BBK 11: ನಂಗೆ ಯಾರೇ ಮೈಮುಟ್ಟಿದರೂ ಆಗಲ್ಲ; ಗೌತಮಿ ಪಾಸಿಟಿವಿಟಿ ಮಾತಿಗೆ ಪೆಟ್ಟು!

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11ರಲ್ಲಿ ವಿಭಿನ್ನ ಮನಸ್ಥಿತಿಗಳಿರುವ ಜನ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ತಮ್ಮ ಬಗ್ಗೆ ತಾವೂ ಸಮರ್ಥನೆ ಕೊಡುವಾಗ ಒಬ್ಬೊಬ್ಬರು ಒಂದೊಂದು ರೀತಿಯಾಗಿ ಸಮರ್ಥನೆ ಮಾಡಿಕೊಳ್ಳುತ್ತಾರೆ. ತಮ್ಮಲ್ಲಿನ ಸಾಮರ್ಥ್ಯದ ಬಗ್ಗೆಯೂ ಮಾತನಾಡಿದ್ದಾರೆ. ಅದರಂತೆ ಗೌತಮಿ‌ ಜಾದವ್ ಕೂಡ ಬಿಗ್ ಬಾಸ್ ಮನೆಯಲ್ಲಿ ತಮ್ಮನ್ನು ತಾವೂ ಪಾಸಿಟಿವ್ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ನಾಮಿನೇಷನ್ ಆದಾಗ ಅಥವಾ ಯಾರಾದರೂ ಗೌತಮಿ ಬಗ್ಗೆ ವಿರೋಧಿಸಿದಾಗ ಗೌತಮಿ ಸದಾ ಹೇಳುತ್ತಿದ್ದ ಮಾತುಗಳು ಅಂದ್ರೆ ನಾನು ಎಲ್ಲವನ್ನು ಪಾಸಿಟಿವ್‌ ಆಗಿ ನೋಡುತ್ತೇನೆ ಎನ್ನುತ್ತಿದ್ದರು. ಕೆಲವೊಂದು ಸಲ ಗೌತಮಿಗೆ ಹರ್ಟ್ ಆಗುವಂತೆ ಕೆಲವರು ಮಾತಾಡಿದಾಗಲೂ ನೀವೂ ಪಾಸಿಟಿವಿಟಿಯಿಂದಾನೇ ನೋಡಬೇಕು ಎಂದೇ ಹೇಳಿದ್ದಾರೆ. ಅದೇ ಪಾಸಿಟಿವಿಟಿ ಈಗ ಗೌತಮಿಗೆ ಅಡ್ಡಿಯಾಗ್ತಾ ಇದೆ ಎನ್ನಲಾಗ್ತಿದೆ.

Bigg bOss kannada 11 gowthami jadhav positive thinking now hurts her

ನಾಮಿನೇಷನ್ ಪ್ರಕ್ರಿಯೆ ಶುರು

ಈ ವಾರದ ಕ್ಯಾಪ್ಟನ್ ಕನ್ಫೇಷನ್ ರೂಮಿನಲ್ಲಿ ಕೂತಿರಬೇಕು. ಉಳಿದ ಸದಸ್ಯರು ಗಾರ್ಡನ್ ಏರಿಯಾದಲ್ಲಿ ಬೇಂಜ್ ಮೇಲೆ ಕೂತಿರಬೇಕು. ಬಿಗ್ ಬಾಸ್ ಕರೆದಾಗ ಇಬ್ಬರು ಬಂದು ವೃತ್ತಾಕಾರದಲ್ಲಿ ನಿಲ್ಲಬೇಕು. ಇಬ್ಬರಲ್ಲಿ ಒಬ್ಬರನ್ನ ನಾಮಿನೇಷನ್ ಮಾಡಬೇಕಾಗಿತ್ತು. ಹೆಚ್ಚು ವೋಟ್ ಬಿದ್ದವರು ಮನೆಯಿಂದ ಹೊರಗೆ ಹೋಗುವುದಕ್ಕೆ ನಾಮಿನೇಷನ್ ಆಗುತ್ತಾರೆ.

ಪಾಸಿಟಿವಿಟಿ ಬಗ್ಗೆಯೇ ದೂರು

ಐದನೇ ಜೋಡಿಯಾಗಿ ಗೌತಮಿ ಹಾಗೂ ಐಶ್ವರ್ಯಾ ಅವರನ್ನು ಬಿಗ್ ಬಾಸ್ ಕರೆಯುತ್ತಾರೆ. ಈ ವೇಳೆ ಧನರಾಜ್, ಶಿಶಿರ್, ಧರ್ಮ, ಗೋಲ್ಡ್ ಸುರೇಶ್ ನಾಮಿನೇಷನ್ ಮಾಡಿದ್ದಾರೆ. ಗೌತಮಿಯನ್ನು ನಾಮಿನೇಟ್ ಮಾಡುತ್ತಾರೆ. ವೀಕೆಂಡ್‌ನಲ್ಲಿ ಹೇಳಿದ್ದರು, ಏನೇ ಆದರೂ ಪಾಸಿಟಿವ್ ಆಗಿ ನೋಡ್ತೀನಿ ಅಂತ. ಇವತ್ತು ಬೆಳಗ್ಗೆ ಏಳುವುದಕ್ಕೂ ಮುನ್ನ ದಿಂಬಲ್ಲಿ ಹೊಡೆದೆ. ಆಗ ಅವರು ನಡೆದುಕೊಂಡ ರೀತಿ ರೂಡ್ ಆಗಿತ್ತು. ಯಾವಾಗಲೂ ಪಾಸಿಟಿವಿಟಿ ಎನ್ನುವವರಲ್ಲಿ ಅದು ಕಾಣಲಿಲ್ಲ. ಪಾಸಿಟಿವ್ ಎಂದ ಕಾರಣ ಹೇಳಿ ಧನರಾಜ್ ನಾಮಿನೇಷನ್ ಮಾಡಿದ್ದಾರೆ.

Bigg bOss kannada 11 gowthami jadhav positive thinking now hurts her

ಇನ್ಮೇಲೆ ಪಾಸಿಟಿವಿಟಿ ಹೆಸರೆತ್ತಲ್ವಾ?

ಧನರಾಜ್ ಮಾತಿಗೆ ಗೌತಮಿ ಸಹಜವಾಗಿಯೇ ಕೋಪಗೊಂಡಿದ್ದಾರೆ. ಪಾಸಿಟಿವಿಟಿ ಅಂತ ಹೇಳಿದಾಕ್ಷಣ ನೀವೂ ಹೊಡೆದಾಕ್ಷಣ ಹೊಡೆಸಿಕೊಳ್ತೀನಿ ಅಂತ ಅಲ್ಲ. ನಂಗೆ ಯಾರಾದರೂ ಬೆಳಗ್ಗೆ ಏಳುವಾಗಲೇ ಜೋರಾಗಿ ಕಿರುಚುವುದು, ಹೊಡೆಯುವುದು ಮಾಡಿದರೆ ನನಗೆ ಇಷ್ಟ ಆಗಲ್ಲ. ನನ್ನ ಪಾಸಿಟಿವ್ ದಾರಿಯಲ್ಲಿ ಅಳು ಇದೆ, ನಗು ಇದೆ, ಕೋಪವೂ ಬರುತ್ತೆ. ಅದನ್ನು ಬಿಟ್ಟು ಪಾಸಿಟಿವಿಟಿ ಅನ್ನೋ ಕಾರಣಕ್ಕೆ ನೀವೂ ಹೊಡೆದದ್ದು ನನ್ನ ಬಂಪ್‌ಗೆ ಅಂತ ಸಮಾಧಾನವಾಗಿ ಹೇಳಬೇಕಿತ್ತಾ ಎಂದು ಪ್ರಶ್ನಿಸಿದ್ದಾರೆ.

ಗೌತಮಿ ಕಣ್ಣೀರಿಗೆ ಕಾರಣವೇನು?

ಶಿಶಿರ್ ಮಾತಿಗೆ ಗೌತಮಿ ಕಣ್ಣೀರು ಹಾಕಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ಮುಗಿದ ಮೇಲೆ ಬಾತ್ ರೂಮ್ ಬಳಿ ಬಂದು ನೊಂದುಕೊಂಡಿದ್ದಾರೆ. ಅಲ್ಲಿಗೆ ಬಂದ ಮೋಕ್ಷಿತಾ ಸಮಾಧಾನ ಮಾಡಿದ್ದಾರೆ. ಆದರೆ ಶಿಶಿರ್, ಗೌತಮಿಯನ್ನು ನಾಮಿನೇಷನ್ ಮಾಡಿದ್ದಕ್ಕೆ ಅವರೇ ಬೇಸರ ಮಾಡಿಕೊಂಡಿದ್ದಾರೆ. ಐಶ್ವರ್ಯಾ ಹಾಗೂ ಗೌತಮಿ ಇಬ್ಬರಲ್ಲೂ ನಾಮಿನೇಷನ್ ಮಾಡುವುದಕ್ಕೆ ಕಾರಣಗಳು ಇರಲಿಲ್ಲ. 'ಇಲ್ಲಿ ನನ್ನವರು ಯಾರು ಅಲ್ಲ. ಡೈನಿಂಗ್ ಟೇಬಲ್ ಮೇಲೆ ಕೂತು ಮಾತಾಡಿದ್ದು ತಪ್ಪು. ಯಾರೂ ಮೈ ಮುಟ್ಟಿದರು ನಂಗೆ ಆಗಲ್ಲ. ಒಂದು ಬೆರಳಿಂದ ಮುಟ್ಟಿದರು ಆಗಲ್ಲ. ಅದು ನಂಗೆ ಪ್ರಾಬ್ಲಮ್ ಇದೆ' ಎಂದಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 October 30th episode. Here is the details about Gautami is angry at the words of positivity;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X