BBK 11: ಕಾಲೇಜಿಗೆ ಹೋಗುವಾಗ ಸಬ್ಜೆಕ್ಟ್‌ಗಿಂತ ಆ ಕಡೆಗೆ ಹೆಚ್ಚು ಗಮನ ಕೊಡ್ತಿದ್ರಂತೆ ಗೌತಮಿ!

By ಎಸ್ ಸುಮಂತ್

ಬಿಗ್ ಬಾಸ್ ಮನೆಗೆ ಬರುವುದಕ್ಕೂ ಮುನ್ನ ಗೌತಮಿ ಸತ್ಯಳಾಗಿ ಎಲ್ಲರಿಗೂ ಸ್ಪೂರ್ತಿಯಾಗಿದ್ದರು. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಸತ್ಯ ಅಂದ್ರೆ ನಂಗು ಇಷ್ಟ ಅಂತಾ ಇದ್ದರು. ಎಷ್ಟೋ ಮಕ್ಕಳು ಸೇಮ್ ಟೂ ಸೇಮ್ ಸತ್ಯಳ ಅವತಾರದಲ್ಲಿ ಗೌತಮಿಯನ್ನು ಫಾಲೋ ಮಾಡುವುದಕ್ಕೆ ಶುರು ಮಾಡಿದ್ದರು. ಬಿಗ್ ಬಾಸ್ ಮನೆಗೆ ಆರಂಭದಲ್ಲಿ ಸತ್ಯ ಗೆಟಪ್ ನಲ್ಲಿಯೇ ಗೌತಮಿ ಬಂದದ್ದು.

ಸತ್ಯಳಾಗಿ ಗೌತಮಿಯನ್ನು ಸ್ಪೂರ್ತಿಯಾಗಿ ಪಡೆದಿದ್ದ ಎಷ್ಟೋ ಜನಕ್ಕೆ ಗೌತಮಿ ಫೇಕ್‌ ಅನ್ನಿಸಿ ಬಿಟ್ಟಿದೆ. ಆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಕಮೆಂಟ್ ಬಂದಿವೆ. ಪಾಸಿಟಿವ್ ಪಾಸಿಟಿವ್ ಅಂತ ಹೇಳಿನೇ ಹೆಚ್ಚು ಟ್ರೋಲ್ ಆದವರು ಗೌತಮಿ. ಇದೀಗ ಅವರ ಹಳೆಯ ವಿಡಿಯೋ ವೈರಲ್ ಆಗಿದ್ದು ಮತ್ತೊಮ್ಮೆ ಟ್ರೋಲ್ ಆಗಿದ್ದಾರೆ.

Bigg boss kannada 11 Gowthami jadav Gets Trolled For Her old interview video

ಗೌತಮಿ ಓದಿದ್ದು ಎಲ್ಲಿ ಗೊತ್ತಾ?

ಗೌತಮಿ ಈ ಮೊದಲು ಒಂದು ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಅದು 'ಸ್ಟಾರ್ ಕಿಚನ್'. ಚೈತ್ರಾ ನಡೆಸಿಕೊಟ್ಟಿದ್ದಂತಹ ಶೋ ಅದು. ಅದರಲ್ಲಿ ನಿಮ್ಮ ಬಗ್ಗೆ ಹೇಳಿ ಗೌತಮಿ ಅವರೇ ಎಂದಾಗ, ನಾನು ಇಲ್ಲೇ ಬೆಂಗಳೂರಿನಲ್ಲಿ ಓದಿದ್ದು. ನ್ಯಾಷನಲ್ ಕಾಲೇಜು ಜಯನಗರದಲ್ಲಿ ಡಿಗ್ರಿ ಮಾಡಿದ್ದೆ ಎಂದಿದ್ದಾರೆ.

ಗೌತಮಿ ಗಮನ ಆ ಕಡೆಗೆ

ಬಳಿಕ ಅವರೇ ಮಾತು ಮುಂದುವರೆಸಿ, ಜಯನಗರದಲ್ಲಿ ಒಂದಷ್ಟು ಜನರಿಗೆ ಗೊತ್ತಿರಬಹುದಾ ಅಂತ. ಅಟ್ಲಿಸ್ಟ್ ನಮ್ಮ ಕ್ಲಾಸ್‌ಮೇಟ್ ಆದರೂ ಗೊತ್ತಿರುತ್ತೆ. ಯಾಕಂದ್ರೆ ನಾವೂ ಹಾಗೆಲ್ಲ ಅಷ್ಟು ಫೇಮಸ್ ಇದ್ವಿ ಎಂದಿದ್ದಾರೆ. ಇದು 'ಜೋಡಿಹಕ್ಕಿ' ಸೀರಿಯಲ್ ಖ್ಯಾತಿಯ ಚೈತ್ರಾಗೆ ಕುತೂಹಲ ಮೂಡಿಸಿದೆ. ಹೌದಾ ಯಾವ ರೀತಿಯಲ್ಲಿ ಫೇಮಸ್ ನೀವೂ ಎಂದು ಕೇಳಿದ್ದಾರೆ. ಈ ವಿಡಿಯೋ ಅಂತು ಎಲ್ಲೆಡೆ ವೈರಲ್ ಆಗಿದೆ.

ಗೌತಮಿ ಮಾತಿಗೆ ಟ್ರೋಲ್!

ಆ ವಿಡಿಯೋದಲ್ಲಿ ಗೌತಮಿ ಹೇಳಿದ ಕುತೂಹಲಕಾರಿ ವಿಚಾರ ಅಂದ್ರೆ ತಾವೂ ಕಾಲೇಜಿಗೆ ಯಾಕೆ ಹೋಗ್ತಾ ಇದ್ರು ಎಂಬುದು. 'ನನ್ನನ್ನ ನೋಡಿದ್ರೆ ನಿಮಗೆ ಗೊತ್ತಾಗುತ್ತೆ ನಾನು ಯಾಕೆ ಫೇಮಸ್ ಅನ್ನೋದು. ನಾಳೆ ಸಬ್ಜೆಕ್ಟ್ ಯಾವುದು ಇದೆ ಅನ್ನೋದನ್ನ ಥಿಂಕ್ ಮಾಡ್ತಾ ಇರ್ಲಿಲ್ಲ. ಆದರೆ ನಾಳೆ ಯಾವ ಡ್ರೆಸ್ ಹಾಕೊಂಡು ಹೋಗೋದು, ಹೇಗೆ ರೆಡಿ ಆಗೋದು ಅನ್ನೋದೆ ಯೋಚನೆ ಮಾಡಿಕೊಂಡು ಹೋಗ್ತಾ ಇದ್ವಿ' ಎಂದಿದ್ದಾರೆ. ಈ ವಿಡಿಯೋ ಟ್ರೋಲ್ ಮಾಡಿರುವವರು 'ಅಕ್ಕ ಅವಾಗ್ಲೆ ಅಷ್ಟೊಂದು ಡವ್' ಎಂದು ಕಾಮೆಂಟ್ ಮಾಡಿದ್ದಾರೆ.

ನೆಗೆಟಿವ್ ಬಗ್ಗೆ ಸದ್ದು

ಬಿಗ್ ಬಾಸ್‌ನಲ್ಲಿ ಗೌತಮಿಯ ಮಾತು, ನಡೆ ಸ್ವಲ್ಪ ನಾಟಕೀಯತೆಯಂತೆಯೇ ಕಾಣಿಸುತ್ತದೆ. ಈಗ ಈ ವಿಡಿಯೋ ನೋಡಿ ಮೊದಲಿನಿಂದಾನೂ ಇರೋದೆ ಹೀಗೆ ಎಂಬುದು ಹಲವರಿಗೆ ಅರ್ಥವಾಗಿದೆ. ಜೊತೆಗೆ ಇಲ್ಲಿಯೂ ಕಮೆಂಟ್ ಬಾಕ್ಸ್‌ನಲ್ಲಿ ಪಾಸಿಟಿವ್ ಅಕ್ಕ ಈಗ ನೆಗೆಟಿವ್ ಅಂತೆಲ್ಲ ಕಮೆಂಟ್ ಹಾಕಿದ್ದಾರೆ. ಪಾಸಿಟಿವ್ ಅಂತ ಹೇಳಿ ಹೇಳಿನೇ ಗೌತಮಿ ಟ್ರೋಲ್ ಆಗಿದ್ದು ಹೆಚ್ಚು. ಬಿಗ್ ಬಾಸ್ ಮನೆಯಲ್ಲಿ ಸದ್ಯಕ್ಕೆ ಪಾಸಿಟಿವ್ ಎಂಬ ಪದ ಬಳಕೆ ಮಾಡುತ್ತಿಲ್ಲ.

More from Filmibeat

English summary
BBK 11: Here is the details about Gautami's old video is now trolled
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X