BBK 11 Grand Finale ; ಮೋಕ್ಷಿತಾ ಪೈ VS ಭವ್ಯಾ ಗೌಡ, ಯಾರಾಗುತ್ತಾರೆ ಬಿಗ್ ಬಾಸ್ ಗೆದ್ದ 2ನೇ ಮಹಿಳೆ ..?
ಬಿಗ್ ಬಾಸ್ ಮನೆ ಬಾಗಿಲು ಹಾಕಲು ಇನ್ನೇನು ಕೆಲವೇ ಗಂಟೆ ಬಾಕಿ ಉಳಿದಿದೆ. ಮನೆಯಲ್ಲಿರುವ ಆರು ಜನರ ಪೈಕಿ ಈ ಬಾರಿ ಬಿಗ್ ಬಾಸ್ ಟ್ರೋಫಿ ಎತ್ತಿ ಹಿಡಿಯುವುದು ಯಾರು ಎನ್ನುವ ಕೂತುಹಲ ಅನೇಕರನ್ನು ಕಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಚರ್ಚೆ ಕೂಡ ನಡೆಯುತ್ತಿದೆ.
ಇನ್ನು, ಈ ಸೀಸನ್ ಹೊರತು ಪಡಿಸಿದರೆ ಬಿಗ್ ಬಾಸ್ ಇಲ್ಲಿಯವರೆಗೆ ಕನ್ನಡದಲ್ಲಿ ಹತ್ತು ಬಾರಿ ಪ್ರದರ್ಶನಗೊಂಡಿದೆ. ಇಲ್ಲಿಯವರೆಗೆ ಹಲವಾರು ಸ್ಫರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿ ಬಂದಿದ್ದಾರೆ. ಆ ಪೈಕಿ ಶ್ರುತಿ ಅವರನ್ನು ಹೊರತು ಪಡಿಸಿದರೆ ಇಲ್ಲಿಯವರೆಗೆ ಬೇರೆ ಯಾವ ಮಹಿಳೆಗೆ ಕೂಡ ಬಿಗ್ ಬಾಸ್ ಒಲಿದಿಲ್ಲ. ಇದಕ್ಕೆ ಕಾರಣವೇನು ಎನ್ನುವುದು ಗೊತ್ತಿಲ್ಲವಾದರೂ ಈ ವಿಚಾರದಲ್ಲಿ ಪ್ರೇಕ್ಷಕರಲ್ಲಿ ಅಸಮಾಧಾನ ಅಂತೂ ಇದೆ. ಈ ಅಸಮಾಧಾನವನ್ನು ಬಿಗ್ ಬಾಸ್ ಈ ಬಾರಿ ದೂರ ಮಾಡುತ್ತಾ ಎನ್ನುವ ಪ್ರಶ್ನೆ ಈಗ ಎದ್ದಿದೆ. ಮೋಕ್ಷಿತಾ ಮತ್ತು ಭವ್ಯ ಇಬ್ಬರಲ್ಲಿ ಯಾರು ಬೆಸ್ಟ್ ಎನ್ನುವ ಚರ್ಚೆ ನಡೆಯುತ್ತಿದೆ.

ಮೋಕ್ಷಿತಾ ಪೈ ಗೆಲ್ಲುತ್ತಾರಾ ?
ಮೋಕ್ಷಿತಾ ಪೈ ಮತ್ತು ಭವ್ಯಾ ಗೌಡ ಈ ಬಾರಿ ಕೊನೆಯ ಹಂತದವರೆಗೆ ಬಂದು ತಲುಪಿದ್ದಾರೆ. ತಮ್ಮ ಬುದ್ದಿವಂತಿಕೆಯಿಂದ ಎಲ್ಲ ಟಾಸ್ಕ್‌ಗಳನ್ನು ಪೂರೈಸುತ್ತಾ ಕಪ್ ಸನಿಹಕ್ಕೆ ಬಂದು ನಿಂತಿದ್ದಾರೆ. ನಿಜಾ, ಇಲ್ಲಿಯವರೆಗೆ ಮನೆಯಲ್ಲಿದ್ದರೂ ಕೂಡ ಮೋಕ್ಷಿತಾ ಒಮ್ಮೆಯೂ ಕ್ಯಾಪ್ಟನ್ ಆಗಿಲ್ಲ. ಕಿಚ್ಚನ ಚಪ್ಪಾಳೆ ಕೂಡ ಮೋಕ್ಷಿತಾಗೆ ಸಿಕ್ಕಿಲ್ಲ. ಹನುಮಂತನ ಕೃಪೆಯಿಂದ ಮೋಕ್ಷಿತಾ ಫಿನಾಲೆವರೆಗೆ ಬಂದಿದ್ದಾರೆ ಎಂದೇ ಅನೇಕರ ಭಾವನೆ ಕೂಡ ಹೌದು.
ಹಾಗಂಥ ಮೋಕ್ಷಿತಾ ಚೆನ್ನಾಗಿ ಆಡಿಯೇ ಇಲ್ಲ ಎಂದು ಹೇಳಲು ಕೂಡ ಆಗಲ್ಲ. ಯಾಕೆಂದರೆ ಮೋಕ್ಷಿತಾ ಇಲ್ಲಿಯವರೆಗೆ ಕಳಪೆ ಎಂಬ ಕಳಂಕಕ್ಕೆ ಪಾತ್ರವಾಗಿಲ್ಲ. ಇನ್ನು ಮೋಕ್ಷಿತಾ ಗುಂಪು ಕಟ್ಟಿಕೊಂಡು ಕೂಡ ಆಟವಾಡಿಲ್ಲ. ಆರಂಭದಲ್ಲಿ ಉಗ್ರಂ ಮಂಜು ಮತ್ತು ಗೌತಮಿ ಅವರ ಸಹವಾಸ ಮಾಡಿದ್ದು ಬಿಟ್ಟರೆ ಸಮಯಕ್ಕೆ ತಕ್ಕಂತೆ ಆಟ ಬದಲಿಸಿಕೊಂಡು ಗೆಲ್ಲುವ ಉದ್ದೇಶದಿಂದ ಮೋಕ್ಷಿತಾ ಆಡಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ಮನರಂಜನೆ ನೀಡಿದ್ದಾರೆ. ಹೀಗಾಗಿ ಬಿಗ್ ಬಾಸ್ ಪ್ರಶಸ್ತಿಯನ್ನು ಮೋಕ್ಷಿತಾ ಅವರಿಗೆ ಕೊಡಬೇಕೆನ್ನುವ ಅಭಿಪ್ರಾಯವನ್ನು ಸದ್ಯಕ್ಕೆ ಅನೇಕರು ವ್ಯಕ್ತಪಡಿಸುತ್ತಿದ್ದಾರೆ. ಮೋಕ್ಷಿತಾ ಅವರನ್ನು ಗೆಲ್ಲಿಸಿ ಎಂದು ಕಿರುತೆರೆಯ ಕಲಾವಿದರು ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.
ಭವ್ಯ ಗೌಡ ಕಥೆಯೇನು ?
ಈ ಬಾರಿಯ ಬಿಗ್ ಬಾಸ್ ಮನೆಗೆ ಮೊದಲು ಕಾಲಿಟ್ಟಿರುವ ಸ್ಫರ್ಧಿ ಭವ್ಯ ಗೌಡ. ಆರಂಭದಿಂದನೇ ತಮ್ಮ ಮಾತು ಮತ್ತು ಟಾಸ್ಕ್‌ಗಳನ್ನು ನಿರ್ವಹಿಸುವ ರೀತಿಯಿಂದ ಎಲ್ಲರನ್ನು ಸೆಳೆದ ಭವ್ಯಾ ಗೌಡ ಎರಡು ವಾರ ಮನೆಯ ಕ್ಯಾಪ್ಟನ್ ಕೂಡ ಆಗಿದ್ದವರು. ಇನ್ನು ಕುರಿಗಾಹಿ ಹನುಮಂತು ಜೊತೆ ಕಿರಿಕ್ ಮಾಡಿಕೊಂಡು ಕಳಪೆ ಎಂದು ಕರೆಯಿಸಿಕೊಂಡ ಭವ್ಯಾ ಟಾಸ್ಕ್ ಸೋತು ತಲೆ ತಗ್ಗಿಸಿಲ್ಲ.
ಇನ್ನು ಸಮಯ-ಸಂದರ್ಭಕ್ಕೆ ತಕ್ಕಂತೆ ಭವ್ಯಾ ಗೌಡ ಮನೆಯಲ್ಲಿ ನಡೆದುಕೊಂಡಿದ್ದಾರೆ. ನಗಬೇಕಾದಾಗ ಜೋರಾಗಿ ನಕ್ಕಿರುವ ಜಗಳವಾಡುವ ಸಮಯ ಬಂದಾಗ ಅಷ್ಟೇ ಏರು ಧ್ವನಿಯಲ್ಲಿ ಜಗಳವನ್ನು ಕೂಡ ಮಾಡಿದ್ದಾರೆ. ತ್ರಿವಿಕ್ರಮ್ ಅವರ ಜೊತೆ ಇವರ ಚರ್ಚೆ ಕೂಡ ಇಲ್ಲಿ ಹೊರಗೆ ಚರ್ಚೆಗೀಡಾಗಿದೆ. ಹೀಗಾಗಿ ಭವ್ಯ ಗೌಡ ಬಿಗ್ ಬಾಸ್ ವಿನ್ನರ್ ಆಗಲು ಸೂಕ್ತವಾದ ವ್ಯಕ್ತಿ ಎನ್ನುವುದು ಅನೇಕರ ಅಂಬೋಣ. ಇದೆಲ್ಲದಕ್ಕೆ ಕಶಳವಿಟ್ಟಂತೆ ಭವ್ಯಾ ಗೌಡ ಅವರನ್ನು ಗೆಲ್ಲಿಸಿ ಎಂದು ಅನೇಕ ಕಿರುತೆರೆಯ ಕಲಾವಿದರು ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಮಾಡುತ್ತಿದ್ದಾರೆ.


Click it and Unblock the Notifications











