BBK 11: ಮಾತಾಡ್ತಾ ಇದ್ದೀವಿ ಆಮೇಲೆ ಬಾ ಹನುಮಂತು; ಮೋಕ್ಷಿತಾ ಫುಲ್ ಟ್ರೋಲ್!

By ಎಸ್ ಸುಮಂತ್

ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾತನಾಡುವಾಗ ಕೆಲವೊಂದು ಮಾತುಗಳು ಟ್ರೋಲ್ ಆಗೋದು ಸಹಜ. ಬಿಗ್ ಬಾಸ್ ಶುರುವಾದ ಮೇಲೆ ಅಷ್ಟು ಸ್ಪರ್ಧಿಗಳಿಗೆ ಅಭಿಮಾನಿಗಳು ಹುಟ್ಟಿ ಕೊಳ್ಳುತ್ತಾರೆ. ಈ ಮೂಲಕ ತಮ್ಮಿಷ್ಟದ ಸ್ಪರ್ಧಿಗೆ ಬೆಂಬಲ ನೀಡೋದು, ವೋಟ್ ಮಾಡೋದು ಮಾಡುತ್ತಾರೆ. ಮನೆಯಲ್ಲಿ ಅವರಿಗೇನಾದರೂ ವಿರೋಧ ವ್ಯಕ್ತವಾದರೆ ಹೊರಗೆ ಸೋಷಿಯಲ್ ಮೀಡಿಯಾದಲ್ಲಿ ದಂಗೆ ಹೇಳುತ್ತಾರೆ. ಈಗ ಆಗಿದ್ದು ಅದೇ.

ಬಿಗ್ ಬಾಸ್ ಮನೆಗೆ ವೈಲ್ಡ್ ಎಂಟ್ರಿ ಮೂಲಕ ಗಾಯಕ ಹನುಮಂತ ಬಂದಿದ್ದಾರೆ. ಹನುಮಂತ ಬಂದಾಗಿನಿಂದ ಮನೆಯಲ್ಲಿ ಒಳ್ಳೆ ಮನರಂಜನೆ ಸಿಗುತ್ತಿದೆ. ತಮ್ಮದೇ ಸ್ಟೈಲ್‌ನಲ್ಲಿ ಆತ ಮನೆಯವರನ್ನೆಲ್ಲ ನಕ್ಕು ನಲಿಸುತ್ತಿದ್ದಾರೆ. ಮುಗ್ಧತೆಯ ಪ್ರತಿರೂಪ ಹನುಮಂತ. ಬಿಗ್ ಬಾಸ್ ಮಂದಿ ಮಾತಾಡುವ ಮಾತುಗಳು ಆತನಿಗೆ ಬೇಗ ತಿಳಿಯೋದೆ ಇಲ್ಲ. ಇನ್ನು ಒಬ್ಬರಿಂದ ಒಬ್ಬರಿಗೆ ಹೇಳುವ ಮನುಷ್ಯ ಅವನಲ್ಲ. ಹೀಗಿದ್ದರು ಮೋಕ್ಷಿತಾ ಆಡಿದ ಮಾತುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ.

bigg boss kannada 11 Fans show support for singer hanumantha in front of mokshitha

ವಿಕ್ರಮ್ ಬಗ್ಗೆ ಕೆಂಡಕಾರಿದ ಮೋಕ್ಷಿತಾ

ಈ ವಾರ ಎಲಿಮಿನೇಷನ್ ಯಾರಾಗ್ತಾರೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು. ಮೋಕ್ಷಿತಾ ಹಾಗೂ ಹಂಸಾ ಇಬ್ಬರು ಹಾಟ್ ಸೀಟ್‌ನಲ್ಲಿ ನಿಂತಿದ್ದರು. ಎಲ್ಲಾ ಮುಗಿದ ಮೇಲೆ ಮೋಕ್ಷಿತಾ ಸಿಕ್ಕಾಪಟ್ಟೆ ರೊಚ್ಚಿಗೆದ್ದಿದ್ದರು. ಅದರಲ್ಲೂ ವಿಕ್ರಂ ಆಡಿದ ಮಾತುಗಳು ಕೋಪ ತರಿಸಿದ್ದವು. ಅದರ ಬಗ್ಗೆಯೇ ಮೋಕ್ಷಿತಾ, ಮಂಜಣ್ಣ, ಗೌತಮಿ ಕೂತು ಚರ್ಚೆ ಮಾಡುತ್ತಾ ಕುಳಿತಿದ್ದರು.

ಮನೆಯೊಳಗೆ ಓಡಾಡುವ ಹನುಮಂತ

ಹನುಮಂತಗೆ ಹೀಗೆ ಒಂದೇ ಕಡೆ ಕೂತೆಲ್ಲಾ ಅಭ್ಯಾಸ ಇಲ್ಲ. ಕುರಿ ಹೊಡ್ಕೊಂಡು ಹೋದ್ರೆ ಬರೋದೆ ಸಂಜೆಗೆ. ಹಾಡು ಹಾಡ್ಕೊಂಡು ಕುರಿ ಮೇಯಿಸ್ಕಿಂಡು ಬರ್ತಾ ಇದ್ದ ಹನುಮಂತಗೆ ಈಗ ಬಿಗ್ ಬಾಸ್ ಮನೆಯೇ ಬಯಲಾಗಿದೆ. ಒಂದೆಡೆ ಕೂರದೇ ಎಲ್ಲೆಡೆ ಓಡಾಡ್ತಾ ಇರ್ತಾರೆ. ಹಾಗೇ ಓಡಾಡುವಾಗ ಮಂಜಣ್ಣ ಟೀಂ ಕೂತಿದ್ದ ಜಾಗಕ್ಕೆ ಬಂದರು.

ಹನುಮಂತಗೆ ಹೋಗು ಎಂದ ಮೋಕ್ಷಿತಾ

ಆತ ಬಂದಿದ್ದನ್ನು ಕಂಡ ಮೋಕ್ಷಿತಾ ನೇರವಾಗಿಯೇ ಹೇಳಿದರು. ಹನುಮಂತು ಇಲ್ಲೇನೋ ಮಾತಾಡ್ತಾ ಇದ್ದೀವಿ, ಆಮೇಲೆ ಬಾ ಹೋಗು ಎಂದರು. ಇದು ಗೌತಮಿಗೆ ಸರಿ ಕಾಣಲಿಲ್ಲ. ಹೇಯ್ ಆ ರೀತಿ ಹೇಳಬಾರದು ಎಂದೇ ಹೇಳಿದರು. ಆದರೆ ಮೋಕ್ಷಿತಾ ಮಾತಿಗೆ ಮಂಜಣ್ಣ ಕೂಡ ಎಸ್ ಎಸ್ ಎಂದಿದ್ದರು. ಹನುಮಂತ ಸುಮ್ನೆ ಈ ಕಡೆ ಬಂದಿಲ್ಲ. ಅವರು ಕಳುಹಿಸಿರಲುಬಹುದು. ಅವರೆಲ್ಲಾ ಏನು ಮಾತಾಡ್ತಾ ಇದಾರೆ ಕೇಳಿಸಿಕೊಂಡು ಬಾ ಅಂತ ಕಳುಹಿಸಿರುತ್ತಾರೆ ಎಂದೇ ಮೋಕ್ಷಿತಾ ಅನುಮಾನ ಪಟ್ಟರು.

ಹನುಮಂತ ಪರ ನಿಂತ ಫ್ಯಾನ್ಸ್

ಮೋಕ್ಷಿತಾ ಅನುಮಾನ ಪಟ್ಟ ರೀತಿಗೆ, ಹನುಮಂತಗೆ ಹೇಳಿದ ರೀತಿಗೆ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ಹನುಮಂತಗೆ ಆ ರೀತಿ ನೇರವಾಗಿ ಹೇಳುವಂತದ್ದು ಏನಿತ್ತು..? ಹನುಮಂತು ಬಂದ ಮೇಲೆ ಟಾಪಿಕ್ ಬದಲಾಯಿಸಬಹುದಿತ್ತು ಅಂತ ಹಲವರು ಅಭಿಪ್ರಾಯ ಹೇಳಿದ್ರೆ, ಇನ್ನು ಹಲವರು ಹನುಮಂತು ಎಷ್ಟು ಮುಗ್ಧ ಅನ್ನೋದು ಗೊತ್ತಿದೆ. ಬಿಗ್ ಬಾಸ್‌ನಲ್ಲಿ ಆಟ ಆಡುವ ಗಿಮಿಕ್ ಆತನಿಗೆ ಗೊತ್ತಿದ್ದರೆ ತಮಗೆ ತಾವೇ ನಾಮಿನೇಷನ್ ಮಾಡಿಕೊಳ್ಳುತ್ತಿರಲಿಲ್ಲ. ಹಾಗೇ ಇಲ್ಲಿ ಯಾರೋ ಮಾತಾಡಿದ್ದನ್ನ ಇನ್ಯಾರಿಗೋ ಹೇಳಿ ಲಾಭ ಮಾಡಿಕೊಳ್ಳುವ ವಿಷಯವೇ ಆತನಿಗೆ ಗೊತ್ತಿಲ್ಲ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 October 28th. Here is the details about Mokshita Troll;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X