BBK 11: ಮನೆ ಮಂದಿಗೆ ಕಿಚ್ಚನ ಶಾಕ್ ಟ್ರೀಟ್‌ಮೆಂಟ್; ವಾಶ್‌ರೂಗೆ ಹೋಗಿಬಂದ ಹನುಮಂತ!

ಬಿಗ್‌ಬಾಸ್ ಕನ್ನಡ ಸೀಸನ್ 11 ಇದೀಗ 105ನೇ ದಿನಕ್ಕೆ ಕಾಲಿಟ್ಟಿದೆ. ಇನ್ನೆರಡು ವಾರಗಳಲ್ಲಿ ಫಿನಾಲೆ ಬರಲಿದೆ. ಮನೆಯೊಳಗೆ 9 ಮಂದಿ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಅದರಲ್ಲಿ ಒಬ್ಬರು ಈ ವಾರ ದೊಡ್ಮನೆಯಿಂದ ಹೊರಗೆ ಬರುತ್ತಿದ್ದಾರೆ. ಈಗಾಗಲೇ ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್ ಚಿತ್ರೀಕರಣವಾಗಿದ್ದು ಪ್ರೋಮೊ ಹೊರಬಂದಿದೆ.

ಸದ್ಯ ಟಿಕೆಟ್ ಟು ಫಿನಾಲೆ ನಡೀತಿದೆ. ಈಗಾಗಲೇ ಹನುಮಂತ ಫಿನಾಲೆಗೆ ಹೋಗುವುದು ಪಕ್ಕಾ ಆಗಿದೆ. ವೀಕೆಂಡ್ ಎಪಿಸೋಡ್‌ಗಳಲ್ಲಿ ಕಿಚ್ಚನ ಫನ್ನಿ ಟಾಸ್ಕ್‌ಗಳು ಇರುತ್ತವೆ. ಅದರಲ್ಲೂ Yes or No ಎಲ್ಲರಿಗೂ ಬಹಳ ಇಷ್ಟ. ಆದರೆ ಭಾನುವಾರ ಶಾಕಿಂಗ್ ಟಾಸ್ಕ್‌ ಅನ್ನು ಮನೆ ಮಂದಿಗೆ ಸುದೀಪ್ ಕೊಟ್ಟಿದ್ದಾರೆ. ನಿಜಕ್ಕೂ ಸ್ಪರ್ಧಿಗಳಿಗೆ ಶಾಕ್ ಕೊಡುವ ಆಟ ಇದು.

Bigg Boss Kannada 11 electric shock segment in weekend with sudeepa episode

ಇಬ್ಬರು ಸ್ಪರ್ಧಿಗಳನ್ನು ವಿರುದ್ಧ ದಿಕ್ಕಿನಲ್ಲಿ ಕೂರಿಸಿ ಸುದೀಪ್ ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ತಪ್ಪು ಉತ್ತರ ಕೊಟ್ಟವರಿಗೆ ಸಣ್ಣ ಪ್ರಮಾಣದಲ್ಲಿ ಶಾಕ್ ಶಿಕ್ಷೆ ಕೊಟ್ಟಿದ್ದಾರೆ. ರಜತ್, ಧನರಾಜ್, ಗೌತಮಿ, ತ್ರಿವಿಕ್ರಮ್ ಎಲ್ಲರಿಗೂ ಶಾಕ್ ಟ್ರೀಟ್‌ಮೆಂಟ್ ಸಿಕ್ಕಿದೆ. ಸದ್ಯ ಅದಕ್ಕೆ ಸಂಬಂಧಿಸಿದ ಪ್ರೋಮೊ ರಿಲೀಸ್ ಆಗಿ ವೈರಲ್ ಆಗುತ್ತಿದೆ.

ಕರೆಂಟ್ ಶಾಕ್‌ಗೆ ಎಲ್ಲರೂ ಪತರಗುಟ್ಟಿದ್ದಾರೆ. ಅದನ್ನು ನೋಡಿ ಉಳಿದ ಸ್ಪರ್ಧಿಗಳು ಎಂಜಾಯ್ ಮಾಡಿದ್ದಾರೆ. ಗೌತಮಿ ಅಂತೂ ಕೊಟ್ಟ ಶಾಕ್‌ಗೆ ಎಲ್ಲಾ ಮರೆತು ಹೋಯಿತು ಎಂದಿದ್ದಾರೆ. ಕೊನೆಗೆ ಹನುಮಂತ ಸರದಿ ಬಂದಿದೆ. ಯಾವುದಕ್ಕೂ ಒಮ್ಮೆ ಮೂತ್ರ ವಿಸರ್ಜನೆ ಮಾಡಿ ಬರುತ್ತೀನಿ ಎಂದು ಹನುಮಂತ ಹೇಳಿರುವುದು ನಗೆಬುಗ್ಗೆ ಸಿಡಿಸಿದೆ. ಹನುಮಂತ ವಾಶ್‌ರೂಮ್‌ಗೆ ಹೋಗಿರುವುದನ್ನು ಪ್ರೋಮೊದಲ್ಲಿ ನೋಡಬಹುದು.

ಒಟ್ಟಾರೆ ಈ ಭಾನುವಾರ ಎಪಿಸೋಡ್ ಭರ್ಜರಿ ಮನರಂಜನೆ ಹೊತ್ತು ತರ್ತಿದೆ. ಜೊತೆಗೆ ಎಲಿಮಿನೇಷನ್ ಶಾಕ್ ಕೂಡ ಇದೆ. ಈ ವೀಕೆಂಡ್ ಇಬ್ಬರು ಮನೆಯಿಂದ ಹೊರ ಬರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಚೈತ್ರಾ ಕುಂದಾಪುರ ಮಾತ್ರ ಎಲಿಮಿನೇಟ್ ಆಗಿದ್ದಾರೆ ಎನ್ನಲಾಗ್ತಿದೆ. 105 ದಿನಗಳ ಬಳಿಕ ಆಕೆ ಮನೆಯಿಂದ ಹೊರಬಂದಿರುವ ಬಗ್ಗೆ ಗುಸುಗುಸು ಶುರುವಾಗಿದೆ.

ಫಿನಾಲೆಗೆ ಇನ್ನೆರಡು ವಾರ ಮಾತ್ರ ಬಾಕಿಯಿದೆ. ಈ ಬಾರಿ ಯಾರು ಗೆಲ್ಲುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ಹನುಮಂತ ಫಿನಾಲೆ ಹೋಗಿದ್ದಾರೆ. ಇನ್ನುಳಿದ 8 ಜನರಲ್ಲಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂದು ಕಾದು ನೋಡಬೇಕಿದೆ. ಒಬ್ಬೊಬರಿಗೆ ಒಬ್ಬರು ಫೇವರಿಟ್ ಆಗಿದ್ದಾರೆ. ಹನುಮಂತ ಅಥವಾ ತ್ರಿವಿಕ್ರಮ್ ಗೆಲ್ಲಬಹುದು ಎನ್ನುವುದು ಬಹಳ ಜನರ ಲೆಕ್ಕಾಚಾರ.

ಚೈತ್ರಾ ಕುಂದಾಪುರ ಬಹಳ ಹಿಂದೆಯೇ ಎಲಿಮಿನೇಟ್ ಆಗುತ್ತಾರೆ ಎಂದು ವೀಕ್ಷಕರು ಬಯಸಿದ್ದರು. ಆದರೆ ಆಕೆ 100 ದಿನ ಪೂರೈಸಿದ್ದಾರೆ.ಈ ವಾರ ಮನೆಯಿಂದ ಹೊರ ಬರಲು ನಾಮಿನೇಟ್ ಆಗಿದ್ದರು. ಇನ್ನು ಫಿನಾಲೆಗೆ ಟಿಕೆಟ್ ಪಡೆದಿರುವ ಹನುಮಂತ ಈ ವಾರ ಕೂಡ ಕ್ಯಾಪ್ಟನ್ ಪಟ್ಟ ಅಲಂಕರಿಸಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದರೂ ಫಿನಾಲೆ ಹಂತಕ್ಕೆ ಏರಿರುವುದು ವಿಶೇಷ. ಇನ್ನು ಇನ್ನುಳಿದ ಸ್ಪರ್ಧಿಗಳಿಗೂ ಅಚ್ಚರಿ ಮೂಡಿಸಿದೆ.

More from Filmibeat

English summary
BBK 11; Contestants Face electric Shock Treatment in weekend show;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X