BBK 11 Grand Finale : ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ವೈಲ್ಡ್ ಕಾರ್ಡ್ ಸ್ಫರ್ಧಿ..?

ಯಾರಾಗ್ತಾರೆ ಈ ಬಾರಿಯ ಬಿಗ್ ಬಾಸ್ ? ಸದ್ಯಕ್ಕೆ ಹಲವರ ತಲೆಯಲ್ಲಿ ಓಡುತ್ತಿರುವ ಪ್ರಶ್ನೆ ಇದು. ಆದರೆ ಇದಕ್ಕೆ ಸದ್ಯ ಉತ್ತರ ಇಲ್ಲ. ಹೀಗಿರುವಾಗ ಇಂದು ಮನೆಯಿಂದ ಹೊರ ನಡೆಯುವುದು ಅವರಂತೆ ಇವರಂತೆ ಎನ್ನುವ ಮಾತು ಅಂತೆ-ಕಂತೆಯ ಸಂತೆಯಲ್ಲಿ ಬಲವಾಗಿ ಕೇಳಿ ಬರುತ್ತಿದೆ.

ಈ ಮಾತುಗಳಲ್ಲಿ ಯಾವುದು ಸತ್ಯ ಯಾವುದು ಮಿಥ್ಯ ಎನ್ನುವುದು ಇನ್ನೇನು ಕೆಲವೇ ನಿಮಿಷದಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಬಿಗ್ ಬಾಸ್ ಕಾರ್ಯಕ್ರಮದ ಹನ್ನೊಂದನೇ ಸೀಸನ್‌ನ ಗ್ರ್ಯಾಂಡ್ ಫಿನಾಲೆ ಶುರುವಾಗಲು ಕೆಲವೇ ನಿಮಿಷ ಬಾಕಿ ಇರುವಾಗ ರಜತ್ ಮನೆಯಿಂದ ಹೊರ ಬಿದ್ದಿದ್ದಾರೆ ಎಂಬ ಸುದ್ದಿ ಸದ್ಯ ಕಿರುತೆರೆಯ ಲೋಕದಲ್ಲಿ ಕೇಳಿ ಬರುತ್ತಿದೆ.

Bigg Boss Kannada 11 Finale Rajat predicted to be eliminated from the show today

ಹೌದು, ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದವರು ರಜತ್. ಈ ಮನೆಯಲ್ಲಿ ಅರ್ಧ ಜನ ತಿಕ್ಲು, ಇನ್ನು ಅರ್ಧ ಜನ ಪುಕ್ಲು. ಇವರು ಯಾರೂ ಉದ್ಧಾರ ಆಗಲ್ಲ' ಎಂದು ಹೇಳುತ್ತಾನೆ ಬಿಗ್ ಬಾಸ್ ಕಾರ್ಯಕ್ರಮ 50 ದಿನಗಳನ್ನು ಪೂರೈಸಿದ ನಂತರ ಬಂದ ರಜತ್ ಕಿಶನ್ ಆ ನಂತರ್ ಬಿಗ್ ಬಾಸ್ ಆಟದ ಪರಿಯನ್ನು ಬದಲಿಸಿದರು.

ಬಿಗ್ ಬಾಸ್ ಮನೆಯೊಳಗೆ ಬಂದ ಮೊದಲ ದಿನದಿಂದಲೇ ಪ್ರತಿಯೊಬ್ಬರ ಜೊತೆ ಧ್ವಿ ಏರಿಸೇ ಮಾತನಾಡಿದ ರಜತ್ ವೀಕೆಂಡ್ ಕಾರ್ಯಕ್ರಮದಲ್ಲಿ ಕೂಡ ಖಡಕ್ ಡೈಲಾಗ್ ಹೊಡೆಯುವ ಮೂಲಕ ಸದ್ದು ಮಾಡಿದರು.ಕೆಲವೊಮ್ಮೆ ಇವರ ಈ ಅಬ್ಬರ ಕೆಲವರಿಗೆ ಕಿರಿಕಿರಿ ಅನ್ಸಿದ್ದು ಇದೆ. ಆದರೆ, ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ರಜತ್ ತಮ್ಮ ಪಾಡಿಗೆ ತಾವು ಆಟವನ್ನು ಆಡುತ್ತಾ ಬಂದಿದ್ದರು. ಆಟವಾಡುತ್ತಾ, ಜಗಳವಾಡುತ್ತಾ, ಕಾಲ ಕಾಲಕ್ಕೆ ತಮ್ಮ ಕಾಮಿಡಿ ಟೈಮಿಂಗ್‌ನಿಂದ ಚಮಕ್ ಕೊಡುತ್ತಾ ಬಂದ ರಜತ್ ಮನರಂಜನೆಯ ರಸದೌತಣವನ್ನು ಬಡಿಸುವುಲ್ಲಿ ಯಶಸ್ವಿಯಾಗಿದ್ದರು ಎಂದರೆ ಅದು ತಪ್ಪಾಗಲಿಕ್ಕಿಲ್ಲ.

ಇನ್ನು ಕನ್ನಡದ ಬಿಗ್ ಬಾಸ್ ಮನೆಯ ಇತಿಹಾಸದಲ್ಲಿಯೇ ಇಲ್ಲಿಯವರೆಗೆ ವೈಲ್ಡ್ ಕಾರ್ಡ್ ಸ್ಫರ್ಧಿ ಗೆದ್ದ ಉದಾಹರಣೆ ಇಲ್ಲ. ರಜತ್ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿಗೆ ಈ ವಿಚಾರ ಸದ್ಯ ಪುಷ್ಠಿ ಕೊಡುತ್ತಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸುದೀಪ್ ಅವರ ಬಳಿ ರಜತ್ ಉಡುಗೊರೆಯನ್ನು ಕೇಳಿದ್ದರು.

ವಿಶೇಷ ಅಂದರೆ ರಜತ್‌ ಅವರ ಆಸೆಯನ್ನು ಸುದೀಪ್ ಈಗಾಗಲೇ ಈಡೇರಿಸಿದ್ದಾರೆ. ಬಿಗ್ ಬಾಸ್‌ 11ನೇ ಸೀಸನ್ ಆರಂಭವಾಗುವ ದಿನ ತಾವು ಹಾಕಿಕೊಂಡಿದ್ದ ಜಾಕೆಟ್‌ನ್ನು ರಜತ್‌ಗೆ ಉಡುಗೊರೆಯಾಗಿ ಮಾಜಿ ಸ್ಫರ್ಧಿ ರಾಜೀವ್ ಅವರ ಕಡೆಯಿಂದ ಕಳಿಸಿದ್ದಾರೆ. ರಜತ್ ತಮಗೆ ಸಿಕ್ಕ ಉಡುಗೊರೆಯನ್ನು ಕಂಡು ಖುಷಿಯಾಗಿದ್ದಾರೆ.

ಇನ್ನುಳಿದಂತೆ ರಜತ್ ತಮಗೆ ಸಿಕ್ಕ ಅತ್ಯಲ್ಪ ಸಮಯದಲ್ಲಿ ಬಹುದೊಡ್ಡ ಪ್ರಭಾವ ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಂತ ಕಡಿಮೆ ಅವಧಿಯಲ್ಲಿ ರಜತ್ ಈ ಮಟ್ಟಕ್ಕೆ ಬಂದಿದ್ದು ದೊಡ್ಡ ವಿಚಾರ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನು ಅಪ್ಪಿ ತಪ್ಪಿ ಒಂದು ವೇಳೆ ರಜತ್ ಗೆಲುವು ಸಾಧಿಸಿದ್ದರೆ ಬಿಗ್ ಬಾಸ್‌ನಲ್ಲಿ ಇತಿಹಾಸ ಸೃಷ್ಟಿಸಿದ ಮೊದಲ ವೈಲ್ಡ್‌ ಕಾರ್ಡ್ ಸ್ಫರ್ಧಿ ಎನ್ನುವ ಹೆಗ್ಗಳಿಕೆಗೆ ರಜತ್ ಪಾತ್ರವಾಗುತ್ತಿದ್ದರು. ಆದರೆ, ದುರಾದೃಷ್ಟವಶಾತ್ ಇದು ಸಾಧ್ಯವಾಗಲಿಲ್ಲ ಎನ್ನುವುದು ಸದ್ಯದ ಬ್ರೇಕಿಂಗ್ ನ್ಯೂಸ್.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X