BBK 11: ಬಿಗ್ ಬಾಸ್‌ಗೆ ಎಂಟ್ರಿಕೊಟ್ರು ಅನುಷಾ- ಧರ್ಮ; ವೇದಿಕೆ ಮೇಲೆ ಕಾಲೆಳೆದ ಕಿಚ್ಚ!
ಬಿಗ್ ಬಾಸ್ ಕನ್ನಡ ಸೀಸನ್ 11 ಇಂದಿನಿಂದ ಅಧಿಕೃತವಾಗಿ ಶುರುವಾಗಿದೆ. ಸುದೀಪ್ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಒಬ್ಬೊಬ್ಬರನ್ನೇ ವೇದಿಕೆಗೆ ಕರೆದು, ಸುದೀಪ್ ಅವರು ಮಾತನಾಡಿಸುತ್ತಿದ್ದಾರೆ. ಈ ಬಾರಿ ಹೊಸ ಕಾನ್ಸೆಪ್ಟ್ ಅನ್ನು ತಂದಿದ್ದಾರೆ. ಒಂದು ನರಕ ಮತ್ತೊಂದು ಸ್ವರ್ಗ. ಈ ಎರಡು ಕಡೆಗೆ ಕಂಟೆಸ್ಟೆಂಟ್ ಅನ್ನು ವೇದಿಕೆ ಮೇಲೆಯೇ ಸ್ವರ್ಗಕ್ಕೆ ಕಳುಹಿಸಬೇಕಾ ಅಥವಾ ನರಕಕ್ಕೆ ಕಳುಹಿಸಬೇಕಾ ಎಂಬುದನ್ನು ತೀರ್ಮಾನಿಸುತ್ತಾರೆ.
ಆರಂಭದಲ್ಲಿಯೇ ಹೋದಂತ ಭವ್ಯ ಗೌಡ ಹಾಗೂ ಯಮುನಾ ಶ್ರೀನಿಧಿ ಅವರನ್ನು ತೀರ್ಪುಗಾರರನ್ನಾಗಿ ಕೂರಿಸಿದ್ದಾರೆ. ವೇದಿಕೆಯಲ್ಲಿ ಕಂಟೆಸ್ಟೆಂಟ್ ಗಳು ಮಾತನಾಡುವುದನ್ನೆಲ್ಲ ಕೇಳಿಸಿಕೊಂಡ ಮೇಲೆ ಅದರ ಆಧಾರದ ಮೇಲೆ ಸ್ವರ್ಗಕ್ಕೆ ಕಳುಹಿಸಬೇಕಾ, ನರಕಕ್ಕೆ ಕಳುಹಿಸಬೇಕಾ ಎಂಬುದನ್ನು ತೀರ್ಮಾನ ಮಾಡುವ ಅಧಿಕಾರ ನೀಡಿದ್ದಾರೆ. 5ನೇ ಸ್ಪರ್ಧಿಯಾಗಿ ಅನುಷಾ ರೈ, 6ನೇ ಸ್ಪರ್ಧಿಯಾಗಿ ಧರ್ಮ ಕೀರ್ತಿರಾಜ್ ಬಂದಿದ್ದಾರೆ.

ವಿಶ್ ಮಾಡಲು ಬಂದ ಧರ್ಮ ಕಂಟೆಸ್ಟೆಂಟ್
ಬಿಗ್ ಬಾಸ್ ಸೀಸನ್ ಕನ್ನಡ ಸೀಸನ್ 11 ಗೆ ಅನುಷಾ ರೈ ಬಂದಿದ್ದಾರೆ. ಒಮ್ಮೆಗೆ ಇಬ್ಬರನ್ನು ಕರೆಸಿ, ದೊಡ್ಮನೆಗೆ ಕಳುಹಿಸುತ್ತಿದ್ದಾರೆ. ಈ ಬಾರಿಯ ಕಂಟೆಸ್ಟೆಂಟ್ ಆಗಿ ಧರ್ಮ ಕೀರ್ತಿರಾಜ್ ಕೂಡ ಎಂಟ್ರಿ ಕೊಟ್ಟಿದ್ದಾರೆ. ಅನುಷಾ ರೈಗೆ ವಿಶ್ ಮಾಡುವುದಕ್ಕೆ ಧರ್ಮ ಅವರ ಇಡೀ ಕುಟುಂಬ ಬಂದಿದೆ ಎಂದು ಸುದೀಪ್ ಅವರು ಆರಂಭದಲ್ಲಿಯೇ ಕಾಲೆಳೆದರು. ಅನುಷಾ ರೈ ಹಾಗೂ ಧರ್ಮ ಸಿನಿಮಾವೊಂದರಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದೀಗ ಒಟ್ಟಿಗೆ ಬಿಗ್ ಬಾಸ್ ಮನೆಯೊಳಗೆ ಒಟ್ಟಿಗೆ ಹೋಗುತ್ತಿದ್ದಾರೆ.
ಅನುಷಾ ರೈ ಕಾಲೆಳೆದ ಸುದೀಪ್
ಆರಂಭದಲ್ಲಿ ಇಡೀ ಫ್ಯಾಮಿಲಿ ನಿಮಗೆ ವಿಶ್ ಮಾಡಲು ಬಂದಿದೆ ಎಂದೇ ಹೇಳಿದರು ಕಿಚ್ಚ. ಆಮೇಲೆ ಅನುಷಾ ರೈಗೆ ಧರ್ಮ ಕೂಡ ಕಂಟೆಸ್ಟೆಂಟ್ ಎಂದು ಗೊತ್ತಾದಾಗ ಇಬ್ಬರು ಕಪ್ ಗೆಲ್ಲೋಣಾ ಎಂದರು. ಅನುಷಾ ಮಾತು ಕೇಳಿದ ಕಿಚ್ಚ, ಇಬ್ಬರು ಕಪ್ ಗೆಲ್ಲೋ ಶೋ ಗಂಡ-ಹೆಂಡತಿಯದ್ದು ಎಂದರು. ಯಾರಾದರೂ ಒಬ್ಬರು ಗೆಲ್ಲುತ್ತಾರೆ ಎಂದಾಗ ನಾನು ನಾನು ಅಂತ ಇಬ್ಬರು ಕಿತ್ತಾಡಿದ್ದಾರೆ. ಧರ್ಮ ಅವರ ತಾಯಿ ಇಬ್ಬರಿಗೂ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ನಟಿ
ಅನುಷಾ ರೈ ಅವರು ಬೆಂಗಳೂರಿನಲ್ಲಿಯೇ ಇಂಜಿನಿಯರಿಂಗ್ ಮುಗಿಸಿದರು. ಬಳಿಕ 2017ರಲ್ಲಿ ಮಹಾನುಭಾವರು ಎಂಬ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. ದಮಯಂತಿ, ರೈಡರ್, ಪೆಂಟಗನ್, ಧೈರ್ಯಂ ಸರ್ವತ್ರ ಸಾಧನಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫೇಮಸ್ ಆಗಿದ್ದಾರೆ. ಈ ಬಾರಿಯ ಹುಟ್ಟುಹಬ್ಬಕ್ಕೆ ಕಾರು ತೆಗೆದುಕೊಂಡು ಸುದ್ದಿಯಲ್ಲಿದ್ದರು. ಬಿಗ್ ಬಾಸ್ ಗೂ ಮುನ್ನ ಬಾಲಿಗೂ ಹೋಗಿ ಎಂಜಾಯ್ ಮಾಡಿಕೊಂಡು ಬಂದಿದ್ದಾರೆ.
ಒಳ್ಳೆ ಬ್ರೇಕ್‌ಗಾಗಿ ಕಾಯುತ್ತಿರುವ ಕ್ಯಾಡ್ಬರಿ
ಇನ್ನು ಧರ್ಮ ಕೀರ್ತಿರಾಜ್ ಖ್ಯಾತ ಖಳನಟ ಕೀರ್ತಿರಾಜ್ ಅವರ ಮಗ. ಧರ್ಮ ಅವರ ಮೊದಲ ಸಿನಿಮಾದಲ್ಲಿ ಒಳ್ಳೆಯ ಬ್ರೇಕ್ ಸಿಕ್ಕಿತ್ತು. ಆದರೆ ಅದಾದ ಮೇಲೆ ಒಲವೇ ವಿಸ್ಮಯ ಎಂಬ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಎಂಟ್ರಿಯಾದರು. ಹಣೆಬರಹ, ಮುಮ್ತಾಜ್, ಬಿಂದಾಸ್ ಗೂಗ್ಲಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಬಿಗ್ ಬಾಸ್ ಗೆ ಬಂದಿರುವ ಧರ್ಮ, ಒಳ್ಳೆ ಬ್ರೇಕ್ ಗಾಗಿ ನಿರೀಕ್ಷೆ ಮಾಡುತ್ತಿದ್ದಾರೆ. ರಿಯಲ್ ಧರ್ಮ ಹೇಗಿದ್ದಾರೆ ಎಂಬುದನ್ನು ನಿರೂಪಿಸಲು ಬಿಗ್ ಬಾಸ್ ಆಯ್ಕೆ ಮಾಡಿಕೊಂಡಿದ್ದಾರೆ.


Click it and Unblock the Notifications











