ಮಗಳೊಂದಿಗೆ ಮೊಬೈಲ್ ನೋಡಿ ಹೆಂಡತಿಯಿಂದ ಬೈಯಿಸಿಕೊಂಡ ಧನರಾಜ್ ಆಚಾರ್; ಪ್ಲ್ಯಾನ್ ಮಾಡಿದ್ದೇನು?

By ಅನಿತಾ ಬನಾರಿ

ಧನರಾಜ್ ಆಚಾರ್ ಯಾರಿಗೆ ಗೊತ್ತಿಲ್ಲ ಹೇಳಿ?! ಲಾಕ್‌ಡೌನ್ ಸಮಯದಿಂದಲೂ ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಫನ್ನಿ ರೀಲ್ಸ್ ಅನ್ನು ಮಾಡುತ್ತಾ ನೆಟ್ಟಿಗರ ಮನ ಸೆಳೆದಿದ್ದರು ಧನರಾಜ್. ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದ ಧನರಾಜ್ ಆಚಾರ್ ತಮ್ಮ ನಡೆ, ನುಡಿಯ ಮೂಲಕ ವೀಕ್ಷಕರ ಮನ ಸೆಳೆದಿದ್ದರು.

ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಇದೀಗ "ಬಾಯ್ಸ್ ವರ್ಸಸ್ ಗರ್ಲ್ಸ್" ಎಂಬ ರಿಯಾಲಿಟಿ ಶೋ ನಲ್ಲೂ ಧನರಾಜ್ ಆಚಾರ್ ಭಾಗವಹಿಸುತ್ತಿದ್ದಾರೆ. ಇನ್‌ಸ್ಟಾಗ್ರಾಂ ಹೊರತಾಗಿ ಯೂಟ್ಯೂಬ್, ಫೇಸ್ಬುಕ್ ಹೀಗೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಧನರಾಜ್ ಬಹಳ ಟ್ರೆಂಡ್ ನಲ್ಲಿದ್ದಾರೆ.

Bigg Boss Kannada 11 fame actor Dhanraj Achar asked his wife for a mobile phone

ಹೌದು, ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಯಾಗಿದ್ದ ಧನರಾಜ್ ಆಚಾರ್ ತಮ್ಮ ಮುಗ್ಧತೆ ಹಾಗೂ ಹಾಸ್ಯಪ್ರಜ್ಞೆಯಿಂದ ಬಹುದೊಡ್ಡ ಅಭಿಮಾನಿ ಬಳಗವನ್ನು ಪಡೆದಿದ್ದಾರೆ. ಇವರು ತಮ್ಮ ಹೆಂಡತಿ ಹಾಗೂ ಕುಟುಂಬದವರೊಂದಿಗೆ ಆಗಾಗ ಒಂದಷ್ಟು ರೀಲ್‌ಗಳನ್ನು ಮಾಡುತ್ತಿರುತ್ತಾರೆ. ಫನ್ನಿ ರೀಲ್ಸ್ ಅಥವಾ ಸಂದೇಶ ಭರಿತ ಕ್ರಿಯಾಶೀಲ ವಿಡಿಯೋಗಳನ್ನು ಮಾಡುವ ಇವರು ಜನರನ್ನು ನಗಿಸುವ ಪ್ರಯತ್ನ ಮಾಡುತ್ತಿರುತ್ತಾರೆ.

ಇತ್ತೀಚೆಗಷ್ಟೇ ಧನರಾಜ್ ಪ್ರಜ್ಞಾ ಆಚಾರ್ ದಂಪತಿಗೆ ಒಂದು ಮುದ್ದಾದ ಹೆಣ್ಣು ಮಗುವಾಗಿದ್ದು, ಆ ಮಗುವಿಗೆ ಪ್ರಸಿದ್ಧಿ ಎಂದು ಹೆಸರಿಟ್ಟಿದ್ದಾರೆ. ಇದೀಗ ಧನರಾಜ್ ತನ್ನ ಮಗಳಾದ ಪ್ರಸಿದ್ಧಿಯೊಂದಿಗೂ ಮೊದಲ ರೀಲ್ಸ್ ಅನ್ನು ಮಾಡಿದ್ದಾರೆ. ಹೌದು, ಇದೀಗ ಧನರಾಜ್ ಆಚಾರ್ ತಮ್ಮ ಪತ್ನಿ ಪ್ರಜ್ಞಾ ಹಾಗೂ ಮಗಳು ಪ್ರಸಿದ್ಧಿಯೊಂದಿಗೆ ಮಾಡಿದ ರೀಲ್ ಒಂದೂ ಬಹಳ ವೈರಲ್ ಆಗಿದೆ.

ಈ ರೀಲ್‌ನಲ್ಲಿ ಧನರಾಜ್ ಆಚಾರ್ ತಮ್ಮ ಮಗಳೊಂದಿಗೆ ಮೊಬೈಲ್ ಅನ್ನು ನೋಡುತ್ತಿರುತ್ತಾರೆ. ಅದನ್ನು ನೋಡಿದ ಅವರ ಪತ್ನಿ "ಮಗುವೊಂದಿಗೆ ಮೊಬೈಲ್ ನೋಡಬೇಡಿ" ಎಂದು ಜೋರು ಮಾಡುತ್ತಾರೆ. ಹಾಗೆಯೇ ಮೊಬೈಲ್‌ ಅನ್ನು ಗಂಡನಿಂದ ಕಿತ್ತುಕೊಂಡು ಹೋಗುತ್ತಾರೆ. ಅದಕ್ಕೆ ಪ್ರತಿಯಾಗಿ ಧನರಾಜ್, ಮಗುವನ್ನು ಕ್ಯಾರಿ ಬ್ಯಾಗ್‌ನಲ್ಲಿ ಕಟ್ಟಿಕೊಂಡು ಮೊಬೈಲ್ ನೋಡಲು ಆರಂಭಿಸುತ್ತಾರೆ. ಈ ವಿಡಿಯೋನಲ್ಲಿ ಮಕ್ಕಳಿಗೆ ಮೊಬೈಲನ್ನು ತೋರಿಸಬೇಡಿ ಎಂಬ ಸಂದೇಶವನ್ನು ಸಾರುವುದಲ್ಲದೆ, ಧನರಾಜ್ ಆಚಾರ್ ಅವರ ಮುದ್ದಾದ ಮಗುವನ್ನು ತೋರಿಸಿರುವುದಕ್ಕೆ ಪ್ರೇಕ್ಷಕರಿಂದ ನೆಟ್ಟಿಗರಿಗೆ ಬಹಳ ಸಂತಸವಾಗಿದೆ.

ಪುಟಾಣಿ ಪ್ರಸಿದ್ಧಿ ಕೂಡ ರೀಲ್‌ನಲ್ಲಿ ಬಹಳ ಚೆನ್ನಾಗಿ ನಗುನಗುತ ಕಾಣಿಸಿಕೊಂಡಿರುವುದರಿಂದ ನೆಟ್ಟಿಗರು ಹಾಗೂ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
640 ಸಾವಿರಕ್ಕೂ ಹೆಚ್ಚಿನ ಫಾಲೋವರ್ಸ್ ಇರುವ ಧನರಾಜ್ ಆಚಾರ್ ರವರ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ 650ಕ್ಕೂ ಹೆಚ್ಚಿನ ವಿಡಿಯೋಗಳಿವೆ. ಪ್ರಸ್ತುತ ಈ ರೀಲ್‌ಗೆ 340,000ಕ್ಕೂ ಹೆಚ್ಚಿನ ಲೈಕ್ಸ್ ಬಂದಿವೆ.

More from Filmibeat

English summary
Bigg Boss Kannada 11 fame actor Dhanraj Achar asked his wife for a mobile phone. New video viral;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X