Bigg Boss Kannada 11 ; ಅಂದುಕೊಂಡಂತೆ ಆಚೆ ಬಂದರು ಓವರ್ ಆಕ್ಟಿಂಗ್ ಆಂಟಿ ಎಂದ ಜನ ..!

ಮತ್ತೊಬ್ಬರ ಖಾಸಗೀ ಬದುಕಿನ ಮೇಲಿರೋ ಮನುಷ್ಯ ಸಹಜ ಕ್ಯೂರಿಯಾಸಿಟಿಯನ್ನೇ ಬಂಡವಾಳ ಮಾಡಿಕೊಂಡ ಬಿಗ್ ಬಾಸ್ ಕಾರ್ಯಕ್ರಮವನ್ನ ಜನ ಬೈದುಕೊಂಡೂ ನೋಡುತ್ತಾರೆ. ನೋಡುತ್ತಲೇ ಬೈಯುತ್ತಾರೆ.. ಇಂಥಾ ಕಾರ್ಯಕ್ರಮದ ಮೊದಲನೇ ವಾರದ ಫಲಿತಾಂಶ ಆಚೆ ಬಂದಿದೆ. ಓವರ್ ಆಕ್ಟಿಂಗ್ ಆಂಟಿ ಯಮುನಾ ಶ್ರೀನಿಧಿ ಅವರನ್ನು ಕೇವಲ ಒಂದು ವಾರದಲ್ಲಿ ಮನೆಯಾಚೆ ಕಳುಹಿಸಲಾಗಿದೆ.

ಹೌದು, ಬಿಗ್ ಬಾಸ್ ಮನೆಯೊಳಗೆ ಹೋದ ಮೊದಲ ದಿನದಿಂದನೇ ಓವರ್ ಆಕ್ಟಿಂಗ್ ನಟಿ ಎಂಬ ಕುಖ್ಯಾತಿಯನ್ನೂ ಗಳಿಸಿದ ಯಮುನಾ ಶ್ರೀನಿಧಿ ನಿರೀಕ್ಷೆ ಮಾಡಿದಂತೆ ಬಿಗ್ ಬಾಸ್ ನ ಮೊದಲ ವಾರದಲ್ಲಿಯೇ ಹೊರ ಬಂದಿದ್ದಾರೆ. ಈ ಮೂಲಕ ತಮ್ಮ ಬಿಗ್ ಬಾಸ್ ಯಾತ್ರೆಯನ್ನೂ ಮುಗಿಸಿದ್ದಾರೆ. ಬೆಂಬಲಿಸಿದ, ಕಾಲೆಳೆದ ಪ್ರೇಕ್ಷಕರಿಗೆಲ್ಲ ಧನ್ಯವಾದವನ್ನೂ ಹೇಳಿದ್ದಾರೆ.

Bigg Boss Kannada 11 Elimination Week 1 Yamuna Srinidhi is the first contestant eliminated

ಇನ್ನೂ ಯಮುನಾ ಶ್ರೀನಿಧಿ ಅವರ ಜೊತೆ ಈ ಬಾರಿ ಮೊದಲ ಕ್ಯಾಪ್ಟನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಹಂಸಾ ಕೂಡ ರೆಡ್ ಝೋನ್‌ನಲ್ಲಿ ಇದ್ದರು. ಹಿಂದೂತ್ವವಾದಿ ಚೈತ್ರಾ ಕುಂದಾಪುರ ಕೂಡ ಮನೆ ಹೊಸಿಲಿನ ಬಳಿ ನಿಂತಿದ್ದರು. ಆದರೆ, ಚೈತ್ರಾ ಮತ್ತು ಹಂಸಾ ಅದೃಷ್ಟ ಇಬ್ಬರು ಮನೆಯಲ್ಲಿ ಉಳಿದರು. ಕನ್ನಡಿಗರ ಕೃಪಾಕಟಾಕ್ಷದಿಂದ ಬಿಗ್ ಬಾಸ್‌ ಮನೆಯ ಸ್ವರ್ಗ-ನರಕವನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಪಡೆದರು. ದುರಾದೃಷ್ಟ ಯಮುನಾ ಶ್ರೀನಿಧಿ ಅವರಿಗೆ ಈ ಅವಕಾಶ ಸಿಗಲಿಲ್ಲ. ಕನ್ನಡಿಗರು ಕೈ ಹಿಡಿಯಲಿಲ್ಲ.

ಉಳಿದಂತೆ ಬಿಗ್ ಬಾಸ್‌ ಮನೆಯಾಚೆ ಬಂದ ನಂತರ ಯಮುನಾ ಶ್ರೀನಿಧಿ ಅವರಿಗೆ ಸುದೀಪ್ ಮನೆಯಾಚೆ ಮುಂದಿನ ದಿನಗಳಲ್ಲಿ ಯಾರು ಹೊರಬರಬಹುದು ಎನ್ನುವ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಉತ್ತರವನ್ನು ನೀಡಲು ಚೂರು ಯೋಚನೆ ಮಾಡದ ಯಮುನಾ ಶ್ರೀನಿಧಿ ಮುಂದಿನ ವಾರ ನಾನು ನಿಂತಿರುವ ಜಾಗದಲ್ಲಿ ಐಶ್ವರ್ಯ ಸಿಂಧೋಗಿ ಅವರು ಇರಬಹುದು ಎಂದು ಹೇಳಿದರು. ಮೋಕ್ಷಿತಾ ಪೈ ಕೂಡ ಮನೆಯಾಚೆ ಬರಬಹುದು ಎಂದು ಹೇಳಿದರು. ಇನ್ನೂ ಕೊನೆಯ ಹಂತಕ್ಕೆ ಯಾರು ತಲುಪಬಹುದು ಎಂದು ಸುದೀಪ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಮುನಾ ನನ್ನ ಪ್ರಕಾರ ಶಿಶಿರ್ ಶಾಸ್ತ್ರಿ, ಧರ್ಮ ಕೀರ್ತಿರಾಜ್, ತ್ರಿವಿಕ್ರಮ್ ಈ ಮೂವರಲ್ಲಿ ಒಬ್ಬರು ಈ ಕಾರ್ಯಕ್ರಮದ ಮೂಲಕ ಜನ ಮನ ಗೆಲ್ಲಬಹುದು ಎಂದರು.

More from Filmibeat

Read more about: biggboss bigg boss tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X