BBK 11: ಮನೆಯಲ್ಲಿ ಎಲ್ಲರೊಟ್ಟಿಗೆ ಜಗಳ.. ಒಂಟಿಯಾಗ್ತಿದ್ದಾರಾ ವಕೀಲ್ ಸಾಬ್? ಫ್ಯಾನ್ಸ್ ಏನಂದ್ರು?

By ಎಸ್ ಸುಮಂತ್

ಲಾಯರ್ ಜಗದೀಶ್ ಯಾರಿಗೆ ಗೊತ್ತಿಲ್ಲ ಹೇಳಿ. ಅದರಲ್ಲೂ ಬಿಗ್ ಬಾಸ್‌ಗೆ ಬಂದ ಮೇಲಂತೂ ಎಲ್ಲರಿಗೂ ಪರಿಚಿತರಾಗಿ ಹೋಗಿದ್ದಾರೆ. ಜಗದೀಶ್ ಅವರು ಬಿಗ್ ಬಾಸ್ ಮನೆಗೆ ಹೋಗುವುದಕ್ಕೂ ಮುನ್ನ ಕಾಣುತ್ತಿದ್ದ ರೀತಿಯೇ ಬೇರೆಯಾಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆ ಕೇಸು ಈ ಕೇಸು ಅಂತ ಸಿಕ್ಕಾಪಟ್ಟೆ ಸದ್ದು ಮಾಡ್ತಾ ಇದ್ರು. ಹೀಗಾಗಿ ಬಿಗ್ ಬಾಸ್ ಮನೆಯೊಳಗೆ ಹೋದ್ರೆ ಜಗದೀಶ್ ಹೇಗಿರಬಹುದು ಎಂಬ ಚಿಂತೆ ಬಿಗ್ ಬಾಸ್ ವೀಕ್ಷಕರಿಗೂ ಕಾಡಿತ್ತು.

ಬಿಗ್ ಬಾಸ್ ಮನೆಯೊಳಗೆ ಹೋಗಿದ್ದ ಜಗದೀಶ್ ಮೊದಲ ವಾರಕ್ಕೇನೆ ತನ್ನ ಮಾಮೂಲಿ ಮುಖ ತೋರಿಸಿದ್ದರು. ಬಿಗ್ ಬಾಸ್‌ಗೆ ಸವಾಲು ಹಾಕಿದ್ದರು. ಹೊರಗೆ ಕುಂತವರೆಲ್ಲ, ಓ ಇನ್ನು ಕಲರ್ಸ್ ಕನ್ನಡದವರ ಕಥೆ ಅಷ್ಟೇ. ಜಗದೀಶ್ ಅವರು ಬಿಸಿತುಪ್ಪವಾಗಿ ಬಿಟ್ಟರು ಎಂದೆಲ್ಲಾ ಮಾತನಾಡಿಕೊಳ್ಳುವುದಕ್ಕೆ ಶುರು ಮಾಡಿದರು. ಆದರೆ ಅದಾದ ಮಾರನೇ ದಿನವೇ ಜಗದೀಶ್ ಅವತಾರವೇ ಬದಲಾಗಿತ್ತು. ಇದೀಗ ಮನೆಯಲ್ಲಿ ಒಬ್ಬಂಟಿಯಾಗುತ್ತಿದ್ದಾರಾ ಎನಿಸುತ್ತಿದೆ.

Bigg boss Kannada 11 Fans supported lawyer Jagadish in house

ಜಗದೀಶ್ ಗುಣವೇ ವಿಭಿನ್ನ..!

ಲಾಯರ್ ಜಗದೀಶ್ ಹೊರಗಡೆಯ ಜನರಿಗೆ ಸಿಕ್ಕಾಪಟ್ಟೆ ಸೀರಿಯಸ್ ಆಗಿ ಕಂಡರು. ಭಯ ಹುಟ್ಟಿಸಿದರು. ಆದರೆ ಬಿಗ್ ಬಾಸ್‌ಗೂ ಗೊತ್ತಿಲ್ಲದ ಗುಣ ಒಂದು ಅವರಲ್ಲಿತ್ತು. ಅದುವೇ ಹಾಸ್ಯಪ್ರಧಾನವಾದ ಗುಣ. ಬಿಗ್ ಬಾಸ್ ಮನೆಯಲ್ಲಿ ದಿನಕಳೆದಂತೆ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಬಿಟ್ಟರು. ಅದರಲ್ಲೂ ವಾವ್ ಎನಿಸುವಂತ ಕಾಮಿಡಿ ಮಾಡುವುದಕ್ಕೆ ಶುರು ಮಾಡಿದರು.

ಒಮ್ಮೊಮ್ಮೆ ಅಪಹಾಸ್ಯ

ಸೀರಿಯಸ್ ಆಗಿ ಮಾತನಾಡುತ್ತಾ, ಎಲ್ಲರನ್ನು ಹೆದರಿಸಿಕೊಂಡು, ಬೆದರಿಸಿಕೊಂಡು ಇದ್ದಂತ ಜಗದೀಶ್ ಹಾಸ್ಯ ಮಾಡುವುದಕ್ಕೆ ಶುರು ಮಾಡಿದರು. ಎಷ್ಟರಮಟ್ಟಿಗೆ ಅಂದ್ರೆ ಎದುರಾಳಿಗಳು ಸೀರಿಯಸ್ ಆಗಿ ಜಗದೀಶ್ ಅವರಿಗೆ ಎಚ್ಚರಿಕೆಯನ್ನು ನೀಡಿದರು, ಅದನ್ನು ಕಾಮಿಡಿಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಮನೆಯವರಿಗೂ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಜಗದೀಶ್ ಅವರಿಗೂ ಹಾಸ್ಯವೂ ಅಪಹಾಸ್ಯವಾಗುತ್ತಿದೆ ಎಂಬ ಭಾವನೆ ನೋಡುಗರಿಗೆ ಶುರುವಾಗಿದೆ.

ಚೈತ್ರಾ ಜೊತೆಗೂ ಕಿತ್ತಾಟ

ಚೈತ್ರಾ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಾಗ ಹೆಚ್ಚು ಕ್ಲೋಸ್ ಆಗಿದ್ದೇ ಜಗದೀಶ್. ಸುದೀಪ್ ಮುಂದೆಯೇ ಜೈಲಿನ ಅನುಭವ ಹಂಚಿಕೊಂಡು ಇಬ್ಬರು ಖುಷಿ ಪಟ್ಟಿದ್ದರು. ನಾನು ಸೀನಿಯರ್, ನೀನು ಜೂನಿಯರ್ ಅಂತೆಲ್ಲಾ ಮಾತಾಡಿಕೊಂಡಿದ್ದರು. ಅದರಲ್ಲೂ ಜಗದೀಶ್, ಚೈತ್ರಾರನ್ನು ತನ್ನ ತಂಗಿ ಎಂದೇ ಹೇಳುತ್ತಿದ್ದರು. ಆದರೆ ಈಗ ಹೊರಗಿನ ವಿಚಾರವನ್ನು ತೆಗೆದು ದೊಡ್ಮನೆಯೊಳಗೆ ಜಗಳ ತೆಗೆಯುತ್ತಿದ್ದಾರೆ. ಹೊರಗಡೆ ಈ ಯಮ್ಮನ ವಿರುದ್ಧ ಎಷ್ಟು ಕೇಸ್ ಇದೆ ಗೊತ್ತಾ ಎಂದು ಹೇಳಿ ಜಗಳಕ್ಕೆ ನಿಂತಿದ್ದಾರೆ.

ಗೋಲ್ಡ್ ಸುರೇಶನ ಜೊತೆಗೂ ಜಗಳ

ಬಿಗ್ ಬಾಸ್ ಮನೆಯಲ್ಲಿ ಗೋಲ್ಡ್ ಸುರೇಶ್ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ಆದರೆ ಈಗ ಗೋಲ್ಡ್ ಸುರೇಶನ ಜೊತೆಗೂ ವಕೀಲ್ ಸಾಬ್ ಕಿರಿಕಿರಿ ಮಾಡಿಕೊಳ್ಳುತ್ತಿದ್ದಾರೆ. ಜಗದೀಶ್ ಎಷ್ಟೇ ಮಾತಾಡಿಸಿದರು ಗೋಲ್ಡ್ ಸುರೇಶ್ ಮಾತ್ರ ನಿಮ್ಮ ಸಹವಾಸ ಬೇಡ ಎಂಬಂತೆಯೇ ಮಾತನಾಡುತ್ತಿದ್ದಾರೆ. ಈ ಪ್ರೋಮೋ ಬಿಟ್ಟಿರುವ ಕಲರ್ಸ್ ಕನ್ನಡ, ಜಗದೀಶ್ ಒಬ್ಬಂಟಿಯಾಗುತ್ತಿದ್ದಾರಾ ಎಂಬ ಕ್ಯಾಪ್ಷನ್ ನೀಡಿದೆ. ಆದರೆ ಜಗದೀಶ್ ಅವರ ಅಭಿಮಾನಿಗಳು ಕಮೆಂಟ್ ಹಾಕುತ್ತಿರುವುದೇ ಬೇರೆ ರೀತಿ. ನಮ್ಮ ವಕೀಲ್ ಸಾಬ್ ಒಬ್ಬಂಟಿಯಲ್ಲ, ಒಂಟಿ‌ ಸಲಗ, ಸಿಂಹದಂತೆ ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಇದೇ ರೀತಿ ಒಂಟಿಯಾಗಿ ಆಡಿಯೇ ಗೆದ್ದು ಬನ್ನಿ ಎನ್ನುತ್ತಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 September 30th show. Here is the details about Fans who supported Jagdish;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X