BBK 11: ಬಿಗ್‌ಬಾಸ್ ಮನೆಯಲ್ಲಿ ಮುತ್ತಿನ ಮಳೆ; ಯಾರಿಗೆ ಯಾರು ಮುತ್ತು ಕೊಟ್ರು ಗೊತ್ತಾ?

ಈಗಾಗಲೇ 90 ದಿನ ಪೂರೈಸಿ ಬಿಗ್‌ಬಾಸ್ ಕನ್ನಡ ಸೀಸನ್ 11 ಮುಂದುವರೆದಿದೆ. ಸದ್ಯ ಮನೆಯಲ್ಲಿ 8 ಜನ ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ ವಾರ ಇಬ್ಬರು ದೊಡ್ಮನೆ ಜರ್ನಿ ಮುಗಿಸುವ ಸಾಧ್ಯತೆಯಿದೆ. ಹಾಗಾಗಿ 6 ಜನ ಫಿನಾಲೆ ಹಂತಕ್ಕೆ ಏರಲಿದ್ದಾರೆ.

ಸೀಸನ್ ಕೊನೆ ಕೊನೆಗೆ ಸ್ಪರ್ಧಿಗಳ ಕುಟುಂಬ ಸದಸ್ಯರನ್ನು ಮನೆ ಒಳಗೆ ಕರೆಸುವ ಪ್ರಯತ್ನ ನಡೆಯುತ್ತದೆ. ಈ ವಾರ ಸ್ಪರ್ಧಿಗಳ ಆಪ್ತರು ಮನೆಯೊಳಗೆ ಬಂದಿದ್ದಾರೆ. ಗೌತಮ್ ಜಾಧವ್ ಪತಿ ಅಭಿಷೇಕ್, ಧನರಾಜ್ ಪತ್ನಿ ಪ್ರಜ್ಞಾ, ಮಗು ಹಾಗೂ ಹನುಮಂತನ ಪೋಷಕರು, ಚೈತ್ರಾ ತಾಯಿ, ಸಹೋದರಿ ಮನೆಯೊಳಗೆ ಬಂದು ವೀಕ್ಷಕರನ್ನು ರಂಜಿಸಿದ್ದಾರೆ. ಧನರಾಜ್‌ಗೆ ತಮ್ಮ ಪುಟ್ಟ ಮಗುವನ್ನು ಎತ್ತಿ ಮುದ್ದಾಡುವ ಅವಕಾಶವೂ ಸಿಕ್ಕಿತ್ತು.

Bigg Boss kannada 11 Funny Kiss Task For contestants

ಧನರಾಜ್ ಮಗು ಹುಟ್ಟಿದ ಕೆಲವೇ ದಿನಗಳಲ್ಲಿ ಬಿಗ್‌ಬಾಸ್ ಮನೆಯೊಳಗೆ ಬಂದಿದ್ದರು. ಹಾಗಾಗಿ ಪತ್ನಿ, ಮಗುವನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದರು. ಇನ್ನು ಈ ವಾರ ಒಂದು ಫನ್ನಿ ಟಾಸ್ಕ್ ಕೊಡಲಾಗಿದೆ. ಅದಕ್ಕೆ 'ಮುತ್ತು ಮೇಲೊಂದು ಮುತ್ತು' ಎನ್ನುವ ಹೆಸರು ಕೊಡಲಾಗಿದೆ. ಸದ್ಯ ಅದರ ಪ್ರೋಮೊ ರಿಲೀಸ್ ಆಗಿ ವೈರಲ್ ಆಗುತ್ತಿದೆ.

ರಜತ್ ಕ್ವಾಟ್ಲೆ ಜೋರಾಗಿದೆ. ಸದ್ಯ ವೀಕ್ಷಕರನ್ನು ಹೆಚ್ಚು ರಂಜಿಸುತ್ತಿರುವುದು ಅವರೇ, ಇನ್ನು ಫನ್ನಿ ಟಾಕ್ಸ್ ಸಿಕ್ಕರೆ ಕೇಳಬೇಕಾ? ರಜತ್ ಕಾಮೆಡಿ ಟೈಮಿಂಗ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಪರ್ಧಿಗಳು ತಮ್ಮ ತುಟಿಗೆ ರಂಗು ಬಳಿದುಕೊಂಡು ಹೋಗಿ ಎದುರಿಗೆ ಇರುವ ಬೋರ್ಡ್‌ಗೆ ಮುತ್ತು ಕೊಡಬೇಕು. ಹೀಗೆ ಯಾರು ಹೆಚ್ಚು ಮತ್ತು ಕೊಡುತ್ತಾರೋ ಅವರೇ ವಿನ್ನರ್ ಎನ್ನುವಂತೆ ಕಾಣುತ್ತಿದೆ.

ಟಾಸ್ಕ್ ಶುರುವಾಗುತ್ತಿದ್ದಂತೆ ರಜತ್ ತಮ್ಮ ಮಾತಿನ ಮೂಲಕ ಎಲ್ಲರನ್ನು ರಂಜಿಸಿದ್ದಾರೆ. 'ಚೈತ್ರಾ ಆಗ್ಲೇ 25 ಕೊಟ್ಟಿದ್ದಾಳೆ ಕಣೋ' ಎಂದು ರಜತ್ ಕಾಲೆಳೆದಿದ್ದಾರೆ. ಬೋರ್ಡ್ ಬದಲು ಹುಡುಗಿ ನಿಂತಿದ್ರೆ ಬೈತಿದ್ರಾ? ಎಂದು ಹನುಮಂತ ಪೋಷಕರನ್ನು ಕೇಳಿ ರಜತ್ ನಗೆಬುಗ್ಗೆ ಸಿಡಿಸಿದ್ದಾರೆ.

ಟಾಸ್ಕ್ ನಡುವೆ ಮುತ್ತು ಕೊಡುವ ವಿಚಾರಕ್ಕೆ ಧನರಾಜ್ "ಮೂರು ತಿಂಗಳಾಯ್ತು ಪ್ರಾಕ್ಟೀಸ್ ಇಲ್ಲ" ಎಂದಿದ್ದಾರೆ. ಚೈತ್ರಾ ಕಡೆ ನೋಡಿ ಮುತ್ತು ಇಡ್ತೀರಾ? ಎಂದು ಕೇಳಿ ಎಲ್ಲರನ್ನು ರಂಜಿಸಿದ್ದಾರೆ. ಸದ್ಯ ಪ್ರೋಮೊ ಸದ್ದು ಮಾಡ್ತಿದೆ. ಕೆಲವರು ಕಾಮೆಂಟ್ ಮಾಡಿ ನಿನ್ನೆ ಅವರಿಗೆ ಕೊಟ್ಟ ಟಾಸ್ಕ್‌ಗಿಂತ ಇದು ಸುಲಭವಾಗಿದೆ ಎನ್ನುತ್ತಿದ್ದಾರೆ.

ಈ ವಾರ ಭವ್ಯಾ ಗೌಡ ಕ್ಯಾಪ್ಟನ್ ಆಗಿದ್ದಾರೆ. ರಜತ್ ಕ್ಯಾಪ್ಟನ್ ಆಗಬೇಕು ಎಂದು ಸಾಕಷ್ಟು ವೀಕ್ಷಕರು ಬಯಸುತ್ತಿದ್ದಾರೆ. ಈಗಾಗಲೇ ಶೋ 100 ದಿನದ ಸನಿಹಕ್ಕೆ ಬಂದಿದೆ. ಇನ್ನೆರಡು ವಾರಗಳಲ್ಲಿ ಗ್ರ್ಯಾಂಡ್ ಫಿನಾಲೆ ನಡೆಯಲಿದೆ. ಈ ಬಾರಿ ಯಾರು ಟ್ರೋಫಿ ಎತ್ತಿ ಹಿಡಿಯುತ್ತಾರೆ ಎನ್ನುಚ ಕುತೂಹಲವೂ ಮೂಡಿದೆ.

ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹನುಮಂತ ಹಾಗೂ ರಜತ್ ವೀಕ್ಷಕರನ್ನು ಚೆನ್ನಾಗಿ ರಂಜಿಸುತ್ತಿದ್ದಾರೆ. ಎಲ್ಲರ ಫೇವರಿಟ್ ಆಗಿದ್ದಾರೆ. ಆದರೆ ಅವರಿಬ್ಬರು ಗೆಲ್ಲುವುದು ಬಹುತೇಕ ಅನುಮಾನ ಎನ್ನಲಾಗ್ತಿದೆ. ಹನುಮಂತ ಬಹಳ ಬೇಗ ಮನೆಗೆ ಎಂಟ್ರಿ ಕೊಟ್ಟರು, ರಜತ್ ಕೊಂಚ ತಡವಾಗಿ ಮನೆಯೊಳಗೆ ಸೇರಿಕೊಂಡರು.

ಮಹಿಳಾ ಸ್ಪರ್ಧಿಗೆ ಅವಕಾಶ ಸಿಕ್ಕರೆ ಚೈತ್ರಾ ಗೆಲ್ಲಬೇಕು ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನುಳಿದಂತೆ ಯಾರು ಈ ಬಾರಿ ಬಿಗ್‌ಬಾಸ್ ವಿತೇತರಾಗುತ್ತಾರೆ ಎನ್ನುವ ಕುತೂಹಲ ಮೂಡಿದೆ. ಪ್ರಬಲ ಸ್ಪರ್ಧಿಗಳೇ ಮನೆಯಿಂದ ಹೊರ ಬಂದಿದ್ದು ಯಾರ ಕೊರಳಿಗೆ ವಿಜಯಮಾಲೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
BBK 11; Funny Kiss Task, Rajath jokes goes viral;
Read more about: bigg boss bigg boss kannada 11 tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X