BBK 11; ಮಗು ನೆನಪಲ್ಲಿ ಕಣ್ಣೀರಾದ ಧನರಾಜ್; ಉಳಿದವರು ಭಾವುಕ

ಬಿಗ್‌ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಆಟ ಗಂಭೀರವಾಗುತ್ತಾ ಸಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಬರೀ ಫಿಸಿಕಲ್ ಟಾಸ್ಕ್‌ಗಳು ಮಾತ್ರವಲ್ಲ, ಭಾವನಾತ್ಮಕವಾಗಿಯೂ ಕುಗ್ಗಿಸುವಂತಹ ಸನ್ನಿವೇಶಗಳು ಎದುರಾಗುತ್ತವೆ. ಅದನ್ನೆಲ್ಲಾ ಮೀರಿ ಸ್ಪರ್ಧಿಗಳು ಮನೆಯಲ್ಲಿ ಉಳಿದುಕೊಳ್ಳಬೇಕಾಗುತ್ತದೆ.

ಹುಟ್ಟಿದ ಮನೆಯನ್ನು ತನ್ನವರನ್ನು ಬಿಟ್ಟು 100 ದಿನಗಳ ಕಾಲ ಯಾವುದೋ ಒಂದು ಮನೆಯಲ್ಲಿ ಬಂಧಿಯಾಗಿ ಇರುವುದು ತಮಾಷೆಯ ಮಾತಲ್ಲ. ಮನೆಯವರೊಟ್ಟಿಗೆ ಯಾವುದೇ ಸಂಪರ್ಕವೂ ಇಲ್ಲದೇ ಇರಬೇಕು ಎಂದರೆ ಕೆಲವರಿಗೆ ಕಷ್ಟವಾಗುತ್ತಿದೆ. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 5ನೇ ವಾರಕ್ಕೆ ಕಾಲಿಟ್ಟಿದೆ. ಸ್ಪರ್ಧಿಗಳು ಮನೆಗೆ ಹೊಂದಿಕೊಳ್ಳುತ್ತಿದ್ದಾರೆ. ಇನ್ನು ಹೊರಗಿನ ಪ್ರಪಂಚದ ನೆನಪು ಕಾಡುತ್ತಿದೆ.

Bigg Boss kannada 11 dhanraj cries after missing message from his family

ಸದ್ಯ ತಮ್ಮ ಆಪ್ತರಿಂದ ಸ್ಪರ್ಧಿಗಳಿಗೆ ಉಡುಗೊರೆ ಬರ್ತಿದೆ. ಅದು ಪತ್ರ. ಮನೆಯವರು ಬರೆದ ಪತ್ರಗಳನ್ನು ಸ್ಪರ್ಧಿಗಳಿಗೆ ಕೊಡಲು ಬಿಗ್‌ಬಾಸ್ ಮುಂದಾಗಿದ್ದಾರೆ. ಆದರೆ ಅದನ್ನು ಅಷ್ಟು ಸುಲಭವಾಗಿ ಕೊಡುತ್ತಿಲ್ಲ. ಅದಕ್ಕಾಗಿ ಒಂದು ಟಾಸ್ಕ್‌ ಇದೆ. ಆ ಟಾಸ್ಕ್‌ ಪ್ರಕಾರ ಯಾರಿಗೆ ಮನೆಯವರ ಪತ್ರ ಬರುತ್ತದೆ ಎಂದು ಮೊದಲೇ ಬಿಗ್‌ಬಾಸ್ ಘೋಷಣೆ ಮಾಡುತ್ತಾರೆ.

ಹೆಸರು ಘೋಷಣೆ ಬಳಿಕ ಒಂದು ಬಝರ್ ಆಗುತ್ತದೆ. ಮತ್ತೊಂದು ಬಝರ್ ಆಗುವವರೆಗೆ ಮನೆಮಂದಿ ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಬೇಕು. ಈ ಅವಧಿಯಲ್ಲಿ ಅವರ ಗಮನ ಬೇರೆ ಕಡೆ ಸೆಳೆಯುವ ಪ್ರಯತ್ನ ಮಾಡಲಾಗುತ್ತದೆ. ಅದಕ್ಕೆ ಪ್ರತಿಕ್ರಿಯೆ ನೀಡಬಾರದು. ಮನೆಯ ಯಾರೊಬ್ಬರು ಇದಕ್ಕೆ ಪ್ರತಿಕ್ರಿಯಿಸಿದರೂ ಪೌಲ್ ಆಗುತ್ತದೆ. 3 ಬಾರಿ ಹೀಗೆ ಆದರೆ ಮನೆಯವರ ಪತ್ರ ಆ ಸ್ಪರ್ಧಿ ಕೈಗೆ ಸಿಗಲ್ಲ.

ಮೊದಲಿಗೆ ಅನುಷಾಗೆ ಅವಕಾಶ ಸಿಕ್ಕಿತು. ಆಕೆಗೆ ತನ್ನ ತಾಯಿ ಬರೆದ ಪತ್ರ ಓದಲು ಧಕ್ಕಿತ್ತು. ಆದರೆ ಬಳಿಕ ಧನರಾಜ್ ಹೆಸರನ್ನು ಬಿಗ್‌ಬಾಸ್ ಹೇಳಿದರು. ಮಡದಿಯ ಪತ್ರಕ್ಕಾಗಿ ಕಾದಿದ್ದ ಧನರಾಜ್‌ಗೆ ಭಾರೀ ನಿರಾಸೆಯಾಗಿತ್ತು. ಒಂದಷ್ಟು ಜನ ಬಂದು ಮಗುವಿನ ಗೊಂಬೆ ಹಿಡಿದು ಧನರಾಜ್ ಅವರ ಗಮನ ಸೆಳೆಯಲು ಪ್ರಯತ್ನಿಸಿದ್ದರು. ಅವರು ಸಾಧ್ಯವಾದಷ್ಟು ಅದರಿಂದ ದೂರ ದೂರ ಹೋದರು.

ಎರಡು ಬಾರಿ ಪೌಲ್ ಆಗುತ್ತಿದ್ದಂತೆ ಮನೆಯಿಂದ ಬಂದ ಪತ್ರ ಓದಲು ಸಿಗುತ್ತೋ ಇಲ್ಲವೋ ಎಂದು ಧನರಾಜ್ ಭಾವುಕರಾದರು. ಗೋಳೋ ಎಂದು ಕಣ್ಣೀರಾದರು. ಅವರ ಅಳು ನೋಡಲಾಗದೇ ಮನೆ ಮನೆ ಕೂಡ ಭಾವುಕರಾಗಿ ಸಮಾಧಾನ ಮಾಡಿದರು. ಇಲ್ಲ ಇನ್ನು ಒಂದು ಅವಕಾಶ ಇದೆ. ನಿಮಗೆ ಕಂಡಿತ ನಿಮ್ಮ ಮನೆಯವರ ಪತ್ರ ಸಿಗುತ್ತದೆ ಎಂದು ಸಮಾಧಾನ ಮಾಡಿದರು.

ಕರಾವಳಿ ಮೂಲದ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಧನರಾಜ್ ತಮ್ಮ ಕಾಮಿಡಿ ವೀಡಿಯೋಗಳಿಂದ ಗಮನ ಸೆಳೆದವರು. ತಮ್ಮ ಪತ್ನಿ ಜೊತೆ ಸೇರಿ ಫನ್ನಿ ವೀಡಿಯೋಗಳನ್ನು ಮಾಡುತ್ತಾ ಜನಪ್ರಿಯತೆ ಸಾಧಿಸಿದ್ದರು. ಹಾಗಾಗಿ ಬಿಗ್‌ಬಾಸ್ ಮನೆಗೆ ಹೋಗುವ ಅವಕಾಶವೂ ಸಿಕ್ಕಿತ್ತು. ಆದರೆ ದೊಡ್ಮನೆಗೆ ಹೋಗುವ ಕೆಲವೇ ದಿನಗಳ ಹಿಂದೆ ದಂಪತಿ ಮಡಿಲಿಗೆ ಮುದ್ದಾದ ಕಂದಮ್ಮ ಬಂದಿತ್ತು.

ಧನರಾಜ್ ಪತ್ನಿ ಪ್ರಜ್ಞಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಅದಾಗಿ ಕೆಲವೇ ವಾರದ ಅಂತರದಲ್ಲಿ ಮಡದಿ, ಮಗುವನ್ನು ಬಿಟ್ಟು ಧನರಾಜ್ ಬಿಗ್‌ಬಾಸ್ ಶೋಗೆ ಬಂದಿದ್ದರು. ಹಾಗಾಗಿ ಮಗುವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದಾರೆ. 3ನೇ ವಾರದಲ್ಲಿ ಬಿಗ್‌ಬಾಸ್ ಮನೆಯೊಳಗೆ ಒಂದು ಟೆಲಿಫೋನ್ ಬೂತ್ ತಂದು ಇಡಲಾಗಿತ್ತು. ಅಲ್ಲಿಗೆ ಹೊರಗಡೆಯಿಂದ ಮನೆಯವರ ಫೋನ್ ಕರೆಗಳು ಹೋಗಿತ್ತು.

ಒಂದು ಕರೆಯನ್ನು ಧನರಾಜ್ ಆಚಾರ್ ಸ್ವೀಕರಿಸಿದ್ದಾಗ ಆ ಕಡೆಯಿಂದ ಮಗಳು ಅಳುವ ಸದ್ದು ಕೇಳಿಸಿತ್ತು. ಇದನ್ನು ಕೇಳಿ ಕಣ್ಣೀರಿಟ್ಟಿದ್ದರು. ಇದೀಗ ಮತ್ತೆ ಮಡದಿ, ಮಗು ನೆನೆದು ಭಾವುಕರಾಗಿದ್ದಾರೆ. ಹಾಗಾದರೆ ನಿಜಕ್ಕೂ ಮಡದಿಯ ಪತ್ರ ಧನರಾಜ್ ಕೈ ಸೇರುತ್ತಾ? ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

More from Filmibeat

English summary
BBK 11: Contestants got emotional after reading the letters from the family
Read more about: bigg boss kannada 11 bigg boss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X