಣ ನೀಡಿದರು. ಇದು ಸಹಜವಾಗಿಯೇ ಮೋಕ್ಷಿತಾ ಅವರಿಗೆ ಕೋಪ ತರಿಸಿತ್ತು. ಧನರಾಜ್ ಮೇಲೆ ಹೌಹಾರಿದ ಮೋಕ್ಷಿತಾ, ನೆಟ್ಟುಗ್ ಒಂದು ಡಿಸಿಷನ್ ತಗೊಳೋಕ್ ಬರಲ್ಲ ಏನಾದ್ರು ಸೆನ್ಸ್ ಇದ್ಯಾ ತಲೇಲಿ. ನೀವೂ ಕ್ಯಾಪ್ಟನ್ ಆಗ್ತೀರಾ? ಎಂದು ಗದರಿದ್ದಾರೆ.
ಧನರಾಜ್‌ನ ಹೆದರುಪುಕ್ಲ ಅಂದ್ರಾ?
ಇಷ್ಟೆಲ್ಲ ಜಗಳ ನಡೆಯುವಾಗ ಅನುಷಾ ರೈ ಹೋಗಿ ಧನರಾಜ್ ಪಕ್ಕವೇ ಕುಳಿತಿದ್ದರು. ಮೋಕ್ಷಿತಾ ಮಾತಿಗೆ ಮಾತು ಜೋಡಿಸಿದ ಅನುಷಾ, ಮಾತಾಡೋದಕ್ಕೆ ಧೈರ್ಯವೇ ಇಲ್ಲ ಈ ವ್ಯಕ್ತಿಗೆ ಎಂದರು. ಆಗ ಧನರಾಜ್ ಮನಸ್ಸಿನ ಒಳಗೆ ಇದ್ದ ಧೈರ್ಯವಂತ ಎಚ್ಚರಗೊಂಡು, ಈಗ ಧನರಾಜ್ ಬೇರೆ ಆಗಿದ್ದಾನೆ. ಭಯಪಡುವ ಧನರಾಜ್ ಈಗ ಇಲ್ವೆ ಇಲ್ಲ ಎಂದು ಹೆಣ್ಣು ಮಕ್ಕಳಿಗೆ ಸವಾಲು ಹಾಕಿದ್ದಾರೆ. ಆದರೆ ಬಾತ್ ರೂಮ್ ಬಳಿ ಕೂತು ಕಣ್ಣೀರು ಹಾಕುತ್ತಿದ್ದರು. ಹನುಮಂತ ಹಾಗೂ ಐಶ್ವರ್ಯಾ ಸಮಾಧಾನ ಮಾಡುತ್ತಿದ್ದಾರೆ.


Click it and Unblock the Notifications











