BBK 11: ಬಿಗ್ ಬಾಸ್ ಮನೆಯಲ್ಲಿ ಕಿತ್ತಾಡೋ ಮೋಕ್ಷಿತಾ-ವಿಕ್ರಮ್ ಭವಿಷ್ಯದಲ್ಲಿ ಪ್ರೇಮಿಗಳಾಗ್ತಾರಾ?

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11ಗೆ 'ಪಾರು' ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಕೂಡ ಎಂಟ್ರಿ ಕೊಟ್ಟಿದ್ದಾರೆ. ಆ ಧಾರಾವಾಹಿಯಲ್ಲಿ ಎಷ್ಟು ಸೈಲೆಂಟ್ ಆಗಿ ಇದ್ದರೋ ಅಷ್ಟೇ ಸೈಲೆಂಟ್ ಆಗಿ ಬಿಗ್ ಬಾಸ್ ಮನೆಯಲ್ಲೂ ಇದ್ದರು. ಎರಡು ವಾರ ತಾಳ್ಮೆಯ ಸ್ವರೂಪಿಯಾಗಿ ಕಾಣಿಸಿಕೊಂಡರು.

ಬಿಗ್ ಬಾಸ್‌ಗೆ ಮೋಕ್ಷಿತಾ ಸ್ಟ್ರೆಂಥ್ ಗೊತ್ತಿತ್ತು ಅನ್ಸುತ್ತೆ. ಅದ್ಕೆ ಎಲಿಮಿನೇಷನ್ ಶಾಕ್ ನೀಡಿದ್ದರು. ಹಂಸ ಅವರ ಜೊತೆಗೆ ಮೋಕ್ಷಿತಾರನ್ನು ಕಾರಲ್ಲಿ ಕರೆದುಕೊಂಡು ಹೋಗಿದ್ದರು. ಎರಡು ನಿಮಿಷ ಸುತ್ತಾಡಿಸಿಕೊಂಡು ಕರೆದುಕೊಂಡು ಬಂದು ಬಿಟ್ಟರು.

Bigg bOss kannada 11 fans go crazy about Mokshitha and trivikram

ಅಬ್ಬಬ್ಬಾ ಅಲ್ಲಿಂದ ಶುರು ಆಯ್ತು ನೋಡಿ ಮೋಕ್ಷಿತಾ ರಿಯಲ್ ಕಹಾನಿ. ಬಂದ ಕೂಡಲೇ ಗರಂ ಆಗಿದ್ದೆ ವಿಕ್ರಂ ಮೇಲೆ. ಯಾರೀ ಹತ್ತು ವಾರದ ಸ್ಪರ್ಧಿ ಅಂತ ಮೋಕ್ಷಿತಾ ತೆಗೆದುಕೊಂಡ ಕ್ಲಾಸ್‌ಗೆ ವಿಕ್ರಂ ಏನು ಮಾಡಬೇಕೆಂದು ತಿಳಿಯದೇ ಸುಮ್ಮನಾಗಿ ಬಿಟ್ಟರು. ಆದರೆ ಈ ಇಬ್ಬರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೆವಿ ಕ್ರೇಜ್ ಶುರುವಾಗಿದೆ.

ವಿಕ್ರಂ ಮೇಲೆ ಮೋಕ್ಷಿತಾ ಗರಂ

ಮೋಕ್ಷಿತಾ ಕೆಂಗಣ್ಣಿಗೆ ಗುರಿಯಾಗುವಂತ ಕೆಲಸವನ್ನೇ ಮಾಡ್ತಾ ಇರ್ತಾರೆ ವಿಕ್ರಂ. ಗೋಮುಖ ವ್ಯಾಘ್ರ ಎಂದೇ ಮೋಕ್ಷಿತಾ ಬೈದಿದ್ದರು. ಆದರೆ ಆ ಮಾತಿಗೆ ಪಶ್ಚಾತ್ತಾಪ ಪಡುವಷ್ಟರಲ್ಲಿಯೇ ಮತ್ತೊಂದು ತಪ್ಪಲ್ಲಿ ಲಾಕ್ ಆದ್ರೂ ವಿಕ್ರಂ. ಬೆನ್ನ ಹಿಂದೆ ಮಾತಾಡಿದ್ದ ವಿಡಿಯೋವನ್ನು ಬಿಗ್ ಬಾಸ್ ಹಾಕಿದ್ದರು‌. ಆಗ ಮೋಕ್ಷಿತಾ ಅವರನ್ನು ಹಕ್ಕಿ ಎಂದು ಅಣಕಿಸಿದ್ದರು. ಇದರಿಂದ ಮೋಕ್ಷಿತಾ ಇನ್ನಷ್ಟು ಕೋಪಗೊಂಡಿದ್ದರು.

ಮೋಕ್ಷಿತಾರನ್ನ ಮಾತಾಡಿಸುವ ಪ್ರಯತ್ನ

ವಿಕ್ರಂಗೆ ಮೋಕ್ಷಿತಾ ಜೊತೆಗೆ ಮಾತನಾಡುವ ಆಸೆ ಇದೆ. ಅದನ್ನ ಚೈತ್ರಾ ಜೊತೆ ಕೂತಾಗಲೂ ಹೇಳಿದ್ದಾರೆ. ನಾನೊಂದು ಕಾರ್ಡ್ ಕೇಳಿದ್ದೆ. ಆ ಕಾರ್ಡ್ ಕೊಟ್ಟಿದ್ದರೆ ಆ ನೆಪದಲ್ಲಿ ಮೋಕ್ಷಿತಾ ಅವರನ್ನ ಮಾತಾಡಿಸಬಹುದಿತ್ತು ಅಂತ. ಈ ಬಾರಿ ಮೋಕ್ಷಿತಾ ಅವರ ಕೋಪ ಕಡಿಮೆ ಮಾಡುವುದಕ್ಕೆ ನಾಮಿನೇಷನ್‌ನಿಂದ ಅವರನ್ನೇ ಪಾರು ಮಾಡಿದ್ದಾರೆ. ನಾವೇ ಮಾತಾಡಿಸಿದ್ರು ನೀವೂ ಮಾತೇ ಆಡಲ್ಲ ಅಂತೆಲ್ಲಾ ಆಗಾಗ ಹೇಳ್ತಾ ಇರ್ತಾರೆ.

ವಿಕ್ರಂ-ಮೋಕ್ಷಿ ಒಂದಾಗಿ ಎಂದ ಫ್ಯಾನ್ಸ್

ಮೋಕ್ಷಿತಾ ಹಾಗೂ ವಿಕ್ರಂ ಬಗ್ಗೆ ಊಹೆನೂ ಮಾಡಿಕೊಳ್ಳಲಾಗದಷ್ಟು ಕ್ರೇಜ್ ಸೃಷ್ಟಿಯಾಗಿದೆ. ಇನ್‌ಸ್ಟಾಗ್ರಾಂ ಪೇಜ್ ಓಪನ್ ಮಾಡಿದ್ರೆ ಸಾಕು ಇಬ್ಬರ ಫೋಟೋ, ವಿಡಿಯೋಗಳೇ ಕಣ್ಣಿಗೆ ಕಾಣಿಸುತ್ತವೆ. ವಿಕ್ರಂ ಬೇರೆ ಸ್ಪರ್ಧಿಗಳ ಜೊತೆಗೆ ಜಗಳಕ್ಕೆ ನಿಲ್ಲುವ ವಿಕ್ರಂ, ಮೋಕ್ಷಿತಾ ವ್ಯಾಘ್ರ ಎಂದರು ಕೋಪಿಸಿಕೊಳ್ಳುವುದೇ ಇಲ್ಲ. ವಿಕ್ರಂ, ಮೋಕ್ಷಿತಾರನ್ನು ನೋಡುವ ರೀತಿಯ ವಿಡಿಯೋಗಳನ್ನೆಲ್ಲ ತೆಗೆದು, ಒಂದೊಳ್ಳೆ ಬ್ಯೂಟಿಫುಲ್ ಸಾಂಗ್ ಹಾಕಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಇಬ್ಬರ ವಿಡಿಯೋಗಳು ತುಂಬಿ ತುಳುಕುತ್ತಿವೆ.

ಭವ್ಯಾ-ವಿಕ್ರಂ ನೋಡಿ ಫ್ಯಾನ್ಸ್ ಗರಂ

ಇನ್ನು ತ್ರಿವಿಕ್ರಮ್, ಭವ್ಯಾ ಜೊತೆಗೆ ಕ್ಲೋಸ್ ಆಗಿದ್ದಾರೆ. ಆ ಸಲಿಗೆಯಿಂದ ಭವ್ಯಾರ ತಲೆಗೆ ಮುತ್ತು ಕೊಟ್ಟರು. ಇದನ್ನು ವಿಕ್ರಂ ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗಲಿಲ್ಲ. ಆ ವಿಡಿಯೋ ವಿಕ್ರಂ ಸೋಷಿಯಲ್ ಮೀಡಿಯಾಗೂ ಟ್ಯಾಗ್ ಮಾಡಿದ್ದಾರೆ. ಆ ವಿಡಿಯೋಗೆ ಮೀಮ್ಸ್ ಮಾಡಿ, ಅದೇ ವಿಡಿಯೋದಲ್ಲಿ ಮೋಕ್ಷಿತಾ ವಿಡಿಯೋ ಹಾಕಿ ಇದು ಬೇಕಿರೋದು ಅಂತ ಹಾಕಿದ್ದಾರೆ. ಸದಾ ವಿಕ್ರಂಗೆ ಬೈಯ್ಯುವ ಮೋಕ್ಷಿತಾಗೆ ಸಿನಿಮಾದಲ್ಲಿ ಲವ್ ಸ್ಟೋರಿಗಳಾಗುವಂತೆ ಬಿಗ್ ಬಾಸ್ ಮನೆಯಲ್ಲೂ ಆಗುತ್ತಾ ನೋಡಬೇಕಿದೆ.

More from Filmibeat

English summary
Colors kannada bigboss Written Update; Mokshita and Trivikram who are always fighting will become lovers?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X