BBK 11: ಡಬಲ್ ಎಲಿಮಿನೇಷನ್ ನಡೆದೇ ಹೋಯ್ತು; ಗೌತಮಿ ಬಳಿಕ ಹೊರಬಂದಿದ್ದು ಯಾರಂದ್ರೆ?

ಬಿಗ್‌ಬಾಸ್ ಕನ್ನಡ ಸೀಸನ್ 11 ಫಿನಾಲೆಗೆ ಒಂದು ವಾರ ಮಾತ್ರ ಬಾಕಿಯಿದೆ. ಸದ್ಯ ಮನೆಯಲ್ಲಿ 6 ಜನ ಉಳಿದುಕೊಂಡಿದ್ದಾರೆ. ಈ ವಾರ ಡಬಲ್ ಎಲಿಮಿನೇಷನ್ ನಡೆದಿದೆ. ಶನಿವಾರದ ಎಪಿಸೋಡ್‌ನಲ್ಲಿ ಗೌತಮಿ ಜಾಧವ್ ಹೊರಬಂದಿದ್ದಾರೆ. ಭಾನುವಾರ ಎಪಿಸೋಡ್ ಚಿತ್ರೀಕರಣ ಕೂಡ ನಡೆದಿದೆ. ಮತ್ತೊಬ್ಬರು ಬಿಗ್‌ಬಾಸ್ ಜರ್ನಿ ಮುಗಿಸಿದ್ದಾರೆ.

ಈಗಾಗಲೇ ಹನುಮಂತ ಫಿನಾಲೆ ಟಿಕೆಟ್ ಪಡೆದಿದ್ದಾರೆ. ವಾರದ ನಡುವೆ ಎಲಿಮಿನೇಷನ್ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸಂಕ್ರಾಂತಿ ಹಬ್ಬದ ಹಿನ್ನಲೆ ಎಲಿಮಿನೇಷನ್ ರದ್ದು ಮಾಡಿದ್ದರು. 5 ಜನ ನಾಮಿನೇಟ್ ಆಗಿದ್ದರು. ವೀಕೆಂಡ್ ಇಬ್ಬರು ಬಿಗ್‌ಬಾಸ್ ಜರ್ನಿ ಮುಗಿಸುವುದು ಖಚಿತವಾಗಿತ್ತು. ಶನಿವಾರವೇ ಗೌತಮಿ ಹೊರಬಂದರು.

Bigg Boss Kannada 11 double elimination After Gauthami Jadav this contestant evicted

ನಾಮಿನೇಟ್ ಆಗಿದ್ದ ಐವರ ಮುಂದೆ ಒಂದೊಂದು ಸೂಟ್‌ಕೇಸ್ ಇಟ್ಟು ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಯಿತು. ಸೂಟ್‌ಕೇಸ್ ಒಳಗೆ ಯಾರು ಎಲಿಮಿನೇಟ್, ಯಾರು ಸೇಫ್ ಎಂದು ಬರೆದಿದ್ದರು. ಅದರಂತೆ ರಜತ್, ಉಗ್ರಂ ಮಂಜು ಸೂಟ್‌ಕೇಸ್ ತೆಗೆದು ತಾವು ಸೇಫ್ ಎಂದು ತಿಳಿದು ಎಲ್ಲರಿಗೂ ಧನ್ಯವಾದ ತಿಳಿಸಿದ್ದರು. ಬಳಿಕ ಧನರಾಜ್, ಗೌತಮಿ ಹಾಗೂ ಭವ್ಯ ಉಳಿದುಕೊಂಡಿದ್ದರು.

ಮೂವರನ್ನು ಒಟ್ಟಿಗೆ ಸೂಟ್‌ಕೇಸ್ ತೆಗೆಯಲು ಹೇಳಿದಾಗ ಗೌತಮಿ ಎಲಿಮಿನೇಟ್ ಎನ್ನುವುದು ಗೊತ್ತಾಯಿತು. ಧನರಾಜ್ ಹಾಗೂ ಭವ್ಯ ಸೇಫ್ ಆಗಿದ್ದರು. ಆದರೆ ಗೌತಮಿ ಬಳಿಕ ಧನರಾಜ್ ಹೊರಗೆ ಬಂದಿದ್ದಾರೆ ಎನ್ನಲಾಗ್ತಿದೆ. ಭಾನುವಾರದ ಎಪಿಸೋಡ್‌ನಲ್ಲಿ ಇದು ಪ್ರಸಾರವಾಗಲಿದೆ. 16ನೇ ವಾರಕ್ಕೆ ಧನರಾಜ್ ತಮ್ಮ ಜರ್ನಿ ಮುಗಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದೆ.

ಬಹಳ ಹಿಂದೆಯೇ ಧನರಾಜ್ ಆಚಾರ್ ಬಿಗ್‌ಬಾಸ್ ಮನೆಯಿಂದ ಹೊರಬರುತ್ತಾರೆ ಕೆಲವರು ಅಂದುಕೊಂಡಿದ್ದರು. ಆದರೆ ಅಚ್ಚರಿ ಎನ್ನುವಂತೆ 100 ದಿನ ಪೂರೈಸಿದ್ದಾರೆ. ಹನುಮಂತ ಹಾಗೂ ಧನರಾಜ್ ಸ್ನೇಹ ಚೆನ್ನಾಗಿತ್ತು. ಇಬ್ಬರ ಕಾಂಬಿನೇಷನ್ ವೀಕ್ಷಕರಿಗೆ ಮನರಂಜನೆ ಉಣಬಡಿಸಿತ್ತು. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿ ತಮ್ಮ ಕಾಮಿಡಿ ವೀಡಿಯೋಗಳಿಂದ ಗಮನ ಸೆಳೆದವರು ಧನರಾಜ್. ಇದೇ ಜನಪ್ರಿಯತೆಯಿಂದ ದೊಡ್ಮನೆ ಆಟಕ್ಕೆ ಆಯ್ಕೆ ಆಗಿದ್ದರು.

ಪುತ್ತೂರು ಮೂಲದವರು ಧನರಾಜ್ ಆಚಾರ್. ಚಿಕ್ಕಂದಿನಿಂದ ನಟನಾಗುವ ಕನಸು ಕಂಡವರು. ಟಿಕ್‌ಟಾಕ್ ಅದಕ್ಕೆ ದಾರಿ ಮಾಡಿಕೊಟ್ಟಿತ್ತು. ಪತ್ನಿ ಪ್ರಜ್ಞಾ ಹಾಗೂ ಕುಟುಂಬಸ್ಥರ ಜೊತೆ ಸೇರಿ ಕಾಮಿಡಿ ವೀಡಿಯೋಗಳನ್ನು ಮಾಡುತ್ತಿದ್ದರು. ಬಿಗ್‌ಬಾಸ್ ಮನೆಯಲ್ಲಿ ಮೊದ ಮೊದಲು ವೀಕ್ ಕಂಟೆಸ್ಟೆಂಟ್ ಎನಿಸಿಕೊಂಡಿದ್ದರು. ಬಳಿಕ ನಿಧಾನವಾಗಿ ಆಟಕ್ಕೆ ಒಗ್ಗಿಕೊಂಡರು. ಅಭಿಮಾನಿಗಳ ಬೆಂಬಲವೂ ಸಿಕ್ಕಿತ್ತು. ಹಾಗಾಗಿ ಇಷ್ಟು ದಿನ ಮನೆಯಲ್ಲಿ ಉಳಿದುಕೊಂಡರು.

ಮೋಸ ಮಾಡಿ ಟಾಸ್ಕ್ ಗೆದ್ದ ಆರೋಪ ಇತ್ತೀಚೆಗೆ ಧನರಾಜ್ ವಿರುದ್ಧ ಕೇಳಿಬಂದಿತ್ತು. ಇದೇ ಕಾರಣಕ್ಕೆ ಮಿಡ್ ವೀಕ್ ಎಲಿಮಿನೇಷನ್ ಕೂಡ ರದ್ದಾಗಿತ್ತು. ಇದರಿಂದ ಬೇಸರಗೊಂಡ ಧನರಾಜ್ ಮನೆಯಿಂದ ಹೊರ ಬರುವ ನಿರ್ಧಾರಕ್ಕೂ ಬಂದಿದ್ದರು. ಬಳಿಕ ಇತರೆ ಸ್ಪರ್ಧಿಗಳು ಸಮಾಧಾನ ಮಾಡಿದ್ದರು.

ಮಿಡ್ ವೀಕ್ ಎಲಿಮಿನೇಷನ್‌ ಇಂದ ತಪ್ಪಿಸಿಕೊಳ್ಳಲು ಟಾಸ್ಕ್ ಕೊಡಲಾಗಿತ್ತು. ಅದು ಪಝಲ್ ಗೇಮ್. ಕನ್ನಡಿಯಲ್ಲಿ ಪ್ರತಿಬಿಂಬ ನೋಡಿ ಧನರಾಜ್ ಬೇಗ ಮುಗಿಸಿದ್ದರು. ಈ ಬಗ್ಗೆ ವೀಕ್ಷಕರು ಕಾಮೆಂಟ್ ಮಾಡಿದ್ದರು. ಬಿಗ್‌ಬಾಸ್ ಕೂಡ ಗಮನಿಸಿ ವೀಡಿಯೋ ಸಮೇತ ಎಲ್ಲರ ಮುಂದಿಟ್ಟರು. ನನ್ನಿಂದ ತಪ್ಪಾಗಿದೆ ಎಂದು ನನಗೆ ಗೊತ್ತಿರಲಿಲ್ಲ. ನನ್ನನ್ನು ಸೇರಿಸಿಕೊಂಡು ನಾಮಿನೇಷನ್ ಪ್ರಕ್ರಿಯೆ ಆರಂಭಿಸಿ ಎಂದು ಧನರಾಜ್ ಮನವಿ ಮಾಡಿದ್ದರು.

ಧನರಾಜ್ ಎಲಿಮಿನೇಟ್ ಆಗಿದ್ದರೆ ಫಿನಾಲೆ ವಾರಕ್ಕೆ ಮಂಜು, ಮೋಕ್ಷಿತಾ, ಹನುಮಂತ, ಭವ್ಯ, ತ್ರಿವಿಕ್ರಮ್, ರಜತ್ ಎಂಟ್ರಿಕೊಟ್ಟಂತೆ ಆಗುತ್ತದೆ. ಈ ಬಾರಿ ಯಾರು ವಿಜೇತರಾಗಿ ಟ್ರೋಫಿ ಎತ್ತಿ ಹಿಡಿಯುತ್ತಾರೆ ಕಾದು ನೋಡಬೇಕು.

More from Filmibeat

English summary
BBK 11: Who got eliminated after gauthami in the double eviction?
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X